ಕನ್ನಡ ಸುದ್ದಿ  /  ಜೀವನಶೈಲಿ  /  ಊಟದ ನಂತರ ಪಾನ್‌ ತಿನ್ನೋದು ಯಾಕೆ ಅಂತ ಗೊತ್ತಾದ್ರೆ ನೀವು ಪ್ರತಿದಿನ ತಿಂತೀರಾ, ವೀಳ್ಯದೆಲೆ ಸೇವನೆಯ 5 ಅದ್ಭುತ ಪ್ರಯೋಜನಗಳಿವು

ಊಟದ ನಂತರ ಪಾನ್‌ ತಿನ್ನೋದು ಯಾಕೆ ಅಂತ ಗೊತ್ತಾದ್ರೆ ನೀವು ಪ್ರತಿದಿನ ತಿಂತೀರಾ, ವೀಳ್ಯದೆಲೆ ಸೇವನೆಯ 5 ಅದ್ಭುತ ಪ್ರಯೋಜನಗಳಿವು

ಭಾರತದಲ್ಲಿ ಭೋಜನದ ನಂತರ ಪಾನ್‌ ತಿನ್ನುವ ಅಭ್ಯಾಸ ಹಲವರಿಗಿದೆ. ಬಹುತೇಕ ಹೋಟೆಲ್‌, ರೆಸ್ಟೋರೆಂಟ್‌, ಮದುವೆ ಮುಂಚಿಯಂತಹ ಕಾರ್ಯಕ್ರಮದ ನಂತರವೂ ಪಾನ್‌ ತಿನ್ನಲು ಕೊಡುತ್ತಾರೆ. ಸಾಂಪ್ರದಾಯಿಕವಾಗಿ ಮಹತ್ವ ಪಡೆದ ಪಾನ್‌ ತಿನ್ನುವ ಅಭ್ಯಾಸವು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಊಟದ ನಂತರ ವೀಳದೆಲ್ಯೆ ತಿನ್ನುವುದರಿಂದಾಗುವ 5 ಅದ್ಭುತ ಪ್ರಯೋಜನಗಳಿವು.

ಊಟದ ನಂತರ ಪಾನ್‌ ತಿನ್ನೋದು ಯಾಕೆ ಅಂತ ಗೊತ್ತಾದ್ರೆ ನೀವು ಪ್ರತಿದಿನ ತಿಂತೀರಾ, ಇದರ 5 ಅದ್ಭುತ ಪ್ರಯೋಜನಗಳಿವು
ಊಟದ ನಂತರ ಪಾನ್‌ ತಿನ್ನೋದು ಯಾಕೆ ಅಂತ ಗೊತ್ತಾದ್ರೆ ನೀವು ಪ್ರತಿದಿನ ತಿಂತೀರಾ, ಇದರ 5 ಅದ್ಭುತ ಪ್ರಯೋಜನಗಳಿವು

ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ ವೀಳ್ಯದೆಲೆ ಅಥವಾ ಪಾನ್‌. ಧಾರ್ಮಿಕ ಕಾರ್ಯಕ್ರಮಗಳು, ಮದುವೆ-ಮುಂಜಿ, ಪೂಜೆಯಂತಹ ಸಮಾರಂಭಗಳಲ್ಲಿ ವೀಳ್ಯದೆಲೆಗೆ ವಿಶೇಷ ಸ್ಥಾನವಿದೆ. ಆಯುರ್ವೇದ ಪ್ರಕಾರ ಈ ಎಲೆಯು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದ್ದು, ಇದನ್ನು ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ ಊಟದ ನಂತರ ಪಾನ್‌ ತಿನ್ನುವ ಸಾಂಪ್ರದಾಯಿಕ ಅಭ್ಯಾಸವಿದೆ. ಇದನ್ನು ಕೆಲವರು ಮೌತ್‌ ಫ್ರೆಶ್ನರ್‌ ರೂಪದಲ್ಲೂ ಜಗಿಯುತ್ತಾರೆ. ಇದರಿಂದ ಸ್ವೀಟ್‌, ಚಿತ್ರಾನ್ನ ಸೇರಿದಂತೆ ವಿವಿಧ ಖಾದ್ಯಗಳನ್ನೂ ತಯಾರಿಸುತ್ತಾರೆ. ಈ ಎಲ್ಲದರ ಜೊತೆಗೆ ಪಾನ್‌ ಪೌಷ್ಟಿಕಾಂಶದ ಕಾರಣದಿಂದ ಹೆಸರುವಾಸಿಯಾಗಿದೆ. ಇದು ಅಯೋಡಿನ್, ಪೊಟ್ಯಾಸಿಯಮ್, ವಿಟಮಿನ್ ಎ, ವಿಟಮಿನ್ ಬಿ 1 ಮತ್ತು ವಿಟಮಿನ್ ಬಿ 2 ನಂತಹ ಪೋಷಕಾಂಶಗಳಿಂದ ತುಂಬಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇದರ ಪರಿಮಳ ಹಾಗೂ ಅದ್ಭುತ ಪ್ರಯೋಜನಗಳನ್ನು ಪಡೆಯಲು ಪಾನ್‌ ಅಗಿಯುವ ಅಭ್ಯಾಸ ರೂಢಿಸಿಕೊಳ್ಳುವುದು ಉತ್ತಮ. ವೀಳ್ಯದೆಲೆಗಳು ದೇಹಕ್ಕೆ ಉಷ್ಣ ಎನ್ನುತ್ತಾರೆ, ಆದರೆ ಪಾನ್‌ನಲ್ಲಿ ಗುಲ್ಕಂಡ್‌, ಅಡಿಕೆ, ಪೆನ್ನೆಲ್‌ ಬೀಜ ಇದ್ದು ಇವು ದೇಹವನ್ನು ತಂಪಾಗಿಸಲುಸಹಾಯ ಮಾಡುತ್ತದೆ.

ಟ್ರೆಂಡಿಂಗ್​ ಸುದ್ದಿ

ಊಟದ ನಂತರ ಪಾನ್‌ ಜಗಿಯುವುದರಿಂದಾಗುವ ಪ್ರಯೋಜನಗಳು

ಜೀರ್ಣಕ್ರಿಯೆಯನ್ನ ಹೆಚ್ಚಿಸುತ್ತದೆ: ವೀಳ್ಯದೆಲೆಗಳು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಹೆಚ್ಚಿಸುವ ಸಂಯುಕ್ತಗಳನ್ನು ಹೊಂದಿರುತ್ತವೆ. ಇದು ಆಹಾರವು ಸಂಪೂರ್ಣವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ. ಇದು ಹೊಟ್ಟೆಯುಬ್ಬರ, ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ.

ಬಾಯಿ ಆರೋಗ್ಯವನ್ನು ಸುಧಾರಿಸುತ್ತದೆ: ವೀಳ್ಯದೆಲೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಅದು ಬಾಯಿಯ ಸೋಂಕನ್ನು ಕಡಿಮೆ ಮಾಡಲು ಮತ್ತು ನಿಮ್ಮ ಉಸಿರಾಟವನ್ನು ತಾಜಾಗೊಳಿಸಲು ಸಹಾಯ ಮಾಡುತ್ತದೆ. ಪಾನ್‌ ಜಗಿಯುವುದರಿಂದ ಲಾಲಾರಸ ಉತ್ಪಾದನೆ ಹೆಚ್ಚುತ್ತದೆ. ಇದು ನೈಸರ್ಗಿಕವಾಗಿ ನಿಮ್ಮ ಬಾಯಿಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾದ ಸಂಗ್ರಹವನ್ನು ತಡೆಯುತ್ತದೆ.

ಚಯಾಪಚಯವನ್ನು ವರ್ಧಿಸುತ್ತದೆ: ವೀಳ್ಯದೆಲೆಗಳ ನಿಯಮಿತ ಸೇವನೆಯು ಚಯಾಪಚಯ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ. ಇದು ದೇಹವು ಆಹಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ಪ್ರಕ್ರಿಯೆಗೊಳಿಸಲು ಸಹಾಯ ಮಾಡುತ್ತದೆ ಮತ್ತು ತೂಕ ನಿರ್ವಹಣೆಯಲ್ಲಿ ಸಮರ್ಥವಾಗಿ ಸಹಾಯ ಮಾಡುತ್ತದೆ.

ದುರ್ವಾಸನೆ ಕಡಿಮೆ ಮಾಡುತ್ತದೆ: ವೀಳ್ಯದೆಲೆಯ ಆರೊಮ್ಯಾಟಿಕ್ ಘಟಕಗಳು, ಏಲಕ್ಕಿ ಮತ್ತು ಲವಂಗಗಳಂತಹ ಹೆಚ್ಚುವರಿ ಪದಾರ್ಥಗಳೊಂದಿಗೆ ಸಂಯೋಜಿಸುವ ಕಾರಣ ಇದು ಉಸಿರಿನ ದುರ್ಗಂಧವನ್ನು ನಿವಾರಿಸುತ್ತದೆ. ಊಟದ ನಂತರ ಬಾಯಿಯಿಂದ ಹರಡುವ ವಾಸನೆ ನಿವಾರಣೆಗೆ ಇದು ಉತ್ತಮ ಆಯ್ಕೆಯಾಗಿದೆ.

ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ: ವೀಳ್ಯದೆಲೆಯಲ್ಲಿರುವ ಸಂಯುಕ್ತಗಳು ಮನಸ್ಸು ಮತ್ತು ದೇಹದ ಮೇಲೆ ಶಾಂತಗೊಳಿಸುವ ಪರಿಣಾಮವನ್ನು ಬೀರುತ್ತವೆ, ವಿಶ್ರಾಂತಿಯನ್ನು ಉತ್ತೇಜಿಸುತ್ತದೆ, ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ನಿದ್ರೆಯನ್ನು ಸುಧಾರಿಸುತ್ತದೆ.

ವೀಳ್ಯದೆಲೆ ತಿನ್ನುವ ಅಭ್ಯಾಸ ಬಹುತೇಕ ಎಲ್ಲರಿಗೂ ಇರುತ್ತದೆ. ಆದರೆ ವೀಳ್ಯದೆಲೆ ಸೇವನೆಯಿಂದ ಇಷ್ಟೆಲ್ಲಾ ಪ್ರಯೋಜನಗಳಿಗೆ ಎಂಬುದು ಬಹುಶಃ ನಿಮಗೆ ತಿಳಿದಿರಲಿಕ್ಕಿಲ್ಲ. ಇನ್ನು ಮುಂದೆ ಪ್ರತಿದಿನ ಊಟ ನಂತರ ವೀಳ್ಯದೆಲೆ ತಿನ್ನುವ ಅಭ್ಯಾಸ ರೂಢಿಸಿ, ಆರೋಗ್ಯ ಕಾಪಾಡಿಕೊಳ್ಳಿ.