Health News: ಹಾಲಿನೊಂದಿಗೆ ಹಣ್ಣು ಸೇರಿದಂತೆ ಸೇವಿಸಬಾರದಂತಹ ಆಹಾರದ ಕಾಂಬಿನೇಷನ್‌ಗಳಿವು; ಈ ರೀತಿ ತಿನ್ನುವ ಅಭ್ಯಾಸವಿದ್ದರೆ ತಕ್ಷಣ ನಿಲ್ಲಿಸಿ
Worst food combinations: ನಮ್ಮ ನಾಲಿಗೆಗೆ ರುಚಿ ಎನ್ನಿಸುತ್ತದೆ ಎನ್ನುವ ಕಾರಣಕ್ಕೆ ನಾವು ಕೆಲವು ಆಹಾರಗಳನ್ನು ಜೊತೆಯಾಗಿ ಸೇವಿಸುತ್ತೇವೆ. ಆದರೆ ಈ ರೀತಿಯ ಕಾಂಬಿನೇಷನ್ ಆಹಾರಗಳು ಆರೋಗ್ಯಕ್ಕೆ ಹಾನಿ ಮಾಡುವುದರಲ್ಲಿ ಎರಡು ಮಾತಿಲ್ಲ. ಹಾಲಿನೊಂದಿಗೆ ಹಣ್ಣು, ಮಾಂಸದೊಂದಿಗೆ ಚೀಸ್ ಸೇರಿದಂತೆ ಇನ್ನೂ ಕೆಲವ ಸೇವಿಸಬಾರದಂತಹ ಆಹಾರದ ಕಾಂಬಿನೇಷನ್‌ಗಳು ಹೀಗಿವೆ.
ದೇಹದ ಶಕ್ತಿ ಹಾಗೂ ಪೋಷಣೆಗೆ ಆಹಾರ ಎಷ್ಟು ಮುಖ್ಯ ಎನ್ನುವುದು ನಿಜ. ಹಾಗಂತ ನಾಲಿಗೆಗೆ ಹಿತವಾಗಿದ್ದೆಲ್ಲವೂ ದೇಹಕ್ಕೆ ಹಿತವಾಗಬೇಕು ಎಂದೇನಿಲ್ಲ. ನಮ್ಮ ದೇಹದ ಆರೋಗ್ಯಕ್ಕೆ ನಾವು ಸೇವಿಸುವ ಆಹಾರಕ್ರಮವೂ ಬಹಳ ಮುಖ್ಯವಾಗುತ್ತದೆ. ಆಹಾರದೊಂದಿಗೆ ಕೆಲವು ಪೋಷಕಾಂಶಗಳನ್ನು ಸಂಯೋಜಿಸುವುದು ವಿಟಮಿನ್ ಡಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಸಿಯಂತಹ ಅಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ನಾವು ಸೇವಿಸುವ ಹಲವಾರು ಆಹಾರಗಳ ಕಾಂಬಿನೇಷನ್ ದೇಹದ ಅಸ್ವಸ್ಥತೆಗೆ ಕಾರಣವಾಗುವುದು, ಮಾತ್ರವಲ್ಲ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಹಾಲಿನೊಂದಿಗೆ ಮೊಸರು ಸೇವಿಸುವುದು, ಹಾಲಿನೊಂದಿಗೆ ಹಣ್ಣು ಸೇವಿಸುವುದು ಇವುಗಳನ್ನು ಎಂದಿಗೂ ಮಾಡಬೇಡಿ. ಈ ರೀತಿ ಕಾಂಬಿನೇಷನ್‌ಗಳು ಜೀರ್ಣಕ್ರಿಯೆ ಸಮಸ್ಯೆಯನ್ನು ಉಂಟು ಮಾಡಬಹುದು ಮತ್ತು ಆಹಾರದಲ್ಲಿರುವ ಪೋಷಕಾಂಶ ಹೀರುವಿಕೆಗೂ ನಿರ್ಬಂಧ ಹೇರಬಹುದು. ಪೌಷ್ಟಿಕತಜ್ಞೆ ನ್ಮಾಮಿ ಅಗರ್‌ವಾಲ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಟ್ಟಿಗೆ ತಿನ್ನಬಾರದಂತಹ ಆಹಾರಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಅಂತಹ ಕೆಲವು ಆಹಾರಗಳು ಹೀಗಿವೆ.
ಆಹಾರದ ಕೆಟ್ಟ ಕಾಂಬಿನೇಷನ್‌ಗಳು ಇಲ್ಲಿವೆ
ಊಟದೊಂದಿಗೆ ಹಣ್ಣಿನ ಸೇವನೆ
ನಾವು ಸೇವಿಸುವ ಊಟದೊಂದಿಗೆ ಸಿಹಿ ಅಂಶ ಸೇರಲಿ ಎಂಬ ಉದ್ದೇಶದಿಂದ ಕೆಲವರು ಊಟ ಮಾಡುವಾಗ ಹಣ್ಣು ತಿನ್ನುತ್ತಾರೆ. ಆದರೆ ಊಟ ಮಾಡುವಾಗ ಎಂದಿಗೂ ಹಣ್ಣು ಸೇವಿಸಬಾರದು. ಹಣ್ಣು ಹಾಗೂ ಊಟವನ್ನು ಒಟ್ಟಾಗಿ ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಉಂಟಾಗಬಹುದು. ಹಣ್ಣುಗಳನ್ನು ಸ್ಯ್ನಾಕ್ಸ್‌ನಂತೆ ಬೇರೆಯಾಗಿಯೇ ಸೇವಿಸಬೇಕು. ಅಲ್ಲದೆ ಊಟ ಹಾಗೂ ಹಣ್ಣಿನ ಸೇವನೆಯು ನಡುವೆ ಸಾಕಷ್ಟು ಸಮಯ ಇರಬೇಕು.
ಕೊಬ್ಬಿನಾಂಶ ಇರುವ ಮಾಂಸಗಳು ಹಾಗೂ ಚೀಸ್
ಕೊಬ್ಬಿನ ಅಥವಾ ಸಂಸ್ಕರಿಸಿದ ಮಾಂಸದೊಂದಿಗೆ ಚೀಸ್ ಸೇರಿಸಿ ಸೇವಿಸಿದಾಗ ದೇಹದಲ್ಲಿ ಸ್ಯಾಚುರೇಟೆಡ್ ಕೊಬ್ಬು ಮತ್ತು ಸೋಡಿಯಂನ ಪ್ರಮಾಣ ಗಣನೀಯವಾಗಿ ಹೆಚ್ಚಬಹುದು. ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು ಮತ್ತು ನಮ್ಮ ಒಟ್ಟಾರೆ ಆರೋಗ್ಯ ಮೇಲೆ ಪರಿಣಾಮ ಬೀರಬಹುದು.
ಹಾಲು ಮತ್ತು ಸಿಟ್ರಸ್ ಅಂಶ ಇರುವ ಹಣ್ಣುಗಳು
ಮೂಸಂಬಿ, ಕಿತ್ತಳೆಯಂತಹ ಸಿಟ್ರಸ್ ಅಂಶ ಇರುವ ಆಹಾರ ಹಣ್ಣುಗಳು ಆಸಿಡ್ ಅಂಶವನ್ನು ಹೊಂದಿರುತ್ತದೆ. ಇದನ್ನು ಜೊತೆಯಾಗಿ ಸೇವಿಸುವುದರಿಂದ ಮೊಸರಾಗಿ ಪರಿವರ್ತನೆಯಾಗಬಹುದು, ಇದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಬಹುದು. ಆ ಕಾರಣಕ್ಕೆ ಈ ಎರಡನ್ನೂ ಒಟ್ಟಾಗಿ ತಿನ್ನಬೇಡಿ ಅಲ್ಲದೆ ಹಾಲು ಹಾಗೂ ಈ ಹಣ್ಣುಗಳ ಸೇವನೆಯು ನಡುವೆ ಸಾಕಷ್ಟು ಅಂತರವಿರಲಿ.
ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ
ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಎರಡೂ ಪೋಷಕಾಂಶಗಳು ಮನುಷ್ಯನ ದೇಹಕ್ಕೆ ಅವಶ್ಯವಿರುವ ಪೋಷಕಾಂಶಗಳು. ಆದರೆ ಈ ಎರಡನ್ನೂ ಒಟ್ಟಾಗಿ ಸೇವಿಸಿದಾಗ ದೇಹವು ಅದನ್ನು ಹೀರಿಕೊಳ್ಳಲು ಅಡ್ಡಿಯಾಗಬಹುದು.
ಆದರೆ ತಜ್ಞರ ಪ್ರಕಾರ ಕಡಿಮೆ ಪ್ರಮಾಣದಲ್ಲಿ ಈ ಆಹಾರ ಪದಾರ್ಥಗಳ ಸೇವನೆಯು ಹಾನಿಕಾರಣವಲ್ಲ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಈ ಕಾಂಬಿನೇಷನ್‌ನ ಆಹಾರಗಳ ಅತಿಯಾದ ಸೇವನೆಯಿಂದ ಅಪಾಯ ತಪ್ಪಿದ್ದಲ್ಲ.
ಇದನ್ನೂ ಓದಿ
Weight Loss: ತೂಕ ಇಳಿಸುವ ಚಿಂತೆಯೇ; ಸಮತೋಲಿತ ಡಯೆಟ್ ಕ್ರಮ ಪಾಲಿಸಲು ಮರೆಯದಿರಿ; ಹೀಗಿರಲಿ ನಿಮ್ಮ ಆಹಾರ ಪದ್ಧತಿ
Diet Plan For Weight Loss: ತೂಕ ಇಳಿಕೆ ಇಂದು ಹಲವರನ್ನು ಕಾಡುತ್ತಿರುವ ಸಮಸ್ಯೆ. ವ್ಯಾಯಾಮ, ದೇಹದಂಡನೆಯ ಜೊತೆಗೆ ಸಮತೋಲಿನ ಡಯೆಟ್ ಕ್ರಮದ ಪಾಲನೆಯೂ ತೂಕ ಇಳಿಕೆಗೆ ಮುಖ್ಯವಾಗುತ್ತದೆ. ಹಾಗಾದರೆ ನಮ್ಮ ಆಹಾರಕ್ರಮ ಹೇಗಿರಬೇಕು, ಆಹಾರದಲ್ಲಿ ಯಾವ ಅಂಶವನ್ನು ಸೇರಿಸಬೇಕು ಎಂಬುದನ್ನು ನೋಡಿ.
ಇಂದಿನ ಒತ್ತಡದ ಜೀವನ, ಜಡಜೀವನಶೈಲಿ, ವೃತ್ತಿ ಬದುಕು, ವರ್ಕ್ ಫ್ರಂ ಹೋಮ್ ಸೇರಿದಂತೆ ಇನ್ನೂ ಹಲವು ಕಾರಣಗಳು ತೂಕ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಇದರೊಂದಿಗೆ ಆಹಾರಪದ್ಧತಿಯೂ ತೂಕ ಹೆಚ್ಚಲು ಪ್ರಮುಖ ಕಾರಣವಾಗಿದೆ.