ಕನ್ನಡ ಸುದ್ದಿ  /  Lifestyle  /  Google Doodle Special Tribute To White Coffee Animated Image Displayed In Google Rmy

Google Doodle: ಬಿಳಿ ಕಾಫಿಗೆ ಗೂಗಲ್ ಡೂಡಲ್ ವಿಶೇಷ ಗೌರವ; ಏನಿದು ಫ್ಲಾಟ್ ವೈಟ್ ಕಾಫಿ? ಮಹತ್ವ ಹೀಗಿದೆ

ಫ್ಲಾಟ್ ವೈಟ್‌ ಕಾಫಿ ಪದವನ್ನು ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಷನರಿಗೆ ಸೇರಿದ ನೆನಪಿಗಾಗಿ ಗೂಗಲ್ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿದೆ. ಫ್ಲಾಟ್ ವೈಟ್‌ ಕುರಿತ ಮಹತ್ವದ ಮಾಹಿತಿ ಇಲ್ಲಿದೆ.

ಫ್ಲಾಟ್ ವೈಟ್‌ ಕಾಫಿಗೆ ಗೂಗಲ್ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಲಾಗಿದೆ
ಫ್ಲಾಟ್ ವೈಟ್‌ ಕಾಫಿಗೆ ಗೂಗಲ್ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಲಾಗಿದೆ

ವಿವಿಧ ಸಾಧಕರು ಹಾಗೂ ವಿಶೇಷ ದಿನಗಳಂದು ಡೂಡಲ್ ಮೂಲಕ ಗೌರವ ಸಲ್ಲಿಸಿ ಅವರ ಸಾಧನೆಯನ್ನು ಸ್ಮರಿಸುವ ಜಗತ್ತಿನ ದೈತ್ಯ ಸರ್ಚ್ ಇಂಜಿನ್ ಗೂಗಲ್ ಇಂದು (ಮಾರ್ಚ್ 11, ಸೋಮವಾರ) ವೈಟ್‌ ಕಾಫಿಗೆ (Flat White Coffee) ವಿಶೇಷ ಗೌರವ ಸಲ್ಲಿಸಿದೆ. ವೈಟ್ ಕಾಫಿಯ ಅನಿಮೇಡೆಟ್ ಫೊಟೊವನ್ನು ಡೂಡಲ್ ಮೂಲಕ ಹಂಚಿಕೊಂಡಿದೆ. ಅಷ್ಟಕೂ ಏನಿದು ಫ್ಲಾಟ್ ವೈಟ್ ಕಾಫಿ. ಗೂಗಲ್ ಸಂಸ್ಥೆ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಲು ಏನು ಕಾರಣ ಎಂಬುದನ್ನು ತಿಳಿಯೋಣ. ಕಾಫಿ ಪ್ರಿಯರಿಗೆ ಒಂದು ಕಪ್ ಕಾಫಿಗಿಂತ ಉತ್ತಮ ಸ್ನೇಹಿತನಿಲ್ಲ. ಕಾಫಿ ಸೇವಿಸಿದರೆ ಮನಸ್ಸಿಗೆ ಒಂದು ರೀತಿಯ ಖುಷಿ ಹಾಗೂ ಅಪ್ಪುಗೆಯ ಭಾವ ಮೂಡುತ್ತದೆ. ಕೆಲವರಿಗೆ ಕಾಫಿ ಇಲ್ಲದಿದ್ದರೆ ದಿನಚರಿಯೇ ಆರಂಭವಾಗುವುದಿಲ್ಲ. ಕೆಲಸದ ಸಮಯದಲ್ಲಿ ಕೆಲವರಿಗೆ ಪದೇ ಪದೆ ಕಾಫಿ ಕುಡಿಯುವ ಅಭ್ಯಾಸವೂ ಇರುತ್ತದೆ. ಬಹುತೇಕ ಮಂದಿ ಸಾಮಾನ್ಯ ಕಾಫಿಯನ್ನು ಟೆಸ್ಟ್ ಮಾಡಿರುತ್ತಾರೆ. ಆದರೆ ಬಹಳಷ್ಟು ಜನರಿಗೆ ಫ್ಲಾಟ್ ವೈಟ್ ಕಾಫಿ ಬಗ್ಗೆ ತಿಳಿದಿರಲಿಕ್ಕಿಲ್ಲ.

ಗೂಗಲ್ ಡೂಡಲ್ ಇವತ್ತು ಅನಿಮೇಡೆಟ್ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಫ್ಲಾಟ್ ವೈಟ್ ಕಾಫಿ ದಿನವನ್ನು ಆಚರಿಸುತ್ತಿದೆ. ಇದು ಅತ್ಯಂತ ಜನಪ್ರಿಯವಾಗಿರುವ ಎಸ್ಪ್ರೆಸೊ ಆಧಾರಿತ ಪಾನೀಯವಾಗಿದೆ. ಇದರ ಮೂಲ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಎಂದು ಹೇಳಲಾಗುತ್ತದೆ.

ಫ್ಲಾಟ್ ವೈಟ್ ಕಾಫಿ ಇತಿಹಾಸ

2011ರ ಮಾರ್ಚ್ 11 ರಂದು ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿಗೆ ಫ್ಲಾಟ್ ವೈಟ್ ಪದವನ್ನು ಸೇರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಮಾರ್ಚ್ 11 ರಂದು ಫ್ಲಾಟ್ ವೈಟ್ ಕಾಫಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಬಿಳಿ ಕಾಫಿ ಒಂದು ವಿಶಿಷ್ಟವಾದ ಪಾನೀಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ತುಂಬಾ ಜನಪ್ರಿಯತೆಯನ್ನು ಗಳಿಸಿದೆ. ಸಾಂಪ್ರದಾಯಿಕ ಕಾಫಿಗಿಂತ ತುಂಬಾ ಭಿನ್ನವಾಗಿರುವ ಈ ಕಾಫಿಯನ್ನು 1980ರ ದಶಕದಲ್ಲಿ ಸಿಡ್ನಿ ಮತ್ತು ಆಕ್ಲೆಂಡ್‌ನ ಕೆಫೆಗಳ ಮೆನುಗಳಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು ಎಂಬ ಮಾತಿದೆ.

ಫ್ಲಾಟ್ ವೈಟ್ ಕಾಫಿಯನ್ನು ಹೇಗೆ ತಯಾರಿಸಲಾಗುತ್ತದೆ?

ಬಿಳಿ ಕಾಫಿಯನ್ನು ಲಘುವಾಗಿ ಹುರಿದ ಅರೇಬಿಕಾ ಬೀನ್ಸ್ ಬಳಸಿ ತಯಾರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ 15 ನಿಮಿಷಗಳ ಕಾಲ ಹುರಿಯಲಾಗುತ್ತದೆ. ಇದು ಸಾಮಾನ್ಯ ಕಾಫಿ ಬೀಜಗಳನ್ನು ಹುರಿಯಲು ತೆಗೆದುಕೊಳ್ಳುವ ಸಮಯಕ್ಕಿಂತ ಕಡಿಮೆಯಾಗಿದೆ. ಇದನ್ನು ಕಡಿಮಮೆ ತಾಪಮಾನದಲ್ಲಿ ಹಾಗೂ ಕಡಿಮೆ ಸಮಯದಲ್ಲಿ ಹುರಿಯುವುದರಿಂದ ಅವುಗಳ ನೈಸರ್ಗಿಕ ತೈಲಗಳು ಮತ್ತು ರುಚಿಯನ್ನ ಸಂರಕ್ಷಿಸುತ್ತದೆ. ಸಾಂಪ್ರದಾಯಿಕ ಕಾಫಿಯಂತೆ ಇದರಲ್ಲೂ ಕೂಡ ಕೆಫೀನ್ ಇರುತ್ತದೆ. ಇದು ಜೀವಕೋಶದ ಹಾನಿಯಿಂದ ದೇಹವನ್ನು ರಕ್ಷಿಸುತ್ತದೆ.

(This copy first appeared in Hindustan Times Kannada website. To read more like this please logon to kannada.hindustantimes.com )

ವಿಭಾಗ