ಶೀತ, ಕೆಮ್ಮಿನಿಂದ ಮುಕ್ತಿ ನೀಡುತ್ತೆ ರಸಂ: ರೋಗನಿರೋಧಕ ಶಕ್ತಿ ಹೆಚ್ಚಿಸುವ ದಕ್ಷಿಣ ಭಾರತದ ಸಾಂಪ್ರದಾಯಿಕ ರೆಸಿಪಿ ಮಾಡುವುದು ಹೀಗೆ
ದಕ್ಷಿಣ ಭಾರತದ ಸಾಂಪ್ರದಾಯಿಕ ರಸಂ ಇಮ್ಯೂನಿಟಿ ಬೂಸ್ಟರ್ ಕೂಡ ಆಗಿದೆ. ಅನ್ನದೊಂದಿಗೆ ರಸಂ ಸವಿಯಲು ತುಂಬಾ ರುಚಿಕರವಾಗಿರುತ್ತದೆ. ಮಾತ್ರವಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೂಡ ಇದು ತುಂಬಾನೇ ಉಪಯುಕ್ತವಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ರಸಂ ಮಾಡುವುದು ತುಂಬಾನೇ ಸುಲಭ. ಇಲ್ಲಿದೆ ಪಾಕವಿಧಾನ.
ಚಳಿಗಾಲ ಶುರುವಾಗಿದ್ದು, ಈ ಋತುವಿನಲ್ಲಿ ಶೀತ, ಕೆಮ್ಮು, ಜ್ವರದಿಂದ ಬಳಲುವುದು ಸಾಮಾನ್ಯವಾಗಿದೆ. ಈ ರೀತಿಯ ಲಕ್ಷಣವಿದ್ದಾಗ ರಸಂ ಸೇವಿಸುವುದರಿಂದ ಪ್ರಯೋಜನ ಪಡೆಯಬಹುದು. ದಕ್ಷಿಣ ಭಾರತದ ಸಾಂಪ್ರದಾಯಿಕ ರಸಂ ಇಮ್ಯೂನಿಟಿ ಬೂಸ್ಟರ್ ಕೂಡ ಆಗಿದೆ. ಅನ್ನದೊಂದಿಗೆ ರಸಂ ಸವಿಯಲು ತುಂಬಾ ರುಚಿಕರವಾಗಿರುತ್ತದೆ. ಮಾತ್ರವಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೂಡ ಇದು ತುಂಬಾನೇ ಉಪಯುಕ್ತವಾಗಿದೆ. ರಸಂ ಒಂದು ಮಸಾಲೆಯುಕ್ತ ಸೂಪ್ ಆಗಿದ್ದು, ಇದನ್ನು ಸಾಮಾನ್ಯವಾಗಿ ಹುಣಸೆಹಣ್ಣು, ಟೊಮೆಟೊಗಳು, ಮಸಾಲೆ ಪುಡಿಯ ಮಿಶ್ರಣದಿಂದ ತಯಾರಿಸಲಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ರಸಂ ಮಾಡುವುದು ತುಂಬಾನೇ ಸುಲಭ. ಥಟ್ಟಂತ ಆಗುವ ರೆಸಿಪಿಯಿದು. ಇಲ್ಲಿದೆ ಪಾಕವಿಧಾನ.
ರೋಗನಿರೋಧಕ ಶಕ್ತಿ ಹೆಚ್ಚಿಸುವ ರಸಂ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಕರಿಮೆಣಸು- 1 ಚಮಚ, ಒಣ ಕೆಂಪು ಮೆಣಸಿನಕಾಯಿ- 6, ಕರಿಬೇವಿನ ಎಲೆಗಳು- 10, ಹಸಿರು ಮೆಣಸಿನಕಾಯಿ- 4, ಉಪ್ಪು- ರುಚಿಗೆ ತಕ್ಕಷ್ಟು, ಸಾಸಿವೆ- 1 ಟೀ ಚಮಚ, ನೀರು- 1 ಲೀಟರ್, ಜೀರಿಗೆ- 1 ಟೀ ಚಮಚ, ಲವಂಗ- 3, ಬೆಳ್ಳುಳ್ಳಿ- 5 ಎಸಳು, ಕೊತ್ತಂಬರಿ ಸೊಪ್ಪು- ½ ಹಿಡಿ, ಅಡುಗೆ ಎಣ್ಣೆ- 2 ಟೀ ಚಮಚ, ಅರಶಿನ- ಅರ್ಧ ಟೀ ಚಮಚ, ಶುಂಠಿ- ಒಂದು ಸಣ್ಣ ತುಂಡು.
ಮಾಡುವ ವಿಧಾನ: ಈ ಪಾಕವಿಧಾನ ಮಾಡಲು 2 ಒಣಮೆಣಸಿನಕಾಯಿ, ಕರಿಬೇವಿನ ಎಲೆಗಳು, ಸಾಸಿವೆ, ಅರಶಿನ, ಶುಂಠಿ ಬಿಟ್ಟು ಉಳಿದ ಎಲ್ಲಾ ಪದಾರ್ಥಗಳನ್ನು ಒರಟಾಗಿ ರುಬ್ಬಿಕೊಳ್ಳಿ. ನಂತರ ಸ್ಟೌವ್ ಮೇಲೆ ಒಂದು ಪಾತ್ರೆ ಇಟ್ಟು ನೀರು ಸೇರಿಸಿ. ಇದಕ್ಕೆ ರುಬ್ಬಿರುವ ಮಿಶ್ರಣವನ್ನು ಹಾಕಿ. ಮಧ್ಯಮ ಉರಿಯಲ್ಲಿಟ್ಟು ಕುದಿಯಲು ಬಿಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ತುಂಬಾ ಹೊತ್ತು ಇದನ್ನು ಕುದಿಸಬೇಡಿ. ಕುದಿದ ಬಳಿಕ ಸ್ಟೌವ್ ಆಫ್ ಮಾಡಿ.
ಇನ್ನೊಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಣ್ಣ ಉರಿಯಲ್ಲಿರಲಿ. ಎಣ್ಣೆ ಬೆಚ್ಚಗಾದಾಗ ಕರಿಬೇವಿನ ಎಲೆ, ಜೀರಿಗೆ, ಪುಡಿ ಮಾಡಿದ ಕರಿಮೆಣಸು, ಎರಡು ಎಸಳು ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, 2 ಒಣಮೆಣಸಿನಕಾಯಿಗಳನ್ನು ಸೇರಿಸಿ. ಒಂದು ನಿಮಿಷ ಹಾಗೆಯೇ ಬಿಟ್ಟು ರಸಂ ಮೇಲೆ ಸುರಿಯಿರಿ. ನಂತರ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ರುಚಿಕರವಾದ ಇಮ್ಯೂನಿಟಿ ಬೂಸ್ಟರ್ ರಸಂ ಸವಿಯಲು ಸಿದ್ಧ. ಸೂಪ್‍ನಂತೆ ಇದನ್ನು ಸೇವಿಸಬಹುದು ಅಥವಾ ಬಿಸಿಬಿಸಿ ಅನ್ನದೊಂದಿಗೆ ಸವಿಯಬಹುದು.
ರಸಂನಲ್ಲಿನ ಪ್ರಮುಖ ಅಂಶಗಳೆಂದರೆ ಅರಿಶಿನ, ಕರಿಮೆಣಸು, ಶುಂಠಿ, ಬೆಳ್ಳುಳ್ಳಿ ಮತ್ತು ಜೀರಿಗೆ. ಇವೆಲ್ಲವೂ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಈ ರಸಂಗೆ ಬೇಕಿದ್ದರೆ ತುಳಸಿ, ಮೆಂತ್ಯವನ್ನು ಸಹ ಬಳಸಬಹುದು. ಈ ಹವಾಮಾನದಲ್ಲಿ ರಸಂ ಸವಿಯುವುದರಿಂದ ಶೀತ, ಕೆಮ್ಮು, ಜ್ವರದಿಂದ ಮುಕ್ತಿ ಪಡೆಯಬಹುದು.