ಕನ್ನಡ ಸುದ್ದಿ  /  Lifestyle  /  Health Benefits Of Drumstick Leaves

Benefits of Drumstick leaves: ಹೃದಯಸಂಬಂಧಿ ಸಮಸ್ಯೆಗಳಿಗೆ ಸಹಾಯಕಾರಿ ನುಗ್ಗೇಕಾಯಿ ಎಲೆಗಳು...ಇನ್ನೂ ಎಷ್ಟೆಲ್ಲಾ ಉಪಯೋಗವಿದೆ ನೋಡಿ

ನುಗ್ಗೇಕಾಯಿ ಎಲೆಯಲ್ಲಿ ದೇಹಕ್ಕೆ ಬೇಕಾದ ಹಲವಾರು ಪೋಷಕಾಂಶಗಳಿವೆ. ಇದು ವಿವಿಧ ರೋಗಗಳನ್ನು ಗುಣ ಪಡಿಸುತ್ತದೆ. ನಿಮ್ಮ ದಿನನಿತ್ಯದ ಆಹಾರದಲ್ಲಿ ವಿವಿಧ ರೂಪದಲ್ಲಿ ನುಗ್ಗೇಕಾಯಿ ಎಲೆಗಳನ್ನು ಸೇವಿಸುವುದರಿಂದ ದೇಹಕ್ಕೆ ದುಪ್ಪಟ್ಟು ಪ್ರಯೋಜನಗಳನ್ನು ನೀಡುತ್ತದೆ.

ನುಗ್ಗೇಕಾಯಿ ಎಲೆಗಳಿಂದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ
ನುಗ್ಗೇಕಾಯಿ ಎಲೆಗಳಿಂದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ (PC: pixabay.com)

ನಮ್ಮ ಆರೋಗ್ಯವನ್ನು ವೃದ್ಧಿಸುವಂತಹ ಅನೇಕ ಪದಾರ್ಥಗಳನ್ನು ಪ್ರಕೃತಿ ನಮಗೆ ನೀಡಿದೆ. ಅದರಲ್ಲಿ ನುಗ್ಗೇಕಾಯಿ ಎಲೆಗಳು ಕೂಡಾ ಒಂದು. ಅಡುಗೆಗೆ ನುಗ್ಗೇಕಾಯಿ ಎಷ್ಟು ರುಚಿಯೋ, ಆರೋಗ್ಯಕ್ಕೆ ಅದರ ಎಲೆಗಳು ಅಷ್ಟೇ ಉಪಯುಕ್ತ. ಅದರಲ್ಲೂ ಡಯಾಬಿಟಿಕ್‌ ರೋಗಿಗಳಿಗೆ ಇದು ಅತ್ಯುತ್ತಮ ಔಷಧವಾಗಿದೆ. ಇದನ್ನು ಔಷಧೀಯ ಭಾಷೆಯಲ್ಲಿ ಮೊರಿಂಗಾ ಎಂದು ಕರೆಯಲಾಗುತ್ತದೆ.

ನುಗ್ಗೇಕಾಯಿ ಎಲೆಯಲ್ಲಿ ದೇಹಕ್ಕೆ ಬೇಕಾದ ಹಲವಾರು ಪೋಷಕಾಂಶಗಳಿವೆ. ಇದು ವಿವಿಧ ರೋಗಗಳನ್ನು ಗುಣ ಪಡಿಸುತ್ತದೆ. ನಿಮ್ಮ ದಿನನಿತ್ಯದ ಆಹಾರದಲ್ಲಿ ವಿವಿಧ ರೂಪದಲ್ಲಿ ನುಗ್ಗೇಕಾಯಿ ಎಲೆಗಳನ್ನು ಸೇವಿಸುವುದರಿಂದ ದೇಹಕ್ಕೆ ದುಪ್ಪಟ್ಟು ಪ್ರಯೋಜನಗಳನ್ನು ನೀಡುತ್ತದೆ. ಈ ಎಲೆಗಳಲ್ಲಿ ಪ್ರೋಟೀನ್‌, ವಿಟಮಿನ್ ಬಿ 6, ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಇ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಸತು ಸೇರಿದಂತೆ ಅನೇಕ ಅಂಶಗಳಿವೆ. ಆದ್ದರಿಂದ ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ದೊರೆಯುತ್ತದೆ.

ನುಗ್ಗೇಕಾಯಿ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ. ಹಾಗಾಗಿ ಈ ಎಲೆಗಳನ್ನು ಸಕ್ಕರೆ ಕಾಯಿಲೆ ಇರುವವರು ಸೇವಿಸಿದರೆ ರೋಗದಿಂದ ಬೇಗ ಪರಿಹಾರ ಪಡೆಯಬಹುದು. ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಎಲೆಗಳನ್ನು ಸೇವಿಸುವುದರಿಂದ ರೋಗಗಳನ್ನು ಸುಲಭವಾಗಿ ತಡೆಯಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ತೂಕ ಕಳೆದುಕೊಳ್ಳಬಹುದು

ನುಗ್ಗೇಕಾಯಿ ಎಲೆಯಲ್ಲಿ ಹೆಚ್ಚಿನ ಪ್ರಮಾಣದ ಕ್ಲೋರೊಜೆನಿಕ್ ಆಮ್ಲ ಇರುವುದರಿಂದ ತೂಕ ಇಳಿಸಿಕೊಳ್ಳಲು ಬಯಸುವವರು ಮೊರಿಂಗಾ ಎಲೆಗಳನ್ನು ನಿಯಮಿತವಾಗಿ ಸೇವಿಸುವಂತೆ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಹಾಗಾಗಿ ಬೊಜ್ಜು ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುವ ಈ ಎಲೆಗಳನ್ನು ಪ್ರತಿದಿನ ಇಂತಿಷ್ಟು ಪ್ರಮಾಣದಲ್ಲಿ ಸೇವಿಸಿದರೆ ಉತ್ತಮ ಫಲಿತಾಂಶ ನೀಡುತ್ತದೆ.

ಮಧುಮೇಹ ಸಮಸ್ಯೆಗೆ ರಾಮಬಾಣ

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮದುಮೇಹದಿಂದ ಬಳಲುತ್ತಿದ್ದಾರೆ. ಪ್ರತಿ ಮನೆಯಲ್ಲೂ ಒಬ್ಬರಾದರೂ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಮಧುಮೇಹದಿಂದ ಸುಲಭವಾಗಿ ಪರಿಹಾರ ಪಡೆಯಲು ನುಗ್ಗೇಕಾಯಿ ಮರದ ತೊಗಟೆ ಮತ್ತು ಎಲೆಗಳನ್ನು ಸೇವಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಇವುಗಳಲ್ಲಿ ಮಧುಮೇಹ ವಿರೋಧಿ ಗುಣಗಳು ಹೆಚ್ಚಾಗಿದೆ. ಹಾಗಾಗಿ ಇವುಗಳನ್ನು ಸೇವಿಸಿದರೆ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು.

ಹೃದಯ ಸಂಬಂಧಿ ಸಮಸ್ಯೆಗೆ ಪರಿಹಾರ

ಆಧುನಿಕ ಜೀವನಶೈಲಿಯಿಂದಾಗಿ ಅನೇಕ ಜನರು ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ವಿಶೇಷವಾಗಿ ಹೃದಯಾಘಾತದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು ನುಗ್ಗೇಕಾಯಿ ಎಲೆಗಳು ಬಹಳ ಉಪಯುಕ್ತ. ಇದನ್ನು ನಿಯಮಿತವಾಗಿ ಆಹಾರದ ಭಾಗವಾಗಿ ಸೇವಿಸುವುದರಿಂದ ಹೃದಯಸಂಬಂಧಿ ಸಮಸ್ಯೆಗಳಿಂದ ಸುಲಭವಾಗಿ ಹೊರ ಬರಬಹುದು.