ಕನ್ನಡ ಸುದ್ದಿ  /  ಜೀವನಶೈಲಿ  /  ಬೆಳಗಿನ ಉಪಾಹಾರ ಸೇವಿಸದೇ ಇರುವುದರಿಂದ ಕಾಡಬಹುದು ಕ್ಯಾನ್ಸರ್‌; ಇನ್ನಿತರ ಸಂಭಾವ್ಯ ಅಪಾಯಗಳ ಪಟ್ಟಿ ಹೀಗಿದೆ

ಬೆಳಗಿನ ಉಪಾಹಾರ ಸೇವಿಸದೇ ಇರುವುದರಿಂದ ಕಾಡಬಹುದು ಕ್ಯಾನ್ಸರ್‌; ಇನ್ನಿತರ ಸಂಭಾವ್ಯ ಅಪಾಯಗಳ ಪಟ್ಟಿ ಹೀಗಿದೆ

Skipping Breakfast Cause Cancer: ದೀರ್ಘಕಾಲದವರೆಗೆ ಬೆಳಗಿನ ಉಪಾಹಾರವನ್ನು ಸೇವಿಸದೇ ಇರುವುದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಇದರಿಂದ ದೇಹದಲ್ಲಿ ಗ್ಲೂಕೋಸ್‌ ಪ್ರಮಾಣ ಕಡಿಮೆಯಾಗಿ ಕ್ಯಾನ್ಸರ್‌ಗೂ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು.

ಬೆಳಗಿನ ಉಪಾಹಾರ ತ್ಯಜಿಸುವುದರಿಂದ ಕಾಡಬಹುದು ಕ್ಯಾನ್ಸರ್‌
ಬೆಳಗಿನ ಉಪಾಹಾರ ತ್ಯಜಿಸುವುದರಿಂದ ಕಾಡಬಹುದು ಕ್ಯಾನ್ಸರ್‌

ಬೆಳಗಿನ ಉಪಾಹಾರವನ್ನು ಸೇವಿಸದೇ ಇರುವ ಅಭ್ಯಾಸ ಹಲವರಲ್ಲಿ ರೂಢಿಯಾಗಿರುತ್ತದೆ. ಇತ್ತೀಚಿನ ಧಾವಂತದ ಜೀವನದಲ್ಲಿ ಮನುಷ್ಯರಿಗೆ ಊಟ, ತಿಂಡಿ ಸರಿಯಾಗಿ ಮಾಡಲು ಸಮಯವಿಲ್ಲ. ಆದರೆ ದೀರ್ಘಕಾಲದವರೆಗೆ ಉಪಾಹಾರ ಸೇವಿಸದೇ ಇರುವುದರಿಂದ ಅಪಾಯ ತಪ್ಪಿದ್ದಲ್ಲ.

ಟ್ರೆಂಡಿಂಗ್​ ಸುದ್ದಿ

ಬೆಳಗಿನ ಉಪಾಹಾರವನ್ನು ನಿಯಮಿತವಾಗಿ ಸೇವಿಸುವವರಿಗಿಂತ ಉಪಾಹಾರವನ್ನು ತ್ಯಜಿಸುವ ಜನರು ಕೆಲವು ವಿಧದ ಕ್ಯಾನ್ಸರ್‌ ಅಪಾಯವನ್ನು ಎದುರಿಸಬಹುದು ಎನ್ನುತ್ತಾರೆ ತಜ್ಞರು.

ಇತ್ತೀಚಿನ ಅಧ್ಯಯನದ ಪ್ರಕಾರ, ದಿನನಿತ್ಯದ ಉಪಾಹಾರ ಸೇವಿಸುವವರಿಗೆ ಹೋಲಿಸಿದರೆ ಬೆಳಗಿನ ಉಪಾಹಾರ ಸೇವಿಸದೇ ಇರುವವರಲ್ಲಿ ಅನ್ನನಾಳದ ಕ್ಯಾನ್ಸರ್‌, ಕೊಲೊರೆಕ್ಟಲ್‌ ಕ್ಯಾನ್ಸರ್‌, ಯಕತ್ತು ಹಾಗೂ ಪಿತ್ತಕೋಶ ಕ್ಯಾನ್ಸರ್‌ನ ಅಪಾಯ ಎದುರಾಗುವ ಸಂಭವ ಹೆಚ್ಚು ಎನ್ನಲಾಗುತ್ತಿದೆ.

ಬೆಳಗಿನ ಉಪಾಹಾರ ಸೇವಿಸದೇ ಇರುವುದರಿಂದ ಗ್ಲೊಕೋಸ್‌ ಪ್ರಮಾಣದಲ್ಲಿ ಕುಸಿತ ಉಂಟಾಗುತ್ತದೆ. ಚಯಾಪಚಯ, ದೀರ್ಘಕಾಲದ ಉರಿಯೂತ, ಬೊಜ್ಜು ಮತ್ತು ಹೃದಯರಕ್ತನಾಳದ ಕಾಯಿಲೆ ಹಾಗೂ ಕ್ಯಾನ್ಸರ್‌ಗೆ ಕಾರಣವಾಗಬಹುದು. ಚೀನಾದ ಸಂಶೋಧಕರು 63,000 ಮಂದಿ ಯುವಜನರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಉಪಾಹಾರವನ್ನು ತ್ಯಜಿಸುವುದು ಮತ್ತು ಜಠರಗರುಳಿನ ಕ್ಯಾನ್ಸರ್‌ ನಡುವೆ ಸಂಬಂಧವನ್ನು ಕಂಡುಕೊಂಡಿದ್ದಾರೆ.

ಶಾಲಿಮಾರ್‌ ಬಾಗ್‌ನ ಫೋರ್ಟಿಸ್‌ ಆಸ್ಪತ್ರೆಯ ಡೆಯೆಟಿಕ್ಸ್‌ ವಿಭಾಗದ ಮುಖ್ಯಸ್ಥರಾದ ಶ್ವೇತಾ ಗುಪ್ತಾ ಅವರ ಪ್ರಕಾರ ʼಉಪಾಹಾರ ಸೇವಿಸದೇ ಇರುವುದು ಜಠರಗರುಳಿನ ಕ್ಯಾನ್ಸರ್‌ ಅಪಾಯದದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಏಕೆಂದರೆ ಇದು ಗ್ಲೊಕೋಸ್‌ ಚಯಾಪಚಯನ್ನು ದುರ್ಬಲಗೊಳಿಸುತ್ತದೆ. ದೀರ್ಘಕಾಲದ ಉರಿಯೂತವನ್ನೂ ಉಂಟು ಮಾಡುತ್ತದೆ. ಆಕ್ಸಿಡೀಕರಣ ಮತ್ತು ಜೀನ್‌ ರೂಪಾಂತರದಂತಹ ಪ್ರಕ್ರಿಯೆಗಳ ಮೂಲಕ ಗಡ್ಡೆಗಳ ಬೆಳವಣೆಗೆಗೆ ಕಾರಣವಾಗಬಹುದು. ಇದರಿಂದ ಅನ್ನನಾಳದ ಕ್ಯಾನ್ಸರ್‌, ಕೊಲೊರೆಕ್ಟಲ್‌ ಕ್ಯಾನ್ಸರ್‌ ಮತ್ತು ಹೊಟ್ಟೆಯ ಕ್ಯಾನ್ಸರ್‌ನಂತಹ ಅಪಾಯ ಎದುರಿಸಬಹುದು.

ʼಆಹಾರ ಸೇವನೆಯು ಮಾನವ ದೇಹಕ್ಕೆ ಶಕ್ತಿ ಮತ್ತು ಪೋಷಕಾಂಶಗಳನ್ನು ಒದಗಿಸುವುದು ಮಾತ್ರವಲ್ಲ, ಇದು ನಮ್ಮ ದೇಹದ ಚಯಾಪಚಯ ಕ್ರಿಯೆ, ಭಾವನೆಗಳು ಹಾಗೂ ಜೀವನಶೈಲಿ ಆಧಾರಿತ ರೋಗಗಳ ಅಪಾಯದ ಅಂಶಗಳ ಮೇಲೂ ಪರಿಣಾಮ ಬೀರುತ್ತದೆ. ಪ್ರತಿಯೊಬ್ಬರು ದಿನದಲ್ಲಿ 6 ಬಾರಿ ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸಬೇಕು. 3 ಬಾರಿ ಪ್ರಮುಖ ಆಹಾರ ಸೇವನೆ ಹಾಗೂ 3 ಬಾರಿ ಸಣ್ಣ ಪ್ರಮಾಣದ ಆಹಾರ ಸೇವನೆಯ ಕ್ರಮವನ್ನು ಪಾಲಿಸಬೇಕು. ಇದು ಹಸಿವನ್ನು ಕಾಪಾಡಿಕೊಳ್ಳಲು ಮತ್ತು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಸಿವಿನ ಸಂಕಟವನ್ನು ತಡೆಯಲು ಇದರಿಂದ ಸಾಧ್ಯ, ಅಲ್ಲದೆ ಚಯಾಪಚಯ ಕ್ರಿಯೆಯೂ ವೃದ್ಧಿಯಾಗುತ್ತದೆʼ ಎನ್ನುತ್ತಾರೆ ಗುರುಗ್ರಾಮದ ಸಿಕೆ ಬಿರ್ಲಾ ಆಸ್ಪತ್ರೆಯ ಮುಖ್ಯ ಪೌಷ್ಟಿಕತಜ್ಞೆ ಪ್ರಾಚಿ ಜೈನ್‌.

ಉಪಾಹಾರ ಸೇವಿಸದೇ ಇರುವುದರಿಂದ ಉಂಟಾಗುವ ಇತರ ಸಮಸ್ಯೆಗಳು

ಶ್ವೇತಾಗುಪ್ತಾ ಅವರ ಪ್ರಕಾರ ಬೆಳಗಿನ ಉಪಾಹಾರ ಸೇವಿಸುವುದು ಬಹಳ ಅವಶ್ಯ, ಇದನ್ನು ತಪ್ಪಿಸುವುದರಿಂದ ಹಲವು ಸಮಸ್ಯೆಗಳು ಎದುರಾಗುತ್ತವೆ.

 • ರಕ್ತದಲ್ಲಿನ ಗ್ಲುಕೋಸ್‌ ಮಟ್ಟ ಕಡಿಮೆಯಾಗುತ್ತದೆ: ಬೆಳಗಿನ ಉಪಾಹಾರ ಸೇವಿಸದೇ ಇರುವುದರಿಂದ ದಿನವಿಡೀ ಸುಸ್ತಾಗುವುದು, ಕಿರಿಕಿರಿ, ನಿಶಕ್ತಿ ಕಾಡುತ್ತದೆ. ಅಲ್ಲದೆ ಇದರಿಂದ ತಲೆನೋವು ಹಾಗೂ ಮೈಗ್ರೇನ್‌ ಕೂಡ ಬಾಧಿಸಬಹುದು. ಇದು ಟೈಪ್‌ 2 ಮಧುಮೇಹಕ್ಕೂ ಕಾರಣವಾಗಬಹುದು.
 • ಚಯಾಪಚಯ ಕ್ರಿಯೆ ನಿಧಾನಕ್ಕೆ ಕಡಿಮೆಯಾಗುತ್ತದೆ: ಇದರಿಂದ ದೇಹದಲ್ಲಿ ಕ್ಯಾಲೊರಿ ಪ್ರಮಾಣ ಹೆಚ್ಚಾಗಿ ಇತರ ಸಮಸ್ಯೆಗಳು ಉಂಟಾಗಲು ಕಾರಣವಾಗಬಹುದು.
 • ಒತ್ತಡದ ಹಾರ್ಮೋನ್‌ಗಳ ಸಂಖ್ಯೆ ಹೆಚ್ಚುತ್ತದೆ: ಉಪಾಹಾರ ಸೇವಿಸದೇ ಇರುವುದರಿಂದ ಕಾರ್ಟಿಸೋಲ್‌ ಹಾರ್ಮೋನಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದು ಪ್ರಾಥಮಿಕ ಒತ್ತಡದ ಹಾರ್ಮೋನ್‌ ಆಗಿದೆ.
 • ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ: ಬೆಳಗಿನ ಉಪಾಹಾರ ಸೇವಿಸದೇ ಇರುವುದರಿಂದ ನಿಮಗೆ ಹೆಚ್ಚು ಹಸಿವು, ನಿಶಕ್ತಿ ಕಾಡಬಹುದು. ಇದರಿಂದ ನೀವು ಹಗಲಿನ ವೇಳೆ ಅತಿಯಾಗಿ ಆಹಾರ ಸೇವಿಸಬಹುದು. ಅಧಿಕ ಕ್ಯಾಲೊರಿ, ಸ್ಯಾಚುರೇಟೆಡ್‌ ಕೊಬ್ಬು, ಸಕ್ಕರೆಯಂಶ ಇರುವ ಆಹಾರ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೆಚ್ಚು ಹೆಚ್ಚು ಸೇವಿಸುವ ಪ್ರವೃತ್ತಿಯನ್ನು ಹೊಂದಿರುತ್ತೀರಿ. ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
 • ಹೃದಯದ ಸಂಬಂಧಿ ಸಮಸ್ಯೆಗಳ ಹೆಚ್ಚಳ: ಬೆಳಗಿನ ಉಪಾಹಾರ ತ್ಯಜಿಸುವುದರಿಂದ ಅಧಿಕ ರಕ್ತದೊತ್ತಡಕ್ಕೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸಬಹುದು. ಅಧಿಕ ಕೊಲೆಸ್ಟ್ರಾಲ್‌ ಮಟ್ಟವು ಅಪಧಮನಿಗಳನ್ನು ಮಟ್ಟವನ್ನು ಮುಚ್ಚಿಹಾಕಲು ಕಾರಣವಾಗುತ್ತದೆ.
 • ಇದು ಕೂದಲು ಉದುರಲು ಕಾರಣವಾಗುತ್ತದೆ.
 • ಅರಿವಿನ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ: ಮೆದುಳಿನದಲ್ಲಿ ಗ್ಲುಕೋಸ್‌ ಪ್ರಮಾಣ ಕಡಿಮೆಯಾಗುವುದರಿಂದ ಇದು ಕೆಲಸ ಕಾರ್ಯಗಳ ಗಮನ ನೀಡಲು ಅಡ್ಡಿಪಡಿಸುತ್ತದೆ.
 • ಇದು ರೋಗನಿರೋಧಕ ಶಕ್ತಿ ಕಡಿಮೆಯಾಗಲು ಕಾರಣವಾಗುತ್ತದೆ.
 • ಇದರಿಂದ ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್‌, ಅಸಿಡಿಟಿಯಂತಹ ಸಮಸ್ಯೆಗಳೂ ಕಾಡಬಹುದು.

ದೈಹಿಕ ಯೋಗಕ್ಷೇಮದಲ್ಲಿ ಬ್ರೇಕ್‌ಫಾಸ್ಟ್‌ನ ಪಾತ್ರವೇನು?

ಬೆಳಗಿನ ಉಪಾಹಾರ ಸೇವನೆಯು ಗ್ಲೈಕೋಜೆನ್‌ ಅನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ ಹಾಗೂ ಇನ್ಸುಲಿನ್‌ ಮಟ್ಟವನ್ನು ಸ್ಥಿರಗೊಳಿಸುತ್ತದೆ. ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಗ್ಲುಕೋಸ್‌ನ ಪೂರೈಕೆಯನ್ನು ಹೆಚ್ಚಿಸುತ್ತದೆ.

 • ಇದು ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
 • ಬೆಳಗಿನ ಉಪಾಹಾರವು ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ, ಏಕೆಂದರೆ ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ಸರಿಯಾದ ಗ್ಲೂಕೋಸ್ ಮತ್ತು ಪೋಷಕಾಂಶಗಳನ್ನು ಪಡೆಯುತ್ತದೆ.
 • ಬೆಳಗಿನ ಉಪಾಹಾರವು ಚಯಾಪಚಯವನ್ನು ಸುಧಾರಿಸುತ್ತದೆ, ತೂಕ ನಷ್ಟವನ್ನು ಉತ್ತೇಜಿಸುತ್ತದೆ, ಟೈಪ್ 2 ಮಧುಮೇಹ ಮತ್ತು ಇತರ ಚಯಾಪಚಯ ಅಸ್ವಸ್ಥತೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ
 • ಬೆಳಗಿನ ಉಪಾಹಾರವನ್ನು ಸೇವಿಸುವ ಮೂಲಕ ನಿಮ್ಮ ದೇಹವು ದಿನವಿಡೀ ಹೆಚ್ಚು ಕ್ಯಾಲೊರಿ ನಷ್ಟವನ್ನು ಪ್ರೋತ್ಸಾಹಿಸಬಹುದು.
 • ಬೆಳಗಿನ ಉಪಾಹಾರವು ಕಾರ್ಟಿಸೋಲ್ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ, ಉತ್ತಮ ಮನಸ್ಥಿತಿ ಮತ್ತು ಸಂತೋಷವನ್ನು ಉತ್ತೇಜಿಸುತ್ತದೆ.
 • ಹೃದಯವನ್ನು ಆರೋಗ್ಯವಾಗಿಡುತ್ತದೆ: ಬೆಳಗಿನ ಉಪಾಹಾರವು ಸ್ಥೂಲಕಾಯತೆಯನ್ನು ತಡೆಯುತ್ತದೆ, ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ, ಅಪಧಮನಿಕಾಠಿಣ್ಯ ಮತ್ತು ಅದರ ಮುಂದಿನ ತೊಡಕುಗಳು.

ಸಮಯವಿಲ್ಲದಿದ್ದಾಗ ಉಪಾಹಾರದ ಬದಲು ಇವನ್ನು ಸೇವಿಸಿ

ಬೆಳಗಿನ ಧಾವಂತದಲ್ಲಿ ಉಪಾಹಾರ ಸೇವಿಸಲು ಸಾಧ್ಯವಾಗದೇ ಇದ್ದರೆ ಉಪಾಹಾರಕ್ಕೆ ಪೂರಕವಾಗಿರುವ ಇತರ ಆಹಾರಗಳನ್ನೂ ಸೇವಿಸಬಹುದು. ಇದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುವ ಅಪಾಯದಿಂದ ದೂರ ಸರಿಯಬಹುದು. ಅಂತಹ ಆಹಾರಗಳು ಹೀಗಿವೆ.

 • ತಾಜಾ ಹಣ್ಣುಗಳು, ನೆನೆಸಿದ ಒಣಹಣ್ಣುಗಳು
 • ನೈಸರ್ಗಿಕ ಹಾಲು ಮೊಸರು, ಹಣ್ಣು, ತರಕಾರಿಗಳಿಂದ ಮಾಡಿದ ಸ್ಮೂಥಿ,
 • ಬೇಯಿಸಿದ ಮೊಟ್ಟೆ ಅಥವಾ ಮೊಟ್ಟೆ ಓಮ್ಲೆಟ್‌
 • ಹಾಲು, ಒಣ ಹಣ್ಣು ಸೇರಿಸಿದ ಓಟ್‌ ಮೀಲ್‌.
 • ಅವಲಕ್ಕಿ, ಉಪ್ಪಿಟ್ಟು, ಬೇಸನ್‌ ಚಿಲ್ಲಾ, ಇಡ್ಲಿ, ಶಾವಿಗೆ ತಿನ್ನಬಹುದು.

ಗ್ಯಾಸ್ಟ್ರೋ ಕ್ಯಾನ್ಸರ್‌ನ ಅಪಾಯಕಾರಿ ಅಂಶಗಳು

 • ಹೆಲಿಕೋಬ್ಯಾಕ್ಟರ್ ಪೈಲೋರಿ ಎಂಬ ಸೂಕ್ಷ್ಮಾಣುಗಳಿಂದ ಹೊಟ್ಟೆಯಲ್ಲಿ ಸೋಂಕು ಉಂಟಾಗುತ್ತದೆ
 • ಉಪ್ಪಿನಾಂಶ ಹೆಚ್ಚಿರುವ, ಪ್ರಿಸರ್ವೆಟಿವ್‌ ಸೇರಿಸಿದ ಹಾಗೂ ಸ್ಮೋಕ್ಡ್‌ ಆಹಾರಗಳ ಸೇವನೆಯಿಂದ ಇತರ ಅಪಾಯ ಹೆಚ್ಚು.
 • ಬೊಜ್ಜು
 • ಜಠರದ ಹಿಮ್ಮುಖ ಹರಿವು ರೋಗ
 • ಗ್ಯಾಸ್ಟ್ರಿಕ್‌
 • ಅಪಾಯಕಾರಿ ರಕ್ತಹೀನತೆ
 • ರೋಗನಿರೋಧಕ ಹಾಗೂ ಪ್ರತಿರೋಧಕ ಶಕ್ತಿಯಲ್ಲಿ ವ್ಯತ್ಯಯ ಉಂಟಾಗುತ್ತದೆ.

ಇದನ್ನೂ ಓದಿ

Worst Morning Foods: ದಿನವಿಡೀ ಆಕ್ಟಿವ್‌ ಆಗಿರಬೇಕು ಅಂದ್ರೆ ಬೆಳಗೆದ್ದು ಈ 5 ಬ್ರೇಕ್‌ಫಾಸ್ಟ್‌ ಐಟಂಗಳನ್ನು ಎಂದಿಗೂ ಸೇವಿಸದಿರಿ

ವಿಭಾಗ