ಕನ್ನಡ ಸುದ್ದಿ  /  Lifestyle  /  Hair Straightening Cause Cancer

Hair Straightening Effect: ಹೇರ್‌ ಸ್ಟ್ರೇಟ್ನಿಂಗ್‌ ಉತ್ಪನ್ನಗಳ ಬಳಕೆಯಿಂದ ಕ್ಯಾನ್ಸರ್‌ ಬರುತ್ತಾ..ಅಧ್ಯಯನ ಏನು ಹೇಳುತ್ತೆ..?

ಕೂದಲು ಬೆಳೆಯುತ್ತಿದ್ದಂತೆ ಮತ್ತೆ ಮತ್ತೆ ಮಹಿಳೆಯರು ಹೇರ್‌ ಸ್ಟ್ರೇಟ್ನಿಂಗ್‌ ಮಾಡಿಸುತ್ತಾರೆ. ಆದರೆ ಇವೆಲ್ಲವೂ ಆರೋಗ್ಯ ಸಮಸ್ಯೆಗಳುಂಟುಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ನಿಯಮಿತವಾಗಿ ಹೇರ್ ಸ್ಟ್ರೈಟ್ನಿಂಗ್ ಉತ್ಪನ್ನಗಳನ್ನು ಬಳಸುವ ಜನರು ಗರ್ಭಕೋಶದ ಕ್ಯಾನ್ಸರ್ ಅಪಾಯ ಎದುರಿಸುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನದಿಂದ ಸಾಬೀತಾಗಿದೆ.

ಕ್ಯಾನ್ಸರ್‌ ಅಪಾಯ ಹೆಚ್ಚಿಸುವ ಹೇರ್‌ ಸ್ಟ್ರೇಟ್ನಿಂಗ್‌
ಕ್ಯಾನ್ಸರ್‌ ಅಪಾಯ ಹೆಚ್ಚಿಸುವ ಹೇರ್‌ ಸ್ಟ್ರೇಟ್ನಿಂಗ್‌ (PC: Pixaby)

ಅಂದವಾಗಿ ಕಾಣಬೇಕೆಂದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಅದಕ್ಕಾಗಿ ಮಾರುಕಟ್ಟೆಯಲ್ಲಿ ದೊರೆಯುವ ನಾನಾ ಪ್ರಾಡಕ್ಟ್‌ಗಳನ್ನು ಬಳಸುತ್ತೇವೆ. ಆದರೆ ಆ ಉತ್ಪನ್ನಗಳಲ್ಲಿ ಯಾವುದು ಉತ್ತಮ, ಯಾವುದು ಅಪಾಯಕಾರಿ ಎಂಬುದನ್ನು ತಿಳಿಯುವ ಗೋಜಿಗೆ ಹೋಗುವುದಿಲ್ಲ. ಇನ್ನು ಕೂದಲು ಅಂದವಾಗಿ ಕಾಣಬೇಕೆಂಬ ಆಸೆಯಿಂದ ಕೆಲವರು ನಾನಾ ರೀತಿಯ ಸಿರಮ್‌ ಬಳಸುತ್ತಾರೆ. ಹೇರ್‌ ಸ್ಟ್ರೇಟ್ನಿಂಗ್‌ ಮಾಡಿಸುತ್ತಾರೆ.

ಹೇರ್‌ ಸ್ಟ್ರೇಟ್ನಿಂಗ್‌ ಮಾಡಿಸಿದಾಗ ಕೂದಲು ಹೊಳಪಾಗಿ ಸುಂದರವಾಗಿ ಕಾಣುತ್ತದೆ. ಯಾವ ಡ್ರೆಸ್‌ ಧರಿಸಿದರೂ ಅದಕ್ಕೆ ಹೇರ್‌ ಸ್ಟೈಲ್‌ ಮ್ಯಾಚ್‌ ಆಗುತ್ತದೆ. ಆದರೆ ಹೇರ್‌ ಸ್ಟ್ರೇಟ್ನಿಂಗ್‌ ಮಾಡಿಸಿದ ನಂತರ ಅದನ್ನು ದೀರ್ಘ ಕಾಲ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಅದಕ್ಕಾಗಿ ಬ್ಯೂಟಿ ಪಾರ್ಲರ್‌ನವರು ಸೂಚಿಸಿದ ನಿರ್ದಿಷ್ಟವಾದ ಹೇರ್‌ ಆಯಿಲ್‌, ಶಾಂಪೂ, ಕಂಡಿಷನರ್‌ ಬಳಸಬೇಕಾಗುತ್ತದೆ. ಕೂದಲು ಬೆಳೆಯುತ್ತಿದ್ದಂತೆ ಮತ್ತೆ ಮತ್ತೆ ಮಹಿಳೆಯರು ಹೇರ್‌ ಸ್ಟ್ರೇಟ್ನಿಂಗ್‌ ಮಾಡಿಸುತ್ತಾರೆ. ಆದರೆ ಇವೆಲ್ಲವೂ ಆರೋಗ್ಯ ಸಮಸ್ಯೆಗಳುಂಟುಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ನಿಯಮಿತವಾಗಿ ಹೇರ್ ಸ್ಟ್ರೈಟ್ನಿಂಗ್ ಉತ್ಪನ್ನಗಳನ್ನು ಬಳಸುವ ಜನರು ಗರ್ಭಕೋಶದ ಕ್ಯಾನ್ಸರ್ ಅಪಾಯ ಎದುರಿಸುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನದಿಂದ ಸಾಬೀತಾಗಿದೆ.

ಸಂಶೋಧಕರು 35 ರಿಂದ 74 ವರ್ಷ ವಯಸ್ಸಿನ ಅನೇಕ ಮಹಿಳೆಯರನ್ನು ಸರಾಸರಿ 11 ವರ್ಷಗಳ ಕಾಲ ಅಧ್ಯಯನ ಮಾಡಿದ್ದು ಆ ಸಮಯದಲ್ಲಿ, 378 ಮಹಿಳೆಯರಿಗೆ ಗರ್ಭಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಇದಕ್ಕೆ ಕಾರಣ ಏನು ಎಂದು ತಿಳಿದಾಗ ಅವರೆಲ್ಲಾ ಹೇರ್‌ ಸ್ಟ್ರೇಟ್ನಿಂಗ್‌ ಉತ್ಪನ್ನಗಳನ್ನು ಬಳಸಿದ್ದಾರೆ ಎಂಬ ಸತ್ಯಾಂಶ ಬೆಳಕಿಗೆ ಬಂದಿದೆ. ಮಹಿಳೆಯರು ಬಳಸುವ ಹೇರ್‌ ಸ್ಟ್ರೇಟ್ನಿಂಗ್‌ ಉತ್ಪನ್ನಗಳ ಬ್ರ್ಯಾಂಡ್‌ಗಳನ್ನು ಸಂಶೋಧಕರು ಬಹಿರಂಗಗೊಳಿಸದಿದ್ದರೂ ಪ್ಯಾರಾಬೆನ್‌ಗಳು, ಬಿಸ್ಫೆನಾಲ್ ಎ, ಲೋಹಗಳು ಮತ್ತು ಫಾರ್ಮಾಲ್ಡಿಹೈಡ್ ಸೇರಿದಂತೆ ಹೇರ್‌ ಸ್ಟ್ರೇಟ್ನಿಂಗ್‌ ಉತ್ಪನ್ನಗಳ ರಾಸಾಯನಿಕ ಅಂಶಗಳು ಗರ್ಭಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಹೇಳಲಾಗುತ್ತದೆ.

ರಾಷ್ಟ್ರೀಯ ಅಧ್ಯಯನದ ಸಂಶೋಧನೆಯ ಪ್ರಕಾರ, ರಾಸಾಯನಿಕಯುಕ್ತ ಹೇರ್‌ ಸ್ಟ್ರೇಟ್ನಿಂಗ್‌ ಉತ್ಪನ್ನಗಳನ್ನು ಆಗಾಗ್ಗೆ ಬಳಸುವ ಮಹಿಳೆಯರು ಎಂದಿಗೂ ಹೇರ್‌ ಸ್ಟ್ರೇಟ್ನಿಂಗ್‌ ಉತ್ಪನ್ನಗಳನ್ನು ಬಳಸದ ಮಹಿಳೆಯರಿಗಿಂತ ಗರ್ಭಾಶಯದ ಕ್ಯಾನ್ಸರ್ ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯ ಹೊಂದಿರುತ್ತಾರೆ.