ಕನ್ನಡ ಸುದ್ದಿ  /  ಜೀವನಶೈಲಿ  /  ಬರೀ ವಾಕಿಂಗ್ ಅಲ್ಲ; ಕೊಬ್ಬು ಕರಗಿಸಲು ನಡೆಯುವಾಗ ಈ 3 ತೋಳಿನ ವ್ಯಾಯಾಮಗಳನ್ನು ತಪ್ಪದೆ ಮಾಡಿ

ಬರೀ ವಾಕಿಂಗ್ ಅಲ್ಲ; ಕೊಬ್ಬು ಕರಗಿಸಲು ನಡೆಯುವಾಗ ಈ 3 ತೋಳಿನ ವ್ಯಾಯಾಮಗಳನ್ನು ತಪ್ಪದೆ ಮಾಡಿ

ನಡಿಗೆ ಮಾಡುವುದು ಹೃದಯಕ್ಕೆ ಎಷ್ಟು ಸಹಕಾರಿಯೋ, ತೂಕ ನಷ್ಟಕ್ಕೂ ಪ್ರಯೋಜನಕಾರಿಯಾಗಿದೆ. ಹೀಗಾಗಿ ಬಹುತೇಕರು ಬೆಳಗ್ಗೆ ಅಥವಾ ಸಂಜೆ ವೇಳೆಗೆ ವಾಕಿಂಗ್ ಮಾಡುತ್ತಾರೆ. ಕೆಲವೊಬ್ಬರು ಸರಳವಾಗಿ ನಡಿಗೆ ಮಾತ್ರ ಮಾಡುವುದು ಸಾಮಾನ್ಯ. ಆದರೆ, ನಡಿಗೆಯೊಂದಿಗೆ ತೋಳಿನ ವ್ಯಾಯಾಮ ಮಾಡುವುದರಿಂದ ದೇಹದ ಸಮತೋಲನ ಕಾಯ್ದುಕೊಳ್ಳಬಹುದು.

ಕೊಬ್ಬು ಕರಗಿಸಲು ನಡೆಯುವಾಗ ಈ 3 ತೋಳಿನ ವ್ಯಾಯಾಮಗಳನ್ನು ತಪ್ಪದೆ ಮಾಡಿ
ಕೊಬ್ಬು ಕರಗಿಸಲು ನಡೆಯುವಾಗ ಈ 3 ತೋಳಿನ ವ್ಯಾಯಾಮಗಳನ್ನು ತಪ್ಪದೆ ಮಾಡಿ (pixels)

ವ್ಯಾಯಾಮವು ಆರೋಗ್ಯ ಹಾಗೂ ಕ್ಷೇಮವನ್ನು ಹೆಚ್ಚಿಸುವ ಶಾರೀರಿಕ ಚಟುವಟಿಕೆ. ಇದು ಸ್ನಾಯುಗಳು ಹಾಗೂ ಹೃದಯನಾಳದ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಅಲ್ಲದೆ ತೂಕ ಇಳಿಕೆಗೂ ವ್ಯಾಯಾಮ ಸಹಕಾರಿ. ಹೀಗಾಗಿ ಬಹಳಷ್ಟು ಮಂದಿ ಇಂದು ವ್ಯಾಯಾಮ ಮಾಡುತ್ತಾ ತೂಕ ಇಳಿಸಲು ಪ್ರಯತ್ನಿಸುತ್ತಾರೆ. ದೇಹವನ್ನು ಫಿಟ್ ಆಗಿ ಇಡಲೂ ಇದು ಸಹಕಾರಿ. ನೀವು ವಾಕ್ ಅಥವಾ ಟ್ರೆಡ್‌ಮಿಲ್‌ನಲ್ಲಿ ಓಡುತ್ತಿರಬಹುದು. ನಿಮ್ಮ ನಡಿಗೆಯ ಜೊತೆಗೆ ತೋಳಿನ ವ್ಯಾಯಾಮವೂ ಬಹಳ ಮುಖ್ಯ. ತೋಳಿನ ಚಲನೆಗಳ ಮೇಲೆ ನಡೆಯಲು (ವಾಕಿಂಗ್) ಆದ್ಯತೆ ನೀಡಿ. ನಿಮ್ಮ ದೇಹದ ಸಮತೋಲನಕ್ಕೆ ಗಮನ ನೀಡಿ. ತೋಳಿನ ವ್ಯಾಯಾಮ ಹೀಗಿರಲಿ.

ನಡೆಯುವಾಗ ನಿಮ್ಮ ತೋಳನ್ನು ಮುಂದಕ್ಕೆ ತನ್ನಿ

ನೀವು ನಡೆಯುವಾಗ ಮೊಣಕೈ ಅನ್ನು ಎದೆಯ ಎತ್ತರದಲ್ಲಿ ಬರುವಂತೆ ಮುಷ್ಟಿಯನ್ನು ಹಿಡಿದುಕೊಂಡು ನಡೆಯಿರಿ. ನಡೆಯುವಾಗ ನಿಮ್ಮ ತೋಳುಗಳನ್ನು ಹಿಂದೆ, ಮುಂದೆ ತನ್ನಿ. ಮೊದಲು, ನಿಮ್ಮ ಬಲಗೈಯನ್ನು ಮುಂದಕ್ಕೆ ತರುವ ಮೂಲಕ ನಡಿಗೆಯನ್ನು ಪ್ರಾರಂಭಿಸಿ. ಬಳಿಕ ಬಲಗೈ ಹಿಂದಕ್ಕೆ ಹೋದಾಗ ಎಡಗೈಯನ್ನು ಮುಂದಕ್ಕೆ ತನ್ನಿ. ಈ ರೀತಿ ನಿಮ್ಮ ನಡಿಗೆಯಲ್ಲಿ ಇದನ್ನು ಪುನರಾವರ್ತಿಸಿ. ಇದು ನಿಮಗೆ ಆರಾಮದಾಯಕವಾಗಿದ್ದರೆ ನಿಮ್ಮ ನಡಿಗೆ ಅಥವಾ ನಿಮ್ಮ ತೋಳಿನ ಚಲನೆಯ ವೇಗವನ್ನು ಹೆಚ್ಚಿಸಿ. ನಿಮ್ಮ ಬಲ ಕಾಲನ್ನು ಮುಂದಿಟ್ಟಾಗ ನಿಮ್ಮ ಎಡಗೈಯನ್ನು ಮುಂದಕ್ಕೆ ತನ್ನಿ. ನಿಮ್ಮ ಎಡ ಪಾದದಿಂದ ಹೆಜ್ಜೆ ಹಾಕುವಾಗ ನಿಮ್ಮ ಬಲಗೈಯನ್ನು ಮುಂದಕ್ಕೆ ತರುತ್ತಾ ವಾಕ್ ಮಾಡಿ.

ಎರಡೂ ಕೈಗಳನ್ನು ಸಮಾನಾಂತರವಾಗಿ ಮೇಲಕ್ಕೆತ್ತಿ

ನೀವು ನಡೆಯುವಾಗ ನಿಮ್ಮ ಕೈಗಳನ್ನು ನೇರವಾಗಿ ಇರಿಸಿ. ವಾಕಿಂಗ್ ಮಾಡುವಾಗ ನಿಮ್ಮ ಬಲಗೈಯನ್ನು ನೇರವಾಗಿ ನೆಲಕ್ಕೆ ಸಮಾನಾಂತರವಾಗಿ ಮೇಲಕ್ಕೆತ್ತಿ. ನಿಮ್ಮ ಎಡಗೈಯನ್ನು ಈ ರೀತಿ ಮಾಡುತ್ತಾ ಪುನರಾವರ್ತಿಸಿ. ನಡೆಯುತ್ತಾ, ನಿಮ್ಮ ಕೈಗಳನ್ನು ಭುಜದ ಎತ್ತರದವರೆಗೂ ಹೆಚ್ಚಿಸಿ. ನಂತರ ಹಿಂದಕ್ಕೆ ಕೆಳಕ್ಕೆ ಇಳಿಸುತ್ತಾ ತೋಳಿನ ವ್ಯಾಯಾಮ ಮಾಡಿ. ಈ ವ್ಯಾಯಾಮವನ್ನು ಮಾಡಲು ಎರಡೂ ತೋಳುಗಳನ್ನು ಒಟ್ಟಿಗೆ ಬಳಸಬಹುದು. ಅಥವಾ ಒಂದು ಸಮಯದಲ್ಲಿ ಒಂದು ತೋಳನ್ನು ಮಾತ್ರ ಬಳಸಬಹುದು. ನೀವು ಈ ಚಲನೆಯನ್ನು ವೇಗವಾಗಿ ಮಾಡಬಹುದು. ಆದರೆ, ನಿಮ್ಮ ಸಮತೋಲನ ಮತ್ತು ವಾಕಿಂಗ್ ವೇಗವನ್ನು ಕಾಪಾಡಿಕೊಳ್ಳುವುದು ಹೆಚ್ಚು ಸವಾಲಿನದಾಗಿರುತ್ತದೆ.

ಟ್ರೆಂಡಿಂಗ್​ ಸುದ್ದಿ

ಈ ರೀತಿ ಇರಲಿ ತೋಳಿನ ವ್ಯಾಯಾಮ

ಈ ವ್ಯಾಯಾಮದಲ್ಲಿ ನೀವು ನೇರವಾಗಿ ನಿಂತುಕೊಳ್ಳಬೇಕು. ನಿಮ್ಮ ಬಲಗಾಲನ್ನು ಸ್ವಲ್ಪ ಮುಂದೆ ಇಟ್ಟು, ಹಿಮ್ಮಡಿಗೆ ಭಾರ ಹಾಕಿ. ಬಲ ಮೊಣಕಾಲು ಸ್ವಲ್ಪ ಬಗ್ಗಿಸಿ, ಎಡಗೈಯಿಂದ ಬಲ ಪಾದವನ್ನು ಸ್ಪರ್ಶಿಸಿ. ಇದೇ ರೀತಿ ಎಡಗಾಲನ್ನು ಮಾಡುವಾಗ ಬಲಕೈಯನ್ನು ತಂದು ಪುನಾರಾವರ್ತಿಸಿ. ಈ ವ್ಯಾಯಾಮವನ್ನು ಮಾಡುವುದರಿಂದ ತೊಡೆ, ಸೊಂಟದ ಕೊಬ್ಬನ್ನು ಬರ್ನ್ ಮಾಡಲು ಸಹಾಯಕವಾಗಿದೆ. ಅಲ್ಲದೆ, ತೋಳಿನ ಕೊಬ್ಬನ್ನು ಸಹ ಕರಗಿಸಬಹುದು.

ಬಹುತೇಕ ಮಂದಿ ದಿನನಿತ್ಯ ವಾಕಿಂಗ್ ಮಾಡುತ್ತಾರೆ. ನಡಿಗೆಯು ಹೃದಯದ ಆರೋಗ್ಯಕ್ಕೆ ಬಹಳ ಮುಖ್ಯ. ಕೇವಲ ನಡೆಯುತ್ತಾ ಹೋಗುವುದಷ್ಟೇ ಅಲ್ಲ, ಈ ವೇಳೆ ತೋಳಿನ ವ್ಯಾಯಾಮ ಮಾಡಿದರೆ ಅನೇಕ ಪ್ರಯೋಜನಗಳಿವೆ. ಇದರಿಂದ ನಿಮ್ಮ ತೋಳುಗಳ ಕೊಬ್ಬನ್ನು ಕರಗಿಸಲು ಸಹ ಸಾಧ್ಯ.