Ghee: ತ್ವಚೆಯ ಕಾಂತಿ ಹೆಚ್ಚುವುದರಿಂದ ಕರುಳಿನ ಆರೋಗ್ಯದವರೆಗೆ, ಬೆಳಗಿನ ಹೊತ್ತು ತುಪ್ಪ ಸೇವಿಸುವುದರಿಂದಾಗುವ ಲಾಭಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  Ghee: ತ್ವಚೆಯ ಕಾಂತಿ ಹೆಚ್ಚುವುದರಿಂದ ಕರುಳಿನ ಆರೋಗ್ಯದವರೆಗೆ, ಬೆಳಗಿನ ಹೊತ್ತು ತುಪ್ಪ ಸೇವಿಸುವುದರಿಂದಾಗುವ ಲಾಭಗಳಿವು

Ghee: ತ್ವಚೆಯ ಕಾಂತಿ ಹೆಚ್ಚುವುದರಿಂದ ಕರುಳಿನ ಆರೋಗ್ಯದವರೆಗೆ, ಬೆಳಗಿನ ಹೊತ್ತು ತುಪ್ಪ ಸೇವಿಸುವುದರಿಂದಾಗುವ ಲಾಭಗಳಿವು

ಬೆಳಗಿನ ಹೊತ್ತು ತುಪ್ಪ ಸೇವನೆ ಮಾಡುವ ಅಭ್ಯಾಸ ನಿಮಗಿದೆಯೇ..? ಹಾಗಿದ್ದರೆ ನೀವು ಎಷ್ಟೆಲ್ಲ ಆರೋಗ್ಯ ಪ್ರಯೋಜನವನ್ನು ಪಡೆಯುತ್ತಿದ್ದೀರಿ ಎಂಬುದು ನಿಮಗೆ ಗೊತ್ತಾ? ಚರ್ಮದ ಆರೋಗ್ಯದಿಂದ ಹಿಡಿದು ಕರುಳಿನ ಆರೋಗ್ಯದವರೆಗೂ ಬೆಳಗಿನ ಆ ಒಂದು ಚಮಚ ತುಪ್ಪ ಪ್ರಮುಖ ಪಾತ್ರ ವಹಿಸುತ್ತದೆ.

ತ್ವಚೆಯ ಕಾಂತಿ ಹೆಚ್ಚುವುದರಿಂದ ಕರುಳಿನ ಆರೋಗ್ಯದವರೆಗೆ, ಬೆಳಗಿನ ಹೊತ್ತು ತುಪ್ಪ ಸೇವಿಸುವುದರಿಂದಾಗುವ ಲಾಭಗಳಿವು
ತ್ವಚೆಯ ಕಾಂತಿ ಹೆಚ್ಚುವುದರಿಂದ ಕರುಳಿನ ಆರೋಗ್ಯದವರೆಗೆ, ಬೆಳಗಿನ ಹೊತ್ತು ತುಪ್ಪ ಸೇವಿಸುವುದರಿಂದಾಗುವ ಲಾಭಗಳಿವು

ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಬೆಳಗ್ಗೆ ಎದ್ದ ಕೂದಲೇ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪ ಅಥವಾ ಬೆಣ್ಣೆಯನ್ನು ಸೇವಿಸುತ್ತೇವೆ ಎಂದು ಹೇಳಿರುವುದನ್ನ ನೀವೂ ಕೇಳಿಸಿಕೊಂಡಿರಬಹುದು. ಆದರೆ ಈ ರೀತಿ ಬೆಳ್ಳಂ ಬೆಳಗ್ಗೆ ಎದ್ದು ತುಪ್ಪ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಲಾಭವೇನಿದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ ಈ ಒಂದು ಒಳ್ಳೆಯ ಅಭ್ಯಾಸದಿಂದ ನೀವು ದೀರ್ಘಾವಧಿಯವರೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಬೆಳಗಿನ ಹೊತ್ತು ತುಪ್ಪ ಸೇವಿಸುವುದರಿಂದಾಗುವ ಪ್ರಯೋಜನಗಳು

ಕೇವಲ ತುಪ್ಪ ಮಾತ್ರವಲ್ಲದ ಹಾಲಿನಿಂದ ತಯಾರಿಸಲ್ಪಟ್ಟ ಬೆಣ್ಣೆಯು ಕೂಡ ಈ ರೀತಿ ಬಳಕೆಗೆ ಯೋಗ್ಯವಾಗಿರುತ್ತದೆ. ಇವುಗಳಲ್ಲಿ ಒಳ್ಳೆಯ ಕೊಬ್ಬು ಸಮೃದ್ಧವಾಗಿ ಇರುವುದರಿಂದ ದಿನಿವಿಡೀ ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇವುಗಳಲ್ಲಿ ಇರುವ ಕೊಬ್ಬಿನಾಮ್ಲಗಳು ಇವುಗಳನ್ನು ವೇಗವಾಗಿ ದೇಹದಿಂದ ಜೀರ್ಣಿಸುವಂತೆ ಮಾಡುತ್ತವೆ. ಹೀಗಾಗಿ ನಿಮ್ಮ ದೇಹದಲ್ಲಿ ಜೀರ್ಣಕ್ರಿಯೆ ಕೂಡ ಸುಧಾರಿಸುತ್ತದೆ.

ತುಪ್ಪದಲ್ಲಿ ವಿಟಾಮಿನ್​ ಎ,ಇ ಹಾಗೂ ಡಿ ಮತ್ತು ಒಳ್ಳೆಯ ಕೊಬ್ಬು ಹಾಗೂ ವಿವಿಧ ಪೋಷಕಾಂಶಗಳು ಅಡಗಿಕೊಂಡಿರುತ್ತದೆ. ಚರ್ಮದ ಆರೋಗ್ಯವನ್ನು ಸುಧಾರಿಸಲು ಹಾಗೂ ಮೂಳೆಗೆ ಬಲವನ್ನು ನೀಡುವ ಕಾರ್ಯವನ್ನು ತುಪ್ಪ ಮಾಡುತ್ತದೆ. ದೇಹದಲ್ಲಿರುವ ಆಕ್ಸಿಡೇಟಿವ್​ ಒತ್ತಡ ಹಾಗೂ ಉರಿಯೂತವನ್ನು ಕಡಿಮೆ ಮಾಡಲು ಇವುಗಳು ಸಹಾಯ ಮಾಡುತ್ತವೆ .

ತುಪ್ಪದಲ್ಲಿರುವ ವಿಶಿಷ್ಠ ಸಂಯೋಜನೆಯಿಂದಾಗಿ ಮಧುಮೇಹವನ್ನು ನಿಯಂತ್ರಿಸಲು ಸಹಾಯಕವಾಗುತ್ತದೆ. ಇವುಗಳಲ್ಲಿ ಗ್ಲೈಸಮಿಕ್​ ಪ್ರಮಾಣ ಕಡಿಮೆಯಾಗಿರುತ್ತದೆ. ಹೀಗಾಗಿ ಇವುಗಳು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಅಲ್ಲದೇ ದಿನವಿಡೀ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತಿರುತ್ತದೆ . ಅಲ್ಲದೇ ತುಪ್ಪದಲ್ಲಿರುವ ಬ್ಯುಟ್ರಿಕ್​ ಆಸಿಡ್​​ಗಳು ಉರಿಯೂತದಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ . ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿಯೂ ತುಪ್ಪ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ನಿಮ್ಮ ಬೆಳಗ್ಗಿನ ದಿನಚರಿಯಲ್ಲಿ ತುಪ್ಪವನ್ನು ಸೇರಿಸಿಕೊಳ್ಳುವುದರಿಂದ ಕರುಳಿನ ಬ್ಯಾಕ್ಟೀರಿಯಾದಂತಹ ಸಮಸ್ಯೆಗಳಿಂದ ಪಾರಾಗಬಹುದಾಗಿದೆ. ತುಪ್ಪದಲ್ಲಿರುವ ಬ್ಯುಟರಿಕ್​ ಆಮ್ಲವು ಕರುಳಿನ ಒಳಪದರದ ಆರೋಗ್ಯವನ್ನು ಕಾಪಾಡುತ್ತದೆ. ಹೀಗಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ .

ತುಪ್ಪದಿಂದ ಇಷ್ಟೆಲ್ಲ ಆರೋಗ್ಯ ಪ್ರಯೋಜನವಿದೆಯಾದರೂ ಸಹ ತುಪ್ಪವನ್ನು ಮಿತಿಯಲ್ಲಿ ಸೇವಿಸುವುದು ಒಳ್ಳೆಯದು. ತುಪ್ಪದಲ್ಲಿ ಅಗಾಧ ಪ್ರಮಾಣದಲ್ಲಿ ಕ್ಯಾಲೋರಿ ಇರುವುದರಿಂದ ಅತಿಯಾಗಿ ತುಪ್ಪ ಸೇವನೆ ಮಾಡುವುದು ಕೂಡ ಒಳ್ಳೆಯದಲ್ಲ. ಹೀಗಾಗಿ ಇತಿಮಿತಿಯಲ್ಲಿ ತುಪ್ಪ ಸೇವನೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

Whats_app_banner