ಕನ್ನಡ ಸುದ್ದಿ  /  Lifestyle  /  Health Benefits Of Lotus Seeds

Health Benefits of Lotus seeds: ತಾವರೆ ಗೊತ್ತು, ಅದರ ಬೀಜಗಳಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯೋಗ ಇದೆ ಮಾಹಿತಿ ಇದ್ಯಾ..?

ತೂಕ ಇಳಿಸಿಕೊಳ್ಳುವವರು ಆಹಾರದಲ್ಲಿ ಪ್ರೋಟೀನ್ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ತಜ್ಞರು ಹೇಳುತ್ತಾರೆ. ಮಖಾನಾದಲ್ಲಿ ಪ್ರೋಟೀನ್‌ ಸಮೃದ್ಧವಾಗಿದೆ. ಇವುಗಳಲ್ಲಿರುವ ಪ್ರೊಟೀನ್ ತೂಕ ಇಳಿಸಲು ಸಹಾಯ ಮಾಡುತ್ತದೆ. ಇದನ್ನು ಸೇವಿಸಿದಾಗ ಹೊಟ್ಟೆ ತುಂಬಿದ ಅನುಭವವಾಗುತ್ತದೆ.

ತಾವರೆ ಬೀಜದ ಉಪಯೋಗಗಳು
ತಾವರೆ ಬೀಜದ ಉಪಯೋಗಗಳು (PC: Unsplash. Freepik)

ತಾವರೆ ಹೂವಿನ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ತಾವರೆ ಬೀಜದ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ತಾವರೆ ಬೀಜಗಳನ್ನು ಮಖಾನ, ಫಾಕ್ಸ್‌ ನಟ್‌ ಎಂದೂ ಕರೆಯಲಾಗುತ್ತದೆ. ಮಖಾನಾದಲ್ಲಿ ವಿವಿಧ ಪೌಷ್ಟಿಕಾಂಶ ಮತ್ತು ಔಷಧೀಯ ಗುಣಗಳಿವೆ. ಇದು ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದೆ.

ಮಖಾನಾದಲ್ಲಿ ಪ್ರೋಟೀನ್, ಫೈಬರ್ ಮತ್ತು ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ರಂಜಕ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ತಾವರೆ ಬೀಜದಲ್ಲಿ ಕೊಲೆಸ್ಟ್ರಾಲ್, ಸೋಡಿಯಂ ಮತ್ತು ಸ್ಯಾಚುರೇಟೆಡ್ ಕೊಬ್ಬು ಬಹಳ ಕಡಿಮೆ ಪ್ರಮಾಣದಲ್ಲಿರುತ್ತದೆ. ಇದನ್ನು ಸೇವಿಸುವುದು ನಿಮ್ಮ ಹೃದಯದ ಆರೋಗ್ಯಕ್ಕೆ ಕೂಡಾ ಒಳ್ಳೆಯದು. ಇದರಲ್ಲಿ ಉತ್ಕರ್ಷಣ ನಿರೋಧಕಗಳು, ಫ್ಲೇವನಾಯ್ಡ್‌ಗಳು ಮತ್ತು ಉರಿಯೂತದ ಗುಣಲಕ್ಷಣಗಳು ಸಮೃದ್ಧವಾಗಿವೆ. ಇದನ್ನು ಸೇವಿಸುವುದರಿಂದ ಹೃದ್ರೋಗ, ಕ್ಯಾನ್ಸರ್, ಮಧುಮೇಹ ಮತ್ತು ಸಂಧಿವಾತ ಸಮಸ್ಯೆಯನ್ನು ದೂರವಿರಬಹುದು. ಮಖಾನದಲ್ಲಿ ಕಡಿಮೆ ಗ್ಲೈಸೆಮಿಕ್ ಸೂಚಿ ಹೊಂದಿದ್ದು ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಕೆಲವರು ಇದನ್ನು ಫ್ರೈ ಮಾಡಿ ತಿಂದರೆ ಇನ್ನೂ ಕೆಲವರು ಗ್ರೇವಿ, ಖೀರ್, ಸಿಹಿತಿಂಡಿಗಳಂತಹ ವಿವಿಧ ಭಕ್ಷ್ಯಗಳನ್ನು ತಯಾರಿಸಬಹುದು.

ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಅಧ್ಯಯನದ ಪ್ರಕಾರ ಮಖಾನಾ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಉತ್ತಮ ಕೆಲಸ ಮಾಡುತ್ತದೆ. ಇದರಲ್ಲಿ ಸೋಡಿಯಂ ಕಡಿಮೆ ಮತ್ತು ಪೊಟ್ಯಾಸಿಯಮ್ ಅಧಿಕವಾಗಿದೆ. ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಸೋಡಿಯಂ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಖಾನಾದಲ್ಲಿರುವ ಮೆಗ್ನೀಸಿಯಮ್ ದೇಹದಲ್ಲಿನ ರಕ್ತ ಮತ್ತು ಆಮ್ಲಜನಕದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಮೆಗ್ನೀಸಿಯಮ್ ಕಡಿಮೆಯಾದರೆ, ಹೃದ್ರೋಗದ ಅಪಾಯ ಹೆಚ್ಚು.

ತೂಕ ಇಳಿಸಲು ಸಹಾಯಕಾರಿ

ಮಖಾನ ಸೇವನೆಯಿಂದ ತೂಕ ನಷ್ಟವಾಗುತ್ತದೆ. ತೂಕ ಇಳಿಸಿಕೊಳ್ಳುವವರು ಆಹಾರದಲ್ಲಿ ಪ್ರೋಟೀನ್ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ತಜ್ಞರು ಹೇಳುತ್ತಾರೆ. ಮಖಾನಾದಲ್ಲಿ ಪ್ರೋಟೀನ್‌ ಸಮೃದ್ಧವಾಗಿದೆ. ಇವುಗಳಲ್ಲಿರುವ ಪ್ರೊಟೀನ್ ತೂಕ ಇಳಿಸಲು ಸಹಾಯ ಮಾಡುತ್ತದೆ. ಇದನ್ನು ಸೇವಿಸಿದಾಗ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಮಖಾನಾ ಕಡಿಮೆ ಕ್ಯಾಲೋರಿ ಹೊಂದಿದೆ. USDA (ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್) ಪ್ರಕಾರ, ಒಂದು ಕಪ್ ಅಥವಾ 32 ಗ್ರಾಂ ಮಖಾನಾವು 106 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇವುಗಳಲ್ಲಿ ನಾರಿನ ಅಂಶ ಕೂಡಾ ಅಧಿಕವಾಗಿರುತ್ತದೆ.

ಮಧುಮೇಹಿಗಳಿಗೆ ಒಳ್ಳೆಯದು

ಮಖಾನಾ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿದೆ. ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಅಧಿಕ ತೂಕ ಮತ್ತು ಮಧುಮೇಹದ ವಿರುದ್ಧ ಹೋರಾಡುವ ಸಾಮರ್ಥ್ಯ ತಾವರೆ ಬೀಜಗಳಿಗೆ ಇದೆ.

ಹಲ್ಲುಗಳಿಗೆ ಬಹಳ ಉಪಯುಕ್ತ

ಕೀಲು ಸಮಸ್ಯೆ ಹಾಗೂ ಹಲ್ಲಿನ ಸಮಸ್ಯೆ ಇರುವವರು ಈ ಬೀಜಗಳನ್ನು ಹೆಚ್ಚಾಗಿ ಸೇವಿಸಬೇಕು. ಇವುಗಳಲ್ಲಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಅಧ್ಯಯನದ ಪ್ರಕಾರ ಮಖಾನ ತಿನ್ನುವುದರಿಂದ ವಸಡು ಸಮಸ್ಯೆ ನಿವಾರಣೆಯಾಗುತ್ತದೆ. ಹಲ್ಲಿನ ಕೊಳೆತವನ್ನು ತಡೆಯಲು ಇದು ಸಹಾಯ ಮಾಡುತ್ತದೆ.

ಮಖಾನಾವನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು?

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 4-5 ಮಖಾನ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ತಜ್ಞರು. ಆದರೆ ಪ್ರತಿದಿನ 25 ರಿಂದ 30 ಗ್ರಾಂ ಗಿಂತ ಹೆಚ್ಚು ಮಖಾನಾ ತಿನ್ನಬಾರದು. ಅತಿಯಾದರೆ ಅಮೃತವೂ ವಿಷ ಎಂಬ ಮಾತಿನಂತೆ ಮಖಾನವನ್ನು ಅತಿಯಾಗಿ ತಿಂದರೆ ಅಡ್ಡ ಪರಿಣಾಮಗಳು ಕಾಡುತ್ತವೆ.