Fitness Tips: ಜಿಮ್‌ಗೆ ಹೋಗದೆ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಇಲ್ಲಿದೆ ಉಪಾಯ
ಕನ್ನಡ ಸುದ್ದಿ  /  ಜೀವನಶೈಲಿ  /  Fitness Tips: ಜಿಮ್‌ಗೆ ಹೋಗದೆ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಇಲ್ಲಿದೆ ಉಪಾಯ

Fitness Tips: ಜಿಮ್‌ಗೆ ಹೋಗದೆ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಇಲ್ಲಿದೆ ಉಪಾಯ

Health Fitness Weight Loss: ಫಿಟ್‌ನೆಸ್‌ ಕಾಪಾಡಿಕೊಳ್ಳುವುದು ಇಂದಿನ ಜಮಾನದಲ್ಲಿ ನಿಜಕ್ಕೂ ಸವಾಲು. ಹಾಗಂತ ಎಲ್ಲರೂ ಜಿಮ್‌ಗೆ ಹೋಗಿ ಬೆವರಿಳಿಸಲು ಸಾಧ್ಯವಿಲ್ಲ. ಆದರೆ ಫಿಟ್‌ನೆಸ್‌ ಕಾಪಾಡಿಕೊಳ್ಳದೇ ಇರಲು ಆಗುವುದಿಲ್ಲ. ಜಿಮ್‌ ಹೋಗದೆ ಫಿಟ್‌ನೆಸ್‌ ಕಾಪಾಡಿಕೊಳ್ಳುವ ಆಸೆ ಇದ್ದರೆ ಹೀಗೆ ಮಾಡಿ.

ಈಜು (ಎಡಚಿತ್ರ), ಏರಿಯಲ್‌ ಯೋಗ (ಬಲಚಿತ್ರ)
ಈಜು (ಎಡಚಿತ್ರ), ಏರಿಯಲ್‌ ಯೋಗ (ಬಲಚಿತ್ರ)

ಇತ್ತೀಚೆಗೆ ಫಿಸಿಕಲ್‌ ಫಿಟ್ನೆಸ್‌ ಬಗ್ಗೆ ಜನರು ಹೆಚ್ಚು ಗಮನ ಹರಿಸುತ್ತಿದ್ದಾರೆ. ದೇಹ ತೂಕ ಹೆಚ್ಚಳವಾಗುವುದು, ಹೆಚ್ಚುತ್ತಿರುವ ಜೀವನಶೈಲಿಗೆ ಸಂಬಂಧಿಸಿದ ತೊಂದರೆಗಳು ಇದಕ್ಕೆ ಪ್ರಮುಖ ಕಾರಣವಾಗಿದೆ. ಅಲ್ಲದೇ ಪ್ರತಿನಿತ್ಯ ದೈಹಿಕ ಚಟುವಟಿಕೆಯಲ್ಲಿ ತೊಡಗುವುದು ಅವಶ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ. ದೈಹಿಕ ವ್ಯಾಯಾಮದಿಂದ ಹಲವು ರೀತಿಯ ಪ್ರಯೋಜನಗಳಿವೆ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಹೃದ್ರೋಗ, ಮಧುಮೇಹ, ರೋಗನಿರೋಧಕ ಶಕ್ತಿ ಹೆಚ್ಚಳ, ವಯಸ್ಸಿನ ಲಕ್ಷಣಗಳು ಕಡಿಮೆ ಮಾಡುವುದು, ಮಾನಸಿಕ ಸಮಸ್ಯೆಗಳ ನಿಯಂತ್ರಣ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿಗೆ ಇದು ಪರಿಹಾರ ಒದಗಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಲೇಖನಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಆದರೆ ಇದೆಲ್ಲದರ ನಡುವೆಯು ಕೆಲವೊಮ್ಮೆ ವ್ಯಾಯಾಮ ಅಪಾಯ ಉಂಟು ಮಾಡುವ ಸಾಧ್ಯತೆಯೂ ಇದೆ. ವ್ಯಾಯಾಮಕ್ಕೆ ಮೊದಲ ಬಾರಿ ತೆರೆದುಕೊಳ್ಳುವವರು ಹಾಗೂ ಹಲವು ದಿನಗಳ ದೀರ್ಘ ವಿರಾಮ ಪಡೆದು ನಂತರ ವ್ಯಾಯಾಮಕ್ಕೆ ಮರಳುವವರಲ್ಲಿ ತೊಂದರೆ ಕಾಣಿಸಬಹುದು.

ದೈಹಿಕ ಸಮಸ್ಯೆಗಳು, ಕೆಲಸದ ಒತ್ತಡ, ಅತಿಯಾಗಿ ಬೆವರುವುದು, ಆಯಾಸ, ಬೇಸರ ಹಾಗೂ ಖರ್ಚು ಸೇರಿದಂತೆ ಈ ಕೆಲವು ಪ್ರಮುಖ ಕಾರಣಗಳಿಂದ ಜನರು ವ್ಯಾಯಾಮ ಮಾಡಲು ಹಿಂದೇಟು ಹಾಕಬಹುದು. ಹಾಗಂತ ದೇಹವನ್ನು ಜಡವಾಗಿ ಇರಿಸಿಕೊಳ್ಳುವುದು ಸರಿಯಲ್ಲ. ಇದರಿಂದ ಇಲ್ಲದ ಸಮಸ್ಯೆಗಳು ಕಾಡಬಹುದು. ಅದಕ್ಕಾಗಿ ಅಸಾಂಪ್ರದಾಯಿಕ ಫಿಟ್‌ನೆಟ್‌ ಟ್ರೆಂಡ್‌ಗಳನ್ನು ಅನುಸರಿಸುವುದು ಉತ್ತಮ. ಹಾಗಾದರೆ ಜಿಮ್‌ಗೆ ಹೋಗದೇ ಫಿಟ್‌ನೆಸ್‌ ಕಾಯ್ದುಕೊಳ್ಳುವುದು ಹೇಗೆ? ಇಲ್ಲಿದೆ ನಿಮ್ಮ ಪ್ರಶ್ನೆಗೆ ಉತ್ತರ.

ಈಜು

ಈಜುವುದು ಕೂಡ ವ್ಯಾಯಾಮದ ಒಂದು ವಿಧಾನ. ಈಜುವುದರಿಂದ ಇಡೀ ದೇಹಕ್ಕೆ ವ್ಯಾಯಾಮ ಸಿಗುತ್ತದೆ. ಇದು ಕೀಲುಗಳ ಬಲವರ್ಧನೆಗೂ ಸಹಕಾರಿ. ನದಿ, ಹೊಳೆಯಂತಹ ಜಾಗ ಹಾಗೂ ಸ್ಪಿಮ್ಮಿಂಗ್‌ ಫೂಲ್‌ನಲ್ಲೂ ಈಜಲು ಕಲಿಯಬಹುದು.

ಡಾನ್ಸ್‌

ನೃತ್ಯಾಧಾರಿತ ವರ್ಕೌಟ್‌ಗಳನ್ನು ಮಾಡುವ ಮೂಲಕ ದೇಹವನ್ನು ಫಿಟ್‌ ಆಗಿರಿಸಿಕೊಳ್ಳುವ ಜೊತೆಗೆ ಮನಸ್ಸಿಗೂ ಖುಷಿ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಜುಂಬಾ, ಏರೋಬಿಕ್‌ನಂತಹ ಡಾನ್ಸ್‌ ಆಧಾರಿತ ವ್ಯಾಯಾಮಗಳು ಹೆಚ್ಚು ಚಾಲ್ತಿ ಪಡೆದಿವೆ. ಡಾನ್ಸ್‌ ಮಾಡುವುದರಿಂದ ದೇಹಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಜುಂಬಾ, ಹಿಪ್‌ಹಾಪ್‌ ಹಾಗೂ ಬ್ಯಾಲೆಯಂತಹ ನೃತ್ಯ ಪ್ರಕಾರಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಏರಿಯಲ್‌ ಯೋಗ

ಏರಿಯಲ್‌ ಯೋಗವು ಒಂದು ಪ್ರಕಾರದ ಯೋಗವಾಗಿದ್ದು, ಬಟ್ಟೆಯ ಸಹಾಯದಿಂದ ಗಾಳಿಯಲ್ಲಿ ತೇಲಾಡುತ್ತಾ ಈ ಯೋಗವನ್ನು ಮಾಡಲಾಗುತ್ತದೆ. ಈ ಯೋಗ ವಿಧಾನದ ವಿವಿಧ ಪ್ರಕಾರಗಳು ದೇಹವನ್ನು ದೃಢವಾಗಿಸುತ್ತದೆ. ಇದು ದೇಹದ ನಮ್ಯತೆ ಹಾಗೂ ಸಮತೋಲನವನ್ನು ಸುಧಾರಿಸುತ್ತದೆ. ಈ ಯೋಗವನ್ನು ಆರಂಭಿಸುವ ಮೊದಲು ತಜ್ಞರಿಂದ ತರಬೇತಿ ಪಡೆಯುವುದು ಉತ್ತಮ.

ಟ್ರ್ಯಾಂಪೊಲೈನ್‌ ವರ್ಕೌಟ್‌

ಟ್ರ್ಯಾಂಪೊಲೈನ್‌ ವರ್ಕೌಟ್‌ ಹೃದಯ, ದೇಹದ ಸಾಮರ್ಥ್ಯ ಹಾಗೂ ಶಕ್ತಿಯನ್ನು ಸಮತೋಲನಗೊಳಿಸುತ್ತದೆ. ಇದು ಕಡಿಮೆ ಪ್ರಭಾವದ ವ್ಯಾಯಾಮವಾಗಿದ್ದು ಸಂಪೂರ್ಣ ದೇಹದ ಸ್ನಾಯುಗಳನ್ನು ಉತ್ತೇಜಿಸುತ್ತದೆ. ಇದು ಕೀಲುಗಳ ಮೇಲೆ ಒತ್ತಡ ಹೇರುವುದಿಲ್ಲ. ಜಂಪ್‌ ಮಾಡುವ ರೀತಿಯಲ್ಲಿರುವ ಈ ವ್ಯಾಯಾಮ ಮನಸ್ಸಿಗೆ ಖುಷಿ ನೀಡುತ್ತದೆ.

ಅಕ್ವಾಟಿಕ್‌ ವರ್ಕೌಟ್‌

ಅಕ್ವಾ ಸೈಕ್ಲಿಂಗ್‌, ಅಕ್ವಾ ಜುಂಬಾ ಹಾಗೂ ಇತರ ಅಕ್ವಾಟಿಕ್‌ ವ್ಯಾಯಾಮಗಳ ಪ್ರಭಾವ ಕಡಿಮೆ ಇರುತ್ತದೆ. ಆದರೆ ಇವು ದೇಹದ ಫಿಟ್ನೆಸ್‌ ಕಾಯ್ದುಕೊಳ್ಳುವಲ್ಲಿ ಸಹಾಯ ಮಾಡುತ್ತವೆ. ನೀರಿನಲ್ಲಿ ವ್ಯಾಯಾಮ ಮಾಡುವುದನ್ನು ಅಕ್ವಾಟಿಕ್‌ ವ್ಯಾಯಾಮ ಎನ್ನುತ್ತಾರೆ, ಇದು ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಹೃದಯರಕ್ತನಾಳದ ಫಿಟ್ನೆಸ್‌ ಅನ್ನು ಹೆಚ್ಚಿಸುತ್ತದೆ.

ಪಾರ್ಕರ್‌

ಓಟ ಮತ್ತು ಪಾರ್ಕರ್‌ ಎರಡು ಪ್ರಮುಖ ಚಟುವಟಿಕೆಗಳಾಗಿದ್ದು ಇವು ದೇಹದ ಸಮತೋಲನ ಕಾಪಾಡಿಕೊಳ್ಳಲು ನೆರವಾಗುತ್ತವೆ. ಇದು ಮಾನಸಿಕ ಹಾಗೂ ದೈಹಿಕ ಕ್ರಿಯಾಶೀಲತೆಗೆ ಅವಶ್ಯ.

ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ದೈಹಿಕ ವ್ಯಾಯಮಗಳತ್ತ ಗಮನ ನೀಡುವುದು ಅವಶ್ಯ. ಆದರೆ ಯಾವುದೇ ವ್ಯಾಯಾಮದ ಪ್ರಕಾರವನ್ನು ಆರಂಭಿಸುವ ಮೊದಲ ವೈದ್ಯರು ಹಾಗೂ ತಜ್ಞರ ಸಲಹೆ ಪಡೆಯುವುದು ಉತ್ತಮ.

Whats_app_banner