ಕನ್ನಡ ಸುದ್ದಿ  /  ಜೀವನಶೈಲಿ  /  ಲ್ಯಾಪ್ರೋಸ್ಕೋಪಿ ಮೂಲಕ 4 ಕೆಜಿ ತೂಕದ ಫೈಬ್ರಾಯ್ಡ್‌ ತೆಗೆದು ಹಾಕಿದ ವೈದ್ಯರು; ಮಹತ್ವದ ಮೈಲಿಗಲ್ಲಿಗೆ ಸಾಕ್ಷಿಯಾದ ಆಸ್ಟರ್ ಆರ್‌ವಿ ಆಸ್ಪತ್ರೆ

ಲ್ಯಾಪ್ರೋಸ್ಕೋಪಿ ಮೂಲಕ 4 ಕೆಜಿ ತೂಕದ ಫೈಬ್ರಾಯ್ಡ್‌ ತೆಗೆದು ಹಾಕಿದ ವೈದ್ಯರು; ಮಹತ್ವದ ಮೈಲಿಗಲ್ಲಿಗೆ ಸಾಕ್ಷಿಯಾದ ಆಸ್ಟರ್ ಆರ್‌ವಿ ಆಸ್ಪತ್ರೆ

ಬೆಂಗಳೂರಿನ ಆಸ್ಟರ್‌ ಆರ್‌ವಿ ಆಸ್ಪತ್ರೆಯ ವೈದ್ಯರು ದಕ್ಷಿಣ ಭಾರತದಲ್ಲೇ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಮಹಿಳೆಯೊಬ್ಬರ ದೇಹದಲ್ಲಿನ ಸುಮಾರು 4 ಕೆಜಿ ಫೈಬ್ರಾಯ್ಡ್‌ ಗಡ್ಡೆಯನ್ನು ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ತೆಗೆದು ಹಾಕಿದ್ದಾರೆ. ಈ ರೀತಿ ಶಸ್ತ್ರಚಿಕಿತ್ಸೆ ದಕ್ಷಿಣ ಭಾರತದಲ್ಲೇ ಮೊದಲು ಆಗಿದ್ದು ಎಂದು ಇಲ್ಲಿನ ವೈದ್ಯರು ತಿಳಿಸಿದ್ದಾರೆ.

ಲ್ಯಾಪ್ರೋಸ್ಕೋಪಿ ಮೂಲಕ 4 ಕೆಜಿ ತೂಕದ ಫೈಬ್ರಾಯ್ಡ್‌ ತೆಗೆದು ಹಾಕಿದ ವೈದ್ಯರು
ಲ್ಯಾಪ್ರೋಸ್ಕೋಪಿ ಮೂಲಕ 4 ಕೆಜಿ ತೂಕದ ಫೈಬ್ರಾಯ್ಡ್‌ ತೆಗೆದು ಹಾಕಿದ ವೈದ್ಯರು

ವೈದ್ಯಕೀಯ ಲೋಕದಲ್ಲಿ ಅಸಾಧ್ಯ ಎಂಬುದಿಲ್ಲ. ಕೆಲವೊಮ್ಮೆ ಸಾಯುವ ಹಂತಕ್ಕೆ ಹೋದ ಮನುಷ್ಯನು ವೈದ್ಯರಿಂದ ಬದುಕಿ ಬರುತ್ತಾರೆ. ಮುಂದುವರಿದ ವೈಜ್ಞಾನಿಕ ಯುಗದಲ್ಲಿ ತಂತ್ರಜ್ಞಾನ ಬಳಕೆಯಿಂದ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಇದೀಗ ಅಂಥದ್ದೊಂದು ಆವಿಷ್ಕಾರದ ಮೂಲಕ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ ಬೆಂಗಳೂರಿನ ಆಸ್ಟರ್ ಆರ್‌ವಿ ಆಸ್ಪತ್ರೆ ಸಿಬ್ಬಂದಿ.

ಟ್ರೆಂಡಿಂಗ್​ ಸುದ್ದಿ

ಇಲ್ಲಿನ ವೈದ್ಯರು ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ಗರ್ಭಾಶಯದಿಂದ 4.005 ಕೆಜಿ ಫೈಬ್ರಾಯ್ಡ್ ಗೆಡ್ಡೆ ತೆಗೆದುಹಾಕುವ ಮೂಲಕ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ದಾಖಲೆ ಸೃಷ್ಟಿಸಿದ್ದಾರೆ. ಆಸ್ಟರ್ ಆರ್‌ವಿ ಆಸ್ಪತ್ರೆಯ ಲ್ಯಾಪ್ರೋಸ್ಕೋಪಿಕ್ ಸರ್ಜನ್‌ ಡಾ. ಸುನಿಲ್ ಈಶ್ವರ್ ಮತ್ತು ಅವರ ತಂಡ 42 ವರ್ಷದ ವಿಜೇತಾ (ಹೆಸರು ಬದಲಾಗಿದೆ) ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಏನಿದು ಘಟನೆ?

ವಿಜೇತಾ ಅವರಿಗೆ ಯಾವುದೇ ಬಾಹ್ಯ ರೋಗಲಕ್ಷಣಗಳು ಇರಲಿಲ್ಲ. ಆದರೆ ಅವರ ದೇಹದೊಂದಿಗೆ ಗಡ್ಡೆ ಬೆಳವಣಿಗೆಯಾಗುತ್ತಲೇ ಇತ್ತು. ಇದು ಅವರ ಗರ್ಭಾಶಯದ ವ್ಯವಸ್ಥೆಗೆ ತೊಂದರೆ ಮಾಡಿದ್ದಲ್ಲ, ಆರೋಗ್ಯಕ್ಕೆ ಅಪಾಯ ಒಡ್ಡಿತ್ತು. ಯಾವುದೇ ಆರೋಗ್ಯ ಸಮಸ್ಯೆಗಳು ಹಾಗೂ ಹಿಂದಿನ ಶಸ್ತ್ರಚಿಕಿತ್ಸೆಗಳ ಇತಿಹಾಸವಿಲ್ಲದ ಕಾರಣ, ಅಂತಹ ಬೃಹತ್ ಫೈಬ್ರಾಯ್ಡ್ ಬಹಿರಂಗಪಡಿಸುವಿಕೆಯು ಆಘಾತವನ್ನುಂಟುಮಾಡಿತು.

ತನ್ನ ಸ್ಥಿತಿಯ ವಾಸ್ತವತೆಯನ್ನು ಅರಿತುಕೊಂಡ ವಿಜೇತಾ, ಫುಲ್‌ ಲ್ಯಾಪ್ರೋಸ್ಕೋಪಿಕ್ ಹಿಸ್ಟರೆಕ್ಟಮಿ ಅಥವಾ ಅಬ್ಡಾಮಿನಲ್‍ ಹಿಸ್ಟರೆಕ್ಟಮಿ ನಡುವೆ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಆಸ್ಟರ್ ಆರ್‌ವಿ ಆಸ್ಪತ್ರೆಯ ವೈದ್ಯಕೀಯ ತಂಡದ ಮಾರ್ಗದರ್ಶನದೊಂದಿಗೆ ಅವರು ಧೈರ್ಯದಿಂದ ಫುಲ್‌ ಲ್ಯಾಪ್ರೋಸ್ಕೋಪಿಕ್ ಹಿಸ್ಟರೆಕ್ಟಮಿ ಆಯ್ಕೆ ಮಾಡಿಕೊಂಡರು, ಪರಿಹಾರ ಕಂಡುಕೊಳ್ಳುವ ಮತ್ತು ಸಾಮಾನ್ಯ ಜೀವನಕ್ಕೆ ಮರಳುವ ಭರವಸೆ ಪಡೆದರು. ಆಸ್ಟರ್ ಆರ್‌ವಿ ಆಸ್ಪತ್ರೆಯ ವೈದ್ಯರಲ್ಲಿ ತನ್ನ ನಂಬಿಕೆ ಇರಿಸಿ, ವಿಜೇತಾ ಗುಣಪಡಿಸುವ ಹಾದಿಯನ್ನು ಪ್ರಾರಂಭಿಸಿದರು.

"ಸ್ಕಾನಿಂಗ್‌ ರಿಪೋರ್ಟ್‌ಗಳೊಂದಿಗೆ ನಾನು ಆಸ್ಪತ್ರೆಗೆ ಹೋದೆ. ಮುಟ್ಟಿನ ನೋವು, ಋತುಚಕ್ರ ಅಥವಾ ಅತಿಯಾದ ರಕ್ತಸ್ರಾವದ ಇಂತಹ ತೊಂದರೆಗಳು ನನಗೆ ಇರಲಿಲ್ಲ. ವಾಡಿಕೆಯ ಸ್ಕ್ಯಾನ್ ನಡೆಸಿದ ರೇಡಿಯಾಲಜಿಸ್ಟ್ ಡಾ. ವಿಜಯಲಕ್ಷ್ಮಿ ವಿ, ನನ್ನ ಗರ್ಭಾಶಯದಲ್ಲಿ 32 ರಿಂದ 34 ವಾರಗಳ ಗಾತ್ರದ ಫೈಬ್ರಾಯ್ಡ್‌ಗಳಿವೆ ಎಂದು ತಿಳಿಸಿದರು. ಅಂತಹ ದೊಡ್ಡ ಫೈಬ್ರಾಯ್ಡ್‌ಗಳನ್ನು ಹೊಂದುವ ನ್ಯೂನತೆಗಳು, ಅನಾನುಕೂಲಗಳು ಮತ್ತು ಆರೋಗ್ಯ ಸಂಬಂಧಿತ ತೊಡಕುಗಳ ಬಗ್ಗೆ ನನಗೆ ಅರ್ಥ ಮಾಡಿಸಿದವರು. ಅವರು ನನ್ನನ್ನು ಡಾ. ಸುನಿಲ್ ಈಶ್ವರ್ ಅವರ ಬಳಿಗೆ ಕಳುಹಿಸಿದರು, ಅವರು ಎರಡೂ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಮತ್ತಷ್ಟು ವಿವರಿಸಿದರು. ಮತ್ತು ನಾನು ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯನ್ನು ಆಯ್ಕೆ ಮಾಡಿಕೊಂಡೆ,” ಎನ್ನುತ್ತಾರೆ ಬೆಂಗಳೂರಿನ ಮೂಲದ ವಿಜೇತಾ.

“ಲ್ಯಾಪ್ರೋಸ್ಕೋಪಿಕ್ ವಿಧಾನ ಆಯ್ಕೆ ಮಾಡಲಾಗಿದ್ದು, ಈ ವಿಧಾನವು ತನ್ನದೇ ಆದ ಅಡೆತಡೆಗಳು ಮತ್ತು ಸಂಕೀರ್ಣತೆಗಳಿದ್ದವು. ಗರ್ಭಾಶಯ ಪ್ರದೇಶದಲ್ಲಿ ಲ್ಯಾಪ್ರೋಸ್ಕೋಪಿ ಮಾಡುವಲ್ಲಿ ಒಳಗೊಂಡಿರುವ ಸವಾಲುಗಳಲ್ಲಿ ಒಂದೆಂದರೆ ಹೊಟ್ಟೆಯನ್ನು ಆಕ್ರಮಿಸುವ ಸಂಪೂರ್ಣ ಫೈಬ್ರಾಯ್ಡ್‌ /ಗರ್ಭಾಶಯದ ಗಾತ್ರದಿಂದಾಗಿ ಉಪಕರಣದ ಇರಿಸುವಿಕೆಗೆ ಲಭ್ಯವಿರುವ ನಿರ್ಬಂಧಿತ ಸ್ಥಳ. ಆದ್ದರಿಂದ, ಉಪಕರಣಗಳನ್ನು ಕುಶಲತೆಯಿಂದ ನ ನಿರ್ವಹಿಸಲು ಜಾಗವನ್ನು ಸೃಷ್ಟಿಸುವುದು ಒಂದು ಸವಾಲಾಗುತ್ತದೆ. ಸಾಮಾನ್ಯ ರಕ್ತನಾಳಗಳನ್ನು ಪತ್ತೆಹಚ್ಚುವುದು ಸವಾಲಿನ ಕೆಲಸವಾಗುತ್ತದೆ. ಗರ್ಭಾಶಯಕ್ಕೆ ರಕ್ತವನ್ನು ಪೂರೈಸುವ ರಕ್ತನಾಳಗಳನ್ನು ಗುರುತಿಸುವುದು ಮತ್ತು ಅದನ್ನು ಯಶಸ್ವಿಯಾಗಿ ನಿಗ್ರಹಿಸುವುದು ಸ್ವತಃ ಒಂದು ಕಾರ್ಯವಾಗಿತ್ತುʼ ಎಂದು ಆಸ್ಟರ್ ಆರ್‌ವಿ ಆಸ್ಪತ್ರೆಯ ಲ್ಯಾಪ್ರೋಸ್ಕೋಪಿಕ್ ಸರ್ಜನ್‌ ಡಾ. ಸುನಿಲ್ ಈಶ್ವರ್ ಅಭಿಪ್ರಾಯಪಟ್ಟರು.

ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆ ನಡೆಸಿ 4 ಕೆಜಿ ತೂಕದ ಫೈಬ್ರಾಯ್ಡ್‌ ತೆಗೆದು ಹಾಕಿದ  ಆಸ್ಟರ್ ಆರ್‌ವಿ ಆಸ್ಪತ್ರೆ ವೈದ್ಯರ ತಂಡ
ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆ ನಡೆಸಿ 4 ಕೆಜಿ ತೂಕದ ಫೈಬ್ರಾಯ್ಡ್‌ ತೆಗೆದು ಹಾಕಿದ ಆಸ್ಟರ್ ಆರ್‌ವಿ ಆಸ್ಪತ್ರೆ ವೈದ್ಯರ ತಂಡ

5 ಗಂಟೆಗಳ ಶಸ್ತ್ರಚಿಕಿತ್ಸೆ

ಸಂತಾನೋತ್ಪತ್ತಿ ವಯಸ್ಸಿನ ಶೇ 20 ರಿಂದ 30ರಷ್ಟು ಮಹಿಳೆಯರಲ್ಲಿ ಫೈಬ್ರಾಯ್ಡ್‌ಗಳು ಕಂಡುಬರುತ್ತವೆ. ಆದರೂ, ಗರ್ಭಾಶಯದಲ್ಲಿ ಅಂತಹ ದೊಡ್ಡ ಫೈಬ್ರಾಯ್ಡ್ ಕಂಡುಬರುವುದು ಅತ್ಯಂತ ಅಪರೂಪದ ಮತ್ತು ಕೇಳಿರದ ಪ್ರಕರಣ. ಫೈಬ್ರಾಯ್ಡ್ ಅನ್ನು ತೆಗೆದುಹಾಕುವ ಸಾಮಾನ್ಯ ಪ್ರಕ್ರಿಯೆಗೆ ಸುಮಾರು 8 ಸೆಂ. ಮೀ. ಕತ್ತರಿಸುವಿಕೆ ಅಗತ್ಯವಿರುತ್ತದೆ. ಆದರೆ ಲ್ಯಾಪರೊಸ್ಕೋಪಿಕ್ ಕಾರ್ಯವಿಧಾನಕ್ಕೆ ಗರಿಷ್ಠ 3 ಸೆಂ. ಮೀಗಳು ಬೇಕಾಗಿತ್ತು. ಅರಿವಳಿಕೆ ತಂಡವು ಉತ್ತಮ ಕೆಲಸ ಮಾಡಿದೆ. ಸಂಪೂರ್ಣ ಮಯೋಮೆಕ್ಟಮಿ ಅಥವಾ 4.005 ಕೆಜಿಯ ಫೈಬ್ರಾಯ್ಡ್ ತೆಗೆಯುವ ಪ್ರಕ್ರಿಯೆಯು ಸುಮಾರು 5 ಗಂಟೆಗಳ ಕಾಲ ನಡೆಯಿತು. ವಾಡಿಕೆಯ ಕಾರ್ಯ ವಿಧಾನಗಳು ಸುಮಾರು 1.5 ಗಂಟೆಗಳಷ್ಟು ಕಾಲ ನಡೆದವು. ಆದರೆ, ವಿವಿಧ ಆಕಾರಗಳು ಮತ್ತು ಗಾತ್ರಗಳ ಸುಮಾರು 150 ಫೈಬ್ರಾಯ್ಡ್‌ಗಳನ್ನು ಶಸ್ತ್ರಚಿಕಿತ್ಸೆ ನಡೆಸಲು ಮತ್ತು ತೆಗೆದುಹಾಕಲು 2.5 ಗಂಟೆಗಳ ಕಾಲ ತೆಗೆದುಕೊಂಡಿತು, ಇದರಲ್ಲಿ ಅತಿದೊಡ್ಡ ಫೈಬ್ರಾಯ್ಡ್ 12 ಸೆಂ.ಮೀ.ಗಳು,” ಎಂದರು ಡಾ. ಈಶ್ವರ್.

ಶಸ್ತ್ರಚಿಕಿತ್ಸೆಯಿಂದ ಹೊರಬಂದ ವಿಜೇತಾ ಚೇತರಿಕೆಯ ಹಾದಿಯಲ್ಲಿದ್ದರು. ಐದು ಗಂಟೆಗಳ ಅವಧಿಯ ಅತಿದೀರ್ಘ ಕಾಲದ ಶಸ್ತ್ರಚಿಕಿತ್ಸೆಯು ಲ್ಯಾಪ್ರೋಸ್ಕೋಪಿಕ್ ವಿಧಾನದ ಮೂಲಕ ಬೃಹತ್ ಫೈಬ್ರಾಯ್ಡ್‌ ಗರ್ಭಾಶಯವನ್ನು ಯಶಸ್ವಿಯಾಗಿ ತೆಗೆದುಹಾಕುವಲ್ಲಿ ಕೊನೆಗೊಂಡಿತು. ಇದು ದಕ್ಷಿಣ ಭಾರತದಲ್ಲಿ ಹಿಂದೆಂದೂ ಮಾಡಿರದ ಗಮನಾರ್ಹ ಸಾಧನೆಯಾಗಿದೆ. ಈ ಕಾರ್ಯ ವಿಧಾನವು ವಿಜೇತಾರವರಿಗೆ ಅತ್ಯಂತ ಅಗತ್ಯ ಪರಿಹಾರ ಒದಗಿಸಿತು. ಏಕೆಂದರೆ ಈ ವಿಧಾನದಿಂದ ಹೆಚ್ಚು ರಕ್ತ ನಷ್ಟವಾಗುವುದಿಲ್ಲ. ಕನಿಷ್ಠ ಛೇದನದಿಂದಾಗಿ ಸೋಂಕಿನ ಅಪಾಯ ಕಡಿಮೆ ಮಾಡಿತು ಮತ್ತು ಶಸ್ತ್ರಚಿಕಿತ್ಸೆಯ ನಂತರದ ನೋವು ಕಡಿಮೆಯಾಯಿತು. ಇದರ ಪರಿಣಾಮವಾಗಿ, ಶಸ್ತ್ರಚಿಕಿತ್ಸೆಯ ನಂತರ ಕೇವಲ 48 ಗಂಟೆಗಳಲ್ಲಿ ಅವರನ್ನು ಡಿಸ್ಚರ‍್ಜ್‌ ಮಾಡಲಾಯಿತು, ಇದು ಅವರ ಚೇತರಿಕೆಯ ಪ್ರಕ್ರಿಯೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.