ತಲೆಹೊಟ್ಟು ನಿವಾರಣೆ ಸೇರಿ ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಮೆಂತ್ಯೆ ಸೀರಮ್‌; ಇದನ್ನು ತಯಾರಿಸೋದು ಹೇಗೆ, ಇದರ ಪ್ರಯೋಜನಗಳೇನು ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ತಲೆಹೊಟ್ಟು ನಿವಾರಣೆ ಸೇರಿ ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಮೆಂತ್ಯೆ ಸೀರಮ್‌; ಇದನ್ನು ತಯಾರಿಸೋದು ಹೇಗೆ, ಇದರ ಪ್ರಯೋಜನಗಳೇನು ನೋಡಿ

ತಲೆಹೊಟ್ಟು ನಿವಾರಣೆ ಸೇರಿ ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಮೆಂತ್ಯೆ ಸೀರಮ್‌; ಇದನ್ನು ತಯಾರಿಸೋದು ಹೇಗೆ, ಇದರ ಪ್ರಯೋಜನಗಳೇನು ನೋಡಿ

ಕೂದಲಿನ ಸಮಸ್ಯೆಗಳಿಂದ ಬೇಸತ್ತಿದ್ದೀರಾ? ಚಿಂತೆ ಬಿಡಿ, ಮನೆಯಲ್ಲೇ ಮಾಡಿ ಮೆಂತ್ಯೆ ಸೀರಮ್‌. ಇದನ್ನು ಬಳಸುವುದರಿಂದ ಕೂದಲಿನ ಹಲವು ಸಮಸ್ಯೆಗಳಿಗೆ ಸಿಗುತ್ತೆ ಪರಿಹಾರ. ಕೂದಲು ದಟ್ಟವಾಗಿ, ಹೊಳೆಯುವಂತೆ ಮಾಡುವ ಜೊತೆಗೆ ಕೂದಲಿನ ಕಾಂತಿಯನ್ನೂ ಹೆಚ್ಚಿಸಿಕೊಳ್ಳಬಹುದು. ಇದನ್ನು ತಯಾರಿಸೋದು ಹೇಗೆ, ಇದನ್ನು ನಿರಂತರ ಬಳಸುವುದರಿಂದಾಗುವ ಪ್ರಯೋಜನಗಳೇನು ನೋಡಿ.

ಮೆಂತ್ಯೆ ಸೀರಮ್ ಪ್ರಯೋಜನಗಳು
ಮೆಂತ್ಯೆ ಸೀರಮ್ ಪ್ರಯೋಜನಗಳು

ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರಿಗೆ ಕೂದಲು ಉದುರುವ ಸಮಸ್ಯೆ ಇದ್ದರೆ, ಕೆಲವರಿಗೆ ಕೂದಲು ಒಣಗುವುದು, ಬಿಳಿಯಾಗುವುದು ಮುಂತಾದ ಸಮಸ್ಯೆಗಳಿರುತ್ತವೆ. ನೀವು ಕೂಡ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಮೆಂತ್ಯೆ ಸೀರಮ್‌ ನಿಮಗೆ ಉತ್ತಮ ಪರಿಹಾರ. ಇದನ್ನು ಕೂದಲಿನ ಹಚ್ಚುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಅಲ್ಲದೇ ಇದನ್ನು ಮನೆಯಲ್ಲೇ ತಯಾರಿಸಬಹುದು. ಹಾಗಾದರೆ ಮೆಂತ್ಯೆ ಸೀರಮ್ ಮಾಡುವುದು ಹೇಗೆ, ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡೋಣ.

ಮೆಂತ್ಯೆ ಕೂದಲು ಉದುರುವುದನ್ನು ತಡೆಯಲು ಅತ್ಯಂತ ಪರಿಣಾಮಕಾರಿ ನೈಸರ್ಗಿಕ ಪರಿಹಾರವಾಗಿ ಕೆಲಸ ಮಾಡುತ್ತದೆ. ಇದು ಪ್ರೊಟೀನ್‌ಗಳು, ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಮೆಂತ್ಯೆ ಕೂದಲನ್ನು ಪೋಷಿಸಲು, ಬೇರುಗಳಿಂದ ಬಲಪಡಿಸಲು ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ತಲೆಹೊಟ್ಟು ಹೋಗಲಾಡಿಸಲು ಮತ್ತು ಕೂದಲನ್ನು ಹೊಳೆಯುವಂತೆ ಮಾಡಲು ಕೂಡ ಮೆಂತ್ಯೆ ಸೀರಮ್ ಬಳಕೆ ಉತ್ತಮ. ಇದರ ಪ್ರಯೋಜನಗಳ ವಿವರ ಇಲ್ಲಿದೆ.

ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ

ಪ್ರತಿಬಾರಿ ಕೂದಲು ಉದುರುವುದು ಮತ್ತು ಬಾಚಣಿಗೆಯಲ್ಲಿ ಉದುರುವುದು ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಮೆಂತ್ಯೆ ಸೀರಮ್ ಅನ್ನು ಪ್ರತಿದಿನ ಹಚ್ಚುವುದು ಉತ್ತಮ ಪರಿಹಾರವಾಗಿದೆ. ಮೆಂತ್ಯವು ನಿಕೋಟಿನಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಕೂದಲನ್ನು ಪೋಷಿಸುತ್ತದೆ ಮತ್ತು ಕಿರುಚೀಲಗಳನ್ನು ಬಲಪಡಿಸುತ್ತದೆ . ಇದರಿಂದ ಕೂದಲು ಬೆಳೆಯುವುದರೊಂದಿಗೆ ಕೂದಲು ಉದುರುವ ಸಮಸ್ಯೆಯೂ ಕಡಿಮೆಯಾಗುತ್ತದೆ.

ಕೂದಲು ಬಿಳಿಯಾಗುವುದನ್ನು ಕಡಿಮೆ ಮಾಡುತ್ತದೆ

ವಯಸ್ಸಿನ ಭೇದವಿಲ್ಲದೆ ಎಲ್ಲರಿಗೂ ಬಿಳಿ ಕೂದಲಿನ ಸಮಸ್ಯೆ ಇರುತ್ತದೆ. ನೀವು ಕೂದಲು ಅಕಾಲಿಕ ಬಾಲನೆರೆ ಸಮಸ್ಯೆಯಿಂದ ಬಳಲುತ್ತಿದ್ದರೆ, ಮೆಂತ್ಯ ಸೀರಮ್ ಅನ್ನು ಕೂದಲಿನ ಬುಡಕ್ಕೆ ಪ್ರತಿದಿನ ಹಚ್ಚಿ. ಇದು ಕೂದಲಿಗೆ ನೈಸರ್ಗಿಕ ಬಣ್ಣವನ್ನು ನೀಡಲು ಸಹಾಯ ಮಾಡುತ್ತದೆ. ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ.

ಕೂದಲಿನ ಕಾಂತಿ ಹೆಚ್ಚುತ್ತದೆ

ಒಣ ಮತ್ತು ಸಿಕ್ಕಾದ ಕೂದಲು ಇರುವವರು ಆಗಾಗ್ಗೆ ಮೆಂತ್ಯದ ಸೀರಮ್ ಅನ್ನು ಕೂದಲಿಗೆ ಸಿಂಪಡಿಸಬೇಕು. ಅಥವಾ ವಾರಕ್ಕೊಮ್ಮೆಯಾದರೂ ಮೆಂತ್ಯದ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ. ಹೀಗೆ ಮಾಡುವುದರಿಂದ ಕೂದಲು ಮೃದುವಾಗಿ ಹೊಳೆಯುತ್ತದೆ. ಅಲ್ಲದೇ ಪದೇ ಪದೇ ಕೂದಲು ಸಿಕ್ಕಾಗುವ ಸಮಸ್ಯೆಗೂ ಪರಿಹಾರ ದೊರೆಯುತ್ತದೆ.

ತುರಿಕೆ ಮತ್ತು ಹೇನಿನ ಸಮಸ್ಯೆಗೂ ಪರಿಹಾರ

ಕೂದಲಿನಲ್ಲಿ ತುರಿಕೆ, ಹೇನು, ತಲೆಹೊಟ್ಟು ಮುಂತಾದ ಸಮಸ್ಯೆಗಳು ಅನೇಕರನ್ನು ಕಾಡುತ್ತಿವೆ. ಅಂತಹವರು ಮೆಂತ್ಯ ಸೀರಮ್ ಅನ್ನು ಕೂದಲಿನ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು. ಇದರ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಚರ್ಮವನ್ನು ಚೆನ್ನಾಗಿ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.

ಮೆಂತ್ಯ ಸೀರಮ್ ಮಾಡುವುದು ಹೇಗೆ?

  • ಮೆಂತ್ಯ ಸೀರಮ್ ತಯಾರಿಸಲು, ಗಾಜಿನ ಬಟ್ಟಲಿನಲ್ಲಿ ಅಥವಾ ಬಾಟಲಿಯಲ್ಲಿ ಎರಡು ಚಮಚ ಮೆಂತ್ಯ ಬೀಜಗಳನ್ನು ಹಾಕಿ.
  • ಅದರಲ್ಲಿ ಒಂದು ಲೋಟ ಫಿಲ್ಟರ್ ಮಾಡಿದ ನೀರನ್ನು ಸುರಿಯಿರಿ ಮತ್ತು ರಾತ್ರಿಯಿಡೀ ನೆನೆಸಿ.
  • ಬೆಳಿಗ್ಗೆ ಈ ನೀರನ್ನು ಸೋಸಿಕೊಂಡು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ.

2ನೇ ವಿಧಾನ

  • ಒಂದು ಪಾತ್ರೆಯಲ್ಲಿ ನೀರನ್ನು ಸುರಿಯಿರಿ ಮತ್ತು ಅದರಲ್ಲಿ ಮೆಂತ್ಯ ಬೀಜಗಳನ್ನು ಹಾಕಿ.
  • ಒಲೆ ಆನ್ ಮಾಡಿ ಮತ್ತು ಅವುಗಳನ್ನು 10 ರಿಂದ 15 ನಿಮಿಷಗಳ ಕಾಲ ಕುದಿಸಿ.
  • ನೀರಿನ ಬಣ್ಣ ಬದಲಾದ ನಂತರ, ಈ ನೀರನ್ನು ಫಿಲ್ಟರ್ ಮಾಡಿ.
  • ತಣ್ಣಗಾದ ನಂತರ, ಬಾಟಲಿಯಲ್ಲಿ ಸಂಗ್ರಹಿಸಿ.

ನೀವು ಶಾಂಪೂ ಮಾಡುವ ಮೊದಲು ಅಥವಾ ಎರಡು ಗಂಟೆಗಳ ಮೊದಲು ಈ ನೀರನ್ನು ನಿಮ್ಮ ಕೂದಲಿಗೆ ಸಿಂಪಡಿಸಿ ಮತ್ತು ಅದನ್ನು ಬಿಡಿ. ಹೀಗೆ ಕಾಲು ಗಂಟೆ ಬಿಟ್ಟು ಶಾಂಪೂವಿನಿಂದ ತಲೆ ತೊಳೆಯಿರಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner