ಡಿಸ್ಟೆನ್ಸ್ ರಿಲೇಷನ್‌ಶಿಪ್‌ನಲ್ಲಿ ಸಂಬಂಧದ ಕಾವು ಕಾಪಾಡಿಕೊಳ್ಳುವುದು ಹೇಗೆ?
ಮದುವೆ ಆದಮೇಲೆ ಅಥವಾ ಮದುವೆ ನಿಶ್ಚಯ ಆದಮೇಲೆ ನಿಮ್ಮ ಸಂಗಾತಿಯಿಂದ ನೀವು ದೂರ ಇರುವ ಸಂದರ್ಭ ಬಂದರೆ ಅದರಿಂದ ಬೇಸರ ಬೇಡ. ಈ ಸಂಬಂಧವನ್ನೂ ನೀವು ಹಸಿರಾಗಿಸಿಕೊಳ್ಳಲು ಇಲ್ಲಿದೆ ಕೆಲವು ಸಲಹೆಗಳು. ಇದರಿಂದ ನೀವು ಖಂಡಿತ ದೂರವಿದ್ದರೂ ಹತ್ತಿರ ಇದ್ದಂತೆ ಅನಿಸುತ್ತದೆ.
ಎಷ್ಟೋ ಜನರು ದೂರ ಇದ್ದರೆ ಪ್ರೀತಿ ಕಡಿಮೆ ಆಗುತ್ತದೆ ಎಂದು ಅಂದುಕೊಂಡಿರುತ್ತಾರೆ. ಆದರೆ ದೂರ ಇದ್ದಷ್ಟು ಪ್ರೀತಿ ಹೆಚ್ಚಾಗುತ್ತದೆ. ಈ ಮಾತನ್ನು ನಂಬುವವರು ಕಡಿಮೆ. ದಿನವೂ ಎದುರಲ್ಲೇ ಕಾಣುತ್ತಾ ಇದ್ದರೆ ಸಂಗಾತಿಯ ಬೆಲೆ ಗೊತ್ತಾಗುವುದಿಲ್ಲ. ಮನ ಬಂದಂತೆ ಮಾತಾಡುವುದು ಕಾಡುವುದು ಮಾಡಿಕೊಂಡು ಕಾಲ ಕಳೆಯುತ್ತಾರೆ. ಆದರೆ ಯಾವಾಗ ಇಬ್ಬರು ದೂರ, ದೂರ ಇರುತ್ತಾರೋ ಆಗಲೇ ನಿಜವಾದ ಪ್ರೀತಿಯ ಬೆಲೆ ಅರ್ಥವಾಗುವುದು. ಅದು ಹೇಗೆ ಎಂಬುದನ್ನು ನಾವಿಲ್ಲಿ ವಿವರಿಸಿದ್ದೇವೆ ನೋಡಿ.
ಸುಂದರ ಸಂಬಂಧ:
ಪ್ರತಿ ದಿನ ಎದ್ದಾಕ್ಷಣ ಒಂದು ಬಾರಿ ಫೋನ್ ಮಾಡಿ ಅವರನ್ನು ವಿಚಾರಿಸಿ ಶುಭಾಶಯ ಕೋರುತ್ತೀರಿ. ಇನ್ನು ಊಟ, ತಿಂಡಿ ಇವುಗಳೆಲ್ಲದರ ಮೇಲೆ ಗಮನ ಇರುತ್ತದೆ. ಮಾತನಾಡಲು ಇಂತಿಷ್ಟು ಸಮಯ ಎಂದು ನಿಗದಿ ಇರುವುದಿಲ್ಲ. ಹಾಗಾಗಿ ಯಾವಾಗ ಬೇಕಾದರೂ ಅಂದರೆ ಸಮಯ ಸಿಕ್ಕಾಗಲೆಲ್ಲ ನೀವುನ ನಿಮ್ಮ ಸಂಗಾತಿಯೊಡನೆ ಮಾತಾಡಬಹುದು.
ದೂರವಿದ್ದರೂ ಹತ್ತಿರ
ನಿಮಗೆ ಬೇಸರ ಆಗುತ್ತಿದ್ದರೆ ಒಮ್ಮೆ ಈ ರೀತಿ ಆಲೋಚನೆ ಮಾಡಿ ನೋಡಿ. ನಾವೆಲ್ಲಿ ದೂರ ಇದ್ದೇವೆ? ಇಂದಿನ ಆಧುನಿಕ ಯುಗದಲ್ಲಿ ಸಿಕ್ಕಷ್ಟು ಸೌಲಭ್ಯಗಳು ಹಿಂದೆ ಇರಲಿಲ್ಲ. ಈಗ ತಕ್ಷಣ ಮಾತನಾಡಬೇಕು ಎಂದೆನಿಸಿದರೆ ಕಾಲ್ ಮಾಡಬಹುದು. ಇಲ್ಲ ಮೆಸೇಜ್ ಮಾಡಬಹುದು. ಇನ್ನು ಮುಖ ನೋಡಿಯೇ ಮಾತಾಡಬೇಕು ಎಂದಾದರೆ ವಿಡಿಯೋ ಕಾಲ್ ಮಾಡಬಹುದು.
ಆಗಾಗ ಭೇಟಿಯಾಗಿ
ಇಬ್ಬರು ಆಗಾಗ ಮೀಟ್ ಮಾಡಿ. ತುಂಬಾ ದಿನ ದೂರವೇ ಇದ್ದರೆ ನಿಮಗೆ ಕೋಪ ಹಾಗೂ ಸಹನೆ ಕಡಿಮೆ ಆಗುತ್ತಾ ಬರುತ್ತದೆ. ಅದು ನಿಮಗೆ ನಿಮ್ಮ ಸಂಗಾತಿಯ ಮೇಲೆ ಇದ್ದ ಕೋಪ ಆಗಿರುವುದಿಲ್ಲ. ಪ್ರತಿಯಾಗಿ ಅವರನ್ನು ಕಾಣಲು ಸಾಧ್ಯವಾಗುತ್ತಿಲ್ಲ ಎಂಬ ಹತಾಷೆ ಆಗಿರುತ್ತದೆ. ಅದನ್ನು ನೀವು ಮೊದಲು ಸರಿಪಡಿಸಿಕೊಳ್ಳಬೇಕು. ಈ ಕೋಪ, ಅಸಹನೆ ಮುಂದುವರೆಯದಂತೆ ನೋಡಿಕೊಳ್ಳಬೇಕು. ನಿಮ್ಮಿಬ್ಬರ ನಡುವೆ ಯಾವುದೇ ಕಲಹ ಬಂದರೂ ಅದನ್ನು ನೀವೇ ಸರಿಪಡಿಸಿಕೊಂಡು ಇರಬೇಕು.
ಉಡುಗೊರೆ ನೀಡಿ
ನೀವು ಎಲ್ಲಿದ್ದೀರೋ ಅಲ್ಲಿಂದಲೇ ಅವರ ಅಡ್ರೆಸ್‌ಗೆ ಆನ್‌ಲೈನ್ ಮೂಲಕವೋ ಅಥವಾ ಅಂಚೆ ಮೂಲಕವೋ ಉಡುಗೊರೆ ನೀಡಿ. ಅವರ ಇಷ್ಟ ಹಾಗೂ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಿ. ಅವರಿಗೆ ಬೇಸರವಾದಾಗ ಅವರ ಮಾತನ್ನು ಪೂರ್ತಿಯಾಗಿ ಕೇಳಿಸಿಕೊಳ್ಳಿ. ಮೌನವಾಗಿ ಉಳಿದರೆ ನಿಮ್ಮ ಸಂಬಂಧ ಹಾಳಾಗುವ ಸಾಧ್ಯತೆ ಇದೆ. ನೀವು ಎಷ್ಟು ಪ್ರಾಮಾಣಿಕ ಹೇಳುವುದೇ ಇಲ್ಲ ಮುಖ್ಯವಾಗುತ್ತದೆ.
ನಂಬಿಕೆಯೇ ಅಸ್ತ್ರ:
ನಂಬಿಕೆ ಮಾತ್ರ ನಿಮ್ಮ ಪ್ರೀತಿಯ ಭರವಸೆ ಆಗಿರುತ್ತದೆ. ಒಬ್ಬರ ಮೇಲೆ ಇನ್ನೊಬ್ಬರು ಅನುಮಾನ ಪಟ್ಟರೆ ಪ್ರೀತಿ ಕೊನೆಗಾಣಲು ಹೆಚ್ಚು ದಿನ ಬೇಕಿಲ್ಲ. ಕೆಲಸದ ನಂತರ ಅವಧಿಯಲ್ಲಿ ನಾನು ಮಾತಾಡುತ್ತೇನೆ ಎಂದು ನಂಬಿಸಿ ಈಗ ನನಗೆ ಸುಸ್ತಾಗಿದೆ ಎಂದು ಮತ್ತೆ ಮಾತನಾಡುವುದಕ್ಕೆ ಅವರು ನಿರಾಕರಿಸಿದರೆ ನೀವು ಅವರನ್ನು ಅನುಮಾನಿಸುವುದು. ನಿನಗೆ ನನ್ನ ಮೇಲೆ ಪ್ರೀತಿಯೇ ಇಲ್ಲ ಎಂದು ಹೇಳುವುದು ತಪ್ಪು.
ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಜೀವನ ನಡೆಸಿದರೆ ನೀವು ಎಷ್ಟು ದೂರವಿದ್ದರೂ ಹತ್ತಿರವೇ ಇದ್ದಂತೆ ನಿಮಗನಿಸುತ್ತದೆ.
ವಿಭಾಗ