ಕನ್ನಡ ಸುದ್ದಿ  /  ಜೀವನಶೈಲಿ  /  ಪದೇ ಪದೇ ಕಾಡುವ ತಲೆನೋವಿಗೆ ಕಣ್ಣಿನ ಸಮಸ್ಯೆಯೂ ಕಾರಣವಿರಬಹುದು; ನಿರಂತರ ತಲೆನೋವಿದ್ದರೆ ಈ ಅಂಶಗಳನ್ನು ಗಮನಿಸಿ

ಪದೇ ಪದೇ ಕಾಡುವ ತಲೆನೋವಿಗೆ ಕಣ್ಣಿನ ಸಮಸ್ಯೆಯೂ ಕಾರಣವಿರಬಹುದು; ನಿರಂತರ ತಲೆನೋವಿದ್ದರೆ ಈ ಅಂಶಗಳನ್ನು ಗಮನಿಸಿ

ಅತಿಯಾದ ಸ್ಕ್ರೀನ್‌ಟೈಮ್‌, ದೀರ್ಘಾವಧಿಯ ಅಧ್ಯಯನ, ಒಂದೇ ವಸ್ತುವನ್ನು ನಿರಂತರವಾಗಿ ನೋಡುವುದು ಹೀಗೆ ಹಲವು ಕಾರಣಗಳಿಂದ ನಿರಂತರ ತಲೆನೋವು ಕಾಣಿಸುತ್ತದೆ. ಆದರೆ ಈ ತಲೆನೋವಿಗೆ ಕಣ್ಣಿನ ದೋಷಗಳು ಕೂಡ ಕಾರಣವಿರಬಹುದು. ಪದೇ ಪದೇ ಕಾಣಿಸುವ ತಲೆನೋವಿಗೆ ಕಾರಣವಾಗುವ ಕಣ್ಣಿನ ತೊಂದರೆಗಳ ಕುರಿತು ವಿವರಿಸಿದ್ದಾರೆ ಡಾ. ಜ್ಯೋತಿ ಶೆಟ್ಟಿ

ಪದೇ ಪದೇ ಕಾಡುವ ತಲೆನೋವಿಗೆ ಕಣ್ಣಿನ ಸಮಸ್ಯೆಯೂ ಕಾರಣವಿರಬಹುದು; ನಿರಂತರ ತಲೆನೋವಿದ್ದರೆ ಈ ಅಂಶಗಳನ್ನು ಗಮನಿಸಿ
ಪದೇ ಪದೇ ಕಾಡುವ ತಲೆನೋವಿಗೆ ಕಣ್ಣಿನ ಸಮಸ್ಯೆಯೂ ಕಾರಣವಿರಬಹುದು; ನಿರಂತರ ತಲೆನೋವಿದ್ದರೆ ಈ ಅಂಶಗಳನ್ನು ಗಮನಿಸಿ

ಕೆಲವೊಮ್ಮೆ ಕಾರಣವೇ ಇಲ್ಲದೇ ಪದೆಪದೇ ತಲೆನೋವು ಕಾಣಿಸಬಹುದು. ತಲೆನೋವಿಗೆ ಎಷ್ಟೇ ಔಷಧಿ ಮಾಡಿದ್ರು ಗುಣವಾಗುವುದಿಲ್ಲ, ಮಾತ್ರವಲ್ಲ ಇದಕ್ಕೆ ಕಾರಣವೇನು ಎಂಬುದು ತಿಳಿಯುವುದಿಲ್ಲ. ಹಾಗಂತ ನಿರಂತರ ತಲೆನೋವನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಇದರ ಪರಿಹಾರಕ್ಕಾಗಿ ವೈದ್ಯರನ್ನು ಸಂರ್ಪಕಿಸಲೇಬೇಕು. ಕೆಲವೊಮ್ಮೆ ಇಂತಹ ತಲೆನೋವು ಕಣ್ಣಿನ ತೊಂದರೆಗಳಿಗೂ ಸಂಬಂಧಪಟ್ಟಿರುತ್ತದೆ. ಆದ್ದರಿಂದ ಇವುಗಳ ಆರೈಕೆಗೆ ಪ್ರಾಥಮಿಕ ವೈದ್ಯರು (primary physician) ಅಥವಾ ನರರೋಗ ತಜ್ಞರು ಅಷ್ಟೇ ಅಲ್ಲದೆ ನೇತ್ರಶಾಸ್ತ್ರಜ್ಞರ ಸಲಹೆ ಕೂಡ ಅಗತ್ಯ.

ಟ್ರೆಂಡಿಂಗ್​ ಸುದ್ದಿ

ತಲೆನೋವು ಬಂದಾಗ ಕಣ್ಣುಗಳ ಹಿಂದೆ ನೋವು ಕೂಡ ಕಾಣಿಸಬಹುದು ಅಥವಾ ಕಣ್ಣುಗಳ ಹಿಂದೆ ಯಾವುದೇ ರೀತಿಯ ನೋವು ಇಲ್ಲದೆಯೇ ಇರಬಹುದು. ಈ ತರಹದ ತಲೆನೋವು ದೀರ್ಘಕಾಲದ ಅಧ್ಯಯನ, ದೀರ್ಘಾವಧಿಯವರೆಗೆ ಸ್ಕ್ರೀನ್‌ ನೋಡುವುದು (screen time) ನಿರಂತರವಾಗಿ ಹತ್ತಿರದಿಂದ ಯಾವುದೋ ವಸ್ತುವನ್ನು ನೋಡಲು ಅಗತ್ಯವಿರುವ ಕೆಲಸಗಳ ಕಾರಣದಿಂದಾಗಿ ಆಗುವ ಕಣ್ಣಿನ ಆಯಾಸದಿಂದ ಉಂಟಾಗುತ್ತದೆ.

ಕಣ್ಣಿನ ದೋಷದಿಂದ ಉಂಟಾಗುವ ತಲೆನೋವಿಗೆ ಕಾರಣಗಳು 

ಸರಿಪಡಿಸದ ಕನ್ನಡಕ ದೋಷಗಳು, ಮೆಳ್ಳಗಣ್ಣು (squint eyes), ದಣಿದ ಫೋಕಸಿಂಗ್ ರಿಫ್ಲೆಕ್ಸ್‌ನಂತಹ ತೊಂದರೆಗಳಿಂದಲೂ ತಲೆನೋವು ಸಂಭವಿಸಬಹುದು. ಕಣ್ಣಿನ ಹಿಂಭಾಗದಲ್ಲಿ ನಿರಂತರ ನೋವು ಮತ್ತು ಸ್ಕ್ಲೆರಿಟಿಸ್, ಥೈರಾಯ್ಡ್ ಕಣ್ಣಿನ ಕಾಯಿಲೆ, ಗ್ಲುಕೋಮಾ, ಕಣ್ಣಿನಲ್ಲಿ ಸೋಂಕುಗಳಂತಹ ಇತರ ಗಂಭೀರವಾದ ಕಣ್ಣುಗಳ ದೋಷಗಳು ಕೂಡ ತಲೆನೋವಿಗೆ ಕಾರಣವಾಗಬಹುದು.

ಬೆಳಕಿನ ಹೊಳಪಿನಂತಹ ತಾತ್ಕಾಲಿಕ ದೃಷ್ಟಿ ಅಡಚಣೆಗಳು, ಕುರುಡು ಕಲೆಗಳು, ದೃಷ್ಟಿ ನಷ್ಟ, ಒಳಗೊಂಡಂತೆ ತಲೆಯ ಒಂದು ಬದಿಯಲ್ಲಿ ತೀವ್ರವಾದ ತಲೆನೋವು ಅಥವಾ ಆಕ್ಯುಲರ್ ಮೈಗ್ರೇನ್ ಎಂದೂ ಕರೆಯಲ್ಪಡುವ ನಿರ್ದಿಷ್ಟ ರೀತಿಯ ಮೈಗ್ರೇನ್ (ಅರೆ ತಲೆನೋವು) ಕೂಡ ಸಂಭವಿಸಬಹುದು. ಕಣ್ಣುಗಳು ಸೈನಸ್‌ಗಳಿಂದ ಸುತ್ತುವರಿದಿರುವುದರಿಂದ, ಅನೇಕ ಬಾರಿ ಕಣ್ಣಿನ ನೋವಿನೊಂದಿಗೆ ಸೈನಸ್ ತಲೆನೋವು ಕೂಡ ಸಂಭವಿಸಬಹುದು, ಈ ರೀತಿಯ ತಲೆನೋವು ವಿಶೇಷವಾಗಿ ಅಲರ್ಜಿಯ ಉಲ್ಬಣಗಳ ಸಮಯದಲ್ಲಿ ಹೆಚ್ಚಾಗಿ ಸಂಭವಿಸುತ್ತದೆ.

ನಿರಂತರ ತಲೆನೋವಿನ ಕಾರಣಗಳು ಬದಲಾಗುವುದರಿಂದ, ಪ್ರತಿ ಬಾರಿ ತೀವ್ರ ತಲೆನೋವು ಉಂಟಾದಾಗ, ಅದಕ್ಕೆ ಸಂಬಂಧಿಸಿದ ನಿರ್ದಿಷ್ಟ ಲಕ್ಷಣಗಳು ಮತ್ತು ಪ್ರಚೋದನೆಯ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಅನಿವಾರ್ಯ.

ತಲೆನೋವಿಗೆ ಮನೆಯಲ್ಲೂ ಪರಿಹಾರ ಕಂಡುಕೊಳ್ಳಿ  

ಪ್ರತಿ ತಲೆನೋವಿಗೆ ವೈದ್ಯರ ಭೇಟಿ ಅಗತ್ಯವಿಲ್ಲ. ನಿಯಮಿತ ಪರದೆಯ ಸಮಯ, ದೀರ್ಘವಾಗಿ ಪರದೆಯ ಬಳಕೆ ಅಗತ್ಯವಿದ್ದಲ್ಲಿ ನಿಯಮಿತ ವಿರಾಮಗಳನ್ನು ತೆಗೆದುಕೊಳ್ಳುವುದು, ಕೆಫೀನ್ ಸೇವನೆಯನ್ನು ಸೀಮಿತಗೊಳಿಸುವುದು, ಒತ್ತಡವನ್ನು ನಿವಾರಿಸುವುದು ಮುಂತಾದ ಮನೆಮದ್ದುಗಳು ತಲೆನೋವು ಶಮನಕ್ಕೆ ಸಹಾಯಕವಾಗಿವೆ. ಉಸಿರಾಟದ ವ್ಯಾಯಾಮಗಳು ಮತ್ತು ಯೋಗದ ವಿಶ್ರಾಂತಿ ತಂತ್ರಗಳು ಸಹ ತಲೆನೋವು ನಿವಾರಿಸಲು ಸಹಾಯ ಮಾಡುತ್ತವೆ.

ನಿರ್ದಿಷ್ಟ ಕಣ್ಣಿನ ವ್ಯಾಯಾಮಗಳು ಉದಾಹರಣೆಗೆ ಕಣ್ಣುಗಳ ಮುಂದೆ ಒಂದು ಕೈ ಅಂತರದಲ್ಲಿ ಹಿಡಿದಿರುವ ಪೆನ್ ತುದಿಯ ಮೇಲೆ ಕೇಂದ್ರೀಕರಿಸುವುದು ಮತ್ತು ಮುಖದ ಮುಂದೆ ಮೂರು ಇಂಚುಗಳವರೆಗೆ ಅದನ್ನು ತರುವಾಗ ಪುನಃ ಕೇಂದ್ರೀಕರಿಸುವುದು ಕಣ್ಣಿನ ಸ್ನಾಯುಗಳನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಪ್ರತಿ ಅರ್ಧ ಗಂಟೆಗೊಮ್ಮೆ ಪರದೆಯಿಂದ ದೂರ ನೋಡುವುದು ಮತ್ತು ಕಿಟಕಿಯ ಹೊರಗಿನ ದೂರದ ಗುರಿಯನ್ನು ನೋಡುವುದು ಕಣ್ಣಿನ ಕೇಂದ್ರೀಕರಿಸುವ ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಯೋಗಾಭ್ಯಾಸಗಳು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಆದರೆ ಯೋಗಾಭ್ಯಾಸದಿಂದ ಕಣ್ಣಿನ ರಚನೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ ಕನ್ನಡಕದ ದೋಷಗಳು ಯೋಗಾಭ್ಯಾಸದಿಂದ ಸರಿಪಡಿಸಲು ಸಾಧ್ಯವಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ತಲೆನೋವಿಗೆ ಸರಿಪಡಿಸದ ಕನ್ನಡಕ ದೋಷಗಳು ಕಾರಣವಾಗಿದ್ದರೆ, ತಲೆನೋವನ್ನು ನಿವಾರಿಸಲು ಸೂಕ್ತವಾದ ಕನ್ನಡಕ ತಿದ್ದುಪಡಿಯನ್ನು ಬಳಸಬೇಕಾಗುತ್ತದೆ.

ತಲೆನೋವಿನ ಜೊತೆಗೆ ತೀವ್ರವಾದ ವಾಕರಿಕೆ ಮತ್ತು ವಾಂತಿಯೂ ಸಂಭವಿಸಿದ್ದಲ್ಲಿ ತಕ್ಷಣದ ವೈದ್ಯಕೀಯ ಭೇಟಿ ಅನಿವಾರ್ಯ.

(ಲೇಖನ: ಡಾ. ಜ್ಯೋತಿ ಶೆಟ್ಟಿ, ನೇತ್ರತಜ್ಞೆ, ಮಣಿಪಾಲ್ ಆಸ್ಪತ್ರೆ ಹಳೆಯ ವಿಮಾನ ನಿಲ್ದಾಣ ರಸ್ತೆ, ಬೆಂಗಳೂರು)