ತೂಕ ಇಳಿಕೆಗೆ ಸಹಕಾರಿ ಆಪಲ್ ಸೈಡರ್ ವಿನೆಗರ್- ಇದನ್ನು ಹೇಗೆ ತಯಾರಿಸಲಾಗುತ್ತದೆ, ಯಾರು ಸೇವಿಸಬಾರದು: ಇಲ್ಲಿದೆ ಮಾಹಿತಿ-health apple cider vinegar for weight loss best time to drink apple cider vinegar prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ತೂಕ ಇಳಿಕೆಗೆ ಸಹಕಾರಿ ಆಪಲ್ ಸೈಡರ್ ವಿನೆಗರ್- ಇದನ್ನು ಹೇಗೆ ತಯಾರಿಸಲಾಗುತ್ತದೆ, ಯಾರು ಸೇವಿಸಬಾರದು: ಇಲ್ಲಿದೆ ಮಾಹಿತಿ

ತೂಕ ಇಳಿಕೆಗೆ ಸಹಕಾರಿ ಆಪಲ್ ಸೈಡರ್ ವಿನೆಗರ್- ಇದನ್ನು ಹೇಗೆ ತಯಾರಿಸಲಾಗುತ್ತದೆ, ಯಾರು ಸೇವಿಸಬಾರದು: ಇಲ್ಲಿದೆ ಮಾಹಿತಿ

ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರು ಆಪಲ್ ಸೈಡರ್ ವಿನೆಗರ್ ಅನ್ನು ಸೇವಿಸುವುದರಿಂದ ಪ್ರಯೋಜನವನ್ನು ಪಡೆಯಬಹುದು. ಕೇವಲ ತೂಕ ಇಳಿಕೆಗೆ ಮಾತ್ರವಲ್ಲ ಆರೋಗ್ಯಕ್ಕೂ ಹಲವು ರೀತಿಯ ಪ್ರಯೋಜನಗಳನ್ನು ಹೊಂದಿದೆ. ಈ ಆಪಲ್ ಸೈಡರ್ ವಿನೆಗರ್ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರು ಆಪಲ್ ಸೈಡರ್ ವಿನೆಗರ್ ಅನ್ನು ಸೇವಿಸುವುದರಿಂದ ಪ್ರಯೋಜನವನ್ನು ಪಡೆಯಬಹುದು.
ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರು ಆಪಲ್ ಸೈಡರ್ ವಿನೆಗರ್ ಅನ್ನು ಸೇವಿಸುವುದರಿಂದ ಪ್ರಯೋಜನವನ್ನು ಪಡೆಯಬಹುದು. (Shutterstock)

ತೂಕ ಇಳಿಕೆಗೆ ಆಪಲ್ ಸೈಡರ್ ವಿನೆಗರ್ ಬಹಳ ಪ್ರಯೋಜನಕಾರಿಯಾಗಿದೆ. ಹುದುಗಿಸಿದ ಸೇಬಿನ ರಸದಿಂದ ತಯಾರಿಸಲಾದ ಆಪಲ್ ಸೈಡರ್ ವಿನೆಗರ್ ಅಸಿಟಿಕ್ ಆಮ್ಲದಲ್ಲಿ ಸಮೃದ್ಧವಾಗಿದೆ. ಇದರ ಸೇವನೆಯು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ ಮತ್ತು ಚಯಾಪಚಯಕ್ರಿಯೆಗೂ ಸಹಕಾರಿ. ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವ ಬಹುತೇಕ ಮಂದಿ ತಮ್ಮ ದೈನಂದಿನ ಆಹಾರದಲ್ಲಿ ಆಪಲ್ ಸೈಡರ್ ವಿನೆಗರ್ ಅನ್ನು ಸೇವಿಸುತ್ತಾರೆ. ತೂಕ ಇಳಿಕೆಗೆ ಮಾತ್ರವಲ್ಲ ವಿವಿಧ ಆರೋಗ್ಯ ಸಮಸ್ಯೆಗಳಿಗೂ ನೈಸರ್ಗಿಕ ಪರಿಹಾರವಾಗಿದೆ. ಜೀರ್ಣಕ್ರಿಯೆಯನ್ನು ಉತ್ತೇಜಿಸುವುದರಿಂದ ಚರ್ಮದ ಆರೋಗ್ಯವನ್ನು ಸುಧಾರಿಸುವವರೆಗೆ, ಇದರ ಪ್ರಯೋಜನಗಳ ಪಟ್ಟಿ ದೊಡ್ಡದಿದೆ. ತೂಕ ನಷ್ಟಕ್ಕೆ ಇದು ತುಂಬಾನೇ ಉಪಯುಕ್ತವಾಗಿದೆ.

ಆಪಲ್ ಸೈಡರ್ ವಿನೆಗರ್ ಅನ್ನು ಹೇಗೆ ತಯಾರಿಸಲಾಗುತ್ತದೆ?

ಆಪಲ್ ಸೈಡರ್ ವಿನೆಗರ್ ಅನ್ನು ಎರಡು ಹಂತದ ಹುದುಗುವಿಕೆ ಪ್ರಕ್ರಿಯೆಯ ಮೂಲಕ ತಯಾರಿಸಲಾಗುತ್ತದೆ. ಮೊದಲಿಗೆ ಸೇಬುಗಳನ್ನು ಅವುಗಳ ರಸವನ್ನು ಹೊರತೆಗೆಯಲು ಪುಡಿ ಮಾಡಲಾಗುತ್ತದೆ. ನಂತರ ಸೇಬಿನ ರಸಕ್ಕೆ ಯೀಸ್ಟ್ ಅನ್ನು ಸೇರಿಸಲಾಗುತ್ತದೆ. ಇದು ಆಲ್ಕೋಹಾಲ್ ಆಗಿ ಪರಿವರ್ತಿಸಪತ್ತದೆ. ಈ ಪ್ರಕ್ರಿಯೆಯು ಸಾಮಾನ್ಯವಾಗಿ ಹಲವಾರು ವಾರಗಳನ್ನು ತೆಗೆದುಕೊಳ್ಳುತ್ತದೆ. ಆಲ್ಕೋಹಾಲ್ ಹುದುಗುವಿಕೆಯ ನಂತರ, ಅಸಿಟಿಕ್ ಆಸಿಡ್ ಬ್ಯಾಕ್ಟೀರಿಯಾಗಳು ಸೇರಿ ಮತ್ತಷ್ಟು ಹುದುಗುವಿಕೆಯ ಮೂಲಕ ಆಲ್ಕೋಹಾಲ್ ಅನ್ನು ಅಸಿಟಿಕ್ ಆಮ್ಲವಾಗಿ ಪರಿವರ್ತಿಸುತ್ತವೆ. ಈ ಪ್ರಕ್ರಿಯೆ ಹಲವಾರು ತಿಂಗಳುಗಳನ್ನು ತೆಗೆದುಕೊಳ್ಳಬಹುದು.

ಹುದುಗುವಿಕೆಯ ಪ್ರಕ್ರಿಯೆಯು ಪೂರ್ಣಗೊಂಡ ನಂತರ ವಿನೆಗರ್ ಅನ್ನು ನೇರವಾಗಿ ಫಿಲ್ಟರ್ ಮಾಡಲಾಗುತ್ತದೆ. ತಯಾರಾದ ಆಪಲ್ ಸೈಡರ್ ವಿನೆಗರ್ ಹುಳಿ ರುಚಿ ಮತ್ತು ಕಟುವಾದ ವಾಸನೆಯನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ವಿವಿಧ ಪೋಷಕಾಂಶಗಳನ್ನು ಹೊಂದಿದೆ.

ಈ ಆಪಲ್ ಸೈಡರ್ ವಿನಗರ್ ಅನ್ನು ನಿನ್ನೆ ಮೊನ್ನೆಯಿಂದಲ್ಲ, ಶತಮಾನಗಳಿಂದ ತಯಾರಿಸಲಾಗುತ್ತಿದೆ. ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಇದು ಹಸಿವನ್ನು ನಿಗ್ರಹಿಸಲು, ಚಯಾಪಚಯವನ್ನು ಹೆಚ್ಚಿಸುವ ಮತ್ತು ಕೊಬ್ಬನ್ನು ಬರ್ನ್ ಮಾಡುವಲ್ಲಿ ಸಹಕಾರಿ. ಹೀಗಾಗಿ ತೂಕ ಇಳಿಕೆಗೆ ತುಂಬಾನೇ ಪ್ರಯೋಜನಕಾರಿಯಾಗಿದೆ.

ಆಪಲ್ ಸೈಡರ್ ವಿನೆಗರ್ ಸೇವನೆ ಸುರಕ್ಷಿತವೇ?

ಅಲ್ಪಾವಧಿಗೆ ಔಷಧಿಯಾಗಿ ಬಳಕೆ ಮಾಡುವುದು ಇದು ಸುರಕ್ಷಿತವಾಗಿದೆ. ಆದರೆ, ದೀರ್ಘಾವಧಿಯಲ್ಲಿ ಇದನ್ನು ಬಳಸುವುದು ಅಸುರಕ್ಷಿತ ಎಂದು ಹೇಳಲಾಗುತ್ತದೆ. ಆಪಲ್ ಸೈಡರ್ ವಿನೆಗರ್ ಅನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಕಡಿಮೆ ಮಟ್ಟದ ಪೊಟ್ಯಾಶಿಯಮ್‍ ಸಮಸ್ಯೆಗಳಿಗೆ ಕಾರಣವಾಗಬಹುದು. ವ್ಯಕ್ತಿಯು ತೂಕ ನಷ್ಟ, ಅಧಿಕ ಕೊಲೆಸ್ಟ್ರಾಲ್, ಮೂತ್ರಪಿಂಡದ ಕಲ್ಲುಗಳು ಅಥವಾ ಪಿಸಿಓಎಸ್‍ ಇತ್ಯಾದಿ ಸಮಸ್ಯೆಗಳನ್ನು ಹೊಂದಲು ಕಾರಣವಾಗಬಹುದು. ಸಂಧಿವಾತ ಸಮಸ್ಯೆಗಳು, ಆಮ್ಲೀಯತೆ, ಹುಣ್ಣುಗಳು ಅಥವಾ ಇತರ ಗ್ಯಾಸ್ಟ್ರಿಕ್ ಸಮಸ್ಯೆಗಳು ಮತ್ತು ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರು ಇತ್ಯಾದಿ ಅನಾರೋಗ್ಯ ಸಮಸ್ಯೆ ಹೊಂದಿರುವವರು ಇದನ್ನು ಸೇವಿಸುವುದು ಉತ್ತಮವಲ್ಲ.

ಆಪಲ್ ಸೈಡರ್ ವಿನೆಗರ್ ಸೇವಿಸಲು ಉತ್ತಮ ಸಮಯ ಯಾವುದು?

ಆಪಲ್ ಸೈಡರ್ ವಿನೆಗರ್ ಕುಡಿಯಲು ಉತ್ತಮ ಸಮಯವೆಂದರೆ ಬೆಳಗ್ಗಿನ ಸಮಯ. ರಾತ್ರಿ ಮಲಗಿ ಬೆಳಗೆದ್ದಾಗ ಹೊಟ್ಟೆ ಖಾಲಿ ಇರುತ್ತದೆ. ಹೀಗಾಗಿ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದು ಉತ್ತಮ. ಹಾಗೆಯೇ ಯಾವುದೇ ಅಸಿಡಿಟಿ ಸಮಸ್ಯೆ ಇದ್ದವರೂ ಕೂಡ ಇದನ್ನು ಸೇವಿಸಬಹುದು. ಊಟದ ಮೊದಲು ಇದನ್ನು ಸೇವಿಸಿ ನಂತರ ಊಟ ಮಾಡುವುದರಿಂದ ಅಸಿಡಿಟಿ ಸಮಸ್ಯೆ ಕಡಿಮೆಯಾಗಬಹುದು.

ಒಟ್ಟಿನಲ್ಲಿ ನಿಮ್ಮ ಆಹಾರದಲ್ಲಿ ಯಾವುದೇ ಮಹತ್ವದ ಬದಲಾವಣೆಗಳನ್ನು ಮಾಡುವ ಮುನ್ನ ಯಾವಾಗಲೂ ತಜ್ಞ ವೈದ್ಯರ ಮಾರ್ಗದರ್ಶನ ಪಡೆಯುವುದು ಸೂಕ್ತ.

mysore-dasara_Entry_Point