ಕನ್ನಡ ಸುದ್ದಿ  /  Lifestyle  /  Health News Eye Flu Cases Rising In Schools How To Protect Your Child From Madras Eye Tips To Parents In Kannada Rst

Madras Eye: ಶಾಲೆಗಳಲ್ಲಿ ಹೆಚ್ಚು ಹರಡುತ್ತಿದೆ ಮದ್ರಾಸ್‌ ಐ ಸೋಂಕು; ಮಕ್ಕಳ ಕಣ್ಣುಗಳ ಕಾಳಜಿ ಕುರಿತು ಪೋಷಕರಿಗೆ ಇಲ್ಲಿದೆ ಸಲಹೆ

ಹೆಚ್ಚುತ್ತಿರುವ ಮಳೆ ಹಾಗೂ ಪ್ರವಾಹದ ಕಾರಣದಿಂದ ದೇಶದಲ್ಲಿ ಮದ್ರಾಸ್‌ ಐ ಸಮಸ್ಯೆ ಹೆಚ್ಚುತ್ತಿದೆ. ಅಲ್ಲದೆ ಶಾಲೆಗಳಲ್ಲಿ ಈ ಪ್ರಕರಣಗಳು ಹೆಚ್ಚು ಹರಡುತ್ತಿದೆ ಎಂಬ ಆಘಾತಕಾರಿ ಅಂಶವೂ ವರದಿಯಾಗಿದೆ. ಮಕ್ಕಳನ್ನು ಮ್ರದಾಸ್‌ ಐ ಸಮಸ್ಯೆ ಹೆಚ್ಚು ಬಾಧಿಸುತ್ತಿದ್ದು, ಮಕ್ಕಳ ಕಣ್ಣುಗಳ ರಕ್ಷಣೆ ಕುರಿತು ಪೋಷಕರಿಗೆ ಇಲ್ಲಿದೆ ಸಲಹೆ.

ಶಾಲೆಗಳಲ್ಲಿ ಹೆಚ್ಚು ಹರಡುತ್ತಿದೆ ಮದ್ರಾಸ್‌ ಐ ಸೋಂಕು, ಪೋಷಕರೇ ಎಚ್ಚರ; ಮಕ್ಕಳ ಕಣ್ಣುಗಳ ಕಾಳಜಿ ಇರಲಿ
ಶಾಲೆಗಳಲ್ಲಿ ಹೆಚ್ಚು ಹರಡುತ್ತಿದೆ ಮದ್ರಾಸ್‌ ಐ ಸೋಂಕು, ಪೋಷಕರೇ ಎಚ್ಚರ; ಮಕ್ಕಳ ಕಣ್ಣುಗಳ ಕಾಳಜಿ ಇರಲಿ (Freepik)

ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಮ್ರದಾಸ್‌ ಐ ಸಮಸ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಹಲವೆಡೆ ಶಾಲೆಗಳಲ್ಲಿ ಈ ಸಮಸ್ಯೆ ಹೆಚ್ಚುತ್ತಿದ್ದು, ಮದ್ರಾಸ್‌ ಐ ತಡೆಗೆ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಲಾಗಿದೆ. ಅತಿಯಾದ ಮಳೆ ಹಾಗೂ ಪ್ರವಾಹವು ಮದ್ರಾಸ್‌ ಐ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಅರುಣಾಚಲ ಪ್ರದೇಶದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಮಕ್ಕಳಲ್ಲಿ ಸೂಕ್ತ ನೈಮರ್ಲ್ಯ ಕಾಪಾಡಿಕೊಳ್ಳಲು ಕೆಲವು ಮಾರ್ಗಸೂಚಿಗಳನ್ನು ಕೆಲವು ರಾಜ್ಯ ಸರ್ಕಾರಗಳು ಹೊರಡಿಸಿವೆ. ಆಗಾಗ ಕೈಗಳನ್ನು ಸೋಪು ಹಾಗೂ ನೀರಿನಿಂದ ತೊಳೆಯುವುದು, ಕಣ್ಣುಗಳನ್ನು ಮುಟ್ಟುವುದನ್ನು ತಪ್ಪಿಸುವುದು, ನೀವು ಬಳಸಿದ ಟವೆಲ್‌, ಕರ್ಚೀಫ್‌ ಅನ್ನು ಇತರರೊಂದಿಗೆ ಹಂಚಿಕೊಳ್ಳದೇ ಇರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಇಂತಹವುಗಳಿಂದ ದೂರವಿರಬೇಕು.

ಮಕ್ಕಳಲ್ಲಿ ಮದ್ರಾಸ್‌ ಐ ಹೆಚ್ಚಲು ಕಾರಣ?

ಮಕ್ಕಳು ವಯಸ್ಕರಿಗಿಂತ ಹೆಚ್ಚು ದೈಹಿಕವಾಗಿ ಸಕ್ರಿಯರಾಗಿರುವುದರಿಂದ ಮತ್ತು ಶಾಲೆ ಹಾಗೂ ಉದ್ಯಾನಗಳಲ್ಲಿ ಗುಂಪುಗಳಾಗಿ ಸೇರುವುದರಿಂದ ಇದು ಹೆಚ್ಚು ಹರಡುವ ಸಾಧ್ಯತೆ ಇದೆ. ಚಿಕ್ಕ ಮಕ್ಕಳು ಆಗಾಗ ತಮ್ಮ ಕಣ್ಣು ಹಾಗೂ ಮುಖವನ್ನು ಮುಟ್ಟಿಕೊಳ್ಳುತ್ತಿರುತ್ತಾರೆ. ಇದು ವೈರಸ್‌ ಅಥವಾ ಬ್ಯಾಕ್ಟೀರಿಯಾ ಹೆಚ್ಚು ಹರಡಲು ಕಾರಣವಾಗುತ್ತದೆ.

ʼಬದಲಾದ ಋತುಮಾನದಲ್ಲಿ ಶಾಲೆಗಳಲ್ಲಿ ಮದ್ರಾಸ್‌ ಐ ಸಮಸ್ಯೆ ಹೆಚ್ಚು ಹರಡುವುದನ್ನು ಕಾಣಬಹುದಾಗಿದೆ. ಇದು ಮಕ್ಕಳಿಗೆ ಸಮಸ್ಯೆಯನ್ನು ಉಂಟು ಮಾಡುತ್ತಿದೆ. ಈ ಸಮಸ್ಯೆ ನಿಯಂತ್ರಣಕ್ಕೆ ಪೋಷಕರು ಮಕ್ಕಳು ಮೇಲೆ ಸಾಕಷ್ಟು ಕಾಳಜಿ ವಹಿಸಬೇಕುʼ ಎನ್ನುತ್ತಾರೆʼ ಭಾರತ್‌ ಆರ್ಬಿಸ್‌ನ ನಿರ್ದೇಶಕ ಡಾ. ರಿಷಿ ರಾಜ್‌ ಬೊಹ್ರಾ. ಇವರು ಮಕ್ಕಳಲ್ಲಿ ಸೋಂಕನ್ನು ತಡೆಗಟ್ಟಲು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಕೈಗಳ ಸ್ವಚ್ಛತೆ

ಮ್ರದಾಸ್‌ ಐ ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ ಮಕ್ಕಳು ತಮ್ಮ ಕೈಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳುವುದು ಬಹಳ ಮುಖ್ಯ. ಪೋಷಕರು ಮಕ್ಕಳಿಗೆ ಆಗಾಗ ಕೈ ತೊಳೆಯಲು ಪ್ರೋತ್ಸಾಹಿಸಬೇಕು. ಕೊಳಕು ಹಾಗೂ ಸ್ವಚ್ಛವಾಗಿಲ್ಲದ ಕೈಗಳಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವ ಕಾರಣದಿಂದ ಇದು ಬಹಳ ಅವಶ್ಯ.

ಕಣ್ಣುಗಳನ್ನು ಪದೇ ಪದೇ ಮುಟ್ಟದಂತೆ ತಿಳಿಸಿ

ವಯಸ್ಕರಿಗಿಂತ ಮಕ್ಕಳು ತಮ್ಮ ಕಣ್ಣುಗಳನ್ನು ಪದೇ ಪದೇ ಮುಟ್ಟುವುದು, ಉಜ್ಜಿಕೊಳ್ಳುವುದು ಹೆಚ್ಚು. ಆ ಕಾರಣಕ್ಕೆ ಮಕ್ಕಳಿಗೆ ಪದೇ ಪದೇ ಕಣ್ಣುಗಳನ್ನು ಮುಟ್ಟಬಾರದು, ಕೈಗಳನ್ನು ಮುಖ ಹಾಗೂ ಕಣ್ಣುಗಳಿಂದ ದೂರವಿರಿಸಬೇಕು ಎಂಬದನ್ನು ಪೋಷಕರು ತಿಳಿಸಿ ಹೇಳಬೇಕು.

ಟಿಶ್ಯೂವಿನ ಸಮರ್ಪಕ ಬಳಕೆ

ಮದ್ರಾಸ್‌ ಐ ಕೆಮ್ಮು, ಸೀನಿನ ಕಣಗಳಿಂದಲೂ ಹರಡುವ ಸಾಧ್ಯತೆ ಇದೆ. ಆ ಕಾರಣಕ್ಕೆ ಕೆಮ್ಮುವಾಗ ಹಾಗೂ ಸೀನುವಾಗ ಟಿಶ್ಯೂವನ್ನು ಅಡ್ಡ ಹಿಡಯಬೇಕು ಎಂಬುದನ್ನು ಪೋಷಕರು ಮಕ್ಕಳಿಗೆ ತಿಳಿಸಬೇಕು. ಟಿಶ್ಯೂವಿನ ಸಮರ್ಪಕ ಬಳಕೆಯ ಬಗ್ಗೆ ಮಕ್ಕಳಿಗೆ ಕಲಿಸಬೇಕು.

ಮಕ್ಕಳ ದಿನ ಬಳಕೆಯ ವಸ್ತುಗಳ ಸ್ವಚ್ಛತೆ

ಕಣ್ಣುಗಳಿಗೆ ಬಳಸುವ ವಸ್ತುಗಳ ಮೇಲೆ ನಿಗಾ ಇರಲಿ. ಕನ್ನಡಕ, ಕಾಂಟ್ಯಾಕ್ಟ್‌ ಲೆನ್ಸ್‌ಗಳನ್ನು ಪ್ರತಿನಿತ್ಯ ಸ್ವಚ್ಛ ಮಾಡಿ ಇಡಿ. ಅವುಗಳನ್ನು ಸ್ಯಾನಿಟೈಸ್‌ ಮಾಡಿ ಬಳಸಿ. ಈ ಬಗ್ಗೆ ಮಕ್ಕಳಲ್ಲೂ ತಿಳುವಳಿಕೆ ಮೂಡಿಸಿ.

ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು

ಮದ್ರಾಸ್‌ ಐ ಹೆಚ್ಚುವುದನ್ನು ತಡೆಯಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಮಕ್ಕಳಿಗೆ ಶಾಲೆಯಲ್ಲಿ ಸಹಪಾಠಿಗಳಿಂದ ಸಾಧ್ಯವಾದಷ್ಟು ದೂರವಿರಲು ತಿಳಿಸಿ. ಶಿಕ್ಷಕರು ಮಕ್ಕಳ ನಡುವೆ ಅಂತರ ಇರುವಂತೆ ನೋಡಿಕೊಳ್ಳಬೇಕು.

ಟವಲ್‌, ಕರ್ಚೀಫ್‌ ಹಂಚಿಕೊಳ್ಳದಂತೆ ಹೇಳಿ

ಮಕ್ಕಳಿಗೆ ತಾವು ಬಳಸಿದ ಟವಲ್‌, ಕರ್ಚೀಪ್‌ ಇತರರೊಂದಿಗೆ ಹಂಚಿಕೊಳ್ಳದಂತೆ ತಿಳಿಸಿ. ಬೇರೆ ಮಕ್ಕಳು ವಸ್ತುಗಳನ್ನು ಬಳಸಬಾರದು, ಇದರಿಂದ ಸೋಂಕು ಹರಡುತ್ತದೆ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಸಿ.

ತಜ್ಞರ ಸಲಹೆ ಪಡೆಯಿರಿ

ನಾಟ್‌ ಬಟ್‌ ನಾಟ್‌ ಲಿಸ್ಟ್‌ ನಿಮ್ಮ ಮಗುವಿನಲ್ಲಿ ಮದ್ರಾಸ್‌ ಐನ ಯಾವುದೇ ಲಕ್ಷಣ ಕಾಣಿಸಿದರೆ, ತಕ್ಷಣಕ್ಕೆ ಸೂಕ್ತ ವೈದ್ಯರನ್ನು ಕಂಡು ಸಲಹೆ ಪಡೆಯಿರಿ. ಇದು ಮುಂದಾಗುವ ಅಪಾಯವನ್ನು ಆರಂಭದಲ್ಲೇ ತಡೆಯುವ ಪ್ರಯತ್ನ.