ಕನ್ನಡ ಸುದ್ದಿ  /  ಜೀವನಶೈಲಿ  /   Summer Tips: ಉಸ್ಸಪ್ಪಾ, ಸೆಕೆ ಶುರು ಆಯ್ತಲ್ವಾ.. ಆರೋಗ್ಯ ತಜ್ಞರು ನಿಮಗಾಗಿ ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ ನೋಡಿ

Summer Tips: ಉಸ್ಸಪ್ಪಾ, ಸೆಕೆ ಶುರು ಆಯ್ತಲ್ವಾ.. ಆರೋಗ್ಯ ತಜ್ಞರು ನಿಮಗಾಗಿ ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ ನೋಡಿ

ಸದಾ ಕಾಲ ಬಿಸಿಲಿನಲ್ಲಿ ಕೆಲಸ ಮಾಡುವವರು, ಹೃದ್ರೋಗ ಅಥವಾ ಅಧಿಕ ರಕ್ತದೊತ್ತಡ ಇರುವವರು, ಗರ್ಭಿಣಿಯರು, 65 ವರ್ಷ ಮೇಲ್ಪಟ್ಟವರು, ನವಜಾತ ಶಿಶುಗಳು, ಚಿಕ್ಕ ಮಕ್ಕಳು ಎಲ್ಲರೂ ಜಾಗರೂಕರಾಗಿರುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಮುಂದಿನ ದಿನಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತದೆ.

ಬಿಸಿಲಿನ ಧಗೆಯಿಂದ ಪಾರಾಗಳು ಉಪಯುಕ್ತ ಸಲಹೆ
ಬಿಸಿಲಿನ ಧಗೆಯಿಂದ ಪಾರಾಗಳು ಉಪಯುಕ್ತ ಸಲಹೆ

ಇಷ್ಟು ದಿನಗಳ ಕಾಲ ಚಳಿಯಿಂದ ಬೆಚ್ಚಗಿದ್ದ ಜನರು ಈಗ ಸೆಕೆಯಿಂದ ಪರದಾಡುವ ಸಮಯ ಬಂದಿದೆ. ಹೌದು, ಈಗಾಗಲೇ ಸೆಕೆ ಆರಂಭವಾಗಿದೆ. ಮಾರ್ಚ್‌ ಆರಂಭದಲ್ಲೇ ಇಷ್ಟರ ಮಟ್ಟಿಗೆ ಇರುವ ಬಿಸಿಲು ಇನ್ನು ಏಪ್ರಿಲ್‌, ಮೇ ತಿಂಗಳಲ್ಲಿ ಹೇಗೆ ಇರಲಿದೆಯೋ ಎಂಬ ಭಯ ಕಾಡುತ್ತಿದೆ. ಈ ನಡುವೆ ಭಾರತೀಯ ಹವಾಮಾನ ಇಲಾಖೆಯು ಜನರಿಗೆ ಕೆಲವೊಂದು ಮುನ್ಸೂಚನೆ ನೀಡಿದೆ.

ಟ್ರೆಂಡಿಂಗ್​ ಸುದ್ದಿ

ಮಾರ್ಚ್‌ನಿಂದ ಮೇ ತಿಂಗಳವರೆಗೆ ಕಾಡುವ ಬೇಸಿಗೆ ವೇಳೆ ಏನು ಮಾಡಬೇಕು, ಏನು ಮಾಡಬಾರದು ಎಂಬ ಪಟ್ಟಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಸದಾ ಕಾಲ ಬಿಸಿಲಿನಲ್ಲಿ ಕೆಲಸ ಮಾಡುವವರು, ಹೃದ್ರೋಗ ಅಥವಾ ಅಧಿಕ ರಕ್ತದೊತ್ತಡ ಇರುವವರು, ಗರ್ಭಿಣಿಯರು, 65 ವರ್ಷ ಮೇಲ್ಪಟ್ಟವರು, ನವಜಾತ ಶಿಶುಗಳು, ಚಿಕ್ಕ ಮಕ್ಕಳು ಎಲ್ಲರೂ ಜಾಗರೂಕರಾಗಿರುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಮುಂದಿನ ದಿನಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಆರೋಗ್ಯ ತಜ್ಞರು ಶಿಫಾರಸು ಮಾಡಿರುವ ಕೆಲವೊಂದು ಸಲಹೆಗಳನ್ನು ನೋಡೋಣ.

ಯಾವಾಗಲೂ ಹೈಡ್ರೇಟ್‌ ಆಗಿರಿ

ಕಠಿಣ ಬೇಸಿಗೆಯ ವಾತಾವರಣದಲ್ಲಿ ನಮ್ಮ ದೇಹದಿಂದ ಬೆವರು ಹೆಚ್ಚಾಗಿ ಹೊರ ಹೋಗುವುದರಿಂದ ದೇಹದಲ್ಲಿ ನಿರ್ಜಲೀಕರಣ ಶುರುವಾಗುತ್ತದೆ. ಇದರಿಂದ ಸುಸ್ತು ಹೆಚ್ಚಾಗಿ ಮುಂದೆ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಪ್ರತಿಯೊಬ್ಬರೂ ಹೈಡ್ರೇಟ್‌ ಆಗಿರುವುದು ಬಹಳ ಮುಖ್ಯ. ಅದಕ್ಕಾಗಿ ಆಗಾಗ್ಗೆ ನೀರು ಕುಡಿಯಿರಿ. ಪ್ರಯಾಣದ ಸಮಯದಲ್ಲಿ ಬಾಟಲ್‌ನಲ್ಲಿ ನೀರು ತೆಗೆದುಕೊಂಡು ಹೋಗುವುದನ್ನು ಮಾತ್ರ ಮರೆಯಬೇಡಿ. ಕಲ್ಲಂಗಡಿ, ಸೌತೆಕಾಯಿ, ನಿಂಬೆ, ಕಿತ್ತಳೆ ಜೊತೆಗೆ ಉಪ್ಪು ಸಹಿತ ಪಾನೀಯಗಳಾದ ನಿಂಬೆ ನೀರು, ಮಜ್ಜಿಗೆ, ಲಸ್ಸಿ, ಹಣ್ಣಿನ ರಸಗಳು ಅಥವಾ ಒಆರ್‌ಎಸ್‌ ಸೇವಿಸುವಂತೆ ಆರೋಗ್ಯ ಇಲಾಖೆ ಶಿಫಾರಸು ಮಾಡಿದೆ.

ಆದಷ್ಟು ನೆರಳಿನಲ್ಲಿ ಇರಿ

ನೀವು ಹೊರಗೆ ಕೆಲಸ ಮಾಡುದಿದ್ದರೆ, ಆದಷ್ಟು ಮನೆಯಲ್ಲೇ ಇರುವುದು ಒಳ್ಳೆಯದು. ಒಂದು ವೇಳೆ ಹೊರಗೆ ಹೋಗಬೇಕಾದ ಪರಿಸ್ಥಿತಿ ಬಂದರೆ ಛತ್ರಿ ತೆಗೆದುಕೊಂಡು ಹೋಗಿ. ಫ್ಯಾನ್, ಕೂಲರ್, ಎಸಿ ಬಳಸಿ, ತಣ್ಣೀರು ಸ್ನಾನ ಮಾಡಿ, ಹೊರಗೆ ಹೋಗುವಾಗ ತಲೆಗೆ ಟೋಪಿ, ಬಟ್ಟೆಯಿಂದ ತಲೆಯನ್ನು ಮುಚ್ಚಲು ಮರೆಯಬೇಡಿ. ಮುಖ್ಯವಾಗಿ ತಿಳಿ-ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಹೊರಗೆ ಹೋಗದಂತೆ ಆರೋಗ್ಯ ಸಚಿವಾಲಯ ಸೂಚಿಸಿದೆ.

ಮದ್ಯ ಹಾಗೂ ಮಾಂಸವನ್ನು ಆದಷ್ಟು ಅವಾಯ್ಡ್‌ ಮಾಡಿ

ಆಲ್ಕೋಹಾಲ್, ಟೀ, ಕಾಫಿ, ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ತ್ಯಜಿಸಬೇಕು. ಬದಲಾಗಿ, ನೀವು ತೆಂಗಿನ ನೀರು ಮತ್ತು ಹಣ್ಣಿನ ರಸಗಳಂತಹ ಆರೋಗ್ಯಕರ ವಸ್ತುಗಳನ್ನು ಕುಡಿಯಬಹುದು. ಹೆಚ್ಚಿನ ಪ್ರೋಟೀನ್ ಹೊಂದಿರುವ ಮಾಂಸ ಸೇವನೆ ತಪ್ಪಿಸಿ ಮತ್ತು ತಾಜಾವಾಗಿ ಬೇಯಿಸಿದ ಆಹಾರವನ್ನು ಸೇವಿಸಿ. ಉಪ್ಪು, ಮೆಣಸಿನಕಾಯಿ, ಎಣ್ಣೆ, ಇನ್ನಿತರ ಕರಿದ ಪದಾರ್ಥಗಳು ಹಾಗೂ ಮಸಾಲೆಯುಕ್ತ ಆಹಾರಗಳನ್ನು ಕಡಿಮೆ ಮಾಡಿ. ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಿ. ಒಂದೇ ಬಾರಿಗೆ ದೊಡ್ಡ ಪ್ರಮಾಣದ ಆಹಾರವನ್ನು ಸೇವಿಸದೆ ಕಡಿಮೆ ಪ್ರಮಾಣದ ಆಹಾರವನ್ನು ಹೆಚ್ಚಾಗಿ ಸೇವಿಸಿ.

ಇದರ ಜೊತೆಗೆ ಹೊರಗೆ ಬಿಸಿಲು ಹೆಚ್ಚಾಗಿದ್ದಾಗ ಶ್ರಮದಾಯಕ ಕೆಲಸ ಅಥವಾ ವ್ಯಾಯಾಮ ಮಾಡದಂತೆ ಎಚ್ಚರಿಕೆ ವಹಿಸಿ. ಆದಷ್ಟು ನಿಮ್ಮ ಮನೆಯ ಸುತ್ತ ಗಿಡಗಳು ಇದ್ದರೆ ನೀವು ಉತ್ತಮ ಗಾಳಿ ಪಡೆಯಬಹುದು. ಹಾಗೇ ಬಿಸಿಲಿನಿಂದ ಹೊರ ಹೋಗಿ ಬರುತ್ತಿದ್ದಂತೆ ಕಡ್ಲೆಹಿಟ್ಟಿನಲ್ಲಿ ಮುಖ ತೊಳೆಯಿರಿ. ಬಿಸಿಲಿಗೆ ಹೋದಾಗ ಉತ್ತಮ ಗುಣಮಟ್ಟದ ಸನ್‌ಸ್ಕ್ರೀನ್‌ ಲೋಶನ್‌ ಹಚ್ಚಿ. ಹೀಗೆ ಮಾಡಿದರೆ ಟ್ಯಾನ್‌ ಕಡಿಮೆ ಆಗುತ್ತದೆ. ತಣ್ಣನೆಯ ಅನುಭವ ಕೂಡಾ ನೀಡುತ್ತದೆ.