New Year Wishes: ಹ್ಯಾಪಿ ನ್ಯೂ ಇಯರ್ ಮೈ ಕ್ರೈಂ ಪಾರ್ಟ್ನರ್; ನಿಮ್ಮ ಅಣ್ಣ-ತಮ್ಮಂದಿರಿಗೆ ಹೊಸ ವರ್ಷದ ಶುಭಾಶಯ ಕೋರಲು ಇಲ್ಲಿವೆ ಸಂದೇಶಗಳು
New Year 2024 Wishes For brothers: ಇದೀಗ 2023 ಕಳೆದು ಹೊಸ ವರ್ಷ ಬರುತ್ತಿದೆ. 2024ರ ಹೊಸ ವರ್ಷಕ್ಕೆ ನಿಮ್ಮ ಸಹೋದರರಿಗೆ ವಿಶೇಷವಾಗಿ ಶುಭಕೋರಿ. ಇದು ನಿಮ್ಮ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ನಿಮ್ಮ ಅಣ್ಣ-ತಮ್ಮನಿಗೆ ಶುಭಾಶಯ ಕೋರಲು ಇಲ್ಲಿವೆ ಒಂದಿಷ್ಟು ಕೋಟ್ಸ್..
ನಮ್ಮ ಅಣ್ಣ-ತಮ್ಮಂದಿರ ಜೊತೆ ಜಗಳ ಆಡುತ್ತಲೇ ಇರುತ್ತೇವೆ. ಆದರೆ ಅದು ಮುದ್ದು ಮುದ್ದು ಗುದ್ದಾಟ. ಹೊರಗಡೆ ಕೋಪಗೊಂಡವರಂತೆ, ಬಯ್ಯುತ್ತಿರುವಂತೆ ನಟಿಸಿದರೂ ಕೂಡ ಮನಸ್ಸಿನೊಳಗೆ ಪ್ರೀತಿ ಇರುತ್ತದೆ. ಆದರೆ ಎಲ್ಲಾ ದಿನ ಆ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಆದರೆ ಕಷ್ಟನಷ್ಟಗಳಲ್ಲಿ ಅವರ ಜೊತೆ ನಿಂತು ಅವರ ಬೆಂಬಲಕ್ಕೆ ನಾವಿದ್ದೇವೆ ಎಂದು ತೋರಿಸಬಹುದು. ಜನ್ಮದಿನ, ಹೊಸ ವರ್ಷ, ಸಹೋದರರ ದಿನ ಹೀಗೆ ವಿಶೇಷ ದಿನಗಳಂದು ಅವರಿಗೆ ಸ್ಪೆಷಲ್ ಆಗಿ ವಿಶ್ ಮಾಡಬಹುದು.
ಇದೀಗ 2023 ಕಳೆದು ಹೊಸ ವರ್ಷ ಬರುತ್ತಿದೆ. 2024ರ ಹೊಸ ವರ್ಷಕ್ಕೆ ನಿಮ್ಮ ಸಹೋದರರಿಗೆ ವಿಶೇಷವಾಗಿ ಶುಭಕೋರಿ. ಇದು ನಿಮ್ಮ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ನಿಮ್ಮ ಅಣ್ಣ-ತಮ್ಮನಿಗೆ ಶುಭಾಶಯ ಕೋರಲು ಇಲ್ಲಿವೆ ಒಂದಿಷ್ಟು ಕೋಟ್ಸ್..
"ಮುದ್ದು ಮುದ್ದಾಗಿ ಜಗಳವಾಡುತ್ತಾ, ಒಬ್ಬರಿಗೊಬ್ಬರು ರಕ್ಷಣೆಯಾಗಿ ನಿಲ್ಲುತ್ತಾ ಹೊಸ ವರ್ಷವನ್ನು ಕಳೆಯೋಣ. ಹ್ಯಾಪಿ ನ್ಯೂ ಇಯರ್ ಮೈ ಕ್ರೈಂ ಪಾರ್ಟ್ನರ್".
"ನೀ ನನ್ನ ಸಹೋದರ ಮಾತ್ರವಲ್ಲ ಉತ್ತಮ ಸ್ನೇಹಿತ ಕೂಡ. ನಿನ್ನ ಜೀವನದಲ್ಲಿ ಹೊಸ ವರ್ಷವು ಶಾಂತಿ, ಸಮೃದ್ಧಿ ಮತ್ತು ಸಂತೋಷದಿಂದ ತುಂಬಿರಲಿ. ಹೊಸ ವರ್ಷದ ಶುಭಾಶಯಗಳು ಅಣ್ಣಾ/ತಮ್ಮಾ".
"ಹೊಸ ವರ್ಷವು ನಿನಗೆ ಹಲವಾರು ಅವಕಾಶಗಳನ್ನು ಮತ್ತು ಸಂತೋಷವನ್ನು ತರಲಿ ಎಂದು ಹಾರೈಸುತ್ತೇನೆ. ಹ್ಯಾಪಿ ನ್ಯೂ ಇಯರ್ ಬ್ರದರ್."
"ಬೆಸ್ಟ್ ಬ್ರದರ್ ಅವಾರ್ಡ್ ಯಾರಿಗೆ ಕೊಡಬೇಕು ಅಂದ್ರೆ ನಾನು ನಿನ್ನ ಹೆಸರನ್ನೇ ಹೇಳುವೆ. ಅಷ್ಟು ಕೇರಿಂಗ್, ಹಂಬಲ್ ಹಾಗೂ ಸ್ವೀಟ್ ನೀನು. ಹೊಸ ವರ್ಷದ ಶುಭಾಶಯಗಳು ಸಹೋದರ."
"ಮುಂಬರುವ ವರ್ಷದಲ್ಲಿ ನಿನ್ನ ಜೀವನವು ಪ್ರಕಾಶಮಾನವಾಗಿರಲಿ. ನೀನು ಎತ್ತರಕ್ಕೆ ಬೆಳೆಯಬೇಕು. ಹ್ಯಾಪಿ ನ್ಯೂ ಇಯರ್ ಅಣ್ಣಾ/ತಮ್ಮಾ."
"ಈ ಹೊಸ ವರ್ಷದಲ್ಲಿ ಆ ದೇವರು ಎಲ್ಲಾ ಅದೃಷ್ಟ, ಸಮೃದ್ಧಿ ಮತ್ತು ಆರೋಗ್ಯವನ್ನು ನಿನಗೆ ಕರುಣಿಸಲಿ. ಹ್ಯಾಪಿ ನ್ಯೂ ಇಯರ್ ಮೈ ಸ್ವೀಟ್ ಬ್ರದರ್."
"ನಿನ್ನ ಗುರಿಯೆಡೆ ಸಾಗು ಸಹೋದರ. ನಿನ್ನ ಆಕಾಂಕ್ಷೆಗಳನ್ನು ಪೂರೈಸಲು ನಾನೂ ನಿನಗೆ ಬೆಂಬಲವಾಗಿ ನಿಲ್ಲುವೆ. ಹೊಸ ವರ್ಷದ ಶುಭಾಶಯಗಳು ಸಹೋದರ."