ಎಳನೀರಿನಿಂದ ಆರೋಗ್ಯಕ್ಕುಂಟು ನೂರಾರು ಪ್ರಯೋಜನ, ಆದರೆ ಸೇವನೆಗೂ ಮುನ್ನ ಈ ಮುನ್ನೆಚ್ಚರಿಕೆಗಳನ್ನು ಮರೆಯದಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಎಳನೀರಿನಿಂದ ಆರೋಗ್ಯಕ್ಕುಂಟು ನೂರಾರು ಪ್ರಯೋಜನ, ಆದರೆ ಸೇವನೆಗೂ ಮುನ್ನ ಈ ಮುನ್ನೆಚ್ಚರಿಕೆಗಳನ್ನು ಮರೆಯದಿರಿ

ಎಳನೀರಿನಿಂದ ಆರೋಗ್ಯಕ್ಕುಂಟು ನೂರಾರು ಪ್ರಯೋಜನ, ಆದರೆ ಸೇವನೆಗೂ ಮುನ್ನ ಈ ಮುನ್ನೆಚ್ಚರಿಕೆಗಳನ್ನು ಮರೆಯದಿರಿ

ಎಳನೀರು ಸೇವಿಸುವುದರಿಂದ ದೇಹಕ್ಕೆ ಪ್ರಯೋಜನಗಳಿವೆ. ಇದರಿಂದ ಚರ್ಮ, ಕೂದಲ ಆರೋಗ್ಯ ಸುಧಾರಿಸುವ ಜೊತೆಗೆ ತೂಕ ಇಳಿಕೆಗೂ ನೆರವಾಗುತ್ತದೆ. ಆದರೆ ಇದನ್ನು ಸೇವಿಸುವ ಮುನ್ನ ಒಂದಿಷ್ಟು ಮುನ್ನೆಚ್ಚರಿಕೆಯ ಬಗ್ಗೆ ತಿಳಿದುಕೊಳ್ಳಲು ಮರೆಯದಿರಿ.

ಎಳನೀರಿನ ಪ್ರಯೋಜನಗಳು ಹಾಗೂ ಮುನ್ನೆಚ್ಚರಿಕೆಯ ಬಗ್ಗೆ ತಿಳಿಯರಿ
ಎಳನೀರಿನ ಪ್ರಯೋಜನಗಳು ಹಾಗೂ ಮುನ್ನೆಚ್ಚರಿಕೆಯ ಬಗ್ಗೆ ತಿಳಿಯರಿ

ನೈಸರ್ಗಿಕ ಪಾನೀಯ ಎಳನೀರು ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ದೇಹವನ್ನು ನಿರ್ಜಲೀಕರಣ ಸಮಸ್ಯೆಯಿಂದ ತಪ್ಪಿಸುತ್ತದೆ. ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಜೀರ್ಣಕ್ರಿಯೆಯನ್ನ ಹೆಚ್ಚಿಸುವುದು, ಎಲೆಕ್ಟ್ರೋಲೈಟ್‌ ಪ್ರಮಾಣವನ್ನು ಸಮತೋಲನಗೊಳಿಸುವುದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಕೂದಲು ಹಾಗೂ ಚರ್ಮದ ಆರೋಗ್ಯವನ್ನು ಸುಧಾರಿಸುವುದು, ರಕ್ತದೊತ್ತಡವನ್ನು ನಿಯಂತ್ರಿಸುವುದು, ಕಿಡ್ನಿ ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಆದರೆ ಎಳನೀರು ಕುಡಿಯುವ ಮುನ್ನ ಸಾಕಷ್ಟು ಮುನ್ನೆಚ್ಚರಿಕೆಯನ್ನೂ ವಹಿಸಬೇಕು. ಮಧುಮೇಹ ಹೊಂದಿರುವವರಲ್ಲಿ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದ ಏರಿಕೆಗೆ ಕಾರಣವಾಗಬಹುದು. ಇದರಲ್ಲಿ ಕ್ಯಾಲೊರಿ ಅಂಶದ ಬಗ್ಗೆ ಗಮನ ಹರಿಸುವುದು ಅವಶ್ಯ, ತೆಂಗಿನಕಾಯಿ ಅಲರ್ಜಿ ಇದ್ದವರು ಇದನ್ನು ಸೇವಿಸದೇ ಇರುವುದು ಉತ್ತಮ. ಇದು ಜಠರಗರುಳಿನ ಅಪಾಯವನ್ನು ತಪ್ಪಿಸುತ್ತದೆ. ಆ ಕಾರಣಕ್ಕೆ ಇದನ್ನು ಮಿತವಾಗಿ ಸೇವಿಸಬೇಕು, ಜೊತೆಗೆ ಒಂದಿಷ್ಟು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲು ಮರೆಯಬಾರದು.

ಇನ್ನಷ್ಟು ಜೀವನಶೈಲಿಗೆ ಸಂಬಂಧಿಸಿದ ಲೇಖನಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಎಳನೀರಿನ ಪ್ರಯೋಜನಗಳು ಹೀಗಿವೆ

ಹೈಡ್ರೇಷನ್‌

ಎಳನೀರು ಕುಡಿಯುವುದರಿಂದ ದೇಹ ಹೈಡ್ರೇಟ್‌ ಆಗುತ್ತದೆ. ನಿರ್ಜಲೀಕರಣವನ್ನು ತಪ್ಪಿಸಲು ಇದು ಉತ್ತಮ ಆಯ್ಕೆ. ಇದು ಪೊಟ್ಯಾಶಿಯಂ, ಮೆಗ್ನಿಶಿಯಂ, ಸೋಡಿಯಂನಂತಹ ಎಲೆಕ್ಟ್ರೋಲೈಟ್‌ಗಳಿಂದ ಸಮೃದ್ಧವಾಗಿರುತ್ತದೆ. ಇದು ದೇಹದಲ್ಲಿ ತೇವಾಂಶ ಮರಳಲು ಸಹಾಯ ಮಾಡುತ್ತದೆ. ಈ ಗುಣದ ಕಾರಣದಿಂದ ಇದನ್ನು ʼನೇಚರ್ಸ್ ಸ್ಪೋರ್ಟ್ಸ್ ಡ್ರಿಂಕ್ʼ ಎಂದು ಮಾನಿಟರ್‌ ಮಾಡಲಾಗುತ್ತದೆ.

ಪೋಷಕಾಂಶ ಸಮೃದ್ಧ

ಎಳನೀರಿನಲ್ಲಿ ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳು ಲಭ್ಯವಿರುತ್ತವೆ. ವಿಟಮಿನ್‌ ಸಿ, ವಿಟಮಿನ್‌ ಬಿ-ಕಾಂಪ್ಲೆಕ್ಸ್‌, ಕ್ಯಾಲ್ಸಿಯಂ, ಐರನ್‌ ಅಂಶಗಳು ಹೇರಳವಾಗಿರುತ್ತವೆ. ಇದು ಕ್ಯಾಲೊರಿ ಪ್ರಮಾಣವೂ ಕಡಿಮೆ ಇರುತ್ತದೆ. ಕೊಬ್ಬಿನಾಂಶ ಇರುವುದಿಲ್ಲ. ಸಮತೋಲಿತ ಡಯೆಟ್‌ಗೆ ಇದು ಬೆಸ್ಟ್‌.

ಜೀರ್ಣಕ್ರಿಯೆಗೆ ಸಹಕಾರಿ

ಎಳನೀರಿನಲ್ಲಿ ನಾರಿನಾಂಶವಿದ್ದು ಇದು ಜೀರ್ಣಕ್ರಿಯೆ ಸುಧಾರಣೆಗೆ ಸಹಾಯ ಮಾಡುತ್ತದೆ. ಅಜೀರ್ಣ, ಮಲಬದ್ಧತೆ, ಆಸಿಡ್‌ ರಿಫ್ಲಕ್ಸ್‌ನಂತಹ ಸಮಸ್ಯೆಗಳನ್ನೂ ನಿವಾರಿಸುತ್ತದೆ. ಇದರಲ್ಲಿರುವ ಕಿಣ್ವಗಳು ಚಯಾಪಚಯವನ್ನು ವೃದ್ಧಿಸುತ್ತದೆ.

ಎಲೆಕ್ಟ್ರೋಲೈಟ್‌ ಸಮತೋಲನಕ್ಕೆ ಸಹಾಯ ಮಾಡುತ್ತದೆ

ಎಳನೀರಿನಲ್ಲಿರುವ ಪೊಟ್ಯಾಶಿಯಂ ಹಾಗೂ ಸೋಡಿಯಂ ಅಂಶಗಳು ದೇಹದಲ್ಲಿ ಎಲೆಕ್ಟ್ರೊಲೈಟ್‌ ಸಮತೋಲನಕ್ಕೆ ಸಹಾಯ ಮಾಡುತ್ತವೆ. ಇದು ದೈಹಿಕ ಚಟುವಟಿಕೆ ಹಾಗೂ ಕ್ರೀಡೆಯಲ್ಲಿ ಹೆಚ್ಚು ತೊಡಗುವವರಿಗೆ ಬಹಳ ಅವಶ್ಯ. ಇದು ಸ್ನಾಯು ಸೆಳೆತ ಹಾಗೂ ಆಯಾಸವನ್ನು ನಿವಾರಿಸುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಆಂಟಿಆಕ್ಸಿಡೆಂಟ್‌, ಅಮಿನೊ ಆಸಿಡ್‌, ಸೈಟೊಕೆನಿನ್‌ ಅಂಶಗಳು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ.

ಕೂದಲು, ಚರ್ಮದ ಆರೋಗ್ಯ

ಪ್ರತಿನಿತ್ಯ ಎಳನೀರು ಸೇವಿಸುವುದರಿಂದ ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಮೊಡವೆಗಳ ನಿವಾರಣೆಗೂ ಎಳನೀರು ಸೇವನೆ ಉತ್ತಮ. ಇದು ತ್ವಚೆಯ ಕಾಂತಿ ಅರಳಲು ಸಹಾಯ ಮಾಡುತ್ತದೆ. ತಲೆಹೊಟ್ಟು ಕಡಿಮೆಯಾಗಲೂ ಇದು ಮದ್ದು.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಎಳನೀರಿನಲ್ಲಿ ನೈಸರ್ಗಿಕವಾಗಿ ಸೋಡಿಯಂ ಮತ್ತು ಪೊಟ್ಯಾಸಿಯಮ್ ಅಂಶ ಅಧಿಕವಾಗಿರುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದ ಹೃದ್ರೋಗದ ಅಪಾಯವನ್ನು ಕಡಿಮೆಯಾಗುತ್ತದೆ.

ಕಿಡ್ನಿ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ

ಎಳನೀರು ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿದೆ. ಇದು ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ತಡೆಯಲು ಮತ್ತು ಒಟ್ಟಾರೆ ಮೂತ್ರಪಿಂಡದ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.

ಪರಿಗಣಿಸಬೇಕಾದ ಮುನ್ನೆಚ್ಚರಿಕೆಗಳು ಹೀಗಿವೆ

ಎಳನೀರು ಸೇವನೆಯಿಂದ ದೇಹಾರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳು ಸಿಗುತ್ತವೆಯಾದರೂ ಇವುಗಳನ್ನು ಕುಡಿಯುವ ಮುನ್ನ ಒಂದಿಷ್ಟು ಮುನ್ನೆಚ್ಚರಿಕೆಯನ್ನೂ ಗಮನಿಸಿ.

ನೈಸರ್ಗಿಕ ಸಕ್ಕರೆ ಅಂಶ

ಎಳನೀರು ನೈಸರ್ಗಿಕ ಸಕ್ಕರೆಯ ಅಂಶಗಳನ್ನು ಹೊಂದಿರುತ್ತದೆ. ಇವು ಸಕ್ಕರೆ ಸೇರಿಸಿದ ಪದಾರ್ಥಗಳಷ್ಟು ಅಪಾಯಕಾರಿಯಲ್ಲದೇ ಇದ್ದರೂ ಮಧುಮೇಹಿಗಳು ಇದನ್ನು ಸೇವಿಸುವ ಮುನ್ನ ಒಂದಿಷ್ಟು ಮುನ್ನೆಚ್ಚರಿಕೆ ವಹಿಸುವುದು ಅವಶ್ಯ. ಎಳನೀರು ಸೇವನೆಗೂ ಮುನ್ನ ಎಳನೀರು ವೈದ್ಯರ ಬಳಿ ಅಭಿಪ್ರಾಯ ಕೇಳುವುದು ಉತ್ತಮ.

ಕ್ಯಾಲೊರಿ ಪ್ರಮಾಣ ಹೆಚ್ಚಬಹುದು

ಎಳನೀರಿನಲ್ಲಿ ಕಡಿಮೆ ಕ್ಯಾಲೊರಿ ಪ್ರಮಾಣ ಇರುತ್ತದೆ, ಹಾಗಂತ ಕ್ಯಾಲೊರಿ ಪ್ರಮಾಣ ಇಲ್ಲ ಎಂದಲ್ಲ. ಎಳನೀರಿನ ಅತಿಯಾದ ಸೇವನೆಯು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.

ಅಲರ್ಜಿ

ಎಳನೀರಿನ ಅಲರ್ಜಿ ಉಂಟಾಗುವುದು ಅಪರೂಪ. ತೆಂಗಿನಕಾಯಿ ನೀರನ್ನು ಸೇವಿಸಿದ ನಂತರ ತುರಿಕೆ, ಊತ, ದದ್ದು ಇಂತಹ ಸಮಸ್ಯೆಗಳು ಉಂಟಾದರೆ ತಕ್ಷಣಕ್ಕೆ ವೈದ್ಯಕೀಯ ಆರೈಕೆಯನ್ನು ಪಡೆಯುವುದು ಅವಶ್ಯ.

ಮಾಲಿನ್ಯದ ಅಪಾಯ

ತಾಜಾ ಎಳನೀರನ್ನಷ್ಟೇ ಸೇವಿಸಿ. ಕೆಲವೊಮ್ಮೆ ಎಳನೀರು ಹಾಳಾಗಿರುತ್ತದೆ. ಇದು ನಿಮ್ಮ ಗಮನಕ್ಕೆ ಬಾರದೇ ನೀವು ಇದನ್ನು ಸೇವಿಸುವುದರಿಂದ ಸಮಸ್ಯೆ ಉಂಟಾಗಬಹುದು. ಅಲ್ಲದೆ ಎಳನೀರಿನೊಂದಿಗೆ ಸೇರಿಸುವ ಸಂರಕ್ಷಕಗಳು (preservatives) ಆರೋಗ್ಯಕ್ಕೆ ಹಾನಿ ಮಾಡಬಹುದು.

ಅತಿಯಾದ ಬಳಕೆ

ಎಳನೀರಿ ಆರೋಗ್ಯಕರ ಪಾನೀಯವಾಗಿದ್ದರೂ, ಅದನ್ನು ಮಿತವಾಗಿ ಸೇವಿಸುವುದು ಅತ್ಯಗತ್ಯ. ಅತಿಯಾದ ಸೇವನೆಯು ಜಠರಗರುಳಿನ ಅಸ್ವಸ್ಥತೆ ಅಥವಾ ಅತಿಸಾರಕ್ಕೆ ಕಾರಣವಾಗಬಹುದು.

Whats_app_banner