Hair Loss Problem: ಕೂದಲು ಉದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಸಾಮಾಜಿಕ ಮಾಧ್ಯಮದಿಂದ ದೂರವಿದ್ದರೆ ಚೆನ್ನ
ಕನ್ನಡ ಸುದ್ದಿ  /  ಜೀವನಶೈಲಿ  /  Hair Loss Problem: ಕೂದಲು ಉದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಸಾಮಾಜಿಕ ಮಾಧ್ಯಮದಿಂದ ದೂರವಿದ್ದರೆ ಚೆನ್ನ

Hair Loss Problem: ಕೂದಲು ಉದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಸಾಮಾಜಿಕ ಮಾಧ್ಯಮದಿಂದ ದೂರವಿದ್ದರೆ ಚೆನ್ನ

ಬಹಳಷ್ಟು ಜನರು ಸಾಮಾಜಿಕ ಮಾಧ್ಯಮದಲ್ಲಿ ದೊರಕುವ ಸಲಹೆಗಳನ್ನು ಯಥಾಪ್ರಕಾರ ಪ್ರಯತ್ನಿಸಿ ನೋಡುತ್ತಾರೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿನ ತಪ್ಪು ಮಾಹಿತಿಯು ಕೂದಲಿನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಒತ್ತಡವನ್ನು ಉಂಟುಮಾಡುತ್ತದೆ, ಹಾಗೂ ಕೂದಲು ಉದುರುವಿಕೆಗೆ ಹೇಗೆ ಕಾರಣವಾಗುತ್ತದೆ ಎನ್ನುವುದು ಅವರಿಗೆ ಅರಿವಿರುವುದಿಲ್ಲ.

ಸಾಮಾಜಿಕ ಮಾಧ್ಯಮದ ತಪ್ಪು ಮಾಹಿತಿಯು ಕೂದಲಿನ ಆರೋಗ್ಯದ ಮೇಲೆ  ಪರಿಣಾಮ ಬೀರುತ್ತದೆ
ಸಾಮಾಜಿಕ ಮಾಧ್ಯಮದ ತಪ್ಪು ಮಾಹಿತಿಯು ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ (Pixabay)

ಜನರಿಗೆ ಸಾಮಾಜಿಕ ಮಾಧ್ಯಮಗಳ ಮೇಲಿನ ಅವಲಂಬನೆ ಮತ್ತು ಅವುಗಳ ಮೇಲಿನ ನಂಬಿಕೆ ಎಷ್ಟಿದೆಯೆಂದರೆ, ವೈದ್ಯರು ಮತ್ತು ತಜ್ಞರ ಮಾಹಿತಿಯನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳದೇ, ಸುಲಭದಲ್ಲಿ ಅಲ್ಲಿ ಹೇಳುವ ಟಿಪ್ಸ್, ಸೂಚನೆಗಳನ್ನು ನಂಬಿಬಿಡುತ್ತಾರೆ. ಇದರ ಪರಿಣಾಮ ಏನಾಗಿದೆಯೆಂದರೆ, ಸಾಮಾಜಿಕ ಮಾಧ್ಯಮವು ಅಸ್ವಾಭಾವಿಕ ಸೌಂದರ್ಯ ಮಾನದಂಡಗಳನ್ನು ಸೃಷ್ಟಿಸಿ, ಆತಂಕವನ್ನು ಪ್ರಚೋದಿಸುತ್ತದೆ ಮತ್ತು ನಮಗೇ ನಮ್ಮ ಮೇಲೆ ಆತ್ಮವಿಶ್ವಾಸ ಕಡಿಮೆಯಾಗುವಂತೆ ಮಾಡುತ್ತದೆ. ಹಿಂದೂಸ್ತಾನ್ ಟೈಮ್ಸ್ ಜತೆಗಿನ ಸಂದರ್ಶನದಲ್ಲಿ, ಚರ್ಮರೋಗ ವೈದ್ಯ, ಕೂದಲು ಕಸಿ ಶಸ್ತ್ರಚಿಕಿತ್ಸಕ ಮತ್ತು ನವದೆಹಲಿಯ ಸ್ಕಿನ್‌ಕ್ಯೂರ್ ಕ್ಲಿನಿಕ್‌ನ ಸಂಸ್ಥಾಪಕ ಡಾ. ಜಾಂಗಿಡ್ ಅವರ ಪ್ರಕಾರ, ಸಾಮಾಜಿಕ ಮಾಧ್ಯಮವು ಅಸಾಧ್ಯವಾದ ಸೌಂದರ್ಯ ಮಾನದಂಡಗಳನ್ನು ಸೃಷ್ಟಿಸಿದೆ ಮತ್ತು ಇದು ಅನೇಕರಿಗೆ ಆನ್‌ಲೈನ್‌ನಲ್ಲಿ ಅವರು ನೋಡುವಂತೆ ಕಾಣಲು ಎಂದಿಗೂ ಸಾಧ್ಯವಾಗುವುದಿಲ್ಲ ಎಂಬ ಭಾವನೆಯನ್ನುಂಟು ಮಾಡಿದೆ. ಅಲ್ಲದೆ, ನೈಸರ್ಗಿಕ ಅಥವಾ ವರ್ಧಿತವಾದ ಯಾವುದೇ ಉತ್ಪನ್ನ ಅಥವಾ ಹೆಲ್ತ್ ಟಿಪ್ಸ್, ಇನ್ನೊಬ್ಬ ವ್ಯಕ್ತಿಗೆ ಕೆಲಸ ಮಾಡಿರುವುದು ನಿಮಗೆ ಕೆಲಸ ಮಾಡದಿರಬಹುದು ಎಂಬುದನ್ನು ನಾವು ಗಮನದಲ್ಲಿರಿಸಿಕೊಳ್ಳಬೇಕು. ಉದಾಹರಣೆಗೆ, ಓರ್ವ ವ್ಯಕ್ತಿ, ಕೂದಲು ಉದುರುವಿಕೆಯಿಂದ ಬಳಲುತ್ತಿದ್ದರೆ, ಪ್ರತಿದಿನ ಆತ ಅದಕ್ಕೆ ಸಂಬಂಧಿಸಿದ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಓದುವುದು ಬಹಳಷ್ಟು ಸ್ವಯಂ-ಅನುಮಾನ, ಆತಂಕ ಮತ್ತು ಒತ್ತಡವನ್ನು ಉಂಟುಮಾಡುತ್ತದೆ. ಅಲ್ಲದೆ, ಇವು ಟೆಲೋಜೆನ್ ಎಫ್ಲುವಿಯಂನಂತಹ ಪರಿಸ್ಥಿತಿಗಳನ್ನು ಪ್ರಚೋದಿಸಬಹುದು, ಇದರಲ್ಲಿ ಒತ್ತಡದಿಂದಾಗಿ ಕೂದಲು ಹೇರಳವಾಗಿ ಉದುರುತ್ತದೆ. ಇದು ಸಾಮಾಜಿಕ ಮಾಧ್ಯಮದ ಮೂಲಕ ಉಂಟಾಗಿರುವ ಮತ್ತೊಂದು ಸಮಸ್ಯೆಯಾಗಿದೆ ಎಂದು ಡಾ. ಜಾಂಗಿಡ್ ಹೇಳುತ್ತಾರೆ.

ತಪ್ಪು ಮಾಹಿತಿಯಿಂದ ಕೂದಲು ಇನ್ನಷ್ಟು ಉದುರುವಿಕೆ

ಡಾ. ಜಾಂಗಿಡ್ ಅವರ ಪ್ರಕಾರ, ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳುವ ಇನ್‌ಫ್ಲುಯೆನ್ಸರ್‌ಗಳು, ವಿವಿಧ ರೀತಿಯ ಸಲಹೆಯನ್ನು ಬಿಟ್ಟಿಯಾಗಿ ಜನರಿಗೆ ನೀಡುತ್ತಾರೆ. ಈರುಳ್ಳಿ ರಸ, ಅಸಾಂಪ್ರದಾಯಿಕ ಎಣ್ಣೆ ಹಚ್ಚುವುದು ಮತ್ತು ಟ್ರೆಂಡಿ ಸಲಹೆಗಳ ಹೆಸರಿನಲ್ಲಿ ವೈರಲ್ ಆಗುವ, ನೀವೆ ಮಾಡಿಕೊಳ್ಳಬಹುದಾದ ಕೆಲವೊಂದು ಚಿಕಿತ್ಸೆಗಳು ರಾತ್ರೋರಾತ್ರಿ ಪರಿಹಾರದ ಭರವಸೆ ನೀಡುತ್ತವೆ ಮತ್ತು ಅವುಗಳನ್ನು ಉಲ್ಬಣಗೊಳಿಸುತ್ತವೆ. ಕೂದಲು ಉದುರುವುದಕ್ಕೆ ಹಾರ್ಮೋನುಗಳ ಬದಲಾವಣೆ, ಪೌಷ್ಟಿಕಾಂಶದ ಕೊರತೆ ಅಥವಾ ಅಲೋಪೆಸಿಯಾದಂತಹ ಪರಿಸ್ಥಿತಿಗಳು ಕಾರಣವಾಗಿರಬಹುದು. ಅಂತಹ ಸಂದರ್ಭದಲ್ಲಿ, ಈ ರೀತಿಯ ಮನೆಯಲ್ಲಿಯೇ ಮಾಡಿಕೊಳ್ಳುವ ಚಿಕಿತ್ಸೆಗಳನ್ನು ಪ್ರಯತ್ನಿಸುವುದು ನಿಮ್ಮ ಕೂದಲಿಗೆ ಇನ್ನಷ್ಟು ಹಾನಿಉಂಟುಮಾಡಬಹುದು, ಅಥವಾ ಹೆಚ್ಚು ಕೂದಲು ಉದುರುವಿಕೆಗೆ ಕಾರಣವಾಗಬಹುದು.

ಸಾಮಾಜಿಕ ಮಾಧ್ಯಮ ಮತ್ತು ಆರೋಗ್ಯಕರ ಅಭ್ಯಾಸಗಳು:

ಸಾಮಾಜಿಕ ಮಾಧ್ಯಮದಲ್ಲಿ ಗಂಟೆಗಟ್ಟಲೆ ರೀಲ್ಸ್, ಶಾರ್ಟ್ಸ್ ವಿಡಿಯೊ ಸ್ಕ್ರೋಲ್ ಮಾಡುವುದರಿಂದ ದೈನಂದಿನ ದಿನಚರಿಗೆ ಅಡ್ಡಿಪಡಿಸಬಹುದು ಮತ್ತು ಆರೋಗ್ಯಕರ ಅಭ್ಯಾಸಗಳನ್ನು ತೊಂದರೆಗೊಳಿಸಬಹುದು. ಹೀಗಾಗಿ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಹಲವು ಸಲಹೆಗಳನ್ನು ತಜ್ಞರು ನೀಡಿದ್ದಾರೆ.

ನಿದ್ರೆಯ ಸಮಸ್ಯೆ: ನಿದ್ರೆಯು ಕೂದಲಿನ ಬೇರುಗಳನ್ನು ಸರಿಪಡಿಸುವ ಮತ್ತು ಅವುಗಳನ್ನು ಬೆಳೆಯಲು ಸಹಾಯ ಮಾಡುವ ನಮ್ಮ ದೇಹದ ಪ್ರಮುಖ ಭಾಗವಾಗಿದೆ.

ಒತ್ತಡ: ಸಾಮಾಜಿಕ ಮಾಧ್ಯಮದ ಮೂಲಕ ಅವಾಸ್ತವಿಕ ಅಂಶಗಳ ವಿಡಿಯೊ, ಸುದ್ದಿಗಳನ್ನು ಹೆಚ್ಚು ಗಮನಿಸಿದಾಗ, ಅದು ಒತ್ತಡಕ್ಕೆ ಕಾರಣವಾಗಬಹುದು.

ನಿಷ್ಕ್ರಿಯತೆ: ದೀರ್ಘಕಾಲದವರೆಗೆ ಮೇಜಿನ ಬಳಿ ಕುಳಿತುಕೊಳ್ಳುವುದರಿಂದ ನೆತ್ತಿಗೆ ರಕ್ತದ ಹರಿವು ಸೀಮಿತವಾಗುತ್ತದೆ, ಇದು ಉತ್ತಮ ಕೂದಲಿನ ಆರೋಗ್ಯಕ್ಕೆ ಅವಶ್ಯಕವಾಗಿದೆ, ಹೀಗಾಗಿ ದಿನದಲ್ಲಿ ಕನಿಷ್ಠ ವ್ಯಾಯಾಮ, ನಡಿಗೆಯಲ್ಲಿ ಪಾಲ್ಗೊಳ್ಳಿ.

ನಿಮ್ಮ ಕೂದಲಿನ ಆರೋಗ್ಯಕ್ಕೆ ಸಲಹೆಗಳು:

ತಜ್ಞರ ಸಹಾಯ ಪಡೆಯಿರಿ: ಕೂದಲು ಉದುರುವುದು ಕೆಲವೊಮ್ಮೆ ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ, ಅದರಿಂದ ಹಲವು ಸಮಸ್ಯೆ ಎದುರಿಸಬೇಕಾಗಬಹುದು. ಆದ್ದರಿಂದ ಮೂಲ ಕಾರಣವನ್ನು ಗುರುತಿಸಲು ಪ್ರಮಾಣೀಕೃತ ಚರ್ಮರೋಗ ತಜ್ಞರು ಅಥವಾ ಕೂದಲು ಕಸಿ ಶಸ್ತ್ರಚಿಕಿತ್ಸಕರನ್ನು ಸಂಪರ್ಕಿಸಿ ಮತ್ತು ನಿಮ್ಮ ಕೂದಲಿನ ಆರೋಗ್ಯವನ್ನು ತಿಳಿಯಿರಿ. ಸೂಕ್ತ ಕಾರಣ ತಿಳಿದುಕೊಳ್ಳದೇ, ಆನ್‌ಲೈನ್‌ನಲ್ಲಿ ತಲೆ ಕೂದಲಿನ ರಕ್ಷಣೆಯ ಉತ್ಪನ್ನಗಳನ್ನು ಖರೀದಿಸಬೇಡಿ.

ಮನೆ ಮದ್ದುಗಳ ಬಗ್ಗೆ ಎಚ್ಚರಿಕೆ: ನೀವೇ ಮನೆಯಲ್ಲಿ ಮಾಡಿಕೊಳ್ಳುವ ಕೆಲವೊಂದು ಚಿಕಿತ್ಸೆಗಳು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡಬಹುದು. ಹೀಗಾಗಿ ಇಂಟರ್ನೆಟ್ ಉಪಾಯಗಳನ್ನು ನಿಮ್ಮ ಮೇಲೆ ಪ್ರಯೋಗಿಸುವ ಬದಲು ವೈಜ್ಞಾನಿಕವಾಗಿ ಸಾಬೀತಾಗಿರುವ ವಿಧಾನಗಳನ್ನು ಮಾತ್ರ ಅನುಸರಿಸಿ.

ಸಾಮಾಜಿಕ ಮಾಧ್ಯಮ ಮಿತಿಗೊಳಿಸಿ: ನಿಮ್ಮ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಕಾಪಾಡಲು ತಪ್ಪು ಮಾಹಿತಿ ನೀಡುವ ಸಾಮಾಜಿಕ ಮಾಧ್ಯಮದಲ್ಲಿ ಕಳೆಯುವ ಸಮಯವನ್ನು ಕಡಿಮೆ ಮಾಡಿ.

ಆರೋಗ್ಯಕರ ಜೀವನಶೈಲಿ: ನೀವು ಆರೋಗ್ಯಕರ ಆಹಾರ ತಿನ್ನುವಾಗ, ವ್ಯಾಯಾಮ ಮಾಡುವಾಗ ಮತ್ತು ಚೆನ್ನಾಗಿ ನಿದ್ದೆ ಮಾಡಿದಾಗ ನಿಮ್ಮ ಜೀವನಶೈಲಿ ಸುಧಾರಿಸುತ್ತದೆ, ಅದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸಿ, ಆರೋಗ್ಯಕರ ಕೂದಲು ಬೆಳೆಯಲು ಸಹಕಾರಿಯಾಗುತ್ತದೆ.

Whats_app_banner