ಕನ್ನಡ ಸುದ್ದಿ  /  ಜೀವನಶೈಲಿ  /  Pineapple Benefits: ಗಂಟಲು ಕಿರಿಕಿರಿಯಾಗುತ್ತೆ ಎಂದು ನೀವು ಅನಾನಸ್‌ ತಿನ್ನಲ್ವಾ? ಪೈನಾಪಲ್‌ ಪ್ರಯೋಜನ ಕೇಳಿದ್ರೆ ಪ್ರತಿದಿನ ತಿನ್ನುವಿರಿ

Pineapple Benefits: ಗಂಟಲು ಕಿರಿಕಿರಿಯಾಗುತ್ತೆ ಎಂದು ನೀವು ಅನಾನಸ್‌ ತಿನ್ನಲ್ವಾ? ಪೈನಾಪಲ್‌ ಪ್ರಯೋಜನ ಕೇಳಿದ್ರೆ ಪ್ರತಿದಿನ ತಿನ್ನುವಿರಿ

Health Benefits of Pineapple: ವಿಟಮಿನ್ ಸಿ, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿರುವ ಅನಾನಸ್ ಹಣ್ಣು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ಮತ್ತು ಚರ್ಮದ ಗುಣಮಟ್ಟವನ್ನು ಸುಧಾರಿಸಲು ಉಪಯುಕ್ತವಾಗಿದೆ. ಈ ಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.

ಪೈನಾಪಲ್‌ ಹಣ್ಣಿನ ಪ್ರಯೋಜನಗಳು
ಪೈನಾಪಲ್‌ ಹಣ್ಣಿನ ಪ್ರಯೋಜನಗಳು

Health Benefits of Pineapple: ನಮ್ಮ ದೇಶದಲ್ಲಿ ಬೆಳೆಯುವ ಕೆಲವು ತರಕಾರಿ, ಹಣ್ಣುಗಳು ನಮ್ಮದೇ ಮೂಲವೇನೋ ಎಂದೆನಿಸುವುದು ಸುಳ್ಳಲ್ಲ. ಆದರೆ, ಹಲವಾರು ಹಣ್ಣು-ತರಕಾರಿಗಳ ಮೂಲ ವಿದೇಶದ್ದು. ಅದರಲ್ಲಿ ಅನೇಕ ಆರೋಗ್ಯ ಪ್ರಯೋಜನಗಳಿರುವ ಅನಾನಸ್ ಕೂಡ ಒಂದು. ಇದರ ಮೂಲ ದಕ್ಷಿಣ ಅಮೆರಿಕ ಎಂದು ಹೇಳಲಾಗುತ್ತದೆ. ಈ ಹಣ್ಣು ಉರಿಯೂತದ ವಿರುದ್ಧ ಹೋರಾಡುವ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಬಹಳ ಆರೋಗ್ಯಕರವಾಗಿರುವ ಅನಾನಸ್ ಹಣ್ಣು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುವುದಲ್ಲದೆ, ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಹಣ್ಣು ನಿಮ್ಮ ಕೂದಲು, ಚರ್ಮ ಮತ್ತು ಮೂಳೆಗಳಿಗೂ ಒಳ್ಳೆಯದು.

ಟ್ರೆಂಡಿಂಗ್​ ಸುದ್ದಿ

ಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ ಹಿಡಿದು ರೋಗನಿರೋಧಕ ಶಕ್ತಿಯನ್ನು ಸುಧಾರಿಸುವವರೆಗೆ, ಅನಾನಸ್‌ನಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದು ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಕೆ, ರಂಜಕ, ಕ್ಯಾಲ್ಸಿಯಂ, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದೆ. ಕ್ಯಾನ್ಸರ್ ವಿರುದ್ಧ ಹೋರಾಡಲು ಮತ್ತು ಚರ್ಮದ ಗುಣಮಟ್ಟವನ್ನು ಸುಧಾರಿಸಲು ಸಹ ಉಪಯುಕ್ತವಾಗಿದೆ. ಅನಾನಸ್ ಹಣ್ಣಾದಾಗ ಹಸಿಯಾಗಿ ಸೇವಿಸುವುದು ಮಾತ್ರವಲ್ಲದೆ, ಇದನ್ನು ಹುರಿದು, ಬೇಯಿಸಿ ಮತ್ತು ಸುಟ್ಟು ತಿಂದರೆ ಇನ್ನೂ ರುಚಿಕರವಾಗುತ್ತದೆ. ಕೆಲವರು ಇದರ ಸಾಂಬಾರ್ ಅನ್ನು ಕೂಡ ತಯಾರಿಸುತ್ತಾರೆ.

ಅನಾನಸ್ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದರ ಬಗ್ಗೆ ಇಲ್ಲಿದೆ ಮಾಹಿತಿ.

1. ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧ ಈ ಹಣ್ಣು

ಅನಾನಸ್‌ನಲ್ಲಿ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಒಂದು ಕಪ್ ಅನಾನಸ್ 88 ಪ್ರತಿಶತದಷ್ಟು ವಿಟಮಿನ್ ಸಿ ಅನ್ನು ಹೊಂದಿದೆ. ಅಲ್ಲದೆ ಅನಾನಸ್‌ನಲ್ಲಿ ಸಾಕಷ್ಟು ಪ್ರಮಾಣದ ಮ್ಯಾಂಗನೀಸ್, ಫೈಬರ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಇದ್ದು, ಬಹಳ ಪ್ರಯೋಜನಕಾರಿಯಾಗಿದೆ.

2. ಅನಾನಸ್‌ನಲ್ಲಿವೆ ಆ್ಯಂಟಿ ಆಕ್ಸಿಡೆಂಟ್‌

ಅನಾನಸ್‌ನ ಪ್ರಮುಖ ಪ್ರಯೋಜನವೆಂದರೆ ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳಿವೆ. ಆಕ್ಸಿಡೇಟಿವ್ ಒತ್ತಡವು ದೇಹದಲ್ಲಿ ಉರಿಯೂತ, ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಹೆಚ್ಚಿನ ಸಕ್ಕರೆಯನ್ನು ಉಂಟುಮಾಡಬಹುದು. ಅನಾನಸ್‌ನಲ್ಲಿ ಫ್ಲೇವನಾಯ್ಡ್‌ಗಳು ಮತ್ತು ಫೀನಾಲ್‌ ಅಂಶಗಳಿವೆ. ಅನಾನಸ್ ಹೃದಯದ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯೊಂದರಲ್ಲಿ ತಿಳಿದುಬಂದಿದೆ.

3. ಜೀರ್ಣಕ್ರಿಯೆಗೆ ಸಹಕಾರಿ

ಅನಾನಸ್ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಈ ಹಣ್ಣಿನಲ್ಲಿ ಬ್ರೋಮೆಲಿನ್ ಎಂದು ಕರೆಯಲ್ಪಡುವ ಜೀರ್ಣಕಾರಿ ಕಿಣ್ವಗಳಿದ್ದು. ಇದು ಮಾಂಸಾಹಾರದ ಸುಲಭ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಅನಾನಸ್‌ನಲ್ಲಿರುವ ಖನಿಜಗಳು ಮತ್ತು ವಿಟಮಿನ್‌ಗಳು ಹೇರಳವಾಗಿದ್ದು, ಇದು ಸಮತೋಲಿತ ಆಹಾರವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅನಾನಸ್ ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹ ಸಹಾಯ ಮಾಡುತ್ತದೆ.

4. ಫೈಬರ್ ಗಳಿಂದ ಸಮೃದ್ಧವಾಗಿದೆ ಈ ಹಣ್ಣು

ಅನಾನಸ್ ಫೈಬರ್‌ ಅಂಶಗಳಿಂದ ಸಮೃದ್ಧವಾಗಿದೆ. ಇದು ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ. ಇದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ದೀರ್ಘಕಾಲದ ಮಲಬದ್ಧತೆಯಿಂದ ಬಳಲುತ್ತಿದ್ದರೆ ಅನಾನಸ್ ಸೇವನೆ ಉತ್ತಮ.

5. ಕ್ಯಾನ್ಸರ್ ತಡೆಗಟ್ಟಲು ಸಹಕಾರಿ

ಅನಾನಸ್ ಸೇವನೆಯು ಕ್ಯಾನ್ಸರ್ ಅನ್ನು ತಡೆಗಟ್ಟಬಹುದು ಎಂದು ಸಂಶೋಧಕರು ನಡೆಸಿರುವ ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಆಕ್ಸಿಡೇಟಿವ್ ಒತ್ತಡದಿಂದ ಕ್ಯಾನ್ಸರ್ ಉಂಟಾಗುತ್ತದೆ. ಅನಾನಸ್‌ನಲ್ಲಿ ಬ್ರೋಮೆಲಿನ್ ಇರುವ ಕಾರಣ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಈ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಕಿಣ್ವವು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಇದನ್ನು ಕ್ಯಾನ್ಸರ್ ಚಿಕಿತ್ಸೆಗೆ ಸಹ ಬಳಸಲಾಗುತ್ತದೆ.

6. ಉರಿಯೂತ ಕಡಿಮೆ ಮಾಡುವಲ್ಲಿ ಸಹಕಾರಿ

ಅನಾನಸ್‌ನ ಒಂದು ದೊಡ್ಡ ಪ್ರಯೋಜನವೆಂದರೆ ಅದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳನ್ನು ತಡೆಹಿಡಿಯುವ ಶಕ್ತಿಯೂ ಅನಾನಸ್ ಗಿದೆ.

7. ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ

ಅನಾನಸ್ ನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಇದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಈ ಹಣ್ಣು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವ ಕಾರಣ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಇದು ಚರ್ಮದ ಹಾನಿಯನ್ನು ಕಡಿಮೆ ಮಾಡಲು ಮತ್ತು ಚರ್ಮದ ರಚನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಅನಾನಸ್‌ನ ಪ್ರಯೋಜನಗಳ ಬಗ್ಗೆ ನೀವು ತಿಳಿದುಕೊಂಡಿರಿ. ರೋಗನಿರೋಧಕ ಶಕ್ತಿಯನ್ನು ಸುಧಾರಿಸುವುದು, ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಚರ್ಮದ ಆರೋಗ್ಯವನ್ನು ಸುಧಾರಿಸುವಲ್ಲಿ ಈ ಹಣ್ಣು ಪರಿಣಾಮಕಾರಿಯಾಗಿದೆ. ಅನಾನಸ್ ಅನ್ನು ಬೇಯಿಸಿ ಅಥವಾ ಸುಟ್ಟು ತಿನ್ನಲೂ ಬಹಳ ರುಚಿಕರವಾಗಿರುತ್ತದೆ.

ಲೇಖನ: ಪ್ರಿಯಾಂಕ ಗೌಡ