ಕನ್ನಡ ಸುದ್ದಿ  /  ಜೀವನಶೈಲಿ  /  Bird Flu: ಭಾರತದಲ್ಲಿ ಮತ್ತೆ ಕಾಣಿಸಿದೆ ಹಕ್ಕಿಜ್ವರ; ಈ ಸೋಂಕಿನ ರೋಗಲಕ್ಷಣಗಳು, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ

Bird Flu: ಭಾರತದಲ್ಲಿ ಮತ್ತೆ ಕಾಣಿಸಿದೆ ಹಕ್ಕಿಜ್ವರ; ಈ ಸೋಂಕಿನ ರೋಗಲಕ್ಷಣಗಳು, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ

ಭಾರತದಲ್ಲಿ 5 ವರ್ಷಗಳ ನಂತರ ಮೊದಲ ಬಾರಿಗೆ ಮನುಷ್ಯರಲ್ಲಿ ಹಕ್ಕಿ ಜ್ವರ ಕಾಣಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯು ಪಶ್ಚಿಮ ಬಂಗಾಳದಲ್ಲಿ ಮೊದಲ ಹಕ್ಕಿಜ್ವರದ ಪ್ರಕರಣ ಪತ್ತೆಯಾಗಿರುವುದನ್ನು ದೃಢಪಡಿಸಿದೆ. ಈ ಸಂದರ್ಭದಲ್ಲಿ ಈ ಜ್ವರದ ಲಕ್ಷಣಗಳು ಹಾಗೂ ಸೋಂಕು ತಡೆಗಟ್ಟುವ ಮಾರ್ಗದ ಬಗ್ಗೆ ನೀವು ತಿಳಿದಿರಬೇಕಾದ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಮತ್ತೆ ಕಾಣಿಸಿದೆ ಹಕ್ಕಿಜ್ವರ; ಈ ಸೋಂಕಿನ ರೋಗಲಕ್ಷಣಗಳು, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ
ಭಾರತದಲ್ಲಿ ಮತ್ತೆ ಕಾಣಿಸಿದೆ ಹಕ್ಕಿಜ್ವರ; ಈ ಸೋಂಕಿನ ರೋಗಲಕ್ಷಣಗಳು, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ

ಕಳೆದೊಂದಿಷ್ಟು ವರ್ಷಗಳಿಂದ ತಣ್ಣಗಾಗಿದ್ದ, ಹಕ್ಕಿ ಜ್ವರದ ಭೀತಿ ಇದೀಗ ಮತ್ತೆ ಶುರುವಾಗಿದೆ. ಭಾರತದಲ್ಲಿ ಮನುಷ್ಯರಲ್ಲಿ ಮೊದಲ ಹಕ್ಕಿಜ್ವರದ ಪ್ರಕರಣ ಇದೀಗ ಪತ್ತೆಯಾಗಿದೆ. ಪಶ್ಚಿಮ ಬಂಗಾಳದ 4 ವರ್ಷ ಹುಡುಗನೊಬ್ಬನಿಗೆ ಹಕ್ಕಿ ಜ್ವರ ಬಂದಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ. ಆ ಹುಡುಗನನ್ನು ಸೇರಿ ಭಾರತದಲ್ಲಿ ಇಬ್ಬರಲ್ಲಿ ಹಕ್ಕಿ ಜ್ವರ ಕಾಣಿಸಿದೆ. ಇದು ಎರಡನೇ ಪ್ರಕರಣವಾಗಿದೆ. ಮಂಗಳವಾರ H9N2 ವೈರಸ್‌ನಿಂದ ಉಂಟಾದ ಹಕ್ಕಿ ಜ್ವರದ ಸೋಂಕು ಮಾನವರಲ್ಲಿ ಪತ್ತೆಯಾಗಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ದೃಢಪಡಿಸಿದೆ ಎಂದು ರಾಯಿಟರ್‌ ವರದಿ ಮಾಡಿದೆ.

ಸೋಂಕು ಪತ್ತೆಯಾದ ಬಾಲಕನಿಗೆ ಫೆಬ್ರುವರಿ ತಿಂಗಳಲ್ಲಿ ನಿರಂತರ ತೀವ್ರ ಉಸಿರಾಟ ಸಮಸ್ಯೆ, ಅಧಿಕ ಜ್ವರ ಮತ್ತು ಹೊಟ್ಟೆಯ ಸೆಳೆತದಿಂದ ಕಾರಣದಿಂದ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ರೋಗ ನಿರ್ಣಯ ಮತ್ತು ಚಿಕಿತ್ಸೆ ನೀಡಿದ ಮೂರು ತಿಂಗಳ ನಂತರ ಬಿಡುಗಡೆ ಮಾಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಅದರ ಪ್ರಕಾರ ಈ ಬಾಲಕ ಮನೆ ಹಾಗೂ ಸುತ್ತಲಿನ ಕೋಳಿಗಳ ಜೊತೆ ಹೆಚ್ಚು ಸಮಯ ಕಳೆದಿದ್ದಾನೆ. ಅವನ ಕುಟುಂಬದಲ್ಲಿ ಯಾರಿಗೂ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳು ಇರಲಿಲ್ಲ. ಭಾರತದಲ್ಲಿ ಇದು ಎರಡನೇ H9N2 ಹಕ್ಕಿ ಜ್ವರದ ಪ್ರಕರಣ ಎಂದು ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

H9N2 ವೈರಸ್ ಸಾಮಾನ್ಯವಾಗಿ ಸೌಮ್ಯ ಥರದ ಅನಾರೋಗ್ಯವನ್ನು ಉಂಟುಮಾಡುತ್ತದೆ, ಈ ವೈರಸ್ ವಿವಿಧ ಪ್ರದೇಶಗಳಲ್ಲಿ ಕೋಳಿಗಳಲ್ಲಿ ಹರಡುವ ಅತ್ಯಂತ ಪ್ರಚಲಿತ ಏವಿಯನ್ ಇನ್ಫ್ಲುಯೆನ್ಸ ವೈರಸ್‌ಗಳಲ್ಲಿ ಒಂದಾಗಿರುವುದರಿಂದ ಮತ್ತಷ್ಟು ವಿರಳ ಮಾನವ ಪ್ರಕರಣಗಳು ಸಂಭವಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಹಕ್ಕಿ ಜ್ವರದ ರೋಗಲಕ್ಷಣಗಳು

* ನಿರಂತರ ತಲೆನೋವು

* ಜ್ವರ

* ಅತಿಸಾರ

* ಗಂಟಲು ಕೆರೆತ

* ಮೂಗು ಸೋರುವುದು

* ಸ್ನಾಯು ಸೆಳೆತ

* ಉಸಿರಾಟದ ಸಮಸ್ಯೆ

ಹಕ್ಕಿ ಜ್ವರದ ಸೋಂಕು ಬಾರದಂತೆ ತಡೆಯುವುದು ಹೇಗೆ?

ನೈಮರ್ಲ್ಯ ಕಾಪಾಡಿಕೊಳ್ಳಿ: ಆಹಾರ ಸೇವಿಸುವ ಮೊದಲು ಮತ್ತು ಸಾರ್ವಜನಿಕ ಸ್ಥಳಗಳಿಂದ ಹಿಂತಿರುಗಿದ ನಂತರ ಯಾವಾಗಲೂ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ. ಪ್ರತಿದಿನ ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳನ್ನು ಹೊಂದಿರುವ ಹಲವಾರು ಮೇಲ್ಮೈಗಳ ಮೇಲೆ ನಾವು ಕೈ ಇಡುತ್ತೇವೆ. ಆದ್ದರಿಂದ, ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಯಾವಾಗಲೂ ಕೈ ತೊಳೆಯುವುದು ಬಹಳ ಮುಖ್ಯವಾಗುತ್ತದೆ. 

ಮಾಸ್ಕ್ ಅಪ್

ಸೋಂಕಿನ ಪ್ರಕರಣಗಳು ಹೆಚ್ಚಾದಾಗ, ಸಾರ್ವಜನಿಕ ಸ್ಥಳಗಳಲ್ಲಿ ಯಾವಾಗಲೂ ಮಾಸ್ಕ್ ಧರಿಸುವುದು ಉತ್ತಮ. ನೀವು ಕೋಳಿ ಫಾರ್ಮ್‌ಗೆ ಭೇಟಿ ನೀಡಿದರೆ, ವೈರಸ್ ಹರಡುವುದನ್ನು ತಪ್ಪಿಸಲು ಮಾಸ್ಕ್‌ ಹಾಕುವುದು ಉತ್ತಮ.

ಸೋಂಕಿತ ಜಾತಿಗಳು, ಪ್ರಾಣಿಗಳ ಮಲವಿಸರ್ಜನೆ, ಹಿಕ್ಕೆಗಳು, ಲಾಲಾರಸ ಇತ್ಯಾದಿಗಳೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಿ.

ಆಹಾರವನ್ನು ಸರಿಯಾಗಿ ಬೇಯಿಸಿ: ಆಹಾರವನ್ನು ಸರಿಯಾಗಿ ಬೇಯಿಸಲು ಸಲಹೆ ನೀಡಲಾಗುತ್ತದೆ. ಕಚ್ಚಾ ಆಹಾರ, ಬೇಯಿಸದ ಕೋಳಿ ಹಾಗೂ ಮೊಟ್ಟೆ ಇತ್ಯಾದಿಗಳನ್ನು ಸೇವಿಸುವುದನ್ನು ತಪ್ಪಿಸಿ.

ರೋಗನಿರೋಧ ಶಕ್ತಿ ಹೆಚ್ಚಿಸುವ ಆಹಾರ ಕ್ರಮ: ಪ್ರತಿನಿತ್ಯ ಪೋಷಕಾಂಶಗಳಿಂದ ಕೂಡಿದ ಆಹಾರವನ್ನು ಸೇವಿಸುವುದು ಅತ್ಯಗತ್ಯ. ಪೋಷಕಾಂಶಗಳು, ಜೀವಸತ್ವಗಳು, ಖನಿಜಗಳು ಸಮೃದ್ಧವಾಗಿರುವ ಊಟವು ಯಾವುದೇ ಕೊರತೆಗಳು ಮತ್ತು ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಟಮಿನ್ ಸಿ, ಎ, ಸತು, ಫೈಬರ್, ಪ್ರೋಟೀನ್ ಇತ್ಯಾದಿಗಳಲ್ಲಿ ಸಮೃದ್ಧವಾಗಿರುವ ಆಹಾರವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಬಲವಾದ ರೋಗನಿರೋಧಕ ಶಕ್ತಿಯು ದೇಹವನ್ನು ಪ್ರವೇಶಿಸುವ ಆಕ್ರಮಣಕಾರಿ ರೋಗಕಾರಕಗಳು ಮತ್ತು ವೈರಸ್‌ಗಳನ್ನು ಎದುರಿಸಲು ಸಹಾಯ ಮಾಡುತ್ತದೆ.