ಕನ್ನಡ ಸುದ್ದಿ  /  ಜೀವನಶೈಲಿ  /  ಆಹಾರದ ಘಮ ಹೆಚ್ಚಿಸುವ ಬೆಣ್ಣೆಯನ್ನ ಅತಿಯಾಗಿ ತಿಂದ್ರೆ ಆರೋಗ್ಯಕ್ಕೆ ತಪ್ಪಿದ್ದಲ್ಲ ತೊಂದ್ರೆ, ಇದರಿಂದಾಗುವ ಅಪಾಯಗಳಿವು

ಆಹಾರದ ಘಮ ಹೆಚ್ಚಿಸುವ ಬೆಣ್ಣೆಯನ್ನ ಅತಿಯಾಗಿ ತಿಂದ್ರೆ ಆರೋಗ್ಯಕ್ಕೆ ತಪ್ಪಿದ್ದಲ್ಲ ತೊಂದ್ರೆ, ಇದರಿಂದಾಗುವ ಅಪಾಯಗಳಿವು

ನಾವು ಸೇವಿಸುವ ಆಹಾರಗಳ ಪದಾರ್ಥಗಳ ರುಚಿ ಹಾಗೂ ಪರಿಮಳ ಹೆಚ್ಚಿಸುವ ಬೆಣ್ಣೆ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಹಾಗಂತ ಇದನ್ನು ಅತಿಯಾಗಿ ತಿನ್ನೋದ್ರಿಂದ ತೊಂದರೆಗಳು ಅಷ್ಟೇ ಇವೆ. ಅತಿಯಾಗಿ ಬೆಣ್ಣೆ ತಿನ್ನುವುದರಿಂದ ಆರೋಗ್ಯಕ್ಕಾಗುವ ಸಮಸ್ಯೆಗಳೇನು ನೋಡಿ.

ಆಹಾರದ ಘಮ ಹೆಚ್ಚಿಸುವ ಬೆಣ್ಣೆಯನ್ನು ಅತಿಯಾಗಿ ತಿಂದ್ರೆ ಆರೋಗ್ಯಕ್ಕೆ ತಪ್ಪಿದ್ದಲ್ಲ ತೊಂದ್ರೆ, ಇದರಿಂದಾಗುವ ಅಪಾಯಗಳಿವು
ಆಹಾರದ ಘಮ ಹೆಚ್ಚಿಸುವ ಬೆಣ್ಣೆಯನ್ನು ಅತಿಯಾಗಿ ತಿಂದ್ರೆ ಆರೋಗ್ಯಕ್ಕೆ ತಪ್ಪಿದ್ದಲ್ಲ ತೊಂದ್ರೆ, ಇದರಿಂದಾಗುವ ಅಪಾಯಗಳಿವು

ಡೇರಿ ಉತ್ಪನ್ನಗಳಾದ ಹಾಲು, ಮೊಸರು, ಬೆಣ್ಣೆ, ತುಪ್ಪ ಭಾರತೀಯರಿಗೆ ಅಚ್ಚುಮೆಚ್ಚು. ಅದರಲ್ಲೂ ಬಾಯಿಯಲ್ಲಿಟ್ಟ ಕೂಡಲೇ ಕರಗುವ ಮೃದುವಾದ ಪರಿಮಳಯಕ್ತ ಬೆಣ್ಣೆಯಂತೂ ಎಲ್ಲರಿಗೂ ಇಷ್ಟವಾಗುತ್ತದೆ. ಆಹಾರ ಪದಾರ್ಥಗಳ ಪರಿಮಳ ಹಾಗೂ ರುಚಿ ಹೆಚ್ಚಿಸುವ ಬೆಣ್ಣೆ ಹೆಚ್ಚಿನ ಕೊಬ್ಬಿನ ಅಂಶವನ್ನು ಹೊಂದಿದ್ದರೂ ಅದು ಆರೋಗ್ಯಕರವಾಗಿದ್ದು, ದಿನ ಬಳಕೆಗೆ ಯೋಗ್ಯವಾಗಿದೆ. ಬಿಸಿಬಿಸಿಯಾದ ರೋಟಿ, ಚಪಾತಿ, ರೊಟ್ಟಿಯ ಮೇಲೆ ಬೆಣ್ಣೆಯನ್ನು ಹರಡಿ ತಿನ್ನುವುದೆಂದರೆ ಆಹಾ.. ಅದರ ರುಚಿಯೇ ಬೇರೆ.

ಟ್ರೆಂಡಿಂಗ್​ ಸುದ್ದಿ

ಬೆಣ್ಣೆಯಲ್ಲಿ ಖನಿಜಾಂಶ, ವಿಟಮಿನ್‌ಗಳಾದ ಎ, ಇ ಮತ್ತು ಕೆ2, ಆಂಟಿ ಆಕ್ಸಿಡೆಂಟ್, ಉತ್ತಮ ಕೊಬ್ಬಿನಾಂಶವಿದೆ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಅದರಲ್ಲೂ ಮುಖ್ಯವಾಗಿ ಚರ್ಮವನ್ನು ಕಾಪಾಡಿಕೊಳ್ಳಲು, ಮೂಳೆ ಬಲಿಷ್ಠಗೊಳ್ಳುವುದಕ್ಕೆ, ಹೃದಯ ಸಂಬಂಧಿ ಕಾಯಿಲೆಗೆ, ಹಾರ್ಮೋನ್‌ಗಳ ಸಮತೋಲನಕ್ಕೆ ಹಾಗೂ ಆರೋಗ್ಯಕರ ಕಣ್ಣಿನ ದೃಷ್ಟಿ ಅಭಿವೃದ್ಧಿಯಾಗುವುದಕ್ಕೂ ಸಹಕಾರಿಯಾಗಲಿದೆ. ಮಾರುಕಟ್ಟೆಯಲ್ಲಿ ಬಣ್ಣ ಹಾಕಿರುವ ಕಳಪೆ ಗುಣಮಟ್ಟದ ಬೆಣ್ಣೆ ಸಿಗುತ್ತವೆ. ಇದರಲ್ಲಿ ದೇಹಕ್ಕೆ ಅನಗತ್ಯವಾದ ಅನೇಕ ಅಂಶಗಳಿದ್ದು, ಇದು ಆರೋಗ್ಯಕ್ಕೆ ಮಾರಕವಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ. ಆದ್ದರಿಂದ ನೈಸರ್ಗಿಕವಾದ ಹಾಗೂ ಸಾವಯವ ಬೆಣ್ಣೆಯನ್ನು ಬಳಕೆ ಮಾಡಬೇಕು. ಹೆಚ್ಚು ಪೌಷ್ಟಿಕಾಂಶಯುಕ್ತ ಬೆಣ್ಣೆ ಬಯಸುವವರು ಮನೆಯಲ್ಲೇ ಹಸುವಿನ ಹಾಲನ್ನು ಕುದಿಸಿ ಕೆನೆ ತೆಗೆದು ಇಲ್ಲವೇ ಹಾಲಿನಿಂದ ಮೊಸರು ಮಾಡಿ ಅದರಿಂದ ಶುದ್ಧವಾದ ಬೆಣ್ಣೆ ತಯಾರಿಸುವುದು ಇನ್ನೂ ಒಳ್ಳೆಯದು.

ಅನೇಕರನ್ನು ಕಾಡುವ ಪ್ರಶ್ನೆಯೆಂದರೆ ಬೆಣ್ಣೆ ಸೇವನೆಯಿಂದ ಆರೋಗ್ಯಕ್ಕೆ ಒಳಿತೇ, ಕೆಡುಕೇ ಎಂಬುದು. ಹೌದು, ಗುಣಮಟ್ಟದ ಬೆಣ್ಣೆಯನ್ನು ಮಿತವಾಗಿ ಸೇವಿಸಿದರೆ ಮಾತ್ರ ಅದು ಆರೋಗ್ಯಕರ ಆಹಾರವಾಗಿ ಪರಿಣಮಿಸುತ್ತದೆ.

ಬೆಣ್ಣೆಯ ಆರೋಗ್ಯ ಪ್ರಯೋಜನಗಳು 

ಒಣ ಚರ್ಮದ ಸಮಸ್ಯೆಯಿರುವವರು ಬೆಣ್ಣೆ ಹಚ್ಚಿಕೊಳ್ಳುವುದರಿಂದ ಚರ್ಮ ಮೃದು ಮತ್ತು ಕಾಂತಿಯುತವಾಗುತ್ತದೆ. ಬೆಣ್ಣೆಯನ್ನು ಹಚ್ಚುವುದರಿಂದ ತುಟಿ ಹಾಗೂ ಕಾಲಿನ ಹಿಮ್ಮಡಿ ಒಡೆಯುವುದು ಕಡಿಮೆಯಾಗುತ್ತದೆ. ಬೆಣ್ಣೆ ನಿಯಮಿತವಾಗಿ ಸೇವನೆಯಿಂದ ಕ್ಯಾನ್ಸರ್‌ ರೋಗಿಗಳ ಆರೋಗ್ಯದಲ್ಲಿ ಮಹತ್ತರದ ಸುಧಾರಣೆ ಕಂಡುಬರುತ್ತದೆ. ಯಾಕೆಂದರೆ ಸಂಯೋಜಿತ ಲಿನೋಲಿಯಿಕ್ ಆಸಿಡ್ (Conjugated linoleic acid - CLA) ಅಂಶವು ಬೆಣ್ಣೆಯಲ್ಲಿದೆ. ಇದು ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ. ಸಿಎಲ್‌ಎ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹದಲ್ಲಿನ ವಿಷತ್ವವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯ ವಿರುದ್ಧ ಹೋರಾಡುವ ಗುಣವಿದೆ ಎಂದು ತಿಳಿದುಬಂದಿದೆ.

ಶುದ್ಧ ಬೆಣ್ಣೆಯಲ್ಲಿ ಸೆಲೆನಿಯಂ ಅತ್ಯುತ್ತಮ ಮೂಲವಾಗಿದೆ. ಇದು ಪುರುಷರು ಹಾಗೂ ಮಹಿಳೆಯರಿಗೆ ಬೇಕಾದ ಖನಿಜಾಂಶದ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ ಕೆಲವೊಂದು ಚರ್ಮ ರೋಗಗಳಿಗೂ ಬೆಣ್ಣೆಯನ್ನು ನಿರಂತರ ಸೇವಿಸುವುದರಿಂದ ಪರಿಹಾರ ಸಿಗಬಲ್ಲದು.

ಅಗತ್ಯಕ್ಕಿಂತ ಹೆಚ್ಚು ಬೆಣ್ಣೆ ಸೇವಿಸುವುದರ ಅಡ್ಡಪರಿಣಾಮ 

ಬೆಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಾಗಿರುತ್ತದೆ. ಇದನ್ನು ಹೆಚ್ಚು ಸೇವಿಸಿದರೆ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಏರಿಕೆಯಾಗಲು ಕಾರಣವಾಗುತ್ತದೆ. ಅಲ್ಲದೆ ಹೃದ್ರೋಗ ಸಂಬಂಧಿ ಸಮಸ್ಯೆಗೂ ಇದು ಕಾರಣವಾಗುತ್ತದೆ. ಬೆಣ್ಣೆಯಲ್ಲಿ ಕ್ಯಾಲೊರಿ ಅಂಶ ಹೆಚ್ಚಿರುವುದರಿಂದ ಹೆಚ್ಚು ಬೆಣ್ಣೆ ಸೇವಿಸಿದರೆ ಅಧಿಕ ತೂಕದ ಸಮಸ್ಯೆಯನ್ನೂ ಎದುರಿಸಬೇಕಾಗಬಹುದು. 

ಹಲವಾರು ಅಧ್ಯಯನಗಳ ಪ್ರಕಾರ, ಬೆಣ್ಣೆಯು ರಕ್ತದ ಲಿಪಿಡ್ ಮಟ್ಟವನ್ನು ಹಾನಿಗೊಳಿಸುತ್ತದೆ. ಹೃದಯದ ಸಮಸ್ಯೆ ಅಥವಾ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿರುವವರು ಬೆಣ್ಣೆಯಿಂದ ದೂರವಿರುವುದೇ ಒಳ್ಳೆಯದು. ಬೆಣ್ಣೆಯು ಲ್ಯಾಕ್ಟೋಸ್ ಮತ್ತು ಡೈರಿ ಪ್ರೋಟೀನ್‌ಗಳನ್ನು ಹೊಂದಿರುವ ಕಾರಣ ಇದರಿಂದ ಡೈರಿ ಅಲರ್ಜಿಯಿಂದ ಬಳಲುತ್ತಿರುವವರಿಗೆ ಸಮಸ್ಯೆಯಾಗಬಹುದು. ಬೆಣ್ಣೆಯನ್ನು ಸೇವಿಸಿದ ನಂತರ ಗ್ಯಾಸ್ ಅಥವಾ ಅತಿಸಾರದಂತಹ ಜೀರ್ಣಕಾರಿ ತೊಂದರೆಗಳನ್ನು ಅನುವಿಸಬೇಕಾಗುತ್ತದೆ.

ಆದ್ದರಿಂದ ಬೆಣ್ಣೆಯನ್ನು ಮಿತವಾಗಿ ಸೇವಿಸಿದರೆ ಮಾತ್ರವೇ ಆರೋಗ್ಯಕರವಾಗಿರಬಹುದು. ಅದರ ಸ್ಯಾಚುರೇಟೆಡ್ ಕೊಬ್ಬಿನಂಶವನ್ನು ಗಮನದಲ್ಲಿಟ್ಟುಕೊಳ್ಳುವುದು ಮತ್ತು ಆದಷ್ಟು ಉತ್ತಮ ಗುಣಮಟ್ಟದ ಬೆಣ್ಣೆಯನ್ನೇ ಆಯ್ಕೆ ಮಾಡುವುದು ಒಳ್ಳೆಯದು.

ವಿಭಾಗ