ಕನ್ನಡ ಸುದ್ದಿ  /  ಜೀವನಶೈಲಿ  /  Navy Recruitment: ಭಾರತೀಯ ನೌಕಾಪಡೆಯಲ್ಲಿ 275 ಅಪ್ರೆಂಟಿಸ್ ಹುದ್ದೆ, ಅರ್ಜಿ ಸಲ್ಲಿಸಲು ಜನವರಿ 1 ಕೊನೇ ದಿನ

Navy Recruitment: ಭಾರತೀಯ ನೌಕಾಪಡೆಯಲ್ಲಿ 275 ಅಪ್ರೆಂಟಿಸ್ ಹುದ್ದೆ, ಅರ್ಜಿ ಸಲ್ಲಿಸಲು ಜನವರಿ 1 ಕೊನೇ ದಿನ

ಭಾರತೀಯ ನೌಕಾಪಡೆಯು ವಿಶಾಖಪಟ್ಟಣಂನ ನೇವಲ್ ಡಾಕ್‌ಯಾರ್ಡ್‌ನಲ್ಲಿ ಟ್ರೇಡ್ ಅಪ್ರೆಂಟಿಸ್‌ಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. 275 ಅಪ್ರೆಂಟಿಸ್ ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತಿದೆ.

ಭಾರತೀಯ ನೌಕಾಪಡೆಯ ನೇಮಕಾತಿ 2023: 275 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಭಾರತೀಯ ನೌಕಾಪಡೆಯ ನೇಮಕಾತಿ 2023: 275 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಭಾರತೀಯ ನೌಕಾಪಡೆಯು ವಿಶಾಖಪಟ್ಟಣಂನ ನೇವಲ್ ಡಾಕ್‌ಯಾರ್ಡ್‌ನಲ್ಲಿ ಟ್ರೇಡ್ ಅಪ್ರೆಂಟಿಸ್‌ಗಳ ನಿಶ್ಚಿತಾರ್ಥಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು www.apprenticeshipindia.gov.in ನಲ್ಲಿ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಟ್ರೆಂಡಿಂಗ್​ ಸುದ್ದಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2024ರ ಜನವರಿ 1. ಈ ಸಂಬಂಧ ಲಿಖಿತ ಪರೀಕ್ಷೆಯನ್ನು ಫೆಬ್ರವರಿ 28 ರಂದು ನಡೆಯಲಿದೆ. ಈ ಲಿಖಿತ ಪರೀಕ್ಷೆಯ ಫಲಿತಾಂಶ ಮಾರ್ಚ್ 2 ರಂದು ಪ್ರಕಟವಾಗಲಿದೆ.

ಭಾರತೀಯ ನೌಕಾಪಡೆ ನೇಮಕಾತಿ 2023ರ ಖಾಲಿ ಹುದ್ದೆಗಳ ವಿವರ

ಭಾರತೀಯ ನೌಕಾಪಡೆ ನೇಮಕಾತಿ 2023 ಅಭಿಯಾನವನ್ನು 275 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಕ್ಕಾಗಿ ಮಾಡಲಾಗುತ್ತಿದೆ. ಇದು ವಿವಿಧ ಟ್ರೇಡ್‌ಗಳಲ್ಲಿರುವ ಅಪ್ರೆಂಟಿಸ್‌ ಅನ್ನು ಭರ್ತಿ ಮಾಡುವುದಕ್ಕೆ ನಡೆಯುತ್ತಿರುವ ಪ್ರಕ್ರಿಯೆಯಾಗಿದೆ.

ಭಾರತೀಯ ನೌಕಾಪಡೆ ನೇಮಕಾತಿ 2023ರ ಅಪ್ರೆಂಟಿಸ್ ಹುದ್ದೆಗಳಿಗೆ ವಯೋಮಿತಿ

ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಪ್ರಕಾರ, ಅಪ್ರೆಂಟಿಸ್‌ಶಿಪ್ ತರಬೇತಿಗೆ (MSDE) ಗರಿಷ್ಠ ವಯೋ ಮಿತಿ ನಿಗದಿ ಮಾಡಿಲ್ಲ. ಆದರೆ ಅಭ್ಯರ್ಥಿಗಳಿಗೆ ಕನಿಷ್ಠ 14 ವರ್ಷ ವಯಸ್ಸು ಆಗಿರಬೇಕು. ಅದೇ ರೀತಿ ಅಪಾಯಕಾರಿ ಉದ್ಯೋಗಗಳ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಕನಿಷ್ಠ ವಯಸ್ಸಿನ ಅವಶ್ಯಕತೆ 18 ವರ್ಷ.

ಭಾರತೀಯ ನೌಕಾಪಡೆ ನೇಮಕಾತಿ 2023ರ ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಗಳು ಎಸ್‌ಎಸ್‌ಸಿ / ಮೆಟ್ರಿಕ್‌ / 10ನೇ ತರಗತಿ ಪರೀಕ್ಷೆಯಲ್ಲಿ ಸರಾಸರಿ ಶೇಕಡ 55 ಅಂಕ ಪಡೆದು ಉತ್ತೀರ್ಣರಾಗಿರಬೇಕು. ಅದೇ ರೀತಿ, ಐಟಿಐ (ಎನ್‌ಸಿವಿಟಿ/ಎಸ್‌ಸಿವಿಟಿ) ಪಡೆದ ಅಭ್ಯರ್ತಿಗಳು ಕನಿಷ್ಠ ಶೇಕಡಾ 65 ಅಂಕ ಪಡೆದ ಉತ್ತೀರ್ಣರಾಗಿರಬೇಕು.

ಭಾರತೀಯ ನೌಕಾಪಡೆ ಟ್ರೇಡ್ ಅಪ್ರೆಂಟಿಸ್ ನೇಮಕಾತಿ 2023: ಅರ್ಜಿ ಸಲ್ಲಿಸುವುದು ಹೇಗೆ

1. ಭಾರತೀಯ ನೌಕಾಪಡೆಯ ಅಪ್ರೆಂಟಿಸ್ ನೇಮಕಾತಿಗೆ ಅರ್ಜಿ ಸಲ್ಲಿಸುವುದಕ್ಕೆ ಅಧಿಕೃತ ವೆಬ್‌ಸೈಟ್ apprenticeshipindia.gov.in ಗೆ ಭೇಟಿ ನೀಡಬೇಕು.

2. ಅಪ್ರೆಂಟಿಸ್‌ಶಿಪ್ ಇಂಡಿಯಾ ವೆಬ್‌ಸೈಟ್ ಓಪನ್ ಆದ ಬಳಿಕ ಮುಖಪುಟದಲ್ಲಿರುವ ನೋಂದಣಿ ಆಯ್ಕೆ ಕ್ಲಿಕ್ ಮಾಡಿಕೊಂಡು, ಅದರಲ್ಲಿ ಕೇಳಿರುವ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಬೇಕು.

3. ಭರ್ತಿ ಮಾಡಿದ ಅರ್ಜಿಯನ್ನು ಅಂದರೆ ಅಗತ್ಯ ವಿವರ, ಸಂಪರ್ಕ ವಿಳಾಸ, ಟ್ರೇಡ್ ಆದ್ಯತೆ ಮತ್ತು ಇತರೆ ಮಾಹಿತಿಯನ್ನು ಭರ್ತಿ ಮಾಡಿದ ಅರ್ಜಿಯನ್ನು ಭರ್ತಿ ಮಾಡಿದ ಬಳಿಕ ಅದನ್ನು ಒಮ್ಮೆ ಸರಿಯಾಗಿ ಪರಿಶೀಲಿಸಬೇಕು.

4. ಸಬ್‌ಮಿಟ್ ಬಟನ್ ಕ್ಲಿಕ್ ಮಾಡಬೇಕು.

5. ಸಲ್ಲಿಸಿದ ಅರ್ಜಿಯ ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಬೇಕು. ಭವಿಷ್ಯದ ಅಗತ್ಯಗಳಿಗಾಗಿ ಈ ಕೆಲಸ ಮರೆಯದೇ ಮಾಡಬೇಕು.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ