ಕನ್ನಡ ಸುದ್ದಿ  /  ಜೀವನಶೈಲಿ  /  Chia Seeds: ತೂಕ ಇಳಿಕೆ ಮಾತ್ರವಲ್ಲ, ತ್ವಚೆಯ ಅಂದ ಹೆಚ್ಚುವುದರಿಂದ ಹೃದಯದ ಆರೋಗ್ಯದವರೆಗೆ ಚಿಯಾ ಬೀಜ ಸೇವನೆಯ ಪ್ರಯೋಜನಗಳಿವು

Chia Seeds: ತೂಕ ಇಳಿಕೆ ಮಾತ್ರವಲ್ಲ, ತ್ವಚೆಯ ಅಂದ ಹೆಚ್ಚುವುದರಿಂದ ಹೃದಯದ ಆರೋಗ್ಯದವರೆಗೆ ಚಿಯಾ ಬೀಜ ಸೇವನೆಯ ಪ್ರಯೋಜನಗಳಿವು

ಇತ್ತೀಚಿನ ದಿನಗಳಲ್ಲಿ ಹಲವರು ಚಿಯಾ ಬೀಜಗಳನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುತ್ತಾರೆ. ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಇರುವ ಕಾರಣ ಇದು ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ. ತೂಕ ಇಳಿಕೆಯಾಗುವುದರಿಂದ ಹೃದಯದ ಆರೋಗ್ಯ ಸುಧಾರಿಸುವವರೆಗೆ ಚಿಯಾದಿಂದ ಆರೋಗ್ಯಕ್ಕಾಗುವ ಪ್ರಯೋಜನ ಕೇಳಿದ್ರೆ ನೀವು ಅಚ್ಚರಿ ಪಡ್ತೀರಿ.

ಚಿಯಾ ಬೀಜ ಸೇವನೆಯ ಪ್ರಯೋಜನಗಳಿವು
ಚಿಯಾ ಬೀಜ ಸೇವನೆಯ ಪ್ರಯೋಜನಗಳಿವು

ತೂಕ ಇಳಿಕೆ ಹಾಗೂ ಡಯೆಟ್‌ ಪ್ರಿಯರ ಆಹಾರಕ್ರಮದಲ್ಲಿ ಅಗ್ರಸ್ಥಾನ ಪಡೆದಿರುವುದು ಚಿಯಾ ಸೀಡ್ಸ್‌. ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಚಿಯಾ ಬೀಜಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಇದು ತೂಕ ಇಳಿಕೆಗೆ ಮಾತ್ರವಲ್ಲ, ಇದರ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಚಿಯಾ ಬೀಜಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸುಧಾರಿಸುತ್ತದೆ. ಇದಲ್ಲದೆ, ಅವು ಹೃದಯದ ತೊಂದರೆಗಳು, ಮೂಳೆಗಳ ಬಲವರ್ಧನೆಗೂ ಉಪಯುಕ್ತ. ಅದಕ್ಕಾಗಿಯೇ ಅವುಗಳನ್ನು ಸ್ಮೂಥಿಗಳು, ಸಲಾಡ್‌ಗಳು ಸೇರಿದಂತೆ ಕೆಲವು ಪ್ರಮುಖ ಭಕ್ಷ್ಯಗಳಲ್ಲಿ ಸೇರಿಸಿ ಸೇವಿಸಲಾಗುತ್ತದೆ. ಇಷ್ಟೇ ಅಲ್ಲದೇ ಸಿಯಾ ಬೀಜಗಳ ಸೇವನೆಯಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ. ಅಂತಹ ಪ್ರಯೋಜನಗಳು ಯಾವುವು ನೋಡಿ.

ಟ್ರೆಂಡಿಂಗ್​ ಸುದ್ದಿ

ಚಿಯಾ ಬೀಜ ಸೇವನೆಯ ಆರೋಗ್ಯ ಪ್ರಯೋಜನಗಳು

* ಚಿಯಾ ಬೀಜಗಳನ್ನು ಪ್ರತಿದಿನ ಸೇವಿಸುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ.

* ಹೃದಯದ ಆರೋಗ್ಯಕ್ಕಾಗಿ: ಚಿಯಾ ಬೀಜಗಳಲ್ಲಿ ನಾರಿನಾಂಶ, ಹೃದಯದ ಆರೋಗ್ಯಕರಕ್ಕೆ ಅಗತ್ಯವಿರುವ ಕೊಬ್ಬಿನಾಂಶ, ಉತ್ಕರ್ಷಣ ನಿರೋಧಕಗಳು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಹೇರಳವಾಗಿದ್ದು, ಇವು ಹೃದಯದ ಆರೋಗ್ಯಕ್ಕೆ ತುಂಬಾ ಉತ್ತಮ. ಇವುಗಳು ನಿಮ್ಮನ್ನು ಹೃದ್ರೋಗದ ಅಪಾಯದಿಂದ ತಡೆಯುತ್ತದೆ.

ಕೊಲೆಸ್ಟ್ರಾಲ್‌ ನಿಯಂತ್ರಣ: ಈ ಬೀಜಗಳಲ್ಲಿನ ಕರಗುವ ನಾರಿನಾಂಶ ನಿಮ್ಮ ರಕ್ತದಲ್ಲಿನ ಒಟ್ಟಾರೆ ಕೊಲೆಸ್ಟ್ರಾಲ್‌ ಮತ್ತು ಎಲ್‌ಡಿಎಲ್ (ಕೆಟ್ಟ ಕೊಲೆಸ್ಟ್ರಾಲ್) ಅನ್ನು ಕಡಿಮೆ ಮಾಡುತ್ತದೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಹೃದಯದಲ್ಲಿ ಉರಿಯೂತದ ಸಮಸ್ಯೆಯನ್ನು ಸಹ ತಡೆಯುತ್ತದೆ. ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸುತ್ತದೆ. ಆಕ್ಸಿಡೇಟಿವ್ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ.

ಮೂಳೆಗಳ ಆರೋಗ್ಯಕ್ಕೆ: ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕದಂತಹ ಪ್ರಮುಖ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಚಿಯಾ ಬೀಜಗಳು ಉತ್ತಮ ಮೂಳೆ ಖನಿಜ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಮೂಳೆಯ ಬಲವನ್ನು ಹೆಚ್ಚಿಸುತ್ತದೆ. ಆಸ್ಟಿಯೊಪೊರೋಸಿಸ್‌ನಂತಹ ಮೂಳೆ ಸಂಬಂಧಿತ ಚಿಕಿತ್ಸೆಗಳಲ್ಲಿ ಅವು ಸಹಾಯಕವಾಗಿವೆ. ಈ ಬೀಜಗಳಲ್ಲಿನ ಆಲ್ಫಾ-ಲಿಪೊಯಿಕ್ ಆಮ್ಲವು ಮೂಳೆ ಖನಿಜ ಸಾಂದ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಒಂದು ಔನ್ಸ್ ಚಿಯಾ ಬೀಜಗಳು ನಮ್ಮ ದೇಹದ ಮೆಗ್ನೀಸಿಯಮ್ ಅಗತ್ಯಗಳಲ್ಲಿ ಶೇ 30 ಮತ್ತು ನಮ್ಮ ಕ್ಯಾಲ್ಸಿಯಂನ ಶೇ 18 ಅನ್ನು ಪೂರೈಸುತ್ತದೆ.

ತ್ವಚೆಯ ಅಂದಕ್ಕಾಗಿ: ಚಿಯಾ ಬೀಜಗಳು ಅಗತ್ಯವಾದ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇವು ಫ್ರಿ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತವೆ. ಆಕ್ಸಿಡೇಟಿವ್ ಒತ್ತಡ ಮತ್ತು ಚರ್ಮದ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ. ಇವು ಚರ್ಮದ ಉರಿಯೂತದಿಂದ ಉಪಶಮನ ನೀಡುತ್ತವೆ. ಸೂರ್ಯನ ಹಾನಿಯ ವಿರುದ್ಧ ಚರ್ಮದ ತಡೆಗೋಡೆಯನ್ನು ಬಲಪಡಿಸುತ್ತದೆ. ವೇಗವಾಗಿ ಅಂಗಾಂಶ ದುರಸ್ತಿಯನ್ನು ಉತ್ತೇಜಿಸುತ್ತದೆ. ಅವು ಮೊಡವೆಯನ್ನೂ ಕಡಿಮೆ ಮಾಡುತ್ತವೆ. ಈ ಬೀಜಗಳು ಚರ್ಮದ ಕಾಂತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತವೆ. ಪರಿಸರ ಹಾನಿಯಿಂದ ನಿಮ್ಮ ಚರ್ಮವನ್ನು ರಕ್ಷಿಸುತ್ತದೆ. ವಯಸ್ಸಾದ ಆರಂಭಿಕ ಚಿಹ್ನೆಗಳನ್ನು ತಡೆಯುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣ: ಚಿಯಾ ಬೀಜಗಳಲ್ಲಿ ನಾರಿನಾಂಶ, ಆಲ್ಫಾ-ಲಿನೋಲೆನಿಕ್ ಆಮ್ಲದ ಹೆಚ್ಚಿನ ಅಂಶವು ನಿಮ್ಮ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಈ ಬೀಜಗಳು ಟೈಪ್ 2 ಮಧುಮೇಹದ ವಿರುದ್ಧವೂ ಪರಿಣಾಮಕಾರಿ.

ಕೆಲವು ಅಧ್ಯಯನಗಳ ಪ್ರಕಾರ ಚಿಯಾ ಬೀಜಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಇದು ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಮತ್ತೊಂದು ಅಧ್ಯಯನವು ಚಿಯಾ ಬೀಜಗಳೊಂದಿಗೆ ಬ್ರೆಡ್ ತಿನ್ನುವುದು ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತೋರಿಸಿದೆ.

ಚಿಯಾ ಬೀಜಗಳಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿದ್ದರೂ ಕೂಡ ಇದರ ನಿರಂತರ ಸೇವನೆಯಿಂದ ಮಾತ್ರ ಸಂಪೂರ್ಣ ಫಲಿತಾಂಶ ಸಿಗಲು ಸಾಧ್ಯ. ಆರೋಗ್ಯ ಸಮಸ್ಯೆಗಳಿರುವವರು ಚಿಯಾ ಬೀಜದ ಸೇವನೆಗೂ ಮುನ್ನ ತಜ್ಞರ ಅಭಿಪ್ರಾಯ ಪಡೆಯುವುದು ಉತ್ತಮ.

ವಿಭಾಗ