ಬಿಳಿ ಕೂದಲಿನ ಸಮಸ್ಯೆಯಿಂದ ಕಂಗಾಲಾಗಿದ್ದೀರಾ? ಕೃತಕ ಬಣ್ಣಗಳ ಬಳಕೆ ನಿಲ್ಲಿಸಿ, ಶಾಶ್ವತ ಪರಿಹಾರಕ್ಕೆ ಮನೆಯಲ್ಲೇ ಈ ಎಣ್ಣೆ ತಯಾರಿಸಿ ಬಳಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬಿಳಿ ಕೂದಲಿನ ಸಮಸ್ಯೆಯಿಂದ ಕಂಗಾಲಾಗಿದ್ದೀರಾ? ಕೃತಕ ಬಣ್ಣಗಳ ಬಳಕೆ ನಿಲ್ಲಿಸಿ, ಶಾಶ್ವತ ಪರಿಹಾರಕ್ಕೆ ಮನೆಯಲ್ಲೇ ಈ ಎಣ್ಣೆ ತಯಾರಿಸಿ ಬಳಸಿ

ಬಿಳಿ ಕೂದಲಿನ ಸಮಸ್ಯೆಯಿಂದ ಕಂಗಾಲಾಗಿದ್ದೀರಾ? ಕೃತಕ ಬಣ್ಣಗಳ ಬಳಕೆ ನಿಲ್ಲಿಸಿ, ಶಾಶ್ವತ ಪರಿಹಾರಕ್ಕೆ ಮನೆಯಲ್ಲೇ ಈ ಎಣ್ಣೆ ತಯಾರಿಸಿ ಬಳಸಿ

ಬಿಳಿ ಕೂದಲಿನ ಸಮಸ್ಯೆಯಿಂದ ನೀವು ಮುಜುಗರಕ್ಕೊಳಗಾಗುತ್ತಿದ್ದೀರಾ? ಯಾವುದೇ ಶಾಂಪೂ ಮತ್ತು ಎಣ್ಣೆ ಬಳಸಿದರೂ, ಪರಿಹಾರ ಸಿಗ್ತಾ ಇಲ್ವಾ, ಹಾಗಾದರೆ ನಿಮಗಾಗಿ ಇಲ್ಲೊಂದು ಪರಿಹಾರ ಮಾರ್ಗವಿದೆ. ಈ ಬೀಜಗಳಿಂದ ಎಣ್ಣೆ ತಯಾರಿಸಿ ನಿಯಮಿತವಾಗಿ ಬಳಸಿದರೆ, ಕೆಲವೇ ದಿನಗಳಲ್ಲಿ ನಿಮ್ಮ ಕೂದಲು ಕಪ್ಪಾಗುತ್ತೆ.

ಬಿಳಿ ಕೂದಲಿನ ಸಮಸ್ಯೆ ನಿವಾರಣೆಗೆ ಮನೆಮದ್ದು
ಬಿಳಿ ಕೂದಲಿನ ಸಮಸ್ಯೆ ನಿವಾರಣೆಗೆ ಮನೆಮದ್ದು

ಇತ್ತೀಚಿನ ಜೀವನಶೈಲಿಯು ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುವಂತೆ ಮಾಡುತ್ತಿದೆ. ಇದರಿಂದ ಜನರ ಮಧ್ಯೆ ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗುತ್ತಿದೆ. ಕೂದಲು ಬೆಳ್ಳಗಾಗುತ್ತಿದೆ ಎನ್ನುವ ಕಾರಣಕ್ಕೆ ಚಿಕ್ಕ ವಯಸ್ಸಿನಿಂದಲೇ ಬಣ್ಣ ಹಚ್ಚಲು ಆರಂಭಿಸುವುದರಿಂದ ಕೂದಲು ನೈಸರ್ಗಿಕ ಕಪ್ಪು ಬಣ್ಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕೂದಲಿನ ಬಣ್ಣಕ್ಕೆ ಸೇರಿಸಲಾಗುವ ರಾಸಾಯನಿಕಗಳು ಕೂದಲಿನ ಆರೋಗ್ಯವನ್ನು ಮತ್ತಷ್ಟು ಹಾಳುಮಾಡುತ್ತವೆ. ಇದಲ್ಲದೆ, ಕೂದಲು ಬಣ್ಣ ಕಳೆದುಕೊಂಡ ನಂತರ, ಅದು ಇನ್ನಷ್ಟು ಕಳೆಗುಂದಿದಂತೆ ಕಾಣಬಹುದು. ಬಿಳಿ ಕೂದಲಿನ ಸಮಸ್ಯೆ ನಿವಾರಣೆಗೆ ಇಲ್ಲೊಂದು ಅದ್ಭುತ ಮನೆಮದ್ದಿನ ಪರಿಹಾರವಿದೆ.

ನೀವು ಕೂಡ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ಕಲೋಂಜಿ ಬೀಜ ಅಥವಾ ಕಹಿಜೀರಿಗೆ ನಿಮಗೆ ಉತ್ತಮ ಪರಿಹಾರವಾಗಿದೆ. ಇದರಿಂದ ಮನೆಯಲ್ಲಿಯೇ ನೈಸರ್ಗಿಕ ಎಣ್ಣೆಯನ್ನು ತಯಾರಿಸಿ ಬಳಸಬಹುದು. ಇದು ಕೂದಲನ್ನು ಕ್ರಮೇಣ ಕಪ್ಪಾಗಿಸುತ್ತದೆ, ಇದು ಕೂದಲಿನ ನೈಸರ್ಗಿಕ ಬಣ್ಣವನ್ನು ಮರಳಿ ಪಡೆಯಲು ಅನುವು ಮಾಡಿಕೊಡುತ್ತದೆ. ಇದು ಕೂದಲಿನ ಕಿರುಚೀಲಗಳನ್ನು ಬಲಪಡಿಸಲು ಸಹ ಸಹಾಯ ಮಾಡುತ್ತದೆ. ಕಲೋಂಜಿ ಬೀಜಗಳಿಂದ ಎಣ್ಣೆಯನ್ನು ಹೇಗೆ ತಯಾರಿಸುವುದು ಎಂಬ ವಿವರ ಇಲ್ಲಿದೆ.

ಕೂದಲನ್ನು ಕಪ್ಪಾಗಿಸುವ ಎಣ್ಣೆ ತಯಾರಿಸುವುದು ಹೇಗೆ?

ಅಗತ್ಯವಿರುವ ಪದಾರ್ಥಗಳು: ಕಹಿ ಜೀರಿಗೆ – 1 ಕಪ್‌, ಸಾಸಿವೆ ಎಣ್ಣೆ – 1ಕಪ್‌, ನೀರು – ಅಗತ್ಯಕ್ಕೆ

ತಯಾರಿಸುವ ವಿಧಾನ: ಒಂದು ಕಪ್ ಕಲೋಂಜಿ ಬೀಜವನ್ನು ಒಂದು ಗಾಜಿನ ಜಾರಿಗೆ ಹಾಕಿ ಅದರಲ್ಲಿ ನೀರು ಸುರಿದು ರಾತ್ರಿಯಿಡೀ ನೆನೆಸಿಡಿ. ಮರುದಿನ ಬೆಳಿಗ್ಗೆ, ಕಲೋಂಜಿ ಬೀಜಗಳನ್ನು ನೀರಿನೊಂದಿಗೆ ಬೆರೆಸಿ ನಯವಾದ ಪೇಸ್ಟ್ ಮಾಡಿ. ಕಲೋಂಜಿ ಬೀಜದ ಪೇಸ್ಟ್ ಮತ್ತು ಎರಡು ಕಪ್ ಸಾಸಿವೆ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿಅದು ಕುದಿಯುವವರೆಗೆ ಮತ್ತು ಅರ್ಧದಷ್ಟು ಕಡಿಮೆಯಾಗುವವರೆಗೆ ಬಿಸಿ ಮಾಡಿ. ನಂತರ ಗ್ಯಾಸ್ ಆಫ್ ಮಾಡಿ ಎಣ್ಣೆ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ, ಎಣ್ಣೆಯನ್ನು ಬಟ್ಟೆಯ ಸಹಾಯದಿಂದ ಸೋಸಿ ಗಾಜಿನ ಬಾಟಲಿಯಲ್ಲಿ ತುಂಬಿಸಿ.

ಕಲೊಂಜಿ ಎಣ್ಣೆ ಬಳಕೆ ಹೇಗೆ?

ರಾತ್ರಿಯಲ್ಲಿ ಮಲಗುವ ಮುನ್ನ ಕೂದಲಿನ ಕಿರುಚೀಲಗಳು ಮತ್ತು ಬಿಳಿಯಾದ ಪ್ರದೇಶಗಳಿಗೆ ಎಣ್ಣೆಯನ್ನು ಹಚ್ಚಿ. ರಾತ್ರಿಯಿಡೀ ಅದನ್ನು ಹಾಗೆಯೇ ಬಿಡಿ ಮತ್ತು ಮರುದಿನ ಬೆಳಿಗ್ಗೆ ಶಾಂಪೂ ಬಳಸಿ ತಲೆಸ್ನಾನ ಮಾಡಿ.

ಈ ಎಣ್ಣೆಯನ್ನು ನಿಯಮಿತವಾಗಿ, ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ನೆತ್ತಿಗೆ ಹಚ್ಚುವುದರಿಂದ, ಕೆಲವೇ ದಿನಗಳಲ್ಲಿ ಬಿಳಿ ಕೂದಲಿನ ಸಮಸ್ಯೆ ಬಗೆಹರಿಯುತ್ತದೆ. ಈ ಎಣ್ಣೆಯು ಹೊಸ ಬೂದು ಕೂದಲು ಕಾಣಿಸಿಕೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ. ಈ ಎಣ್ಣೆಯನ್ನು ಸತತವಾಗಿ ಹಲವಾರು ವಾರಗಳ ಕಾಲ ಹಚ್ಚುವುದರಿಂದ ಕೂದಲಿಗೆ ನೈಸರ್ಗಿಕ ಬಣ್ಣ ಮರಳುತ್ತದೆ.

ಒಂದು ವಿಚಾರ ನೆನಪಿನಲ್ಲಿಡಿ, ಈ ಎಣ್ಣೆಯನ್ನು ಹಚ್ಚಿ ಮಲುಗುವುದರಿಂದ ದಿಂಬು, ಹಾಸಿಗೆ ಹಾಳಾಗಬಹುದು. ಹಾಗಾಗಿ ಪ್ಲಾಸ್ಟಿಕ್ ಅಥವಾ ದಪ್ಪದ ವೇಸ್ಟ್‌ ಬಟ್ಟೆ ತಲೆ ಅಡಿಗೆ ಇಟ್ಟು ಮಲಗುವುದು ಉತ್ತಮ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner