ಕನ್ನಡ ಸುದ್ದಿ  /  ಜೀವನಶೈಲಿ  /  Evening Snacks: ಸಂಜೆ 4 ರಿಂದ 6 ಗಂಟೆಯ ಮಧ್ಯೆ ಸ್ನ್ಯಾಕ್ಸ್‌ ತಿನ್ನುವ ಅಭ್ಯಾಸವಿದ್ಯಾ? ಈ ರೂಢಿ ಆರೋಗ್ಯಕ್ಕೆಷ್ಟು ಮಾರಕ ನೋಡಿ

Evening Snacks: ಸಂಜೆ 4 ರಿಂದ 6 ಗಂಟೆಯ ಮಧ್ಯೆ ಸ್ನ್ಯಾಕ್ಸ್‌ ತಿನ್ನುವ ಅಭ್ಯಾಸವಿದ್ಯಾ? ಈ ರೂಢಿ ಆರೋಗ್ಯಕ್ಕೆಷ್ಟು ಮಾರಕ ನೋಡಿ

ಸಂಜೆ ಹೊತ್ತಿಗೆ ಸ್ನ್ಯಾಕ್ಸ್‌ ತಿನ್ನುವ ಅಭ್ಯಾಸ ಹಲವರಿಗಿದೆ. ನೀವು ಕೂಡ ಈ ಪೈಕಿ ಒಬ್ಬರಾಗಿದ್ದರೆ ಖಂಡಿತ ತಿಳಿದುಕೊಳ್ಳಬೇಕಾದ ವಿಚಾರ ಸಾಕಷ್ಟಿದೆ. ಮಧ್ಯಾಹ್ನ ಊಟದ ಬಳಿಕ ಹಾಗೂ ರಾತ್ರಿ ಊಟಕ್ಕೂ ಮುನ್ನ ನೀವು ಸೇವಿಸುವ ಆಹಾರ ನಿಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕರಕ ಎಂಬುದಕ್ಕೆ ಮಾಹಿತಿ ಇಲ್ಲಿದೆ.

ಸಂಜೆ 4 ರಿಂದ 6 ಗಂಟೆಯ ಮಧ್ಯೆ ಸ್ನ್ಯಾಕ್ಸ್‌ ತಿನ್ನುವ ಅಭ್ಯಾಸವಿದ್ಯಾ? ಈ ರೂಢಿ ಆರೋಗ್ಯಕ್ಕೆಷ್ಟು ಮಾರಕ ನೋಡಿ
ಸಂಜೆ 4 ರಿಂದ 6 ಗಂಟೆಯ ಮಧ್ಯೆ ಸ್ನ್ಯಾಕ್ಸ್‌ ತಿನ್ನುವ ಅಭ್ಯಾಸವಿದ್ಯಾ? ಈ ರೂಢಿ ಆರೋಗ್ಯಕ್ಕೆಷ್ಟು ಮಾರಕ ನೋಡಿ

ಗಂಟೆ ಸಂಜೆ ನಾಲ್ಕಾಯ್ತು ಎಂದರೆ ಸಾಕು, ಗರಿಗರಿಯಾದ ಸಮೋಸಾ, ಬಿಸಿಬಿಸಿ ಚಹಾದೊಂದಿಗೆ ಬಿಸ್ಕತ್ತು, ಕುರಕಲು ತಿಂಡಿ ಆಹಾ.. ಒಂದಿಲ್ಲೊಂದು ನೆನಪಾಗುತ್ತದೆ. ಮಧ್ಯಾಹ್ನದ ವೇಳೆಗೆ ನೀವು ಏನೇ ಊಟ ಮಾಡಿರಲಿ ಸಂಜೆ 4-6 ಗಂಟೆಯ ಸಮಯದಲ್ಲಿ ಏನನ್ನಾದರೂ ತಿಂದಿಲ್ಲವೆಂದರೆ ನಮಗೆ ಸಮಾಧಾನವೇ ಆಗುವುದಿಲ್ಲ. ಆದರೆ ಈ ಅಭ್ಯಾಸವು ನಮ್ಮ ಉತ್ತಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ ಎಂದು ಆಹಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೆಳಗ್ಗೆ ತಿಂಡಿ ತಿಂದ ಕೂಡಲೇ ನಾವು ನಮ್ಮ ದಿನನಿತ್ಯದ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ಚಟುವಟಿಕೆಯಿಂದ ಇರುತ್ತೇವೆ. ಆದರೆ ಸಂಜೆ 4 ಗಂಟೆ ವೇಳೆಗೆ ಚಹಾ ತಿಂಡಿ ಸೇವಿಸುವಾಗ ಈ ಶಿಸ್ತು ಇರುವುದಿಲ್ಲ. ಅಲ್ಲದೇ ರಾತ್ರಿ ಊಟದ ಬಳಿಕವೂ ಏನನ್ನಾದರೂ ಸೇವಿಸಬೇಕೆಂದು ಮನಸ್ಸಾಗಲು ಆರಂಭಿಸುತ್ತದೆ. ಹೀಗಾಗಿ ಈ ಎರಡು ಗಂಟೆಗಳ ನಿಮ್ಮ ಕಡುಬಯಕೆಯ ಅವಧಿ ಖಂಡಿತವಾಗಿಯೂ ನಿಮ್ಮ ಶತ್ರುವೇ ಆಗಿದೆ.

ಟ್ರೆಂಡಿಂಗ್​ ಸುದ್ದಿ

ಆಹಾರ ತಜ್ಞರಾದ ಪ್ರಶಾಂತ್ ದೇಸಾಯಿ ಹೇಳುವ ಪ್ರಕಾರ 3:30ರ ಸುಮಾರಿಗೆ ನೀವು ಒಂದು ಲೋಟ ನೀರು, ಮಜ್ಜಿಗೆ ಅಥವಾ ನಿಂಬೆ ಜ್ಯೂಸ್ ಸೇವಿಸಬಹುದಾಗಿದೆ. ಇನ್ನೂ ಜಾಸ್ತಿ ಹಸಿವಾದರೆ ಬ್ಲಾಕ್ ಕಾಫಿ ಅಥವಾ ಬ್ಲ್ಯಾಕ್ ಟೀಯನ್ನು ನೀವು ಸೇವಿಸಬಹುದು. ಇಲ್ಲವಾದಲ್ಲಿ ಪ್ರೊಟೀನ್ ಶೇಕ್ ಕುಡಿಯಬಹುದಾಗಿದೆ. ಈ ರೀತಿ ಮಾಡುವುದರಿಂದ ಸಂಜೆ 4 ರಿಂದ 6 ಗಂಟೆಯ ಅವಧಿಯಲ್ಲಿ ಏನಾದರೂ ಸೇವಿಸಬೇಕು ಎನ್ನುವ ನಿಮ್ಮ ಕಡುಬಯಕೆ ದೂರವಾಗುತ್ತದೆ.

ಸಂಜೆ ಸ್ನ್ಯಾಕ್ಸ್‌ ತಿಂದ್ರೆ ಏನಾಗುತ್ತೆ?

ಜಿಂದಾಲ್ ನೇಚರ್ಕ್ಯೂರ್ ಇನ್ಸ್ಟಿಟ್ಯೂಟ್‌ನ ಉಪಮುಖ್ಯ ವೈದ್ಯಾಧಿಕಾರಿ ಡಾ. ವಿನೋದ್ ಕುಮಾರಿ ಈ ವಿಚಾರವಾಗಿ ಮಾತನಾಡಿದ್ದು, ನಾಲ್ಕರಿಂದ ಆರು ಗಂಟೆಗಳ ಕಾಲ ಲಘು ಉಪಹಾರ ಸೇವನೆಯಿಂದ ಸಾಕಷ್ಟು ತೊಂದರೆಯಾಗುತ್ತದೆ. ಮೊದಲನೆಯದಾಗಿ ರಾತ್ರಿಯ ಊಟಕ್ಕೆ ಇದು ಭಂಗ ತರುತ್ತದೆ. ನೀವು ಸಂಜೆಯ ಸ್ನ್ಯಾಕ್ ಎಂದು ತಿನ್ನುವ ಬಹುತೇಕ ಪದಾರ್ಥಗಳು ಕೊಬ್ಬಿನಾಂಶ ಹೊಂದಿರುವ, ಸಕ್ಕರೆಯಂಶ ಜಾಸ್ತಿಯಿರುವ ಹಾಗೂ ಭಾರೀ ಪ್ರಮಾಣದ ಕ್ಯಾಲೋರಿ ಇರುವ ಪದಾರ್ಥವೇ ಆಗಿರುತ್ತದೆ. ಇವುಗಳು ಖಂಡಿತ ನಿಮ್ಮ ದೇಹದ ತೂಕವನ್ನು ಹೆಚ್ಚಿಸುವ ಕಾರ್ಯ ಮಾಡುತ್ತದೆ. ಇಂತಹ ಆಹಾರಗಳು ನಿಮ್ಮ ಹಸಿವನ್ನು ಕಟ್ಟಿಸುತ್ತವೆ ಎಂದು ಹೇಳಿದ್ದಾರೆ.

ಈ ಹೊತ್ತಿನಲ್ಲಿ ನಿಜಕ್ಕೂ ಹಸಿವಾದರೆ ನೀವು ಹುರಿದ ಮಖಾನಾಗಳು ಅಥವಾ ಯಾವುದೇ ಹಣ್ಣು, ತರಕಾರಿಗಳನ್ನು ಸೇವನೆ ಮಾಡಬಹುದು. ಬಾದಾಮಿ ತಿನ್ನುವುದು ಕೂಡ ಉತ್ತಮ ಆಯ್ಕೆಯಾಗಿದೆ. ಪ್ರೊಟೀನ್ ಅಂಶಯುಕ್ತ ಆಹಾರಗಳು ಕಾರ್ಬೋಹೈಡ್ರೇಟ್ ಅಂಶ ಕಡಿಮೆ ಇರುವ ಆಹಾರಗಳನ್ನು ಸೇವನೆ ಮಾಡಬಹುದಾಗಿದೆ. ಇವುಗಳು ಆರೋಗ್ಯಕ್ಕೆ ಯಾವುದೇ ಹಾನಿ ಉಂಟುಮಾಡುವುದಿಲ್ಲ.

ಕಡಿಮೆ ಊಟ ಮಾಡಿ ಜಾಸ್ತಿ ಕುರುಕಲು ತಿಂಡಿಗಳ ಸೇವನೆ ಮಾಡುವುದು ಖಂಡಿತವಾಗಿಯೂ ಒಳ್ಳೆಯ ಅಭ್ಯಾಸವಲ್ಲ. ಅಲ್ಲದೇ ಹೆಚ್ಚೆಚ್ಚು ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ನೀವು ತಿಂಡಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಜಾಗರೂಕತೆಯಿಂದ ಇರಬೇಕು. ಈ ರೀತಿ ಮಾಡುವುದರಿಂದ ಮಾತ್ರ ನೀವು ನಿಮ್ಮ ಸರ್ವತೋಮುಖ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)