ಕನ್ನಡ ಸುದ್ದಿ  /  ಜೀವನಶೈಲಿ  /  ತಲೆ ಕೂದಲಿಗೆ ಎಣ್ಣೆ ಹಚ್ಚುವ ಸರಿಯಾದ ಕ್ರಮ ಯಾವುದು; ಇದರಿಂದಾಗುವ ಪ್ರಯೋಜನಗಳೇನು? ಇಲ್ಲಿದೆ ಬೆಸ್ಟ್‌ ಹೇರ್‌ ಆಯಿಲ್‌ ವಿವರ

ತಲೆ ಕೂದಲಿಗೆ ಎಣ್ಣೆ ಹಚ್ಚುವ ಸರಿಯಾದ ಕ್ರಮ ಯಾವುದು; ಇದರಿಂದಾಗುವ ಪ್ರಯೋಜನಗಳೇನು? ಇಲ್ಲಿದೆ ಬೆಸ್ಟ್‌ ಹೇರ್‌ ಆಯಿಲ್‌ ವಿವರ

ಭಾರತದಲ್ಲಿ ಬಹಳ ಹಿಂದಿನಿಂದಲೂ ತಲೆಗೂದಲಿಗೆ ಎಣ್ಣೆ ಹಚ್ಚುವುದು ರೂಢಿ. ನಮ್ಮ ಹಿರಿಯರಂತೂ ಮಕ್ಕಳ ತಲೆಗೆ ಎಣ್ಣೆ ಹಾಕದೆ ಬಿಡುವುದೇ ಇಲ್ಲ. ಅದೂ, ನೆತ್ತಿಗೆ ಎಣ್ಣೆ ಹಾಕುತ್ತಾರೆ. ತಲೆ ಕೂದಲಿಗೆ, ಅದರಲ್ಲೂ ನೆತ್ತಿಗೆ ಯಾಕೆ ಎಣ್ಣೆ ಹಾಕುತ್ತಾರೆ? ಇದರ ಪ್ರಯೋಜನಗಳು ಏನು ಎಂಬುದು ನಿಮಗೆ ತಿಳಿದಿದೆಯೇ? ಇಲ್ಲಿದೆ ಇದರ ಬಗ್ಗೆ ಮಾಹಿತಿ.

ತಲೆ ಕೂದಲಿಗೆ ಎಣ್ಣೆ ಹಚ್ಚುವ ಸರಿಯಾದ ಕ್ರಮ ಯಾವುದು; ಇದರಿಂದಾಗುವ ಪ್ರಯೋಜನಗಳೇನು
ತಲೆ ಕೂದಲಿಗೆ ಎಣ್ಣೆ ಹಚ್ಚುವ ಸರಿಯಾದ ಕ್ರಮ ಯಾವುದು; ಇದರಿಂದಾಗುವ ಪ್ರಯೋಜನಗಳೇನು

ಭಾರತದಲ್ಲಿ ಅನಾದಿ ಕಾಲದಿಂದಲೂ ತಲೆಗೂದಲಿಗೆ ಎಣ್ಣೆ ಹಚ್ಚುವುದು ವಾಡಿಕೆ. ಕೂದಲಿನ ಆರೈಕೆ ಮತ್ತು ಕೂದಲು ಸೊಂಪಾಗಿ ಬೆಳೆಯಲು ಎಣ್ಣೆ ಹಚ್ಚುವುದು ರೂಢಿ. ಆದರೆ, ಕೂದಲಿಗೆ ಎಣ್ಣೆ ಹಚ್ಚಿದರೆ ಸಾಕಾಗುವುದಿಲ್ಲ. ಎಣ್ಣೆ ಹಚ್ಚಲು ನಿರ್ದಿಷ್ಟ ವಿಧಾನವಿದೆ. ಅಜಾಗರೂಕತೆಯಿಂದ ಹಚ್ಚುವುದರಿಂದ ಯಾವುದೇ ಫಲಿತಾಂಶ ಸಿಗುವುದಿಲ್ಲ. ಇದು ಪ್ರಯೋಜನಗಳಿಗಿಂತ ಹೆಚ್ಚು ಸಮಸ್ಯೆ ತಂದೊಡ್ಡಬಹುದು. ಹಾಗಿದ್ದರೆ ತಲೆಗೂದಲಿಗೆ ಎಷ್ಟು ಬಾರಿ ಎಣ್ಣೆ ಹಚ್ಚಬೇಕು? ಇದರ ಪ್ರಯೋಜನಗಳೇನು ಎಂಬಿತ್ಯಾದಿ ಮಾಹಿತಿ ಈ ಸುದ್ದಿಯಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ನಿಮ್ಮ ತಲೆಗೂದಲಿಗೆ ನೀವು ಎಷ್ಟು ಬಾರಿ ಎಣ್ಣೆ ಹಾಕಬೇಕು?

ತಲೆಗೂದಲಿಗೆ ವಾರಕ್ಕೆ ಒಂದರಿಂದ ಎರಡು ಬಾರಿ ಮಾತ್ರ ಎಣ್ಣೆ ಹಚ್ಚಬೇಕು. ಎಣ್ಣೆಯು ಜಿಡ್ಡಿನಂತಿರುವುದರಿಂದ, ಹೆಚ್ಚಿನ ಸಮಯ ಕೂದಲು ಮತ್ತು ನೆತ್ತಿಯನ್ನು ಎಣ್ಣೆಯುಕ್ತವಾಗಿರಿಸಿಕೊಳ್ಳುವುದರಿಂದ ಕಲ್ಮಶಗಳನ್ನು ಆಕರ್ಷಿಸಬಹುದು. ಅದು ನಿಮ್ಮ ನೆತ್ತಿಯ ರಂಧ್ರಗಳನ್ನು ತೂರಿಕೊಳ್ಳಬಹುದು. ಹೀಗಾಗಿ ಆಗಾಗ್ಗೆ ನಿಮ್ಮ ತಲೆ ಕೂದಲಿಗೆ ಎಣ್ಣೆ ಹಚ್ಚಬೇಡಿ. ತಲೆಗೂದಲು ಮತ್ತು ನೆತ್ತಿಯನ್ನು ಉಸಿರಾಡಲು ಬಿಡುವುದು ಮುಖ್ಯ.

ಆದರೂ, ಎಣ್ಣೆ ಹಚ್ಚುವುದು ನಿಮ್ಮ ತಲೆಗೂದಲನ್ನು ತೊಳೆಯುವುದರ ಮೇಲೆ ಅವಲಂಬಿಸಿರುತ್ತದೆ. ನೀವು ಶಾಂಪೂವಿನಿಂದ ನಿಮ್ಮ ಕೂದಲನ್ನು ಹೆಚ್ಚಾಗಿ ತೊಳೆಯುತ್ತಿದ್ದರೆ, ವಾರಕ್ಕೆ ನಾಲ್ಕು ಬಾರಿ ತೊಳೆಯಬಹುದು. ನಿಮ್ಮ ಕೂದಲಿಗೆ ಎಷ್ಟು ಬಾರಿ ಎಣ್ಣೆ ಹಚ್ಚಬೇಕು ಎಂಬುದನ್ನು ನಿರ್ಧರಿಸುವ ಇನ್ನೊಂದು ಅಂಶವೆಂದರೆ ನಿಮ್ಮ ಕೂದಲಿನ ಪ್ರಕಾರ, ವಿನ್ಯಾಸ, ಉದ್ದ ಮತ್ತು ದಪ್ಪ. ಒರಟು, ದಪ್ಪ, ಉದ್ದ ಮತ್ತು ಗುಂಗುರು ಕೂದಲಿಗೆ ಹೆಚ್ಚಾಗಿ ಎಣ್ಣೆ ಹಾಕಬೇಕಾಗುತ್ತದೆ.

ತಲೆಗೂದಲಿಗಿಂತ ನೆತ್ತಿ ಮೇಲೆ ಎಣ್ಣೆ ಹಾಕುವುದು ಮುಖ್ಯ

ಅನೇಕ ಜನರಿಗೆ ಇದರ ಬಗ್ಗೆ ಸರಿಯಾಗಿ ತಿಳಿದಿಲ್ಲ. ತಲೆಗೂದಲಿಗೆ ಎಣ್ಣೆ ಹಾಕುವುದಕ್ಕಿಂತ ತಲೆಯ ಬುಡಕ್ಕೆ ಎಣ್ಣೆ ಹಾಕುವುದು ತುಂಬಾ ಮುಖ್ಯ. ನೀವು ನೆತ್ತಿಯ ಮೇಲೆ ಎಣ್ಣೆ ಹಾಕಿ ಚೆನ್ನಾಗಿ ಮಸಾಜ್ ಮಾಡಬೇಕು. ನೆತ್ತಿಯ ಮಸಾಜ್ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಇದು ರಕ್ತದೊತ್ತಡ, ಹೃದಯ ಬಡಿತ ಮತ್ತು ಹಾರ್ಮೋನು ಏರುಪೇರಾಗುವುದನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ನಡೆಸಿರುವ ಅಧ್ಯಯನದಿಂದ ತಿಳಿದು ಬಂದಿದೆ.

ಕೂದಲಿನ ಬುಡಕ್ಕೆ ಮಾತ್ರವಲ್ಲ, ತುದಿಗೂ ಎಣ್ಣೆ ಹಚ್ಚಬೇಕು

ನೆತ್ತಿಗೆ ಎಣ್ಣೆ ಹಾಕುವುದು ಬಹಳ ಮುಖ್ಯವಾಗಿದ್ದರೂ ಸಹ, ಪೂರ್ತಿ ಕೂದಲಿಗೆ ಎಣ್ಣೆ ಹಚ್ಚುವುದು ಕೂಡ ಪ್ರಯೋಜನಕಾರಿ. ತಲೆಗೂದಲಿನ ಮಧ್ಯಕ್ಕೆ ಮತ್ತು ತುದಿಗೆ ಎಣ್ಣೆ ಹಾಕುವುದರಿಂದ ಅವುಗಳ ಹೊಳಪು, ಮೃದುತ್ವ, ಮತ್ತು ಒಟ್ಟಾರೆ ನೋಟವನ್ನು ಸುಧಾರಿಸುತ್ತದೆ.

ಕೂದಲು ಮತ್ತು ನೆತ್ತಿಗೆ ಎಣ್ಣೆ ಹಚ್ಚುವುದರ ಪ್ರಯೋಜನಗಳು

ಕೂದಲು ಮತ್ತು ನೆತ್ತಿಯನ್ನು ತೇವಗೊಳಿಸುತ್ತದೆ

ಎಣ್ಣೆಯು ಒಣ ನೆತ್ತಿಯನ್ನು ಪೋಷಿಸುತ್ತದೆ. ಕೂದಲಿನ ಬೇರುಗಳನ್ನು ಚೈತನ್ಯಗೊಳಿಸುತ್ತದೆ. ಹಾಗೂ ತಲೆಗೂದಲನ್ನು ಪುನರ್ಯೌವನಗೊಳಿಸುವಂತೆ ಮಾಡುತ್ತದೆ. ಅಲ್ಲದೆ, ಇದು ಜಲಸಂಚಯನವನ್ನು ಹೆಚ್ಚಿಸಿ, ಶುಷ್ಕತೆಯನ್ನು ನಿವಾರಿಸುತ್ತದೆ.

ಶಾಖ ಮತ್ತು ಆಕ್ಸಿಡೇಟಿವ್ ಒತ್ತಡದಿಂದ ತಲೆಗೂದಲಿನ ರಕ್ಷಣೆ

ಆಕ್ಸಿಡೇಟಿವ್ ಸ್ಟ್ರೆಸ್ ಎನ್ನುವುದು ವ್ಯಕ್ತಿಯ ಚರ್ಮ, ಕೂದಲು, ನೆತ್ತಿ ಇತ್ಯಾದಿಗಳಿಗೆ ಉಂಟಾಗುವ ಹಾನಿಯಾಗಿದೆ. ಇದರಿಂದ ಅತಿಯಾದ ಕೂದಲು ಉದುರುವಿಕೆ, ಅಕಾಲಿಕ ಕೂದಲು ಬಿಳಿಯಾಗುವುದು ಇತ್ಯಾದಿಗಳಿಗೆ ಕಾರಣವಾಗುತ್ತದೆ. ಹೀಗಾಗಿ ಕೂದಲಿಗೆ ಎಣ್ಣೆ ಹಾಕುವುದು ಬಹಳ ಮುಖ್ಯ.

ತಲೆಹೊಟ್ಟು ಮತ್ತು ಫ್ಲಾಕಿನೆಸ್ ಅನ್ನು ಕಡಿಮೆ ಮಾಡಲು ಸಹಕಾರಿ

ಶಿಲೀಂಧ್ರಗಳ ಸೋಂಕುಗಳು ಮತ್ತು ಅತಿಯಾದ ಮತ್ತು ಸಂಸ್ಕರಿಸದ ಶುಷ್ಕತೆಯಿಂದ ತಲೆಹೊಟ್ಟು ಉಂಟಾಗಲು ಮುಖ್ಯ ಕಾರಣ. ಇವೆರಡನ್ನೂ ತಲೆಗೂದಲಿಗೆ ಎಣ್ಣೆ ಹಚ್ಚುವುದರಿಂದ ಪರಿಹರಿಸಬಹುದು. ಮುಖ್ಯವಾಗಿ ತಲೆಹೊಟ್ಟು ಇದ್ದರೆ, ತಲೆಗೂದಲ ಬುಡಕ್ಕೆ ಎಣ್ಣೆ ಹಚ್ಚಬೇಕು.

ಹೊಳಪು ಹೆಚ್ಚಿಸುತ್ತದೆ

ಎಣ್ಣೆ ಹಚ್ಚಿದ ನಂತರ ತಲೆಗೂದಲಿಗೆ ಹೊಳಪು ತರುತ್ತವೆ. ಎಣ್ಣೆ ಹಚ್ಚದೇ ತಲೆಗೂದಲನ್ನು ತೊಳೆಯುವ ಬದಲು ಎಣ್ಣೆ ಹಚ್ಚಿ, ತಲೆಗೂದಲು ತೊಳೆಯುವುದರಿಂದ ಕೂದಲಿನ ಹೊಳಪು ಹೆಚ್ಚಾಗುತ್ತದೆ.

ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ

ನೆತ್ತಿಯನ್ನು ಎಣ್ಣೆಯಿಂದ ಮಸಾಜ್ ಮಾಡುವುದು ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ಅಲ್ಲದೆ, ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಕೊಡುಗೆ ನೀಡುತ್ತದೆ. ಒಟ್ಟಾರೆ ಆರೋಗ್ಯಕರ ಕೂದಲು ಬೆಳವಣಿಗೆ ಮತ್ತು ದಪ್ಪವನ್ನು ಉತ್ತೇಜಿಸುತ್ತದೆ.

ತಲೆಗೂದಲಿಗೆ ಯಾವ ಎಣ್ಣೆ ಬಳಸಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ

  • ತೆಂಗಿನೆಣ್ಣೆ

ತ್ವಚೆ ಮತ್ತು ಕೂದಲ ರಕ್ಷಣೆಯ ಉದ್ದೇಶಗಳಿಗಾಗಿ ತೆಂಗಿನ ಎಣ್ಣೆ ಉತ್ತಮ ಆಯ್ಕೆ. ಇದು ನೆತ್ತಿಯಲ್ಲಿ ನಿರ್ಜಲೀಕರಣವನ್ನು ತಡೆಯುತ್ತದೆ. ಲಾರಿಕ್ ಆಮ್ಲ ಮತ್ತು ಲಿನೋಲಿಯಿಕ್ ಆಮ್ಲದಲ್ಲಿ ಸಮೃದ್ಧವಾಗಿರುವ ತೆಂಗಿನೆಣ್ಣೆಯು, ತಲೆಹೊಟ್ಟು‌ ನಿವಾರಣೆಗೆ ಅತ್ಯುತ್ತಮ ಚಿಕಿತ್ಸೆಯಾಗಿದೆ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಎ ಮತ್ತು ಇ, ಪಾಲ್ಮಿಟಿಕ್ ಆಮ್ಲ ಮತ್ತು ಒಲೀಕ್ ಆಮ್ಲ ಸಮೃದ್ಧವಾಗಿದೆ. ಇದು ಕೂದಲು ಮತ್ತು ನೆತ್ತಿಯ ಒಟ್ಟಾರೆ ಆರೋಗ್ಯ ಹೆಚ್ಚಿಸುತ್ತದೆ. ತಲೆಗೂದಲಿಗೆ ಹೊಳಪು ತರುತ್ತದೆ.

ಅರ್ಗಾನ್ ಎಣ್ಣೆ

ಆರ್ಗಾನ್ ಎಣ್ಣೆಯು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಕೂದಲಿಗೆ ಅತ್ಯುತ್ತಮ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ಎಣ್ಣೆಯಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಇ ಸೂಕ್ಷ್ಮ ಸುಕ್ಕುಗಳನ್ನು ಕಡಿಮೆ ಮಾಡಲು ಹಾಗೂ ಈ ಸೂಕ್ಷ್ಮ ಪ್ರದೇಶವನ್ನು ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ. ಆದರೆ, ಇದನ್ನು ಮಿತವಾಗಿ ಬಳಸುವುದು ಉತ್ತಮ.

ಹರಳೆಣ್ಣೆ

ಹಲವಾರು ಅಧ್ಯಯನಗಳ ಪ್ರಕಾರ, ಹರಳೆಣ್ಣೆಯು ಆಳವಾದ ಕಂಡೀಷನಿಂಗ್, ನೆತ್ತಿಯ ಆರೋಗ್ಯ ಉತ್ತೇಜಿಸುವ ಮತ್ತು ಕೂದಲು-ಪುನರುಜ್ಜೀವನಗೊಳಿಸುವ ಗುಣಲಕ್ಷಣಗಳನ್ನು ಹೊಂದಿದೆ ಎಂದು ಸಾಬೀತುಪಡಿಸಿದೆ. ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ | ಮುಖದ ಮೊಡವೆ ಕಲೆಗಳನ್ನು ಮಾಯವಾಗಿಸುತ್ತೆ ಪುದೀನಾ ಎಲೆಗಳು; ಈ ರೀತಿ ಬಳಸಿ ನೋಡಿ

ಇನ್ನು ಆಲಿವ್ ಎಣ್ಣೆ, ದ್ರಾಕ್ಷಿ ಬೀಜದ ಎಣ್ಣೆ, ಟೀ ಟ್ರೀ ಎಣ್ಣೆ, ರೋಸ್ಮರಿ ಎಣ್ಣೆ, ಪುದೀನಾ ಎಣ್ಣೆಯನ್ನು ಸಹ ಬಳಸಬಹುದು. ಇದು ತಲೆಗೂದಲ ರಕ್ಷಣೆ ಮತ್ತು ನೆತ್ತಿಯ ಆರೈಕೆಗೆ ಪ್ರಯೋಜನಕಾರಿ.

ತಲೆಗೂದಲಿಗೆ ಎಣ್ಣೆ ಹಚ್ಚುವ ಕ್ರಮಗಳು

  • ನಿಮ್ಮ ಕೂದಲಿನ ಉದ್ದವನ್ನು ಅವಲಂಬಿಸಿ ನೀವು ಪ್ರಮಾಣವನ್ನು ಕಸ್ಟಮೈಸ್ ಮಾಡಬಹುದು. ಒಂದು ಸಣ್ಣ ಬೌಲ್‌ನಲ್ಲಿ ಎಣ್ಣೆ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
  • ನಂತರ ಬೆರಳಿನಲ್ಲಿ ಸ್ವಲ್ಪ-ಸ್ವಲ್ಪವೇ ಎಣ್ಣೆ ತೆಗೆದುಕೊಂಡು ನೆತ್ತಿಗೆ ಸರಿಯಾಗಿ ಅನ್ವಯಿಸಿ. ಮೊದಲಿಗೆ ಕೂದಲಿನ ಬುಡಕ್ಕೆ ಎಣ್ಣೆ ಹಚ್ಚಿ, ಚೆನ್ನಾಗಿ ತಿಕ್ಕಿ.
  • ನಿಮ್ಮ ನೆತ್ತಿಯ ಬದಿಯಿಂದ ಮಧ್ಯಕ್ಕೆ ಎಣ್ಣೆಯನ್ನು ಹಚ್ಚುತ್ತಾ ಚೆನ್ನಾಗಿ ಮಸಾಜ್ ಮಾಡಿ. ಕನಿಷ್ಠ 5 ರಿಂದ 7 ನಿಮಿಷಗಳ ಕಾಲ ವೃತ್ತಾಕಾರದಂತೆ ಎಣ್ಣೆಯನ್ನು ನೆತ್ತಿಗೆ ಮಸಾಜ್ ಮಾಡಿ.
  • ನಿಮ್ಮ ತಲೆಗೂದಲು ಉದ್ದವಾಗಿದ್ದರೆ, ಮಧ್ಯ ಭಾಗದಿಂದ ತುದಿಯವರೆಗೂ ಚೆನ್ನಾಗಿ ಎಣ್ಣೆ ಹಚ್ಚಿ.
  • ಎಣ್ಣೆ ಹಚ್ಚಿದ ನಂತರ ನಿಮ್ಮ ತಲೆಗೂದಲನ್ನು ಬಾಚಿಕೊಳ್ಳುವುದು ಅಥವಾ ಕಟ್ಟುವುದು/ಕ್ಲಿಪ್ ಹಾಕುವುದನ್ನು ಮಾಡದಿರಿ.

ತಲೆಗೂದಲಿಗೆ ಎಣ್ಣೆ ಹಚ್ಚುವುದರಿಂದ ಅನೇಕ ಪ್ರಯೋಜನಗಳಿವೆ. ಇದು ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ಇದು ಹೆಚ್ಚಿದ ಕೂದಲು ಬೆಳವಣಿಗೆ, ನೆತ್ತಿಯ ಪುನರ್ಯೌವನಗೊಳಿಸುವಿಕೆ, ಕಡಿಮೆ ಒತ್ತಡ, ಇತ್ಯಾದಿಗಳಂತಹ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕೂದಲಿಗೆ ಎಣ್ಣೆ ಹಚ್ಚಿದ ನಂತರ ಒಂದು ಗಂಟೆವರೆಗೆ ಕಾದರೆ ಸಾಕು. ನಂತರ, ನಿಮ್ಮ ಕೂದಲನ್ನು ಶಾಂಪೂ ಬಳಸಿ ಚೆನ್ನಾಗಿ ತೊಳೆಯಿರಿ. ತಲೆಗೂದಲಲ್ಲಿ ಸ್ವಲ್ಪವೂ ಜಿಡ್ಡಿನಾಂಶ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.