ಬೆಂಗಳೂರಿನಲ್ಲಿ ಹೊಸ ವರ್ಷದ ಪಾರ್ಟಿ ಮಾಡಲು 10ಕ್ಕೂ ಹೆಚ್ಚು ತಾಣಗಳಿವು; ಈ ಹೋಟೆಲ್‌, ರೆಸ್ಟೋರೆಂಟ್, ಪಬ್‌ಗಳನ್ನು ಪರಿಶೀಲಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬೆಂಗಳೂರಿನಲ್ಲಿ ಹೊಸ ವರ್ಷದ ಪಾರ್ಟಿ ಮಾಡಲು 10ಕ್ಕೂ ಹೆಚ್ಚು ತಾಣಗಳಿವು; ಈ ಹೋಟೆಲ್‌, ರೆಸ್ಟೋರೆಂಟ್, ಪಬ್‌ಗಳನ್ನು ಪರಿಶೀಲಿಸಿ

ಬೆಂಗಳೂರಿನಲ್ಲಿ ಹೊಸ ವರ್ಷದ ಪಾರ್ಟಿ ಮಾಡಲು 10ಕ್ಕೂ ಹೆಚ್ಚು ತಾಣಗಳಿವು; ಈ ಹೋಟೆಲ್‌, ರೆಸ್ಟೋರೆಂಟ್, ಪಬ್‌ಗಳನ್ನು ಪರಿಶೀಲಿಸಿ

New year party in bangalore 2025: ಹೊಸ ವರ್ಷ ಸಂಭ್ರಮಾಚರಣೆಗೆ ಕೆಲವೇ ಗಂಟೆಗಳು ಬಾಕಿ ಇವೆ. ಸಿಲಿಕಾನ್ ಸಿಟಿ ಬೆಂಗಳೂರು ಸಲಕ ರೀತಿಯಲ್ಲಿ ಸಿದ್ಧವಾಗಿದೆ. ನೀವೇನಾದರೂ ಬೆಂಗಳೂರಿನಲ್ಲಿ ಒಂದೊಳ್ಳೆ ಹೋಟೆಲ್, ರೆಸ್ಟೋರೆಂಟ್ ಅಥವಾ ಪಬ್ ನಲ್ಲಿ ಪಾರ್ಟಿ ಮಾಡುವ ಪ್ಲಾನ್ ಮಾಡಿಕೊಂಡಿದ್ದರೆ ನಿಮಗಾಗಿ ಪ್ರಮುಖ ಹೋಟೆಲ್ ಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಹೂಟ್ ಕೆಫೆಯೊಳಗಿನ ಸುಂದರವಾದ ದೃಶ್ಯ
ಹೂಟ್ ಕೆಫೆಯೊಳಗಿನ ಸುಂದರವಾದ ದೃಶ್ಯ

new year party in bangalore 2025: 2024ರ ಹಳೆಯವನ್ನು ವರ್ಷವನ್ನು ಮುಗಿಸಿ 2025ರ ಹೊಸ ವರ್ಷಕ್ಕೆ ಪ್ರವೇಶಿಸಲು ಇನ್ನ ಕೆಲವೇ ಗಂಟೆಗಳು ಬಾಕಿ ಇವೆ. ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಇಡೀ ಜಗತ್ತು ಕಾತುರದಿಂದ ಕಾಯುತ್ತಿದೆ. ಸಾಮಾನ್ಯ ನ್ಯೂ ಇಯರ್ ಬಂದರೆ ಪಾರ್ಟಿ, ಮೋಜು-ಮಸ್ತಿ ಇದ್ದೇ ಇರುತ್ತೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪಾರ್ಟಿಮಾಡೋಕೆ ಹತ್ತಾರು ಆಯ್ಕೆಗಳಿವೆ. ಹೋಟೆಲ್,ರೆಸ್ಟೋರೆಂಟ್, ಪಬ್, ಕ್ಲಬ್ ಹೀಗೆ ಇಷ್ಟದ ಕಡೆ ಪಾರ್ಟಿ ಮಾಡುತ್ತಾ ಹೊಸ ವರ್ಷವನ್ನು ಸ್ವಾಗತಿಸಬಹುದು. ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷಾಚರಣೆ ಅತ್ಯುತ್ತಮ ತಾಣಗಳ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.

ಕಂಫರ್ಟ್ ಇನ್ ಇನ್ಸಿಸ್ ಹೋಟೆಲ್

ನಗರದ ಮತ್ತಿಕೆರೆಯ ನಂಜಪ್ಪ ರೆಡ್ಡಿ ಕಾಲೋನಿಯಲ್ಲಿರುವ ಹೋಟೆಲ್ ಪಾರ್ಟಿಗೆ ಹೇಳಿ ಮಾಡಿಸಿದಂತಿದೆ. ಸಂಜೆ 7 ಗಂಟೆಯ ನಂತರ ಈ ಹೋಟೆಲ್ ನಲ್ಲಿ ಪಾರ್ಟಿ ಆರಂಭವಾಗುತ್ತದೆ. ಅನಿಯಮಿತ ಊಟ, ಡಿಕ್ಸ್ ದೊರೆಯುತ್ತೆ. ಒಬ್ಬ ವ್ಯಕ್ತಿಗೆ 399 ರೂಪಾಯಿಯಿಂದ ಟಿಕೆಟ್ ಆರಂಭವಾಗುತ್ತದೆ.

ಹೂಟ್ ಕೆಫೆ ಅಂಡ್ ಬ್ರ್ರೂವರಿ

ಸರ್ಜಾಪುರ ರಸ್ತೆ, ವರ್ತೂರು ಸಮೀಪದ ಕೈಕೊಂಡ್ರಹಳ್ಳಿಯಲ್ಲಿ ಇರುವ ಹೂಟ್ ಕೆಫೆ ತುಂಬಾ ವಿಶಾಲವಾಗಿದ್ದ ಹೊಸ ವರ್ಷದಪಾರ್ಟಿಗೆ ಅಚ್ಚುಕಟ್ಟಾಗಿದೆ. ಇಲ್ಲೂ ಕೂಡ ಅನಿಯಮಿತ ಊಟ, ಎಣ್ಣೆ, ನೃತ್ಯ, ಡಿಜೆ ಹಾಗೂ ಸಂಗೀತ ಇರುತ್ತದೆ. ಸಂಜೆ 7.30 ರ ನಂತರ ಪಾರ್ಟಿ ಆರಂಭವಾಗುತ್ತದೆ. ಒಬ್ಬರಿ 2,199 ರೂಪಾಯಿ ಟಿಕೆಟ್ ಇರುತ್ತದೆ

ದಿ ಪಾರ್ಕ್ ಹೋಟೆಲ್

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಒಂದಾಗಿರುವ ದಿ ಪಾರ್ಕ್ ಹೋಟೆಲ್ ನಲ್ಲಿ ಹೊಸ ವರ್ಷದ ಪಾರ್ಟಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಹೋಟೆಲ್ ಎಂಜಿ ರಸ್ತೆಯ ಐ-ಬಾರ್ ನಲ್ಲಿದೆ. ಒಬ್ಬರಿ 499 ರೂಪಾಯಿಯಿಂದ ಟಿಕೆಟ್ ಇರಲಿದೆ. ಊಟ, ಎಣ್ಣೆ ಸೇರಿದಂತೆ ಹಲವು ಸೌಲಭ್ಯಗಳಿವೆ.

ಜೆಡಬ್ಲ್ಯೂ ಮ್ಯಾರಿಯೆಟ್

ಅತ್ಯುತ್ತಮ ಡಿಜೆಗಳ ಆಯೋಜನೆಗೆ ಹೆಸರುವಾಸಿಯಾಗಿರುವ ಜೆಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್ ನಲ್ಲಿ ಈ ಬಾರಿ ಪನಾಚೆ ಹೆಸರಿನಲ್ಲಿ ಹೊಸ ವರ್ಷವನ್ನು ಆಚರಿಸಲಾಗುತ್ತಿದೆ. ಸಂಗೀತ, ನೃತ್ಯ, ಆಹಾರ ಹಾಗೂ ಬೇಕಾದಂತಹ ಪಾನೀಯಗಳನ್ನು ನೀಡಲಾಗುತ್ತದೆ. ಒಬ್ಬ ವ್ಯಕ್ತಿಗೆ ಕನಿಷ್ಠ 2,499 ರೂಪಾಯಿ ಚಾರ್ಜ್ ಮಾಡುತ್ತಾರೆ. ರಾತ್ರಿ 8.30ರ ನಂತರ ಪಾರ್ಟಿ ಆರಂಭವಾಗುತ್ತದೆ. ಎಂಜಿ ರಸ್ತೆಯಲ್ಲಿ ಈ ಹೋಟೆಲ್ ಇದೆ.

ಮ್ಯಾರಿಯೆಟ್ ಹೆಬ್ಬಾಳ್

ಹೆಬ್ಬಾಳದಲ್ಲಿರುವ ಮ್ಯಾರಿಯೆಟ್ ಹೆಬ್ಬಾಳ್ ಹೋಟೆಲ್ ಮನಮೋಹಕ ಹೊಸ ವರ್ಷಕ್ಕೆ ಹೆಸರುವಾಸಿಯಾಗಿದೆ. ಗ್ಲೋರಿ ರೆಸೋನಾಂಟ್ ನ್ಯೂ ಇಯರ್ ಪಾರ್ಟಿ 2025 ಹೆಸರಿನಲ್ಲಿ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಅತ್ಯುತ್ತಮ ಡಿಜೆ, ನ್ಯತ್ಯ, ಸಂಗೀತ, ಆಹಾರ, ಇಷ್ಟದ ಪಾನೀಯವನ್ನು ಒದಿಸುತ್ತಾರೆ. ಒಬ್ಬರಿಗೆ 1,999 ರೂಪಾಯಿ ಆರಂಭವಾಗುತ್ತದೆ.

ಚಾರ್ಕೋಲ್ ಕೆಫೆ ಅಂಡ್ ಬಾರ್ಬೆಕ್ಯೂ

ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಪಾರ್ಟಿ ಪ್ರಿಯರಿಗೆ ಹೊಸ ಅನುಭವವನ್ನು ನೀಡಲು ಚಾರ್ಕೋಲ್ ಕೆಫೆ ಮುಂದಾಗಿದೆ. ಚಂದ್ರಾ ಲೇಔಟ್ ನ ಬಾಟಾ ಶೋರೂಮ್ ಮೇಲೆ ಈ ಕೆಫೆ ಇದ್ದು, ಸಂಜೆ 6 ರಿಂದಲೇ ಪಾರ್ಟಿ ಆರಂಭವಾಗುತ್ತದೆ. ಒಬ್ಬರಿಗೆ ಕನಿಷ್ಠ 2 ಸಾವಿರ ರೂಪಾಯಿ ಚಾರ್ಜ್ ಮಾಡುತ್ತಾರೆ.

ಗೋಲ್ಡ್ ಕಾಯಿನ್ಸ್ ಕ್ಲಬ್ ಅಂಡ್ ರೆಸ್ಟೋರೆಂಟ್

ಎಲೆಕ್ಟ್ರಾನಿಕ್ ಸಿಟಿಯ ಅಂದಾಪುರದಲ್ಲಿರುವ ಗೋಲ್ಡ್ ಕಾಯಿನ್ಸ್ ಕ್ಲಬ್ ಅಂಡ್ ರೆಸ್ಟೋರೆಂಟ್ ಪಾರ್ಟಿಗಳಿಗೆ ಜನಪ್ರಿಯವಾಗಿದೆ. ಅದರಲ್ಲೂ ಹೊಸ ವರ್ಷಕ್ಕೆ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಗ್ರಾಹಕರಿಗೆ ಬರಪೂರ ಮನರಂಜನೆ ನೀಡಲು ಮುಂದಾಗಿದೆ. ಬಜೆಟ್ ಗೆ ತಕ್ಕ ಸೌಲಭ್ಯಗಳು ಸಿಗುತ್ತದೆ. ಸಂಜೆ 6 ರಿಂದ ಪಾರ್ಟಿ ಪ್ರಾರಂಭವಾಗುತ್ತದೆ. ಒಬ್ಬ ವ್ಯಕ್ತಿ ಕನಿಷ್ಠ 199 ರೂಪಾಯಿ ಶುಲ್ಕವನ್ನು ನಿಗದಿ ಮಾಡಿದೆ.

ರಾಯಲ್ ಆರ್ಕಿಡ್ ಹೋಟೆಲ್‌

ಹೊಸ ವರ್ಷಾಚರಣೆ ಅದ್ಧೂರಿಯಾಗಿ ನಡೆಯುವ ಬೆಂಗಳೂರಿನ ಪ್ರಮುಖ ತಾಣಗಳಲ್ಲಿ ರಾಯ್ ಆರ್ಕಿಡ್ ಹೋಟೆಲ್ ಕೂಡ ಒಂದಾಗಿದೆ. ಸೆಲೆಬ್ರಿಟಿ ಡಿಜೆ, ಫ್ಯಾಷನ್ ಶೋ, ಗ್ರೂಪ್ ಡ್ಯಾನ್ಸ್ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಒಲ್ಡ್ ಏರ್ಪೋರ್ಟ್ ರೋಡ್ ನಲ್ಲಿ ಈ ಹೋಟೆಲ್ ಇದೆ. ಸಂಜೆ 7 ನಂತರ ಪಾರ್ಟಿ ಆರಂಭವಾಗುತ್ತೆ.

ಹಾರ್ಡ್ ರಾಕ್ ಕೆಫೆ

ಅಶೋಕ ನಗರ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಹಾರ್ಡ್ ರಾಕ್ ಕೆಫೆಯಲ್ಲೂ ನ್ಯೂ ಇಯರ್ ಪಾರ್ಟಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಇಲ್ಲಿನ ಲೈವ್ ಪ್ರದರ್ಶನಗಳು ನೋಡುಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತವೆ. ರಾತ್ರಿ 9 ನಂತರ ನಂತರ ಪಾರ್ಟಿ ಶುರುವಾಗುತ್ತದೆ. ಒಬ್ಬರಿಗೆ 1,999 ರೂಪಾಯಿ ಚಾರ್ಜ್ ಮಾಡುತ್ತಾರೆ.

ವಿವಾಂತಾ ಬೈ ತಾಜ್

ಬೆಂಗಳೂರಿನಲ್ಲಿ ಹೊಸ ವರ್ಷಅದ್ದೂರಿಯಾಗಿ ನಡೆಯುವ ಪ್ರಮುಖ ಹೋಟೆಲ್ ಗಳಲ್ಲ ವಿವಾಂತಾ ಬೈ ತಾಜ್ ಕೂಡ ಒಂದಾಗಿದೆ. ಎಂಜಿ ರಸ್ತೆಯಲ್ಲಿರುವ ಈ ಹೋಟೆಲ್ ನಲ್ಲಿ ತುಂಬಾ ವಿಭಿನ್ನವಾಗಿ ಆಚರಿಸಲಾಗುತ್ತದೆ.

ದಿ ಚಾನ್ಸರಿ ಪೆವಿಲಿಯನ್

ಸೆಲಿಬ್ರಿಟಿ ಡಿಜೆ ಮತ್ತು ರಷ್ಯಾ ಬೆಲ್ಲಿ ಡ್ಯಾನ್ಸ್ ಕಾರ್ಯಕ್ರಮವನ್ನು ಆಯೋಜಿಸುವ ದಿ ಚಾನ್ಸರಿ ಪೆವಿಲಿಯನ್ ಹೋಟೆಲ್ ನಲ್ಲಿ ಲಾಸ್ ಏಂಜಲೀಸ್ ನ್ಯೂ ಇಯರ್ ಪಾರ್ಟಿ ಹೆಸರಿನಲ್ಲಿ ಹೊಸ ವರ್ಷವನ್ನು ಸಂಭ್ರಮಿಸಲಾಗುತ್ತದೆ. ರಾತ್ರಿ 8 ರಿಂದ ಪಾರ್ಟಿ ಆರಂಭವಾಗುತ್ತೆ. ಒಬ್ಬರಿಗೆ 1000 ದಿಂದ 3,500 ರೂಪಾಯಿಯವರಿಗೆ ಚಾರ್ಜ್ ಮಾಡಲಾಗುತ್ತದೆ.

ದಿ ಲಲಿತ್ ಅಶೋಕ್ ಹೋಟೆಲ್

ನಗರ ಪ್ರಮುಖ ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಒಂದಾಗಿರುವ ದಿ ಲಲಿತ್ ಅಶೋಕ್ ಹೋಟೆಲ್ ನಲ್ಲಿ ಹೌಸ್ ಫುಲ್ ಹೆಸರಿನಲ್ಲಿ ಹೊಸ ವರ್ಷಾಚರಣೆಯನ್ನು ಆಚರಿಸಲಾಗುತ್ತಿದೆ. ರಾತ್ರಿ 8 ರಿಂದ ಪಾರ್ಟಿ ಆರಂಭವಾಗುತ್ತದೆ. ಅನಿಯಮಿತ ಊಟ, ಎಣ್ಣೆ ನೀಡಲಿದ್ದಾರೆ. ಒಬ್ಬರಿಗೆ 2,900 ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಮಕ್ಕಳಿಗೆ 1,000 ರೂಪಾಯಿ ಇರಲಿದೆ.

ಲೀಲಾ ಪ್ಯಾಲೇಸ್

ಪ್ರಮುಖ ಹೋಟೆಲ್ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಎಕ್ಸ್ ಯು ಪ್ಯಾರಿಸ್ ಹೆಸರಿನಲ್ಲಿ ಹೊಸ ವರ್ಷವನ್ನು ಆಚರಿಸಲಾಗುತ್ತಿದೆ. ಇಲ್ಲಿ ಟಾಪ್ ಸೆಲೆಬ್ರಿಟಿ ಡಿಜೆಗಳು, ಡಿಜೆ ಹಾಸನ್, ಡಿಜೆ ಜೋನಾಸ್ ಹಾಗೂ ಇತರೆ ಪ್ರಮುಖ ಡಿಜೆಗಳಿಂದ ಕಾರ್ಯಕ್ರಮ ಇರಲಿದೆ ಎಂದು ಹೋಟೆಲ್ ಹೇಳಿಕೊಂಡಿದೆ. ಮಕ್ಕಳಿಗೆ 500 ರೂಪಾಯಿ ಚಾರ್ಜ್ ಮಾಡಿದರೆ ದೊಡ್ಡವರಿಗೆ 3000 ರೂಪಾಯಿ ಇರಲಿದೆ.

ದಿ ಝೂರಿ ವೈಟ್ ಫೀಲ್ಡ್, ಹೋಟೆಲ್ ಕೀ, ಕ್ಯಾಪಿಟಲ್ ಹೀಗೆ ಹಲವಾರು ಹೋಟೆಲ್ ಗಳು, ರೆಸ್ಟೋರೆಂಟ್ ಗಳು, ಕ್ಲಬ್ ಹಾಗೂ ಪಬ್ ಗಳಲ್ಲಿ ಹೊಸ ವರ್ಷದ ಪಾರ್ಟಿಗಳನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.

Whats_app_banner