ಮಧುಮೇಹಕ್ಕೆ ರಾಮಬಾಣ ಬಿರಿಯಾನಿ ಎಲೆ: ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಈ ರೀತಿ ಸೇವಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಧುಮೇಹಕ್ಕೆ ರಾಮಬಾಣ ಬಿರಿಯಾನಿ ಎಲೆ: ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಈ ರೀತಿ ಸೇವಿಸಿ

ಮಧುಮೇಹಕ್ಕೆ ರಾಮಬಾಣ ಬಿರಿಯಾನಿ ಎಲೆ: ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಈ ರೀತಿ ಸೇವಿಸಿ

ಹಿಂದೆಲ್ಲಾ ಸಿರಿವಂತರ ಕಾಯಿಲೆ ಎಂದು ಕುಖ್ಯಾತಿ ಪಡೆದಿದ್ದ ಮಧುಮೇಹವು ಇಂದು ಎಲ್ಲಾ ವರ್ಗದ ಜನರನ್ನೂ ಆವರಿಸಿದೆ. ನಿಮಗೂ ಕೂಡ ಮಧುಮೇಹ ಕಾಯಿಲೆ ಬಂದಿದ್ದರೆ, ಬಿರಿಯಾನಿ ಎಲೆಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಈ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ಮಧುಮೇಹಕ್ಕೆ ರಾಮಬಾಣ ಬಿರಿಯಾನಿ ಎಲೆ: ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಈ ರೀತಿ ಸೇವಿಸಿ
ಮಧುಮೇಹಕ್ಕೆ ರಾಮಬಾಣ ಬಿರಿಯಾನಿ ಎಲೆ: ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಈ ರೀತಿ ಸೇವಿಸಿ (PC: Canva)

ಹಿಂದೆಲ್ಲಾ ಸಿರಿವಂತರ ಕಾಯಿಲೆ ಎಂದೇ ಮಧುಮೇಹ ರೋಗ ಬಿಂಬಿತವಾಗಿತ್ತು. ಆದರೀಗ, ಬದಲಾದ ಕಾಲಘಟ್ಟದಲ್ಲಿ ಎಲ್ಲಾ ವರ್ಗದ ಜನರಿಗೂ ಈ ಕಾಯಿಲೆಗೆ ವಕ್ಕರಿಸಿದೆ. ಕಳಪೆ ಆಹಾರ ಪದ್ಧತಿ, ಜೀವನಶೈಲಿ ಹಾಗೂ ದಿನವಿಡೀ ಕುಳಿತುಕೊಂಡೇ ಕೆಲಸ ಮಾಡುವುದರಿಂದ ಜನರಿಗೆ ಹಲವಾರು ರೋಗಗಳು ಬಾಧಿಸುತ್ತಿವೆ. ಈ ರೋಗಗಳಲ್ಲಿ ಮಧುಮೇಹವೂ ಒಂದು. ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿದ ನಂತರ ಅದರ ನಿಯಂತ್ರಣಕ್ಕೆ ಔಷಧಿಗಳ ಮೊರೆ ಹೋಗುತ್ತಾರೆ. ಇನ್ನೂ ಕೆಲವರು ಮನೆಮದ್ದುಗಳನ್ನು ಪ್ರಯತ್ನಿಸುತ್ತಾರೆ. ನಮ್ಮ ಅಡುಗೆಮನೆಯಲ್ಲಿ ಅಂತಹ ಕೆಲವು ಮಸಾಲೆಗಳಿವೆ. ಅವುಗಳನ್ನು ಶತಮಾನಗಳಿಂದ ಆಯುರ್ವೇದದಲ್ಲಿ ಔಷಧಿಯಾಗಿ ಬಳಸಲಾಗುತ್ತಿದೆ. ಬಿರಿಯಾನೆ ಎಲೆ (Bay Leaf)ಗಳಂತಹ ಮಧುಮೇಹವನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಲು ಈ ಅನೇಕ ಮಸಾಲೆಗಳು ತುಂಬಾ ಸಹಾಯಕವಾಗಿವೆ. ಬಿರಿಯಾನಿ ಎಲೆ ರಕ್ತದಲ್ಲಿನ ಸಕ್ಕರೆ ನಿರ್ವಹಣೆಗೆ ಹೇಗೆ ಸಹಾಯ ಮಾಡುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಮಧುಮೇಹಕ್ಕೆ ಬಿರಿಯಾನಿ ಎಲೆಗಳು ಹೇಗೆ ಪ್ರಯೋಜನಕಾರಿ

ಬಿರಿಯಾನಿ, ಪಲಾವ್ ಇತ್ಯಾದಿ ಆಹಾರಗಳಿಗೆ ಬಿರಿಯಾನಿ ಎಲೆ ಬೇಕೇ ಬೇಕು. ಇದು ಆಹಾರದ ಸುವಾಸನೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಚಿಕನ್/ಮಟನ್ ಬಿರಿಯಾನಿಗೆ ಬೇ ಎಲೆಗಳನ್ನು ಹಾಕದಿದ್ದರೆ ಅ ಅಡುಗೆ ಪೂರ್ಣವಾಗುವುದೇ ಇಲ್ಲ. ಆಹಾರದ ಸುವಾಸನೆಯನ್ನು ಹೆಚ್ಚಿಸುವ ಬೇ ಎಲೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಬಹಳ ಸಹಾಯಕವಾಗಿದೆ ಎಂದು ಸಾಬೀತುಪಡಿಸುತ್ತದೆ.

ಬೇ ಎಲೆಗಳ ಸಹಾಯದಿಂದ ಮಧುಮೇಹದ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಮುಖ ಮಾಡಲಾಗುವುದಿಲ್ಲ. ಆದರೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಉತ್ತಮ ಮಾರ್ಗವಾಗಿದೆ. ಉತ್ತಮ ನಿಯಂತ್ರಿತ ಆಹಾರ ಮತ್ತು ದೈನಂದಿನ ದೈಹಿಕ ಚಟುವಟಿಕೆಗಳನ್ನು ಹೊಂದಿರುವುದು ಸಹ ಬಹಳ ಮುಖ್ಯ. ಜರ್ನಲ್ ಆಫ್ ಬಯೋಕೆಮಿಕಲ್ ನ್ಯೂಟ್ರಿಷನ್‍ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ತಮ್ಮ ಆಹಾರದಲ್ಲಿ ಬೇ ಎಲೆಗಳನ್ನು ಸೇರಿಸಿದ ಟೈಪ್ 2 ಡಯಾಬಿಟಿಸ್ ರೋಗಿಗಳಲ್ಲಿ ಸಕ್ಕರೆ ಮಟ್ಟ ಮತ್ತು ಕೊಲೆಸ್ಟ್ರಾಲ್ ಸಹ ಸಾಮಾನ್ಯವಾಗಲು ಪ್ರಾರಂಭಿಸಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆಹಾರದ ರುಚಿಯನ್ನು ಹೆಚ್ಚಿಸಲು ಬಿರಿಯಾನಿ ಎಲೆಗಳನ್ನು ಹೆಚ್ಚಾಗಿ ಅಡುಗೆಮನೆಯಲ್ಲಿ ಬಳಸಲಾಗುತ್ತದೆ. ಕೇವಲ ಮಾಂಸಾಹಾರಗಳಿಗೆ ಮಾತ್ರವಲ್ಲ ಇನ್ನೂ ಅನೇಕ ರೀತಿಯಲ್ಲಿ ನಿಮ್ಮ ಆಹಾರದ ಭಾಗವಾಗಿ ಮಾಡಬಹುದು. ಬೇ ಲೀಫ್ ಅನ್ನು ದೈನಂದಿನ ಚಹಾಗೆ ಸೇರಿಸಿ ಕುಡಿಯಬಹುದು. ಇದು ಚಹಾದ ರುಚಿಯನ್ನು ಹೆಚ್ಚಿಸುವುದಲ್ಲದೆ ನಿಮ್ಮ ಚಹಾವನ್ನು ಸ್ವಲ್ಪ ಆರೋಗ್ಯಕರವಾಗಿಸುತ್ತದೆ. ಇದಲ್ಲದೆ, ಮಧುಮೇಹಿಗಳು ಬಿರಿಯಾನಿ ಎಲೆಯ ನೀರನ್ನು ಕುಡಿಯುವುದು ಉತ್ತಮ. ಇದಕ್ಕಾಗಿ,ಒಂದು ಎಲೆಯನ್ನು ರಾತ್ರಿಯಲ್ಲಿ ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಲಘುವಾಗಿ ಬಿಸಿ ಮಾಡಿ ಕುಡಿಯಿರಿ. ಈ ರೀತಿ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ತುಂಬಾ ಸಹಾಯಕವಾಗಿದೆ.

Whats_app_banner