ಮಂಗಳೂರು ಕೆಎಂಸಿ ವೈದ್ಯರ ಅಪರೂಪದ ಸಾಧನೆ, ಕಡಿಮೆ ತೂಕದ ಶಿಶುವಿಗೆ ಪಿಡಿಎ ಚಿಕಿತ್ಸೆ ಮೂಲಕ ಉಸಿರಾಟದ ಸೋಂಕು ನಿವಾರಣೆ
ಕನ್ನಡ ಸುದ್ದಿ  /  ಜೀವನಶೈಲಿ  /  ಮಂಗಳೂರು ಕೆಎಂಸಿ ವೈದ್ಯರ ಅಪರೂಪದ ಸಾಧನೆ, ಕಡಿಮೆ ತೂಕದ ಶಿಶುವಿಗೆ ಪಿಡಿಎ ಚಿಕಿತ್ಸೆ ಮೂಲಕ ಉಸಿರಾಟದ ಸೋಂಕು ನಿವಾರಣೆ

ಮಂಗಳೂರು ಕೆಎಂಸಿ ವೈದ್ಯರ ಅಪರೂಪದ ಸಾಧನೆ, ಕಡಿಮೆ ತೂಕದ ಶಿಶುವಿಗೆ ಪಿಡಿಎ ಚಿಕಿತ್ಸೆ ಮೂಲಕ ಉಸಿರಾಟದ ಸೋಂಕು ನಿವಾರಣೆ

ಮಂಗಳೂರಿನ ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಯ ವೈದ್ಯರು ಅಪರೂಪದ ಸಾಧನೆ ಮಾಡಿದ್ದಾರೆ. ಉಸಿರಾಟದ ಸೋಂಕಿನ ಕಾಯಿಲೆಯಿಂದ ಬಳಲುತ್ತಿರುವ ತೂಕ ಕಡಿಮೆ ಇರುವ ಶಿಶುವಿಗೆ ಅಪರೂಪದ PDA ಚಿಕಿತ್ಸೆ ನೀಡುವ ಮೂಲಕ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಕೆಎಂಸಿ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಚಿಕಿತ್ಸೆಯ ನೇತೃತ್ವ ವಹಿಸಿದ್ದರು.

ಅಪರೂಪದ ಪಿಡಿಎಂ ಚಿಕಿತ್ಸೆ ಮಾಡಿದ ಮಂಗಳೂರಿನ ಕೆಎಂಸಿ ವೈದ್ಯರ ತಂಡ
ಅಪರೂಪದ ಪಿಡಿಎಂ ಚಿಕಿತ್ಸೆ ಮಾಡಿದ ಮಂಗಳೂರಿನ ಕೆಎಂಸಿ ವೈದ್ಯರ ತಂಡ

ಮಂಗಳೂರು: ವೈದ್ಯಕೀಯ ಜಗತ್ತಿನಲ್ಲಿ ಹೊಸ ಹೊಸ ಅನ್ವೇಷಣೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಇಂಥದ್ದೊಂದು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ ಮಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಕೆ.ಎಂ.ಸಿ.ಆಸ್ಪತ್ರೆ. ಕೇವಲ ನಾಲ್ಕು ಕೆಜಿ ತೂಕದ ನಾಲ್ಕು ತಿಂಗಳ ಹಸುಗೂಸಿಗೆ ಶಸ್ತ್ರಚಿಕಿತ್ಸೆಯಲ್ಲದ ಪಿಡಿಎ (PDA) ಸಾಧನ ಮುಚ್ಚುವಿಕೆ ಮಾಡಿ ಯಶಸ್ಸು ಕಂಡಿದೆ.

ತೂಕ ಕಡಿಮೆ ಇರುವ ಕಾರಣ ಈ ಶಿಶು ಬೇರೆ ಆಸ್ಪತ್ರೆಯಿಂದ ಕೆ.ಎಂ.ಸಿ ಆಸ್ಪತ್ರೆಗೆ ತುರ್ತಾಗಿ ರವಾನೆಯಾಗಿತ್ತು ಹಾಗೂ ಶಿಶು ಅನುಭವಿಸುತ್ತಿದ್ದ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಹಾಗೂ ಅನಸ್ತೇಶಿಯಾ ನೀಡುವುದು ಸವಾಲಿನದ್ದಾಗಿತ್ತು. ತಜ್ಞ ವೈದ್ಯರನ್ನೇ ಹೊಂದಿರುವ ಆಸ್ಪತ್ರೆಯಾಗಿರುವ ಕೆಎಂಸಿಯಲ್ಲೂ ಶಿಶುವಿಗೆ ಆರೈಕೆ ಒದಗಿಸುವುದು ಅತ್ಯಂತ ಸವಾಲಾಗಿತ್ತು.

ಉಸಿರಾಟದ ಸೋಂಕಿನ ಕಾಯಿಲೆಯಿಂದ ಬಳಲುತ್ತಿರುವ ಶಿಶುವಿಗೆ ಶಸ್ತ್ರಚಿಕಿತ್ಸೆಯಲ್ಲದ PDA ಮಾತ್ರ ಏಕೈಕ ಪರಿಹಾರವಾಗಿತ್ತು. ಈ ಚಿಕಿತ್ಸೆಗೆ ಪ್ರಸಿದ್ದ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗಿದೆ. ಇವರಿಗೆ ಅರಿವಳಿಕೆ ತಜ್ಞರು ಹಾಗೂ ಕ್ಯಾಥ್ ಲ್ಯಾಬ್ ತಜ್ಞರು ಸಾಥ್ ನೀಡಿದರು. ಅತಿ ಕಡಿಮೆ ತೂಕದಿಂದ ಬಳಲುತ್ತಿದ್ದ ಶಿಶುವಿಗೆ ತಜ್ಞರ ತಂಡವು ಭಾರೀ ಜಾಗರೂಕತೆ ಮೂಲಕ ಚಿಕಿತ್ಸೆ ನೀಡುವಲ್ಲಿ ಯಶಸ್ಸು ಕಂಡಿದೆ.

ಚಿಕಿತ್ಸಾ ತಂಡದ ನೇತೃತ್ವ ವಹಿಸಿದ್ದ ಕೆ.ಎಂ.ಸಿ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಮಾತನಾಡಿ ‘ಕಡಿಮೆ ತೂಕದ ಶಿಶುವಿನ ಇಂಥಹ ಪ್ರಕರಣ ಭಾರೀ ಅಪರೂಪ. ಇಂಥ ಶಸ್ತ್ರಚಿಕಿತ್ಸೆಯನ್ನು ಕಾರ್ಯರೂಪಕ್ಕೆ ತರಲು ಅನುಭವ ಬೇಕು. ವಿಶೇಷ ಅನುಭವವಿರುವ ತಂಡದ ಬೆಂಬಲ ಬೇಕು. ಈ ಶಿಶುವಿಗೆ ಮರು ಜೀವನ ನೀಡುವಲ್ಲಿ ಯಶಸ್ಸು ಕಂಡಿದ್ದು, ಸಂತಸ ನೀಡಿದೆ. ಶಸ್ತ್ರಚಿಕಿತ್ಸೆಯಲ್ಲದ PDA ಯಶ ಕಂಡಿದೆ. ಸುರಕ್ಷಿತ ಹಾಗೂ ಕಡಿಮೆ ನೋವಿನ ಆಧುನಿಕ ವೈದ್ಯಕೀಯ ತಂತ್ರಜ್ಞಾನಕ್ಕೆ ಈ ಸಂದರ್ಭದಲ್ಲಿ ಕೃತಜ್ಞತೆ ಹೇಳಬಯಸುತ್ತೇನೆ‘ ಎಂದಿದ್ದಾರೆ.

‘ಭಾರೀ ಕ್ಲಿಷ್ಟ ಪ್ರಕರಣವಾದ ಸಣ್ಣ ಶಿಶುವಿಗೆ ಚಿಕಿತ್ಸೆ ನೀಡುವಲ್ಲಿ ಯಶ ಕಂಡಿದ್ದು, ಹೆಮ್ಮೆ ನೀಡಿದೆ. ಇದರಿಂದಾಗಿ, ನಮ್ಮ ಆಸ್ಪತ್ರೆಯ ಘನತೆ ಹೆಚ್ಚಿದೆ. ಇದು ಆಸ್ಪತ್ರೆಯ ಬದ್ದತೆಗೆ ಸಾಕ್ಷಿ ಎಂದು ಕೆ.ಎಂ.ಸಿ. ಆಸ್ಪತ್ರೆಯ ಪ್ರಾದೇಶಿಕ ಸಿಒಒ ಸಾಘಿರ್ ಸಿದ್ದಕಿ ಹೇಳಿದರು. ನಮ್ಮ ಆಸ್ಪತ್ರೆಯ ವೈದ್ಯರ ತಂಡದ ಸವಾಲುಗಳನ್ನು ಎದುರಿಸುವ ಛಾತಿಯು ಇಂಥ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಧುನಿಕ ವೈದ್ಯಕೀಯ ಹಾಗೂ ಕ್ಲಿಷ್ಟ ಚಿಕಿತ್ಸೆ, ಈ ಮೂಲಕ ಜೀವ ಉಳಿಯುವ ಭರವಸೆ ಈಡೇರಿಸುವಲ್ಲಿ ಕೆ.ಎಂ.ಸಿ ಆಸ್ಪತ್ರೆಯು ಒಂದು ಹೆಜ್ಜೆ ಮುಂದಿದೆ.

Whats_app_banner