MIND Diet: ನಿಮ್ಮ ಮೆದುಳಿನ ಗೆಳೆಯ ಅಡುಗೆ ಮನೆಯಲ್ಲಿದ್ದಾನೆ! ಬ್ರೇನ್‌ ಹೆಲ್ತ್‌ ಬಯಸುವವರು ಈ ಆಹಾರಗಳನ್ನು ತಿನ್ನಿ
ಕನ್ನಡ ಸುದ್ದಿ  /  ಜೀವನಶೈಲಿ  /  Mind Diet: ನಿಮ್ಮ ಮೆದುಳಿನ ಗೆಳೆಯ ಅಡುಗೆ ಮನೆಯಲ್ಲಿದ್ದಾನೆ! ಬ್ರೇನ್‌ ಹೆಲ್ತ್‌ ಬಯಸುವವರು ಈ ಆಹಾರಗಳನ್ನು ತಿನ್ನಿ

MIND Diet: ನಿಮ್ಮ ಮೆದುಳಿನ ಗೆಳೆಯ ಅಡುಗೆ ಮನೆಯಲ್ಲಿದ್ದಾನೆ! ಬ್ರೇನ್‌ ಹೆಲ್ತ್‌ ಬಯಸುವವರು ಈ ಆಹಾರಗಳನ್ನು ತಿನ್ನಿ

MIND Diet: ಮಿದುಳಿ ಆರೋಗ್ಯ ಉತ್ತಮಪಡಿಸುವ ಆಹಾರ ಪದಾರ್ಥಗಳನ್ನು ಮೈಂಡ್‌ ಡಯೆಟ್‌ ಎಂದು ಕರೆಯಲಾಗುತ್ತದೆ. ಮಿದುಳಿನ ಆರೋಗ್ಯ ಬಯಸುವವರು ಕರಿದ ಆಹಾರಗಳು, ಪ್ಯಾಸ್ಟ್ರೀಸ್‌, ಕೆಂಪು ಮಾಂಸ ಅವಾಯ್ಡ್‌ ಮಾಡಿ.

ಮೈಂಡ್‌ ಡಯೆಟ್‌ನಿಂದ ಮೆದುಳಿನ ಆರೋಗ್ಯ
ಮೈಂಡ್‌ ಡಯೆಟ್‌ನಿಂದ ಮೆದುಳಿನ ಆರೋಗ್ಯ (Unsplash)

MIND Diet: ನಮ್ಮ ಮಿದುಳಿನ ಆರೋಗ್ಯದ ಕುರಿತು ಕಾಳಜಿ ವಹಿಸುವ ಅಗತ್ಯವಿದೆ. ಮಿದುಳಿನ ಆರೋಗ್ಯ ಉತ್ತಮವಾಗಿದ್ದಾರೆ ಒಟ್ಟಾರೆ ಮಾನಸಿಕ ಸ್ವಾಸ್ಥ್ಯ ಉತ್ತಮವಾಗಿರುತ್ತದೆ. ಇತ್ತೀಚೆಗೆ ಸಿನ್ಸಿನಾಟಿ ವಿಶ್ವವಿದ್ಯಾನಿಲಯದ ಡಾ. ರಸ್ಸೆಲ್ ಪಿ. ಸಾಯರ್ ನೇತೃತ್ವದಲ್ಲಿ ನಡೆಸಿದ ಅಧ್ಯಯನವು ಮೆದುಳನ್ನು ಹೆಚ್ಚಿಸಲು ಮತ್ತು ನೆನಪಿನ ಶಕ್ತಿ ಸುಧಾರಿಸಲು MIND ಆಹಾರಪದ್ಧತಿ ಸಹಾಯ ಮಾಡುತ್ತದೆ ಎಂದಿದೆ.

ಏನಿದು ಮೈಂಡ್‌ ಡಯೆಟ್‌, ಇದಕ್ಕೂ ಇತರೆ ಆಹಾರ ಪದ್ಧತಿಗೂ ಏನು ವ್ಯತ್ಯಾಸ ಇದೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. MIND ಡಯಟ್ ಮತ್ತೊಂದು ಫ್ಯಾಶನ್ ಅಲ್ಲ. ಇದು ಎರಡು ಉತ್ತಮ ಯೋಜಿತ ಆಹಾರಗಳ (ವೆಲ್‌ ಪ್ಲ್ಯಾನ್ಡ್‌) ಸಂಯೋಜನೆ. ಅಂದರೆ, ಮೆಡಿಟರೇನಿಯನ್ ಆಹಾರ ಮತ್ತು DASH ಆಹಾರ. ಇಲ್ಲಿ ಮೈಂಡ್‌ ಎಂದರೆ ಮೆಡಿಟರೇನಿಯನ್. ಡ್ಯಾಶ್‌ ಎಂದರೆ ಇಂಟರ್ವೆನ್ಶನ್ ಫಾರ್ ನ್ಯೂರೋ ಡಿಜೆನೆರೇಟಿವ್ ಡಿಲೇ. ಈ ಡಯೆಟ್‌ ಮೆದುಳಿನ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುವ ಮೆನುವನ್ನು ಒಳಗೊಂಡಿದೆ.

ಮೈಂಡ್‌ ಡಯೆಟ್‌ನಲ್ಲಿ ಏನೆಲ್ಲ ಇದೆ?

ಮೆದುಳಿಗೆ ಉತ್ತಮವಾದ ಆಹಾರಗಳು: ಈ ಅಧ್ಯಯನದಲ್ಲಿ ಮೈಂಡ್‌ ಆಹಾರವೆಂದು ಯಾವ ಆಹಾರಗಳನ್ನು ಪರಿಗಣಿಸಲಾಗಿದೆ ಎಂದು ತಿಳಿಯೋಣ. ಪಾಲಕ್‌, ಕೇಲ್‌ನಂತಹ ಸೊಪ್ಪುಗಳು, ಕಲರ್‌ಫುಲ್‌ ತರಕಾರಿಗಳು, ಧಾನ್ಯಗಳು, ಮೀನು ಅಥವಾ ಕೋಳಿ, ಒಂದು ಹಿಡಿ ಬೀಜಗಳು, ಬೆರ್ರಿ, ಆಲಿವ್‌ ಎಣ್ಣೆಯ ಸಿಂಪಡಿಕೆ ಇತ್ಯಾದಿಗಳನ್ನು ಒಳಗೊಂಡಿರುತ್ತವೆ. ಈ ಆಹಾರಗಳು ಮೆದುಳಿನ ಆರೋಗ್ಯ ಹೆಚ್ಚಿಸುತ್ತದೆ ಎನ್ನಲಾಗಿದೆ.

ಮೆದುಳಿನ ಆರೋಗ್ಯಕ್ಕೆ ಈ ಫುಡ್‌ ಬೇಡ: ಹುರಿದ ಆಹಾರ ಪದಾರ್ಥಗಳು, ಕೆಂಪು ಮಾಂಸ, ಪೇಸ್ಟ್ರಿಗಳು ಮತ್ತು ಸಿಹಿ ಪದಾರ್ಥಗಳನ್ನು ತಪ್ಪಿಸಲು ಈ ಅಧ್ಯಯನದಲ್ಲಿ ಶಿಫಾರಸು ಮಾಡಲಾಗಿದೆ. ಆಲ್ಕೋಹಾಲ್‌ ಸೇವಿಸುವವರಿಗೆ ಈ ಅಧ್ಯಯನದಲ್ಲಿ ಒಂದು ಗುಡ್‌ನ್ಯೂಸ್‌ ಇದೆ. ದಿನಕ್ಕೆ ಒಂದು ಗ್ಲಾಸ್‌ ವೈನ್‌ ಸೇವಿಸಲು ಈ ಅಧ್ಯಯನದಲ್ಲಿ ಅನುಮೋದಿಸಲಾಗಿದೆ.

ಮೈಂಡ್‌ ಡಯೆಟ್‌
ಮೈಂಡ್‌ ಡಯೆಟ್‌ (Unsplash)

ಹತ್ತು ವರ್ಷಗಳ ಕಾಲ 14,145 ಜನರು ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದಾರೆ. ನೀವು ಅನುಸರಿಸುವ ಡಯೆಟ್‌ ಅನ್ನು ತಿಳಿಸುವಂತೆ ತಿಳಿಸಲಾಗಿತ್ತು. ಈ ರೀತಿ ಸಂವಾದಿಗಳು ಭರ್ತಿ ಮಾಡಿರುವ ಅಥವಾ ನೀಡಿರುವ ಡೇಟಾವನ್ನು ಆಧರಿಸಿ ಮೂರು ಗುಂಪುಗಳಾಗಿ ಮಾಡಲಾಗಿತ್ತು.

ಸುಮಾರು ಒಂದು ದಶಕ ಕಳೆದ ಬಳಿಕ ಇವರನ್ನು ಅಧ್ಯಯನ ಮಾಡಲಾಯಿತು. ಅಧ್ಯಯನದಲ್ಲಿ ಕಂಡುಕೊಂಡ ಅಂಶಗಳ ಆಧಾರದಲ್ಲಿ ಸಂಶೋಧಕರು ಮೈಂಡ್‌ ಡಯೆಟ್‌ ಸೂಚಿಸಿದ್ದಾರೆ.

ಡಿಸ್ಕೈಮರ್‌: ಇದು ಮಾಹಿತಿಗಾಗಿ ನೀಡಲಾದ ಬರಹ. ಇದನ್ನು ತಜ್ಞರ ಅಭಿಪ್ರಾಯ ಎಂದು ಪರಿಗಣಿಸಬಾರದು. ನಿಮ್ಮ ಆರೋಗ್ಯ ಪರಿಸ್ಥಿತಿಗೆ ತಕ್ಕಂತೆ ಸೇವಿಸಬೇಕಾದ ಆಹಾರಗಳ ಕುರಿತು ತಜ್ಞ ವೈದ್ಯರ ಸಲಹೆ, ಸೂಚನೆಗಳನ್ನು ಪಡೆದು ಮುಂದುವರೆಯಿರಿ.

Whats_app_banner