Weight Loss Tips: ಎಷ್ಟೇ ಪ್ರಯತ್ನಪಟ್ಟರೂ ತೂಕ ಕಡಿಮೆಯಾಗುತ್ತಿಲ್ಲವೇ? ಇದೊಂದು ಪ್ಲಾನ್ ಟ್ರೈ ಮಾಡಿ, ರಿಸಲ್ಟ್ ಹೇಗಿದೆ ಹೇಳಿ
ತೂಕ ಕಡಿಮೆ ಮಾಡಿಕೊಳ್ಳಬೇಕು, ಸದಾ ಫಿಟ್ ಆಗಿರಬೇಕು ಎಂದು ಹಲವರು ಬಯಸುತ್ತಾರೆ. ತೂಕ ಇಳಿಸಲು ಹಲವು ರೀತಿಯ ಪ್ರಯತ್ನಗಳ ಮೊರೆ ಹೋಗಿರುತ್ತಾರೆ. ಆದರೆ ಫಲ ಸಿಗಲಿಲ್ಲ ಎಂದು ಕೊರಗುತ್ತಾರೆ. ಇಂಥವರು ಪ್ರತಿ ರಾತ್ರಿ ಇದೊಂದು ಉಪಾಯ ಪ್ರಯತ್ನಿಸಬಹುದು. ಒಂದೇ ತಿಂಗಳಿನಲ್ಲಿ ತೂಕ ಕಡಿಮೆ ಮಾಡಿಕೊಳ್ಳಲು ಇದರಿಂದ ನೆರವು ಸಿಗಬಹುದು. (ಬರಹ: ಐ.ಜಿ. ಕಿರಣ್ ಕುಮಾರ್)
ಹೊಸ ವರ್ಷ ಬರುತ್ತಿದೆ. ಈ ವರ್ಷ ಸ್ಟ್ರಿಕ್ಟ್ ಆಗಿ ಡಯೆಟ್ ಫಾಲೋ ಮಾಡಬೇಕು, ಜಂಕ್ ಫುಡ್ ತಿನ್ನಬಾರದು, ಹೇಗಾದರೂ ಮಾಡಿ ಸ್ಲಿಮ್ ಆಗಬೇಕು ಎನ್ನುವ ಸಂಕಲ್ಪವನ್ನು ಹಲವರು ಮಾಡಲಿದ್ದೀರಿ.. ಕೆಲಸ, ಜೀವನಶೈಲಿಯ ಪರಿಣಾಮ ಡಯೆಟ್ ಪಾಲಿಸಲು ಹಲವರಿಗೆ ಸಾಧ್ಯವಾಗಲಿಕ್ಕಿಲ್ಲ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ತೂಕ ಇಳಿಸಿಕೊಳ್ಳಲು ಬಯಸುವವರು ಅನುಸರಿಸಲೇಬೇಕಾದ ಅಂಶಗಳಿವು.
ಜಂಕ್ ಫುಡ್ ಬಿಟ್ಟುಬಿಡಿ
ನಾಲಿಗೆಯ ಮೇಲೆ ನಿಯಂತ್ರಣವಿಲ್ಲದೇ, ಕಂಡದ್ದೆಲ್ಲವನ್ನೂ ಸ್ವಾಹಾ ಮಾಡುವ ಹಲವರು ಇರುತ್ತಾರೆ. ಆದರೆ ಕೊನೆಗೆ ತೂಕ ಹೆಚ್ಚಾಗಿ, ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಪರಿತಪಿಸುತ್ತಾರೆ. ಹಾಗಾಗದಂತೆ ಮೊದಲೇ ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದರೆ ಉತ್ತಮ. ಆರೋಗ್ಯಕರ ಶೈಲಿಯಲ್ಲಿ ತೂಕ ಇಳಿಸಲು ಇದೊಂದು ಟಿಪ್ಸ್ ಟ್ರೈ ಮಾಡಿ.. ಖಂಡಿತವಾಗಿಯೂ ನೀವು ಇದನ್ನು ಸರಿಯಾಗಿ ಅನುಸರಿಸಿದರೆ, ತೂಕ ಇಳಿಕೆಯಾಗುತ್ತದೆ.
ಪ್ರತಿ ರಾತ್ರಿ ಇದೊಂದು ಕೆಲಸ ಮಾಡಿ
ಹೆಲ್ತಿ ಡಯೆಟ್ ಪಾಲಿಸಲು ನಿಮಗೆ ಸಾಧ್ಯವಾಗುತ್ತಿಲ್ಲ ಎಂದು ಚಿಂತಿಸಬೇಡಿ. ಸಂಜೆ 6 ಗಂಟೆಯ ನಂತರ ಹೆಚ್ಚಿನ ಕಾರ್ಬೋಹೈಡ್ರೇಟ್ ಇರುವ ಆಹಾರವನ್ನು ಸೇವಿಸಬೇಡಿ. ಹೆಚ್ಚಿನ ಪೋಷಕಾಂಶ ಹೊಂದಿರುವ ಆಹಾರ ಸೇವನೆಯಿಂದ ಅಜೀರ್ಣದ ಸಮಸ್ಯೆ ಕಾಣಿಸಿಕೊಳ್ಳಬಹುದು. ನಿದ್ರೆಯ ಗುಣಮಟ್ಟ ಕಡಿಮೆಯಾಗಬಹುದು ಮತ್ತು ಅದರಿಂದ ದೇಹದಲ್ಲಿ ಕೊಬ್ಬು ಶೇಖರವಾಗಬಹುದು. ಇದು ಕ್ರಮೇಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಸಂಜೆ 6ರ ನಂತರ ಅಧಿಕ ಕಾರ್ಬೋಹೈಡ್ರೇಟ್ ಇರುವ ಆಹಾರಗಳಾದ ರೊಟ್ಟಿ, ಅನ್ನ, ಮೈದಾದಿಂದ ಮಾಡಿದ ಆಹಾರ ಪದಾರ್ಥವನ್ನು ತ್ಯಜಿಸಿ.
ಪ್ರೊಟೀನ್ ಇರುವ ಆಹಾರ ಸೇವಿಸಿ
ಕಾರ್ಬೋ ಆಹಾರವನ್ನು ತ್ಯಜಿಸಿ, ಪ್ರೊಟೀನ್ ಅಧಿಕವಾಗಿರುವ ಆಹಾರವನ್ನು ಸೇವಿಸಲು ಪ್ರಯತ್ನಿಸಿ. ಪ್ರೊಟೀನ್ ಇರುವ ಆಹಾರ ಸೇವನೆಯಿಂದ ದೇಹಕ್ಕೆ ಅಗತ್ಯವಾದ ನಾರಿನ ಅಂಶ, ಪೋಷಕಾಂಶ ದೊರೆಯುತ್ತದೆ. ಅದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹೀಗಾಗಿ ಸಂಜೆಯ ಬಳಿಕ ಅನಗತ್ಯ ಮತ್ತು ಜಂಕ್ ಫುಡ್ ಸೇವನೆಯಿಂದ ದೂರವಿರಬಹುದು.
ತರಕಾರಿ, ಹಣ್ಣು ಸೇವಿಸಿ
ಊಟ ಬಿಟ್ಟರೆ ಅದರಿಂದ ತೊಂದರೆಯಾಗುವುದಿಲ್ಲವೇ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಊಟ ಅಂದರೆ, ಅಕ್ಕಿಯಿಂದ, ಮೈದಾ ಮತ್ತು ಗೋಧಿ ಹಿಟ್ಟಿನಿಂದ ತಯಾರಿಸಿದ ಆಹಾರ ತ್ಯಜಿಸುವುದು ಎಂದರ್ಥ. ಅದರ ಬದಲು, ಬೇಯಿಸಿದ ಇಲ್ಲವೇ ಹಸಿಯಾದ ತರಕಾರಿ, ಹಣ್ಣುಗಳನ್ನು ಸೇವಿಸಬಹುದು. ಹೀಗೆ ಮಾಡಿದರೆ, ಆರೋಗ್ಯಕರ ಜೀವನಶೈಲಿ ನಿಮ್ಮದಾಗುತ್ತದೆ. ಜತೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದನ್ನು ಮರೆಯಬೇಡಿ.
ರಾತ್ರಿ ಊಟ ಬಿಟ್ಟರೆ ಹಲವು ಪ್ರಯೋಜನ
ಸಂಜೆಯ ನಂತರ ಅಧಿಕ ಕ್ಯಾಲೊರಿ ಮತ್ತು ಕಾರ್ಬೋಹೈಡ್ರೇಟ್ ಇರುವ ಆಹಾರ ತ್ಯಜಿಸುವುದರಿಂದ ಹಲವು ಪ್ರಯೋಜನಗಳಿವೆ. 6 ಗಂಟೆಗೆ ಆಹಾರ ಸೇವಿಸಿದರೆ, ಜೀರ್ಣಕ್ರಿಯೆ ಸುಗಮವಾಗುತ್ತದೆ, ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ. ಅಧಿಕ ಕೊಬ್ಬಿನಾಂಶ ಇರುವ ಆಹಾರ ದೇಹಕ್ಕೆ ಸೇರುವುದಿಲ್ಲ. ಬೇಗನೆ ಮತ್ತು ಅಲ್ಪ ಪ್ರಮಾಣದ ಆಹಾರ ಸೇವನೆ ಲಿವರ್‌ನ ಅರೋಗ್ಯಕ್ಕೆ ಉತ್ತಮ. ಅಧಿಕ ರಕ್ತದೊತ್ತಡ ಮತ್ತು ಶುಗರ್‌ನಂತಹ ಸಮಸ್ಯೆಗಳು ದೂರಾಗುತ್ತವೆ.
(ಗಮನಿಸಿ: ಇದು ಪ್ರಚಲಿತ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ ಆಧರಿಸಿದ ಬರಹ. ಅನುಸರಿಸುವ ಮೊದಲು ತಜ್ಞರ ಅಭಿಪ್ರಾಯ ಪಡೆಯುವುದು ಒಳ್ಳೆಯದು.)