ತಲೆಸ್ನಾನ ಮಾಡುವಾಗ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ: ನಿಮ್ಮ ಸಣ್ಣ ತಪ್ಪು ಕೂದಲು ಉದುರುವಿಕೆಗೆ ಕಾರಣವಾಗಬಹುದು
ನೀವು ಸುಂದರವಾಗಿ ಕಾಣಬೇಕು ಎಂದು ಬಯಸಿದರೆ ತಲೆಗೂದಲಿನ ಕಾಳಜಿಯೂ ಬಹಳ ಮುಖ್ಯ, ತಲೆಗೂದಲು ತೊಳೆಯುವಾಗ ಕೆಲವರು ಮಾಡುವ ಸಣ್ಣ ತಪ್ಪುಗಳು ಕೂದಲು ಉದುರುವಿಕೆ, ತಲೆಹೊಟ್ಟು, ಶುಷ್ಕತೆ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು. ಅಪ್ಪಿತಪ್ಪಿಯೂ ತಲೆಸ್ನಾನ ಮಾಡುವಾಗ ಈ ತಪ್ಪು ಮಾಡಬೇಡಿ. ಇನ್ನಷ್ಟು ವಿವರ ಇಲ್ಲಿದೆ.

ಪ್ರತಿಯೊಬ್ಬರೂ ಚರ್ಮದ ಕಾಳಜಿ ಮಾತ್ರವಲ್ಲ ತಮ್ಮ ತಲೆಗೂದಲಿನ ಆರೈಕೆಯತ್ತಲೂ ಗಮನ ಕೊಡುತ್ತಾರೆ. ಆದರೂ ಕೆಲವೊಮ್ಮೆ ತೋರುವ ನಿರ್ಲಕ್ಷ್ಯವು ಹೆಚ್ಚು ಕೂದಲು ಉದುರುವಿಕೆ, ತಲೆಹೊಟ್ಟು ಸೇರಿದಂತೆ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಕೂದಲನ್ನು ಸುಂದರವಾಗಿ ಮತ್ತು ಆರೋಗ್ಯಕರವಾಗಿ ನೋಡಿಕೊಳ್ಳುವುದು ಬಹಳ ಮುಖ್ಯ. ಕೂದಲಿನ ಆರೋಗ್ಯಕ್ಕಾಗಿ ನಿಯತವಾಗಿ ತಲೆಗೂದಲನ್ನು ತೊಳೆಯುವುದು ಅತ್ಯಗತ್ಯ. ಕೂದಲು ಸ್ವಚ್ಛವಾದಷ್ಟೂ ಉತ್ತಮ ಬೆಳವಣಿಗೆ, ಮೃದು, ಪ್ರಕಾಶಮಾನ ಮತ್ತು ಆರೋಗ್ಯಕರವಾಗಿರುತ್ತದೆ.
ಆದರೆ, ಅನೇಕ ಮಂದಿ ತಮ್ಮ ಕೂದಲನ್ನು ತೊಳೆಯುವಾಗ ಗೊತ್ತಿಲ್ಲದೆ ಕೆಲವು ಸಣ್ಣ ತಪ್ಪುಗಳನ್ನು ಮಾಡುತ್ತಾರೆ. ಇದು ಕೂದಲಿನ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಇದು ನಿಮ್ಮ ಕೂದಲಿನ ಕಿರುಚೀಲಗಳನ್ನು ದುರ್ಬಲಗೊಳಿಸುತ್ತದೆ. ಕೂದಲು ಉದುರುವಿಕೆ, ಶುಷ್ಕತೆ, ತಲೆಹೊಟ್ಟು, ತುರಿಕೆ, ದದ್ದುಗಳಂತಹ ಸಮಸ್ಯೆಗಳು ಸಹ ಸಂಭವಿಸಬಹುದು. ಆದ್ದರಿಂದ ತಲೆ ಸ್ನಾನ ಮಾಡುವಾಗ ಈ ಕೆಲವು ತಪ್ಪುಗಳನ್ನು ಮಾಡಬೇಡಿ.
ತಲೆಸ್ನಾನ ಮಾಡುವಾಗ ಈ ತಪ್ಪು ಮಾಡಬೇಡಿ
ಪ್ರತಿದಿನ ಕೂದಲು ತೊಳೆಯುವುದು ಅಪಾಯಕಾರಿ: ಪ್ರತಿದಿನ ಸ್ನಾನ ಮಾಡುವಾಗಲೂ ಕೆಲವರು ತಲೆಗೂದಲನ್ನು ತೊಳೆಯುತ್ತಾರೆ. ಪ್ರತಿದಿನ ಕೂದಲು ತೊಳೆಯುವುದು ತುಂಬಾ ಅಪಾಯಕಾರಿ. ಇದು ಕೂದಲಿಗೆ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ. ಹೆಚ್ಚು ಶಾಂಪೂ ಬಳಸುವುದರಿಂದ ಚರ್ಮದ ನೈಸರ್ಗಿಕ ತೈಲ ಉತ್ಪಾದನೆ ಕಡಿಮೆಯಾಗುತ್ತದೆ. ಇದರಿಂದಾಗಿ ಕೂದಲು ಶುಷ್ಕತೆ ಮತ್ತು ಅತಿಯಾದ ಕೂದಲು ಉದುರುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ. ತಜ್ಞರ ಪ್ರಕಾರ, ವಾರಕ್ಕೆ ಎರಡರಿಂದ ಮೂರು ಬಾರಿ ಮಾತ್ರ ತಲೆಗೂದಲು ತೊಳೆಯುವುದು ಉತ್ತಮ.
ಸಲ್ಫೇಟ್ ಅಂಶವಿರುವ ಶಾಂಪೂ ಬಳಕೆ ಅಪಾಯಕಾರಿ: ತಲೆಗೂದಲನ್ನು ತೊಳೆಯುವಾಗ ಸಲ್ಫೇಟ್ ಮುಕ್ತ ಶಾಂಪೂ ಬಳಕೆಗೆ ಆದ್ಯತೆ ನೀಡಿ. ಶಾಂಪೂ ಖರೀದಿಸುವಾಗಲೇ ಈ ಬಗ್ಗೆ ತಿಳಿದುಕೊಳ್ಳಿ. ಇಲ್ಲದಿದ್ದರೆ ಇದು ಕೂದಲಿಗೆ ಹಾನಿಕಾರಕವಾಗಿ ಪರಿಣಮಿಸಬಹುದು. ಅತಿಯಾದ ಕೂದಲು ಉದುರುವಿಕೆ, ಸೀಳು ಕೂದಲು ಇತ್ಯಾದಿ ಸಮಸ್ಯೆ ಉಂಟಾಗಬಹುದು.
ಕೂದಲಿನ ಮೇಲೆ ಹೆಚ್ಚು ಒತ್ತಡ ಹೇರಬೇಡಿ: ಕೂದಲನ್ನು ಚೆನ್ನಾಗಿ ತೊಳೆಯುವ ಭರದಲ್ಲಿ, ಶಾಂಪೂ ಹಾಕಿ ಗಟ್ಟಿಯಾಗಿ ಉಜ್ಜುವುದು ಒಳ್ಳೆಯದಲ್ಲ. ಹೆಚ್ಚು ಒತ್ತಡ ಹೇರುವುದರಿಂದ ನಿಮ್ಮ ಕೂದಲಿಗೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ. ಶಾಂಪೂ ಹಾಕಿ ಕೂದಲನ್ನು ತುಂಬಾ ಮೃದುವಾಗಿ ಉಜ್ಜಿ. ವಿಶೇಷವಾಗಿ ಶಾಂಪೂವಿನಿಂದ ನೆತ್ತಿಯನ್ನು ಗಟ್ಟಿಯಾಗಿ ಉಜ್ಜಬೇಡಿ.
ಬಿಸಿ ನೀರಿನ ಬಳಕೆ ಉತ್ತಮವಲ್ಲ: ಜನರು ಸಾಮಾನ್ಯವಾಗಿ ಚಳಿಗಾಲದಲ್ಲಿ ಸ್ನಾನ ಮಾಡಲು ಬಿಸಿ ಬಿಸಿ ನೀರನ್ನು ಬಳಸುತ್ತಾರೆ. ಚಳಿಯಾಗುತ್ತದೆ ಎಂಬ ಕಾರಣದಿಂದ ಹೆಚ್ಚು ಬಿಸಿ ನೀರಿನಿಂದ ಕೂದಲನ್ನು ತೊಳೆಯುತ್ತಾರೆ. ಆದರೆ ಇದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಬಿಸಿ ನೀರಿನಿಂದ ಕೂದಲನ್ನು ತೊಳೆಯುವುದರಿಂದ ಕೂದಲು ಹೆಚ್ಚು ಒಣಗುತ್ತದೆ ಮತ್ತು ಒಡೆಯುವ ಅಪಾಯವನ್ನು ಹೆಚ್ಚಿಸುತ್ತದೆ. ತಜ್ಞರ ಪ್ರಕಾರ, ಕೂದಲನ್ನು ತೊಳೆಯಲು ಬೆಚ್ಚಗಿನ (ಉಗುರು ಬೆಚ್ಚಗಿನ) ನೀರನ್ನು ಬಳಸುವುದು ಉತ್ತಮ. ಇದು ಕೂದಲನ್ನು ಒಡೆಯದಂತೆ ತಡೆಯುತ್ತದೆ ಮಾತ್ರವಲ್ಲದೆ, ಮೃದುವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.
ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.
ಇದನ್ನೂ ಓದಿ: ತಲೆಗೂದಲು ಉದುರುತ್ತಿರುವ ಚಿಂತೆ ಬೇಡ, ಈ ಸಲಹೆ ಅನುಸರಿಸಿ

ವಿಭಾಗ