Immunity Booster: ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಈ ಆಹಾರಗಳ ಸೇವನೆಗಿರಲಿ ಆದ್ಯತೆ
ಕನ್ನಡ ಸುದ್ದಿ  /  ಜೀವನಶೈಲಿ  /  Immunity Booster: ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಈ ಆಹಾರಗಳ ಸೇವನೆಗಿರಲಿ ಆದ್ಯತೆ

Immunity Booster: ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಈ ಆಹಾರಗಳ ಸೇವನೆಗಿರಲಿ ಆದ್ಯತೆ

ಈ ವರ್ಷ ಮಳೆ ಕಡಿಮೆ ಇದ್ದರೂ ಸೊಳ್ಳೆಗಳ ಕಾರಣದಿಂದ ರೋಗಗಳು ಹರಡುವ ಸಂಖ್ಯೆ ಹೆಚ್ಚಾಗಿದೆ. ಡೆಂಗಿಯಂತಹ ಪ್ರಕರಣಗಳು ಏರಿಕೆಯಾಗುತ್ತಲೇ ಇವೆ. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ದೇಹದಲ್ಲಿ ಸೋಂಕು ಹರಡದಂತೆ ತಡೆಯಬಹುದು. ಪ್ರತಿರೋಧಕ ಶಕ್ತಿ ಹೆಚ್ಚಲು ಈ ಆಹಾರಗಳ ಸೇವನೆಗೆ ಆದ್ಯತೆ ನೀಡಿ.

ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು
ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು

ದೇಶದಾದ್ಯಂತ ಡೆಂಗಿ ಪ್ರಕರಣಗಳು ಏರಿಕೆಯಾಗುತ್ತಲೇ ಇದೆ. ಉತ್ತರ ಭಾರತದಲ್ಲಿ ಮಳೆಯ ಪ್ರಮಾಣ ಹೆಚ್ಚಿರುವ ಕಾರಣ ಸೊಳ್ಳೆಗಳ ಹೆಚ್ಚು ಹರಡುತ್ತಿದೆ. ದಕ್ಷಿಣದಲ್ಲಿ ಮಳೆ ಇಲ್ಲದೇ ಇದ್ದರೂ ಸೊಳ್ಳೆಗಳ ಹರಡುವ ಸಂಖ್ಯೆ ಹೆಚ್ಚಾಗಿದೆ. ಈ ಕಾರಣದಿಂದ ಡೆಂಗಿ ಪ್ರಕರಣಗಳಲ್ಲಿ ಏರಿಕೆಯಾಗುತ್ತಲೇ ಇದೆ. ಡೆಂಗಿ ನಿವಾರಣೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ. ನಿಯಮಿತ ವ್ಯಾಯಾಮ, ಸಮರ್ಪಕ ನಿದ್ದೆ ಮತ್ತು ಪೌಷ್ಟಿಕ ಆಹಾರ ಸೇವನೆಯ ಮೂಲಕ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಋತುಮಾನದಲ್ಲಿ ಬೆಳೆಯುವ ಹಣ್ಣುಗಳು, ತರಕಾರಿಗಳು, ಸಾಕಷ್ಟು ದ್ರವಾಹಾರ ಸೇವನೆ, ಬೀಜಗಳು, ಪ್ರೊಟೀನ್‌ಗಳು, ವಿಟಮಿನ್‌ಗಳ ಸೇವನೆಯಿಂದ ದೇಹವನ್ನು ಸುರಕ್ಷಿತವಾಗಿಡಬಹುದು, ಜೊತೆಗೆ ಸೋಂಕು ಹರಡುವುದನ್ನು ತಡೆಗಟ್ಟಲು ಇದು ಸಹಾಯ ಮಾಡುತ್ತದೆ. ಸಿಹಿ ಪದಾರ್ಥ, ಜಂಕ್‌ ಫುಡ್‌, ಕರಿದ ಪದಾರ್ಥಗಳು, ಸಂಸ್ಕರಿಸಿದ ಆಹಾರ ಪದಾರ್ಥಗಳ ಸೇವನೆಗೆ ಕಡಿವಾಣ ಹಾಕಬೇಕು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ʼಇದು ಡೆಂಗಿ ಕಾಲಘಟ್ಟ. ಈ ಸಮಯದಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ. ದೇಹದಲ್ಲಿ ಪ್ರತಿರೋಧಕ ಶಕ್ತಿ ಬೆಳೆದಾಗ ಮಾತ್ರ ಸೋಂಕುಗಳ ವಿರುದ್ಧ ಹೋರಾಡಲು ಸಾಧ್ಯ. ಆ ಕಾರಣಕ್ಕೆ ನಾವು ಸೇವಿಸುವ ಆಹಾರದ ವಿಚಾರದಲ್ಲಿ ಸಾಕಷ್ಟು ಎಚ್ಚರ ವಹಿಸಬೇಕು. ಋತುಮಾನಕ್ಕೆ ತಕ್ಕಂತಹ ಆಹಾರ ಪದಾರ್ಥಗಳನ್ನು ಸೇವಿಸುವ ಜೊತೆಗೆ ನಿರಂತರ ದೈಹಿಕ ಚಟುವಟಿಕೆಗೂ ಒತ್ತು ನೀಡಬೇಕು, ಇದರಿಂದ ಮಾನಸಿಕವಾಗಿಯೂ ಧನಾತ್ಮಕವಾಗಿದ್ದು ಉತ್ತಮ ಆರೋಗ್ಯ ಸ್ಥಿತಿಯನ್ನು ಕಾಪಾಡಿಕೊಳ್ಳಬೇಕು ಎನ್ನುತ್ತಾರೆ ಗುರುಗ್ರಾಮದ ಫೋರ್ಟಿಸ್‌ ಮೆಮೋರಿಯಲ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನ ಕ್ಲಿನಿಕಲ್‌ ನ್ಯೂಟ್ರಿಷನಿಸ್ಟ್‌ ದೀಪ್ತಿ ಖತುಜಾ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹಾಗೂ ಸೋಂಕು ಹರಡದಂತೆ ತಡೆಯಲು ಈ ಆಹಾರ ಪದಾರ್ಥಗಳನ್ನು ನಿಮ್ಮ ಡಯೆಟ್‌ ಕ್ರಮದಲ್ಲಿ ಸೇರಿಸಿ ಎನ್ನುತ್ತಾರೆ ದೀಪ್ತಿ.

ದ್ರವಾಹಾರಗಳು

ಈ ಋತುವಿನಲ್ಲಿ ಸಾಕಷ್ಟು ದ್ರವಾಹಾರ ಸೇವಿಸುವುದು ಅವಶ್ಯ. ಕುಡಿಯಲು ಕುದಿಸಿ ಆರಿಸಿದ ನೀರನ್ನೇ ಬಳಸಿ. ರೋಗನಿರೋಧಕ ಶಕ್ತಿಯ ನಿರ್ಮಾಣಕ್ಕಾಗಿ ಗಿಡಮೂಲಿಕೆಯ ಕಷಾಯ, ಚಹಾ, ಸಾರು, ಸೂಪ್‌ಗಳನ್ನು ಸೇವಿಸಿ. ಇದರೊಂದಿಗೆ ನಿಂಬೆ ಪಾನಕ, ಮಜ್ಜಿಗೆ ಎಳನೀರು ಇಂತಹ ಪಾನೀಯಗಳನ್ನೂ ಕುಡಿಯಬಹುದು. ಈ ಪಾನೀಯಗಳು ಎಲೆಕ್ಟ್ರೋಲೈಟ್‌ ಸಮತೋಲನವನ್ನು ಕಾಪಾಡುವ ಕೆಲಸ ಮಾಡುತ್ತವೆ. ಇವು ದೇಹವನ್ನು ನಿರ್ವಿಷಗೊಳಿಸುವ ಜೊತೆಗೆ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತವೆ.

ಹಣ್ಣುಗಳು

ಜಾಮೂನ್‌, ಪೇರಳೆ, ಪ್ಲಮ್‌, ಚೆರ್ರಿಗಳು, ಪೀಚ್‌, ಪಪ್ಪಾಯಿ, ಸೇಬು, ದಾಳಿಂಬೆಯಂತಹ ಕಾಲೋಚಿತ ಹಣ್ಣುಗಳನ್ನು ಸೇವಿಸುವುದರಿಂದ ವಿಟಮಿನ್ ಎ, ಸಿ, ಉತ್ಕರ್ಷಣ ನಿರೋಧಕಗಳು ಮತ್ತು ನಾರಿನಾಂಶದಂತಹ ಪೋಷಕಾಂಶಗಳು ಲಭ್ಯವಾಗುತ್ತವೆ. ಈ ಹಣ್ಣುಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಕರುಳಿನ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಪ್ರತಿರಕ್ಷಣಾ ಪ್ರತಿಕ್ರಿಯೆನ್ನು ಪ್ರಚೋದಿಸುತ್ತವೆ.

ತರಕಾರಿಗಳು

ಕರುಳಿನ ಆರೋಗ್ಯ ಸುಧಾರಣೆ ಹಾಗೂ ರೋಗನಿರೋಧಕ ಚಟುವಟಿಕೆಯನ್ನು ಉತ್ತೇಜಿಸಲು ಕಾಲೋಚಿತ ಮತ್ತು ವಿವಿಧ ಬಣ್ಣದ ತರಕಾರಿಗಳನ್ನು ನಿಮ್ಮ ನಿಯಮಿತ ಆಹಾರದ ಭಾಗವಾಗಿ ಮಾಡಬೇಕು. ವಿಟಮಿನ್ ಎ, ಸಿ ನಂತಹ ವಿವಿಧ ಬಣ್ಣದ ತರಕಾರಿಗಳಲ್ಲಿ ಇರುವ ವಿವಿಧ ಜೀವಸತ್ವಗಳು ಸತು, ಮೆಗ್ನೀಸಿಯಮ್ ಮುಂತಾದ ಖನಿಜಗಳೊಂದಿಗೆ ಉತ್ತಮ ಉತ್ಕರ್ಷಣ ನಿರೋಧಕಗಳು ಮತ್ತು ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತವೆ.

ಮಸಾಲೆಗಳು

ಅರಿಶಿನ, ಶುಂಠಿ, ಬೆಳ್ಳುಳ್ಳಿ, ಮೆಣಸು, ದಾಲ್ಚಿನ್ನಿ, ಏಲಕ್ಕಿ ಮತ್ತು ಜಾಯಿಕಾಯಿಯಂತಹ ಮಸಾಲೆಗಳು ಮತ್ತು ಗಿಡಮೂಲಿಕೆಗಳು ಉರಿಯೂತ, ಆಂಟಿಫಂಗಲ್, ಆಂಟಿವೈರಲ್, ಆಂಟಿಮೈಕ್ರೊಬಿಯಲ್, ಆಂಟಿಬ್ಯಾಕ್ಟೀರಿಯಲ್ ಅಂಶಗಳನ್ನು ಹೊಂದಿದ್ದು, ಇವು ಪ್ರತಿರಕ್ಷಣಾ ವ್ಯವಸ್ಥೆಗಳ ಸುಧಾರಣೆಗೆ ಉತ್ತೇಜನ ನೀಡುತ್ತವೆ. ರೋಗಕಾರಕಗಳಿಂದ ದೇಹವನ್ನು ರಕ್ಷಿಸಲು ಸಹಾಯ ಮಾಡುವ ಟಿ-ಕೋಶಗಳಂತಹ ಪ್ರತಿರಕ್ಷಣಾ ಕೋಶಗಳನ್ನು ನಿಯಂತ್ರಿಸುವ ಮೂಲಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸಲು ಅವು ಅದ್ಭುತವಾಗಿ ಕಾರ್ಯನಿರ್ವಹಿಸುತ್ತವೆ. ಈ ಋತುಮಾನದಲ್ಲಿ ನಿಮ್ಮ ಆಹಾರದೊಂದಿಗೆ ಇವುಗಳನ್ನು ಹೆಚ್ಚು ಹೆಚ್ಚು ಸೇರಿಸಿ ಆರೋಗ್ಯ ಕಾಪಾಡಿಕೊಳ್ಳಿ.

ಬೀಜಗಳು, ಒಣಹಣ್ಣುಗಳು

ಒಣಹಣ್ಣುಗಳು ಹಾಗೂ ಬೀಜಗಳು ಪ್ರೊಟೀನ್‌, ಆರೋಗ್ಯಕರ ಕೊಬ್ಬುಗಳು, ಜೀವಸತ್ವಗಳು, ಖನಿಜಗಳು ಹಾಗೂ ಉತ್ಕರ್ಷಣ ನಿರೋಧಕ ಅಂಶಗಳಿಂದ ತುಂಬಿರುತ್ತದೆ. ಪ್ರೊಟೀನ್‌ಗಳು ಮತ್ತು ಅಮೈನೊ ಆಮ್ಲಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಪ್ರೋಬಯೋಟಿಕ್ಸ್‌ಗಳು

ಮೊಸರು, ಮಜ್ಜಿಗೆ, ಚೀಸ್‌, ಕೆಫೀರ್‌, ಕೊಂಬುಚಾ ಮತ್ತು ಸೋಯಾಬೀನ್‌ನಂತಹ ಪ್ರೋಬಯೋಟಿಕ್ಸ್‌ ಅಂಶ ಇರುವ ಆಹಾರಗಳ ಸೇವನೆಗೆ ಒತ್ತು ನೀಡಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉತ್ತಮ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತವೆ.

ಈ ಆಹಾರಗಳಿಂದ ದೂರವಿರಿ

  • ಕಾರ್ಬೋನೇಟ್‌ ಅಂಶವಿರುವ ಪಾನೀಯಗಳು, ತಂಪು ಪಾನೀಯ, ಸ್ವ್ಕ್ಯಾಶ್‌ಗಳಿಂದ ದೂರವಿರಿ.
  • ರಸ್ತೆ ಬದಿ ಆಹಾರ, ಹಸಿ ಪದಾರ್ಥ, ಹಳಸಿದ ಆಹಾರ ಸೇವನೆಗೆ ಕಡಿವಾಣ ಹಾಕಿ.
  • ಕರಿದ ಹಾಗೂ ಡೀಪ್‌ ಫ್ರೈ ಮಾಡಿದ ಆಹಾರಗಳ ಸೇವನೆಗೆ ಕಡಿವಾಣ ಹಾಕಿ.
  • ಬೇಕರಿ ಉತ್ಪನ್ನಗಳು, ಮೈದಾ ಸೇರಿಸಿದ ಆಹಾರ, ಪಿಜ್ಜಾ, ಪಸ್ತಾ, ಬರ್ಗರ್‌ ಮತ್ತು ಫ್ರೈಸ್‌ಗಳಂತಹ ಆಹಾರಗಳ ಸೇವನೆಗೆ ಕಡಿವಾಣ ಹಾಕಿ.
  • ಚೀಸ್‌ ಮಯೋನಿಸ್‌ಗಳಿಂದ ದೂರವಿರಿ.
  • ಮದ್ಯಪಾನ ತ್ಯಜಿಸಿ.
  • ಧೂಮಪಾನದಿಂದ ದೂರವಿರಿ.

Whats_app_banner