ಕನ್ನಡ ಸುದ್ದಿ  /  ಜೀವನಶೈಲಿ  /  Haircare Tips: ಸೂರ್ಯನ ಕಿರಣಗಳಿಂದ ತ್ವಚೆಗೆ ಮಾತ್ರವಲ್ಲ, ಕೂದಲಿಗೂ ಇದೆ ಹಾನಿ; ಬಿಸಿಲಿಗೆ ಕೂದಲಿನ ಕಾಳಜಿ ಹೀಗಿರಲಿ

Haircare Tips: ಸೂರ್ಯನ ಕಿರಣಗಳಿಂದ ತ್ವಚೆಗೆ ಮಾತ್ರವಲ್ಲ, ಕೂದಲಿಗೂ ಇದೆ ಹಾನಿ; ಬಿಸಿಲಿಗೆ ಕೂದಲಿನ ಕಾಳಜಿ ಹೀಗಿರಲಿ

Haircare Tips: ಸೂರ್ಯನ ವಿಕಿರಣಗಳಿಂದ ಕೇವಲ ತ್ವಚೆ ಮಾತ್ರವಲ್ಲದೇ ಕೂದಲು ಕೂಡ ಹಾನಿಗೊಳಗಾಗುತ್ತದೆ. ಹೀಗಾಗಿ ಇಂತಹ ಸಂದರ್ಭಗಳಲ್ಲಿ ನೀವು ಕೂದಲನ್ನು ಸೂರ್ಯನಿಂದ ಹೇಗೆ ರಕ್ಷಿಸಿಕೊಳ್ಳಬಹುದು ಎನ್ನುವುದಕ್ಕೆ ಸಂಪೂರ್ಣ ಮಾಹಿತಿ ಇಲ್ಲಿದೆ

Haircare Tips: ಸೂರ್ಯನ ಕಿರಣಗಳಿಂದ ತ್ವಚೆಗೆ ಮಾತ್ರವಲ್ಲ, ಕೂದಲಿಗೂ ಇದೆ ಹಾನಿ
Haircare Tips: ಸೂರ್ಯನ ಕಿರಣಗಳಿಂದ ತ್ವಚೆಗೆ ಮಾತ್ರವಲ್ಲ, ಕೂದಲಿಗೂ ಇದೆ ಹಾನಿ

ಸೂರ್ಯನ ಹಾನಿಕಾರಕ ಕಿರಣಗಳಿಂದ ತ್ವಚೆಯನ್ನು ರಕ್ಷಿಸಿಕೊಳ್ಳಬೇಕು ಎಂದರೆ ಸನ್‌ಸ್ಕ್ರೀನ್‌ಗಳನ್ನು ತಪ್ಪದೇ ಬಳಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಈ ಸನ್‌ಸ್ಕ್ರೀನ್‌ಗಳು ಚರ್ಮ ಸುಕ್ಕುಗಟ್ಟುವಿಕೆಯನ್ನು ತಡೆಗಟ್ಟುವುದು ಮಾತ್ರವಲ್ಲದೇ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳಿಂದ ರಕ್ಷಿಸುವ ಕಾರ್ಯವನ್ನೂ ಮಾಡುತ್ತವೆ. ಆದರೆ ನಮ್ಮ ದೇಹದಲ್ಲಿ ಚರ್ಮ ಮಾತ್ರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುತ್ತದೆಯೇ..? ತ್ವಚೆಯ ಜೊತೆಯಲ್ಲಿ ಕೂದಲು ಕೂಡ ಸೂರ್ಯನ ನೇರಳಾತೀತ ಕಿರಣದ ಸಂಪರ್ಕಕ್ಕೆ ಬರುತ್ತದೆ. ಹಾಗಾದರೆ ಸೂರ್ಯನ ಕಿರಣಗಳಿಂದ ತ್ವಚೆಯನ್ನು ರಕ್ಷಿಸಿಕೊಂಡಂತೆ ನಾವು ಕೂದಲನ್ನೂ ರಕ್ಷಿಸಿಕೊಳ್ಳಬೇಕು. ಇಲ್ಲವಾದಲ್ಲಿ ಸೂರ್ಯನ ನೇರಳಾತೀತ ಕಿರಣಗಳ ಪ್ರಖರತೆಗೆ ಕೂದಲಿನ ಆರೋಗ್ಯ ಹಾನಿಗೊಳ್ಳುವ ಸಾಧ್ಯತೆ ಇರುತ್ತದೆ.

ಟ್ರೆಂಡಿಂಗ್​ ಸುದ್ದಿ

ಸೂರ್ಯನ ಯುವಿಬಿ ವಿಕಿರಣಗಳು ಕೂದಲಿನ ಪ್ರೊಟೀನ್‌ಗೆ ಘಾಸಿಯುಂಟು ಮಾಡುತ್ತವೆ. ಕೂದಲಿನ ಬಣ್ಣ ಮಸುಕಾಗಲು ಸಹ ಕಾರಣವಾಗುತ್ತವೆ. ಹೀಗಾಗಿ ವರ್ಷದ ಪ್ರತಿದಿನವೂ ನೀವು ಸೂರ್ಯನ ಕಿರಣಗಳಿಂದ ಕೂದಲನ್ನು ರಕ್ಷಿಸಿಕೊಳ್ಳುವುದು ಮುಖ್ಯವಾಗಿದೆ. ನಮ್ಮ ತ್ವಚೆಯಂತೆಯೇ ಕೂದಲು ಕೂಡ ಸೂರ್ಯನ ಬೆಳಕಿಗೆ ಒಡ್ಡಿಕೊಂಡು ಹಾನಿಮಾಡಿಕೊಳ್ಳುವುದರಿಂದ ನಾವು ಈ ಎಚ್ಚರಿಕೆಯನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.

ಯಾರ ಕೂದಲು ಹೆಚ್ಚುಕಾಲ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುತ್ತದೆಯೋ ಅಂಥವರ ಕೂದಲು ಬೇಗ ಟಿಸಿಲುಗೊಳ್ಳುತ್ತದೆ. ಟಿಸಿಲುಗೊಂಡ ಕೂದಲುಗಳು ಬೆಳವಣಿಗೆ ಕಾಣುವುದಿಲ್ಲ. ಅಲ್ಲದೇ ಕೂದಲುಗಳಲ್ಲಿ ಇರುವ ನೈಸರ್ಗಿಕ ತೈಲಗಳು ಆವಿಯಾಗುತ್ತವೆ.ಇದರಿಂದ ಕೂದಲು ನಿರ್ಜೀವಗೊಳ್ಳುತ್ತದೆ. ಕೂದಲಿನ ಪ್ರೊಟೀನ್ಗಳು ಒಡೆದು ಹೋಗಬಹುದು. ಇವೆಲ್ಲರಿಂದ ಕೂದಲು ದುರ್ಬಲಗೊಳ್ಳುತ್ತದೆ.

ಸೂರ್ಯನ ವಿಕಿರಣಗಳಿಂದ ಕೂದಲನ್ನು ರಕ್ಷಿಸಿಕೊಳ್ಳುವುದು ಹೇಗೆ?

ಟೊಪ್ಪಿ ಇಲ್ಲವೇ ಸ್ಕಾರ್ಪ್ ಧರಿಸಿ : ಅನೇಕರು ಟೊಪ್ಪಿಯನ್ನು ಕೇವಲ ಫೋಟೋಗಳಿಗೆ ಪೋಸ್ ಕೊಡಲು ಮಾತ್ರ ಬಳಸುತ್ತಾರೆ. ಆದರೆ ಹಾಗಲ್ಲ. ಟೋಪಿ ಇಲ್ಲವೇ ಸ್ಕಾರ್ಪ್ಗಳನ್ನು ನೀವು ಹೊರಗಡೆ ಹೋಗುವಾಗ ಸೂರ್ಯನ ವಿರುದ್ಧ ನಿಮ್ಮ ಕೂದಲನ್ನು ರಕ್ಷಿಸುವ ಆಯುಧವನ್ನಾಗಿ ಬಳಸಿಕೊಳ್ಳಬೇಕು.

ಆದಷ್ಟು ಸೂರ್ಯನ ಕಿರಣಗಳಿಂದ ದೂರವಿರಿ : ಸೂರ್ಯನ ಪ್ರಖರತೆ ಜಾಸ್ತಿ ಇರುವ ಸಂದರ್ಭಗಳಲ್ಲಿ ನೀವು ಆದಷ್ಟು ಹೊರಾಂಗಣ ಕೆಲಸಗಳನ್ನು ಮುಂದೂಡುವುದು ಒಳ್ಳೆಯದು. ಅಪರಾಹ್ನ ಸಮಯದಲ್ಲಿ ಹೊರಗಿನ ಓಡಾಟವನ್ನು ತಪ್ಪಿಸಿ. ಈ ರೀತಿ ನೀವು ಸೂರ್ಯನ ವಿಕಿರಣಗಳಿಂದ ಕೂದಲನ್ನು ರಕ್ಷಿಸಿಕೊಳ್ಳಬಹುದಾಗಿದೆ.

ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನೀವು ಸೂರ್ಯನಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುವುದರಿಂದ ನೀವು ಯುವಿ ಕಿರಣಗಳಿಂದ ನಿಮ್ಮ ಕೂದಲಿಗೆ ಆಗುವ ಹಾನಿಯನ್ನು ಗಮನಾರ್ಹವಾಗಿ ಕಡಿಮೆ ಮಾಡಿಕೊಳ್ಳಬಹುದಾಗಿದೆ. ಬೆಳಗ್ಗೆ 10 ಗಂಟೆಗೂ ಮೊದಲು ಅಥವಾ ಸಂಜೆಯ ಸಮಯದಲ್ಲಿ ನೀವು ಹೊರಗೆ ಹೋಗುವ ಅಭ್ಯಾಸ ಇಟ್ಟುಕೊಳ್ಳಿ. ಈ ರೀತಿ ಮಾಡುವುದರಿಂದ ನಿಮ್ಮ ಕೂದಲಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ.

ನಿಯಮಿತವಾಗಿ ಕಂಡೀಷನಿಂಗ್ ಮಾಡುವುದು : ಸೂರ್ಯನ ಕಿರಣಗಳಿಂದ ಆವಿಯಾದ ಕೂದಲಿನ ತೇವಾಂಶವನ್ನು ಮರಳಿ ತರಲು ನೀವು ತಲೆಸ್ನಾನದ ಬಳಿಕ ಕೂದಲಿಗೆ ಕಂಡೀಷನರ್ ಬಳಕೆ ಮಾಡುವುದನ್ನು ಮರೆಯಬಾರದು. ಒಳ್ಳೆಯ ಗುಣಮಟ್ಟದ ಕಂಡೀಷನರ್ನಿಂದ ಕೂದಲನ್ನು ವಾರಕ್ಕೆ 2 ಬಾರಿಯಾದರೂ ಕಂಡೀಷನಿಂಗ್ ಮಾಡಿಕೊಳ್ಳಬೇಕು.

ಯುವಿ ಕಿರಣಗಳಿಂದ ರಕ್ಷಿಸಬಲ್ಲ ಉತ್ಪನ್ನಗಳ ಬಳಕೆ : ಹೇಗೆ ತ್ವಚೆಯನ್ನು ಯುವಿ ಕಿರಣಗಳಿಂದ ಕಾಪಾಡಲು ವಿವಿಧ ಸನ್‌ಸ್ಕ್ರೀನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆಯೋ ಅದೇ ರೀತಿ ಸೂರ್ಯನ ವಿಕಿರಣಗಳಿಂದ ಕೂದಲನ್ನು ಪಾರು ಮಾಡಬಲ್ಲ ಉತ್ಪನ್ನಗಳೂ ಮಾರುಕಟ್ಟೆಯಲ್ಲಿವೆ. ಇವುಗಳನ್ನು ನಿಯಮಿತವಾಗಿ ಬಳಕೆ ಮಾಡಿ.