New Year Wishes: ಹೊಸ ವರ್ಷದಂದು ನಿಮ್ಮ ಸಹೋದರಿಗೆ ವಿಭಿನ್ನವಾಗಿ ಹೀಗೆ ಶುಭ ಕೋರಿ: ಇಲ್ಲಿವೆ ಕೋಟ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  New Year Wishes: ಹೊಸ ವರ್ಷದಂದು ನಿಮ್ಮ ಸಹೋದರಿಗೆ ವಿಭಿನ್ನವಾಗಿ ಹೀಗೆ ಶುಭ ಕೋರಿ: ಇಲ್ಲಿವೆ ಕೋಟ್ಸ್

New Year Wishes: ಹೊಸ ವರ್ಷದಂದು ನಿಮ್ಮ ಸಹೋದರಿಗೆ ವಿಭಿನ್ನವಾಗಿ ಹೀಗೆ ಶುಭ ಕೋರಿ: ಇಲ್ಲಿವೆ ಕೋಟ್ಸ್

New Year 2024 Wishes For Sisters: ನಿಮ್ಮ ಅಕ್ಕ ಅಥವಾ ತಂಗಿಗೆ ಕೇವಲ ಹೊಸ ವರ್ಷದ ಶುಭಾಶಯಗಳು ಅಂತಾ ಹೇಳ್​ಬಿಟ್ರೆ ಸಾಕಾ? ಅವರೊಂದಿಗೆ ಬಾಂಧವ್ಯಕ್ಕೆ ಬೆಲೆ ಕಟ್ಟಲಾಗದು. ಅವರ ಮೇಲಿನ ಪ್ರೀತಿಯನ್ನು ಪ್ರತಿದಿನವೂ ವ್ಯಕ್ತಪಡಿಸಲಾಗದು. ಆದರೆ ಕೆಲವು ವಿಶೇಷ ದಿನಗಳಂದು ವ್ಯಕ್ತಪಡಿಸಬಹುದು. ಹೊಸ ವರ್ಷಕ್ಕೆ ನಿಮ್ಮ ಸಹೋದರಿಗೆ ವಿಶ್​ ಮಾಡಲು ಇಲ್ಲಿವೆ ಸಂದೇಶಗಳು.

ಸಹೋದರಿ ಜೊತೆ ಹೊಸ ವರ್ಷ (istockphoto)
ಸಹೋದರಿ ಜೊತೆ ಹೊಸ ವರ್ಷ (istockphoto)

ಹೊಸ ವರ್ಷ ಬೇರೆ ಸಮೀಪಿಸುತ್ತಿದೆ. ಹೊಸ ವರ್ಷಕ್ಕೆ ನಿಮ್ಮ ಅಕ್ಕ- ತಂಗಿಯರಿಗೆ ವಿಶ್​ ಮಾಡಬೇಕು ಎಂಬ ಆಸೆ ನಿಮಗೂ ಸಹ ಇರುತ್ತದೆ. ಆದರೆ ಎಲ್ಲರಿಗೂ ಹೊಸ ವರ್ಷದ ಸಂದರ್ಭದಲ್ಲಿ ಸಹೋದರಿಯರಿಗೆ ಯಾವ ರೀತಿ ಭಿನ್ನವಾಗಿ ವಿಶ್​ ಮಾಡಬಹುದು ಎಂಬ ಯೋಚನೆ ನಿಮಗೆ ಕೂಡ ಇರಬಹುದು. ನೀವು ಕೂಡ ಹೊಸ ರೀತಿಯಲ್ಲಿ ವಿಶ್​ ಮಾಡಬೇಕು ಎಂದುಕೊಂಡಿದ್ದರೆ ಹೊಸ ರೀತಿಯಲ್ಲಿ ಹೊಸ ವರ್ಷದ ಶುಭಾಶಯ ಕೋರಲು ಇಲ್ಲೊಂದಿಷ್ಟು ಹೊಸ ಐಡಿಯಾಗಳಿವೆ ನೋಡಿ

"ಸಹೋದರಿಯ ಬಾಂಧವ್ಯಕ್ಕೆ ಬೆಲೆ ಕಟ್ಟಲಾಗದು. ನಿನ್ನೊಂದಿಗೆ ಕಳೆದ ಬಾಲ್ಯದ ಕ್ಷಣಗಳು ಅಮೂಲ್ಯ. ಮತ್ತೆ ಮತ್ತೆ ಆ ದಿನಗಳು ಬೇಕು. ಹ್ಯಾಪಿ ನ್ಯೂ ಇಯರ್ ಮೈ ಡಿಯರ್​ ಸಿಸ್ಟರ್​"

"ಹೊಸ ವರ್ಷದ ಶುಭಾಶಯ ಸಹೋದರಿ..! ಈ ಹೊಸ ವರ್ಷವು ನಿನಗೆ ನೀನು ಬಯಸಿದ ಎಲ್ಲವನ್ನೂ ಸಿಗುವಂತೆ ಮಾಡಲಿ. ಹೊಸ ವರ್ಷ ನಿನ್ನ ಜೀವನದಲ್ಲಿ ಸಂತಸವನ್ನೇ ತುಂಬಿ ತರಲಿ."

"ಈ ಹೊಸ ವರ್ಷವು ನಿನಗೆ ಉತ್ತಮ ಆರೋಗ್ಯ, ಐಶ್ವರ್ಯ ಹಾಗೂ ಸುಖವನ್ನು ಕರುಣಿಸಲಿ. ನೀನು ಎಂದಿಕೊಂಡಿದ್ದೆಲ್ಲವೂ ಯಶಸ್ಸಿನ ರೂಪದಲ್ಲಿ ನಿನಗೆ ಸಿಗಲಿ."

"2024ರ ಹೊಸ ವರ್ಷಕ್ಕೆ ನಿನಗೆ ಸುಸ್ವಾಗತ..! ಈ ಹೊಸ ವರ್ಷವು ನಿನಗೆ ಸಂತಸವನ್ನು ಹೆಚ್ಚೆಚ್ಚು ನೀಡಲಿ. ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ. ಹ್ಯಾಪಿ ನ್ಯೂ ಇಯರ್ ಮೈ ಕ್ಯೂಟ್​ ಸಿಸ್ಟರ್"

"ಈ ಹೊಸ ವರ್ಷವು ಕೇವಲ ನಿನಗೆ ಸುಖ-ಶಾಂತಿಯನ್ನೇ ಕರುಣಿಸಲಿ. ಹೊಸ ವರ್ಷದಲ್ಲಿ ನಿನಗೆ ಸಂಗಾತಿ ಕೂಡ ಸಿಗುವಂತಾಗಲಿ.ಜೀವನದ ಪ್ರತಿಯೊಂದು ಹಂತದಲ್ಲಿಯೂ ನಿನಗೆ ಒಳ್ಳೆಯದಾಗಲಿ."

"ಬಾಲ್ಯದಲ್ಲಿ ನಮ್ಮ ಅಹಾರ ಹಾಗೂ ಬಟ್ಟೆಯನ್ನು ಹಂಚಿಕೊಳ್ಳುವುದರಿಂದ ಹಿಡಿದು ಈಗ ನಮ್ಮ ಸುಖ ದುಃಖಗಳನ್ನು ಹಂಚಿಕೊಳ್ಳುವವರೆಗೆ ನಮ್ಮ ಜೀವನ ಜೊತೆಯಾಗಿ ಸಾಗಿದೆ. ದೇವರು ನಿನಗೆ ಜಗತ್ತಿನ ಎಲ್ಲಾ ಸಂತೋಷವನ್ನೂ ನೀಡುವಂತಾಗಲಿ. ಹೊಸ ವರ್ಷದ ಶುಭಾಶಯ..!"

"ಪ್ರೀತಿಯ ಸಹೋದರಿ, ನಿನ್ನ ಧೈರ್ಯ ಹಾಗೂ ಕಠಿಣ ಪರಿಶ್ರಮ ನನಗೆ ಎಂದಿಗೂ ಸ್ಪೂರ್ತಿ..! ನೀನು ನನಗೆ ಒಂದು ರೀತಿಯಲ್ಲಿ ರೋಲ್​ ಮಾಡೆಲ್​ ಇದ್ದಂತೆ. ಈ ಹೊಸ ವರ್ಷವು ನಿನಗೆ ಇನ್ನಷ್ಟು ಯಶಸ್ಸನ್ನು ತಂದುಕೊಡಲಿ. ನಿನ್ನಿಂದ ನಾನು ಮತ್ತಷ್ಟು ಸ್ಪೂರ್ತಿ ಗಳಿಸುವಂತಾಗಲಿ. ಹ್ಯಾಪಿ ನ್ಯೂ ಇಯರ್ ಮೈ ಲವ್ಲಿ ಸಿಸ್ಟರ್​"

Whats_app_banner