ನೀವು ದಿನವಿಡೀ ಶೂ, ಚಪ್ಪಲಿಗಳನ್ನು ಧರಿಸುತ್ತೀರಾ: ಈ ಆರೋಗ್ಯ ಸಮಸ್ಯೆ ತಗುಲಬಹುದು, ಇರಲಿ ಎಚ್ಚರ-health is wearing slippers all the time bad for your feet wearing shoes side effects prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ದಿನವಿಡೀ ಶೂ, ಚಪ್ಪಲಿಗಳನ್ನು ಧರಿಸುತ್ತೀರಾ: ಈ ಆರೋಗ್ಯ ಸಮಸ್ಯೆ ತಗುಲಬಹುದು, ಇರಲಿ ಎಚ್ಚರ

ನೀವು ದಿನವಿಡೀ ಶೂ, ಚಪ್ಪಲಿಗಳನ್ನು ಧರಿಸುತ್ತೀರಾ: ಈ ಆರೋಗ್ಯ ಸಮಸ್ಯೆ ತಗುಲಬಹುದು, ಇರಲಿ ಎಚ್ಚರ

ಸಾಮಾನ್ಯವಾಗಿ ಕೆಲವರು ಇಡೀ ದಿನ ಶೂ ಅಥವಾ ಚಪ್ಪಲಿಗಳನ್ನು ಧರಿಸುತ್ತಾರೆ. ಆದರೆ ನಿಮ್ಮ ಈ ಅಭ್ಯಾಸವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇಡೀ ದಿನ ಪಾದರಕ್ಷೆಗಳನ್ನು ಧರಿಸುವುದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಇಡೀ ದಿನ ಪಾದರಕ್ಷೆಗಳನ್ನು ಧರಿಸುವುದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಇಡೀ ದಿನ ಪಾದರಕ್ಷೆಗಳನ್ನು ಧರಿಸುವುದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. (pixabay)

ಕೆಲವರಿಗೆ ಶೂ, ಚಪ್ಪಲಿಗಳೆಂದರೆ ವಿಪರೀತ ಕ್ರೇಜ್ ಇರುತ್ತದೆ. ಪಾದರಕ್ಷೆಗಳ ರ್ಯಾಕ್ ಪೂರ್ತಿ ಶೂ, ಚಪ್ಪಲಿಗಳನ್ನು ಜೋಡಿಸಿರುತ್ತಾರೆ. ಮನೆಯಿಂದ ಹೊರಗೆ ಹೋಗುವಾಗ ಮಾತ್ರವಲ್ಲ, ಮನೆಯ ಒಳಗೂ ಚಪ್ಪಲಿಗಳನ್ನು ಧರಿಸುವವರಿದ್ದಾರೆ. ಬಾತ್‍ರೂಮ್‍ಗೆ ಹೋದಾಗ ಇನ್ನೊದು ಚಪ್ಪಲಿಯನ್ನು ಬಳಸುತ್ತಾರೆ. ಒಟ್ಟಿನಲ್ಲಿ ಹೇಳಬೇಕೆಂದರೆ ಬರಿಗಾಲಿನಲ್ಲಿ ನಡೆದರೆ ಪಾದ ಸವೆಯುತ್ತದೆಯೇನೋ ಎಂಬಂತೆ ಚಪ್ಪಲಿಗಳನ್ನು ಧರಿಸಿರುತ್ತಾರೆ. ಆದರೆ, ಅತಿ ಹೆಚ್ಚಾಗಿ ಚಪ್ಪಲಿ ಅಥವಾ ಶೂಗಳನ್ನು ಧರಿಸುವುದರಿಂದ ಆರೋಗ್ಯದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ.

ದಿನನಿತ್ಯ ಪಾದರಕ್ಷೆಗಳನ್ನು ಧರಿಸುವುದರಿಂದ ಕಾಲಿಗೆ ಹಿತ ಎನಿಸಿದರೂ, ಇವುಗಳ ದೀರ್ಘಕಾಲದ ಬಳಕೆಯು ವಿವಿಧ ಆರೋಗ್ಯ ಅಪಾಯಗಳನ್ನು ಉಂಟುಮಾಡಬಹುದು. ಶಿಲೀಂಧ್ರಗಳ ಸೋಂಕಿನಿಂದ ಕೀಲುಗಳ ಒತ್ತಡದವರೆಗೆ ಹಲವು ರೀತಿಯಲ್ಲಿ ಅನಾರೋಗ್ಯಕ್ಕೆ ಕಾರಣವಾಗಬಹುದು. ನಾವು ಆಯ್ಕೆಮಾಡುವ ಪಾದರಕ್ಷೆಗಳ ಪ್ರಕಾರ, ಅದನ್ನು ಎಷ್ಟು ಸಮಯದವರೆಗೆ ಧರಿಸುತ್ತೇವೆ ಎಂಬುದು ನಮ್ಮ ಒಟ್ಟಾರೆ ಯೋಗಕ್ಷೇಮದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತದೆ. ದಿನ ಪೂರ್ತಿ ಪಾದರಕ್ಷೆಗಳನ್ನು ಧರಿಸುವುದನ್ನು ಕಡಿಮೆ ಮಾಡಬೇಕು ಎಂಬುದಾಗಿ ತಜ್ಞರು ಕೂಡ ತಿಳಿಸಿದ್ದಾರೆ. ಶೂಗಳು ಅಥವಾ ಚಪ್ಪಲಿಗಳ ದೀರ್ಘಾವಧಿಯ ಬಳಕೆಯಿಂದ ಏನೆಲ್ಲಾ ಅಡ್ಡ ಪರಿಣಾಮಗಳನ್ನು ಎದುರಿಸಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ದಿನಪೂರ್ತಿ ಪಾದರಕ್ಷೆ ಧರಿಸುವುದರ ಅಡ್ಡಪರಿಣಾಮಗಳು

ಕೀಲು ನೋವು: ಸ್ಟೈಲಿಶ್ ಶೂ ಅಥವಾ ಚಪ್ಪಲಿ ನೋಡಲು ಆಕರ್ಷಕವಾಗಿ ಕಾಣಬಹುದು. ಆದರೆ ಇದರ ದೀರ್ಘಾವದಿಯ ಬಳಕೆಯು ಚಿಕ್ಕ ವಯಸ್ಸಿನಲ್ಲೇ ಕೀಲು ನೋವಿನ ಸಮಸ್ಯೆಗೆ ಕಾರಣವಾಗಬಹುದು. ಹಿಮ್ಮಡಿ ಎತ್ತರವಿರುವ ಚಪ್ಪಲಿಯನ್ನು (Heeled Slippers) ಧರಿಸುವುದರಿಂದ ಕೀಲು ನೋವಿನಿಂದ ಬಳಲಬಹುದು. ಹೀಗಾಗಿ ಆದಷ್ಟು ಇಂತಹ ಚಪ್ಪಲಿಗಳನ್ನು ಧರಿಸುವುದನ್ನು ಕಡಿಮೆ ಮಾಡುವುದು ಉತ್ತಮ. ಅದರಲ್ಲೂ ಬೂಟುಗಳು ಅಥವಾ ಚಪ್ಪಲಿಗಳು ಕಳಪೆ ಗುಣಮಟ್ಟದ್ದಾಗಿದ್ದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು.

ಮೂಳೆ ಸಮಸ್ಯೆ ಬರಬಹುದು: ದಿನದ ಎಲ್ಲಾ ಸಮಯದಲ್ಲೂ ಬೂಟುಗಳನ್ನು ಧರಿಸುವುದರಿಂದ ನಿಮ್ಮ ಪಾದಗಳನ್ನು ಶೂಗಳೊಳಗೆ ಬಿಗಿಯಾಗಿ ಇಡುತ್ತದೆ. ಈ ಬಿಗಿತವು ಹೆಬ್ಬೆರಳಿನ ಉಗುರಿನೊಂದಿಗೆ ಹೆಬ್ಬೆರಳಿನ ಜಂಟಿ ಮೂಳೆಯು ಬೆಳೆಯಲು ಕಾರಣವಾಗಬಹುದು. ಇದನ್ನು ಹ್ಯಾಮರ್ ಟೋ ಎಂದೂ ಕರೆಯುತ್ತಾರೆ. ಬೂಟುಗಳನ್ನು ಅತಿಯಾಗಿ ಧರಿಸಿದ್ರೆ, ಹೆಬ್ಬೆರಳಿನ ಮೂಳೆ ವಕ್ರವಾಗುವ ಸಾಧ್ಯತೆಯಿದೆ. ಹೀಗಾಗಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಬಹಳ ಮುಖ್ಯ.

ಸೋಂಕು ತಗುಲಬಹುದು: ಬೂಟುಗಳು ಅಥವಾ ಚಪ್ಪಲಿಗಳ ಅತಿ ಹೆಚ್ಚಿನ ಬಳಕೆಯು ಸಂಧಿವಾತದ ಸಮಸ್ಯೆಯನ್ನು ಉಂಟು ಮಾಡಬಹುದು. ಇದರಿಂದ ನಿಮ್ಮ ಪಾದಗಳಲ್ಲಿ ಬ್ಯಾಕ್ಟೀರಿಯಾದ ಸೋಂಕು ಮತ್ತು ಶಿಲೀಂಧ್ರಗಳ ಬೆಳವಣಿಗೆಯ ಸಾಧ್ಯತೆಯೂ ಸಹ ಹೆಚ್ಚಾಗುವ ಸಾಧ್ಯತೆಯಿದೆ. ದಿನವಿಡೀ ಶೂಗಳು ಮತ್ತು ಚಪ್ಪಲಿಗಳನ್ನು ಧರಿಸುವುದರಿಂದ ನಿಮ್ಮ ಪಾದಗಳಿಗೆ ಗಾಳಿಯಾಡುವುದಿಲ್ಲ. ದೇಹಕ್ಕೆ ಹೇಗೆ ಗಾಳಿ, ಬೆಳಕು ಅಗತ್ಯವೋ ಅದೇ ರೀತಿ ಪಾದಗಳಿಗೂ ಸಹ ಸೂರ್ಯನ ಬೆಳಕು ಮತ್ತು ಗಾಳಿಯ ಅಗತ್ಯವಿರುತ್ತದೆ. ಹೀಗಾಗಿ ಗಾಳಿ, ಬೆಳಕಿಗೆ ಪಾದ ಒಡ್ಡದಿದ್ದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು.

ಆಯುರ್ವೇದದ ಪ್ರಕಾರ, ಪ್ರತಿದಿನ ಸ್ವಲ್ಪ ಕಾಲ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಲು ಸಲಹೆ ನೀಡಲಾಗುತ್ತದೆ. ಹಾಗೆಯೇ ನೆಲದ ಮೇಲೆ ಬರಿಗಾಲಿನಲ್ಲಿ ನಡೆಯುವುದರಿಂದ, ಒತ್ತಡವನ್ನು ಕಡಿಮೆ ಮಾಡಬಹುದು.