ಕರೀನಾ ಕಪೂರ್ ಹ್ಯಾಪಿ ಹುಟ್ದಬ್ಬ ನೆಪ, ಫ್ಯಾಷನ್ ಲೋಕದಲ್ಲಿ ಜನಮನ ಗೆದ್ದ ಅವರ 5 ಲುಕ್‌ಗಳನ್ನೊಮ್ಮೆ ನೋಡ್ಕೊಂಡು ಬರೋಣ
ಕರೀನಾ ಕಪೂರ್ ಹ್ಯಾಪಿ ಹುಟ್ದಬ್ಬ ಇಂದು. ಅದೊಂದು ನೆಪ. ಹಾಗೆಯೇ, ಫ್ಯಾಷನ್ ಲೋಕದಲ್ಲಿ ಜನಮನ ಗೆದ್ದ ಅವರ ಬನಾರಸಿ ಸೀರೆಯಿಂದ ಹಿಡಿದು ಐಸ್ ಬ್ಲೂ ಬ್ಲೇಜರ್ ತನಕ 5 ಲುಕ್‌ಗಳ ಕಡೆಗೊಂದು ನೋಟ ಬೀರೋಣ.
ಇಂದು ಕರೀನಾ ಕಪೂರ್ ಹುಟ್ಟುಹಬ್ಬ! ಆಪ್ತ ವಲಯದಲ್ಲಿ ಬೆಬೋ ಎಂದೇ ಜನಪ್ರಿಯರಾಗಿರುವ ಕರೀನಾ ಕಪೂರ್‌ಗೆ 44 ವರ್ಷ ತುಂಬುತ್ತಿದ್ದು, ಬಾಲಿವುಡ್‌ನಲ್ಲಿ ಸಿನಿಮಾ ಬದುಕಿನ 25ನೇ ವರ್ಷಾಚರಣೆಗೆ ಸಜ್ಜಾಗುತ್ತಿದ್ದಾರೆ. ಕಾಲಚಕ್ರ ಉರುಳಿ ವರ್ಷಗಳು ಮರೆಯಾಗುತ್ತಿದ್ದರೂ ತನ್ನ ಸೌಂದರ್ಯ, ಫಿಟ್ನೆಸ್ ಕಾಪಾಡಿಕೊಂಡು ಬರುತ್ತಿರುವ ಕರೀನಾ ಕಪೂರ್ ನವ ನಟಿಯರೂ ಬೆರಾಗುವಂತೆ ಚಿತ್ರರಂಗದಲ್ಲಿ ತನ್ನ ಛಾಪನ್ನು ಮೂಡಿಸಿದ್ದಾರೆ.
ಕಭಿ ಖುಷಿ ಕಭೀ ಗಮ್‌ನ ಐಕಾನಿಕ್ ಬ್ಯಾಕ್‌ಲೆಸ್ ಟಾಪ್ಸ್‌ನಿಂದ ಹಿಡಿದು ಲೋ ವೈಸ್ಟ್ ಜೀನ್ಸ್ ತನಕ ಫ್ಯಾಷನ್ ಟ್ರೆಂಡ್‌ಗೆ ತಕ್ಕಂತೆ ತನ್ನನ್ನು ಹೊಂದಿಸಿಕೊಂಡಿರುವ ಕರೀನಾ ಕಪೂರ್, ಪವರ್‌ಫುಲ್ ಆಗಿರುವ ಪ್ಯಾಂಟ್‌ಸ್ಯೂಟ್‌ನಲ್ಲೂ ಮಿಂಚಿದವರು. ಅವರು ಧರಿಸುವ ಉಡುಪುಗಳು ಫ್ಯಾಷನ್ ವಲಯದಲ್ಲಿ ಸಂಚಲನ ಮೂಡಿಸುವಂತೆ ಇರುತ್ತವೆ. ಇತ್ತೀಚೆಗೆ ಬನಾರಸಿ ಸೀರೆ ಉಟ್ಟು ಸೀರೆ ಪ್ರಿಯರನ್ನು ದಂಗುಬಡಿಸಿದ್ದರು. ಕರೀನಾ ಕಪೂರ್ ಬರ್ತಡೇ ನೆಪದಲ್ಲಿ ಅವರ ಕೆಲವು ಸಾಂಪ್ರದಾಯಿಕ ಫ್ಯಾಷನ್ ಕ್ಷಣಗಳ ಕಡೆಗೊಂದು ನೋಟ ಬೀರೋಣ.
1) ಬನಾರಸಿ ಸೀರೆಯಲ್ಲಿ ಹೊಸ ಲುಕ್
ಅಮಿತ್ ಅಗರ್ವಾಲ್ ಅವರ ಫ್ಯಾಷನ್ ವಿನ್ಯಾಸದಲ್ಲಿ ಕರೀನಾ ಕಪೂರ್ ಬೆರಗುಗೊಳಿಸುವ ಸೀರೆ ಗೌನ್ ಡ್ರಾಪ್-ಶೋಲ್ಡರ್ ನೆಕ್‌ನಲ್ಲಿ ಹೊಸ ಲುಕ್‌ನಲ್ಲಿ ಕಂಗೊಳಿಸಿ ಅಚ್ಚರಿ ಮೂಡಿಸಿದ್ದಾರೆ. ಇದು ಬಿಗಿ ರವಿಕೆಯನ್ನು ಬೆಂಬಲಿಸುವ ನೆರಿಗೆಯ ಪಲ್ಲುನಿಂದ ಕೂಡಿ ಸೊಗಸಾಗಿ ಮೂಡಿದೆ. ಮುಂಭಾಗದಲ್ಲಿ ಅಸಮಪಾರ್ಶ್ವದ ನೆರಿಗೆಗಳು, ಹಿಂಭಾಗದಲ್ಲಿ ನಾಟಕೀಯ ತಿರುವು ರೂಪಿಸುವ ಕ್ಯಾಸ್ಕೇಡಿಂಗ್ ಪಲ್ಲು ಜೊತೆಗೆ, ಮಾಡರ್ನ್ಸ್ ಟ್ವಿಸ್ಟ್‌ನೊಂದಿಗೆ ಸಾಂಪ್ರದಾಯಿಕ ಸೀರೆ ಉಡುವ ಕಾಲಾತೀತ ಸೊಬಗನ್ನು ಸುಂದರವಾಗಿ ಕಟ್ಟಿಕೊಟ್ಟಿದೆ.
2) ಹೊಳೆಯುವ ಶಾಂಪೇನ್ ಗೌನ್‌ನಲ್ಲಿ ಬೆಬೊ ಕಾಂತಿ
ಫ್ಯಾಷನ್ ಲೋಕವನ್ನು ಬೆರಗುಗೊಳಿಸುತ್ತಲೇ ಇರುತ್ತಾರೆ ಬೆಬೊ. ಹಾಗೆಯೇ ಈ ಶೈನಿಂಗ್ ಶಾಂಪೇನ್ ಗೌನ್ ಕೂಡ ಸಲೀಸಾಗಿ ಅವರ ಸೌಂದರ್ಯವನ್ನು ಎತ್ತಿ ತೋರಿಸಿದೆ. ಬಲ್ಗರಿ ಇಷ್ಟಪಡುವವರಾಗಿ ಅವರು ಆ ಬ್ರ್ಯಾಂಡ್‌ನ ಹೊಸ ಸುಗಂಧ ದ್ರವ್ಯಗಳಾದ ಅಲ್ಲೆಗ್ರಾ ಮತ್ತು ಲೆಜೆಮ್ಮೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದರು. ಹೊಳೆಯುವ ನೆಕ್ಲೆಸ್, ಕಾರ್ಸೆಟ್ ರವಿಕೆ ಮತ್ತು ಶೈನಿಂಗ್ ಶಾಂಪೇನ್ ಗೌನ್ ಧರಿಸಿ ಹೊಳೆಯುವ ಬೆಳಕಿನಲ್ಲಿ ಬಹಳ ಕಾಂತಿಯುತವಾಗಿ ಕಂಡರು.
3) ಸೊಗಸಾದ ಮೆರೂನ್ ಸೀರೆಯಲ್ಲಿ ಕರೀನಾ ಕಪೂರ್
ಆರು ಗಜ ದೂರ ಇದ್ದರೂ ಎದ್ದು ಕಾಣುವಂತಹ ಕರೀನಾ ಕಪೂರ್ ಸೌಂದರ್ಯ ಕಣ್ಣಿಗೆ ಹಬ್ಬ. ಸ್ಯಾಟಿನ್ ರೆಡ್ ಸೀರೆಯಲ್ಲಿ ಆಕೆಯ ಗ್ಲಾಮ್ ಲುಕ್ ಅಚ್ಚುಮೆಚ್ಚಿನದು. ಸೀರೆಯು ಗೋಲ್ಡನ್ ಗೋಟಾ ಬಾರ್ಡರ್‌ಗಳಿಂದ ಕೂಡಿದ್ದು, ಪಲ್ಲು ಮೇಲೆ ಸುಂದರ ಹೂವಿನ ಮೋಟಿಫ್ ಕೂಡ ಗಮನಸೆಳೆಯುತ್ತದೆ. ಅದಕ್ಕೆ ಪೂರಕವಾಗಿ ಚಿಕ್ ಹಾಲ್ಟರ್ ಬ್ಲೌಸ್, ಬೆರಗುಗೊಳಿಸುವ ಗೋಲ್ಡನ್ ಕಸೂತಿಯು ಜಾಡಾನ್ ಇಂಡಿಯಾ ಬ್ರಾಂಡ್‌ನ ಸಂಕೇತವಾಗಿದ್ದು, ಹಾಲ್ಟರ್ ನೆಕ್‌ಲೈನ್ ಬ್ಲೌಸ್ ಮತ್ತು ಸ್ಟೇಟ್‌ಮೆಂಟ್ ಜುವೆಲ್ಲರಿ ಸೆಟ್‌ನೊಂದಿಗೆ ಕರೀನಾ ಆಕರ್ಷಕವಾಗಿ ಕಂಡರು.
4) ಗೋಲ್ಡನ್ ರಾಲ್ಫ್ ಲಾರೆನ್ ಗೌನ್: ಜೈಪುರದಲ್ಲಿ ನಡೆದ ರಾಲ್ಫ್ ಲಾರೆನ್ ಕಾರ್ಯಕ್ರಮಕ್ಕಾಗಿ ಕರೀನಾ ಕಪೂರ್ ಅವರ ಟಿಶ್ಯೂ ಸಿಲ್ಕ್ ಗೋಲ್ಡನ್ ಡ್ರೆಸ್ ಅದ್ಭುತ ಶೋಸ್ಟಾಪರ್ ಆಗಿದೆ. ಇದು ಸ್ಟ್ರಾಪ್‌ಲೆಸ್ ನೆಕ್‌ಲೈನ್ ಅನ್ನು ಹೊಂದಿದೆ. ಕಾರ್ಸೆಟೆಡ್ ರವಿಕೆ. ಎ-ಲೈನ್ ಸ್ಕರ್ಟ್, ಪ್ಯಾಚ್ ಪಾಕೆಟ್‌ಗಳು ಮತ್ತು ನೆಲ-ಮೇಯುವ ಹೆಮ್‌ನೊಂದಿಗೆ, ವಿನ್ಯಾಸವು ಪ್ರಾಯೋಗಿಕ ಅಡ್ಡ ಪಾಕೆಟ್ಸ್ ಮತ್ತು ಲಂಬವಾದ ಹೊಲಿಗೆ ಒಳಗೊಂಡಿದೆ. ಸೊಂಟದ ಮೇಲೆ ವಿಶಾಲವಾದ ಚಿನ್ನದ ಬೆಲ್ಟ್‌ನೊಂದಿಗೆ ಸುಂದರವಾಗಿ ಸಿಂಚ್ ಮಾಡಲಾಗಿದ್ದು, ಮಾಡರ್ನ್ ಲುಕ್ ಮತ್ತು ಸೊಬಗು ನೀಡಿದೆ.
5) ಐಸ್ ಬ್ಲೂ ಬ್ಲೇಜರ್‌ನಲ್ಲಿ ಕರೀನಾ ಕಪೂರ್ ಅದ್ಭುತ ಲುಕ್: ಕರೀನಾ ಕಪೂರ್ ಅವರು ಪೂರ್ಣ-ತೋಳಿನ ಬ್ಲೇಜರ್‌ನೊಂದಿಗೆ ಜೋಡಿಸಲಾದ ಸ್ಟ್ರಾಪ್‌ಲೆಸ್ ಮಿಡಿ ಉಡುಪು ಧರಿಸಿ ಪವರ್‌ಫುಲ್ ನಿಲುವಿನೊಂದಿಗೆ ಗಮನಸೆಳೆದಿದ್ದಾರೆ. ಎರಡೂ ನೀಲಿ ಬಣ್ಣದ ಅದರಲ್ಲೂ ತೆಳು ನೀಲಿಬಣ್ಣದ ಛಾಯೆಗಳಲ್ಲಿ, ಏಕವರ್ಣದ ಡ್ರೆಸ್ಸಿಂಗ್‌ನಲ್ಲಿ ಮಾಸ್ಟರ್‌ಕ್ಲಾಸ್ ಲುಕ್ ಆಕರ್ಷಕವಾಗಿದೆ. ಕಾಲರ್ ಬ್ಲೇಜರ್ ಅನ್ನು ಭುಜದಲ್ಲಿ ರೋಸೆಟ್‌ನಿಂದ ಅಲಂಕರಿಸಲಾಗಿದೆ. ಇದು ವಿಶಿಷ್ಟ ಸ್ಪರ್ಶವನ್ನು ನೀಡಿದ್ದು, ಲುಕ್‌ಗೆ ಹೆಚ್ಚಿನ ಅಂದ ಕೊಟ್ಟಿದೆ. ದಿವಾ ಬ್ರ್ಯಾಂಡ್‌ನ ಅದ್ಭುತವಾದ ಡೈಮಂಡ್ ಚೋಕರ್ ನೆಕ್ಲೇಸ್ ಮತ್ತು ಸೂಕ್ಷ್ಮವಾದ ವಜ್ರದ ಬ್ರೇಸ್ಲೆಟ್ ಸೌಂದರ್ಯಕ್ಕೆ ಮೆರುಗು ನೀಡಿದೆ. ಫ್ಯಾಷನ್ ಲೋಕದಲ್ಲಿ ಕರೀನಾ ಕಪೂರ್ ತಮ್ಮದೇ ಛಾಪು ಮೂಡಿಸಿದ್ದು, ಇನ್ನಷ್ಟು ವಿನ್ಯಾಸಗಳನ್ನು ಗಮನಿಸಲು ಅವರ ಸೋಷಿಯಕ್ ಮೀಡಿಯಾ ಪೋಸ್ಟ್‌ಗಳನ್ನು ನೋಡಬಹುದು.