ಕನ್ನಡ ಸುದ್ದಿ  /  ಜೀವನಶೈಲಿ  /  Benefits Of Red Okra: ಪೋಷಕಾಂಶಗಳ ಆಗರ ಕಾಶಿ ಬೆಂಡೆಕಾಯಿ..ಹೃದಯದ ಆರೋಗ್ಯ ಕಾಪಾಡುವ ಇದನ್ನು ಎಂದಾದ್ರೂ ತಿಂದಿದ್ದೀರಾ..?

Benefits of Red okra: ಪೋಷಕಾಂಶಗಳ ಆಗರ ಕಾಶಿ ಬೆಂಡೆಕಾಯಿ..ಹೃದಯದ ಆರೋಗ್ಯ ಕಾಪಾಡುವ ಇದನ್ನು ಎಂದಾದ್ರೂ ತಿಂದಿದ್ದೀರಾ..?

ಕೆಂಪು ಬೆಂಡೆಕಾಯಿಯಲ್ಲಿ ಪೋಷಕಾಂಶಗಳು ಬಹಳ ಸಮೃದ್ಧವಾಗಿದೆ. ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ಕೊಬ್ಬು, ಫೈಬರ್ ಮತ್ತು ಮೆಗ್ನೀಸಿಯಮ್ ಅಂಶಗಳಿವೆ. ಅಲ್ಲದೆ ಇದು ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ ಮತ್ತು ವಿಟಮಿನ್ ಬಿ 6 ಸಮೃದ್ಧವಾಗಿದೆ.

ಕೆಂಪು ಬೆಂಡೆಕಾಯಿ
ಕೆಂಪು ಬೆಂಡೆಕಾಯಿ (PC: Freepik)

ನಮ್ಮ ಪ್ರತಿದಿನದ ಆಹಾರದಲ್ಲಿ ಬೆಂಡೆಕಾಯಿ ಬಳಸುತ್ತೇವೆ. ಬೆಂಡೆಕಾಯಿಂದ ತಯಾರಿಸಲಾದ ಸಾಂಬಾರ್‌, ಗೊಜ್ಜು, ಪಲ್ಯ ಹಾಗೂ ಇನ್ನಿತರ ಫುಡ್‌ಗಳ ರುಚಿ ಮಾಡಿದ್ದೇವೆ. ಆದರೆ ಯಾರಾದ್ರೂ ಕೆಂಪು ಬೆಂಡೆಕಾಯಿ ತಿಂದಿದ್ದೀರಾ..? ಈ ಕೆಂಪು ಬೆಂಡೆಕಾಯನ್ನು ಕೇಸರಿ ಬೆಂಡೆಕಾಯಿ, ಕಾಶಿ ಬೆಂಡೆಕಾಯಿ ಎಂದೂ ಕರೆಯಲಾಗುತ್ತದೆ.

ಭಾರತೀಯ ವಿಜ್ಞಾನಿಗಳು 23 ವರ್ಷಗಳ ಕಠಿಣ ಪರಿಶ್ರಮದ ನಂತರ ಈ ಬಗೆಯ ಬೆಂಡೆಕಾಯಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಆದ್ದರಿಂದ ಇದನ್ನು ಕಾಶಿ ಬೆಂಡೆಕಾಯಿ ಎಂದು ಕರೆಯಲಾಗುತ್ತದೆ. ಈ ಬೆಂಡೆಕಾಯಿಯು ಸಾಮಾನ್ಯ ಬೆಂಡೆಕಾಯಿಗೆ ಹೋಲಿಸಿದರೆ ಲೋಳೆ ಕಡಿಮೆ ಹಾಗೂ ಹೆಚ್ಚಿನ ಪೋಷಕಾಂಶವನ್ನು ಹೊಂದಿದೆ. ಹಸಿರು ಬೆಂಡೆಕಾಯಲ್ಲಿ ಅಲ್ಪ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ವಿಟಮಿನ್-ಎ, ವಿಟಮಿನ್-ಬಿ1, ಬಿ2, ಬಿ3, ಬಿ9, ವಿಟಮಿನ್-ಸಿ, ವಿಟಮಿನ್-ಇ, ವಿಟಮಿನ್-ಕೆ, ಖನಿಜಗಳಾದ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್‌ ಅಂಶವಿದೆ. ಹಾಗೇ ಕೆಂಪು ಬೆಂಡೆಕಾಯಿಯಲ್ಲಿ ಕೂಡಾ ಆರೋಗ್ಯಕ್ಕೆ ಉತ್ತಮವಾದ ಸಾಕಷ್ಟು ಪೋಷಕಾಂಶಗಳಿವೆ. ಇದನ್ನು ಸೇವಿಸಿದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಜೊತೆಗೆ ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳು ದೂರಾಗುತ್ತವೆ ಎನ್ನಲಾಗಿದೆ.

ಕೆಂಪು ಬೆಂಡೆಕಾಯಿಯಲ್ಲಿ ಪೋಷಕಾಂಶಗಳು ಬಹಳ ಸಮೃದ್ಧವಾಗಿದೆ. ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ಕೊಬ್ಬು, ಫೈಬರ್ ಮತ್ತು ಮೆಗ್ನೀಸಿಯಮ್ ಅಂಶಗಳಿವೆ. ಅಲ್ಲದೆ ಇದು ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ ಮತ್ತು ವಿಟಮಿನ್ ಬಿ 6 ಸಮೃದ್ಧವಾಗಿದೆ. ಇದರಲ್ಲಿ ಸೋಡಿಯಂ ಅಂಶ ಕಡಿಮೆ ಇದ್ದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲ ಕೆಂಪು ಬೆಂಡೆಕಾಯಿ ಸೇವನೆಯಿಂದ ಕೊಲೆಸ್ಟ್ರಾಲ್‌ ಕೂಡಾ ಕಡಿಮೆ ಆಗುತ್ತದೆ. ಕೆಂಪು ಬೆಂಡೆಕಾಯಿ ಸುಮಾರು 94 ಪ್ರತಿಶತ ಬಹು ಅಪರ್ಯಾಪ್ತ ಕೊಬ್ಬನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಟ್ರೆಂಡಿಂಗ್​ ಸುದ್ದಿ

ಈ ಕಾಶಿ ಬೆಂಡೆಕಾಯಿಯಲ್ಲಿ ಶೇಕಡಾ 21 ರಷ್ಟು ಕಬ್ಬಿಣ ಮತ್ತು ಶೇಕಡಾ 5 ರಷ್ಟು ಪ್ರೋಟೀನ್ ಅಂಶವಿದೆ. ಇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಅಲ್ಲದೆ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ಉಸಿರಾಟ ಮತ್ತು ಜೀರ್ಣಕ್ರಿಯೆಯಂತಹ ಪ್ರಮುಖ ಕಾರ್ಯಗಳಿಗೆ ಶಕ್ತಿಯನ್ನು ಒದಗಿಸಲು ಚಯಾಪಚಯ ಕ್ರಿಯೆಯು ಅವಶ್ಯಕವಾಗಿದೆ. ಕೆಂಪು ಬೆಂಡೆಕಾಯಿಯಲ್ಲಿರುವ ಕಬ್ಬಿಣದ ಅಂಶವು ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.