Yoghurt: ಪ್ರತಿದಿನ ಮೊಸರು ಸೇವಿಸುವುದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ; ತಜ್ಞರ ಉತ್ತರ ಹೀಗಿದೆ
ಮೊಸರು ನಮ್ಮ ಆಹಾರ ಸಂಸ್ಕೃತಿಯ ಭಾಗವಾಗಿದೆ. ಸಾಮಾನ್ಯವಾಗಿ ಬಹುತೇಕರು ತಮ್ಮ ದೈನಂದಿನ ಆಹಾರದೊಂದಿಗೆ ಪ್ರತಿದಿನ ಮೊಸರು ಸೇವಿಸುತ್ತಾರೆ. ಹಾಗಾದರೆ ಪ್ರತಿದಿನ ಮೊಸರು ಸೇವಿಸುವುದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಉಂಟಾಗುತ್ತದೆ, ಇದು ದೇಹಕ್ಕೆ ಒಳಿತೊ ಕೆಡುಕೊ ಈ ಬಗ್ಗೆ ತಜ್ಞರ ಉತ್ತರ ಇಲ್ಲಿದೆ.
ಭಾರತೀಯ ಸಾಂಪ್ರದಾಯಿಕ ಆಹಾರಗಳ ಪಟ್ಟಿಯಲ್ಲಿ ಮೊಸರಿಗೆ ಅಗ್ರಸ್ಥಾನವಿದೆ. ಮೊಸರು ಬಹುಮುಖಿ ಡೇರಿ ಉತ್ಪನ್ನವೂ ಹೌದು. ಕೆನೆ ಭರಿತ ಮೊಸರನ್ನು ಹಲವು ಖಾದ್ಯಗಳಿಗೆ ಬಳಸುತ್ತಾರೆ, ಇದರ ಸುವಾಸನೆಯು ಖಾದ್ಯಗಳಿಗೆ ವಿಶೇಷ ರುಚಿಯನ್ನು ನೀಡುವುದು ಸುಳ್ಳಲ್ಲ.
ಪಲಾವ್, ಟೊಮೆಟೊ ಬಾತ್, ಬಿರಿಯಾನಿಯಂತಹ ಕೆಲವು ಮಾಂಸಾಹಾರಿ ಹಾಗೂ ಸಸ್ಯಹಾರಿ ಖಾದ್ಯಗಳಿಗೆ ಮೊಸರು ಸೇರಿಸುವುದರಿಂದ ರುಚಿ ಹೆಚ್ಚುತ್ತದೆ. ರುಚಿಯಿಂದ ಮಾತ್ರವಲ್ಲ ಹಲವು ಬಗೆಯ ಆರೋಗ್ಯ ಗುಣಗಳಿಂದಲೂ ಮೊಸರು ಖ್ಯಾತಿ ಪಡೆದಿದೆ. ಇದು ಪ್ರೊಬಯೋಟಿಕ್, ಪ್ರೊಟೀನ್ ಹಾಗೂ ಇತರ ಅಗತ್ಯ ಪೋಷಕಾಂಶಗಳನ್ನು ಹೊಂದಿದ್ದು, ಇದು ಹಲವರ ಆಹಾರದ ಭಾಗವಾಗಿದೆ. ಅನೇಕರು ಮೂರು ಹೊತ್ತಿನ ಆಹಾರದೊಂದಿಗೂ ಮೊಸರನ್ನು ಬಳಸುತ್ತಾರೆ. ಹಾಗಾದರೆ ಪ್ರತಿದಿನ ಮೊಸರು ತಿನ್ನುವುದು ಸರಿಯೇ, ಪ್ರತಿದಿನ ಮೊಸರು ತಿನ್ನುವುದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತದೆ, ಈ ಬಗ್ಗೆ ತಜ್ಞರ ಉತ್ತರ ಇಲ್ಲಿದೆ.
ದೆಹಲಿಯ ಧರ್ಮಶಿಲಾ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಗ್ಯಾಸ್ಟ್ರೋಎಂಟರಾಲಜಿಯ ಹಿರಿಯ ಸಲಹೆಗಾರ ಡಾ. ಮಹೇಶ್ ಗುಪ್ತಾ ಅವರ ಪ್ರಕಾರ, ʼಪ್ರತಿದಿನ ಮೊಸರು ತಿನ್ನುವುದರಿಂದ ದೇಹಕ್ಕೆ ಹಲವು ಸಂಭಾವ್ಯ ಪ್ರಯೋಜನಗಳು ಸಿಗುತ್ತವೆʼ.
ʼಇದು ಪ್ರೊಬಯೋಟಿಕ್‌ನ ಉತ್ತಮ ಮೂಲವಾಗಿದ್ದು, ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ಅಗತ್ಯವಾದ ಜೀವಸತ್ವಗಳನ್ನು ಸಹ ಒದಗಿಸುವ ಮೂಲಕ ದೇಹಾರೋಗ್ಯ ಸುಧಾರಣೆಗೆ ನೆರವಾಗುತ್ತದೆʼ ಎನ್ನುತ್ತಾರೆ
ಈ ಮಾತಿಗೆ ಸಮ್ಮತಿಸುವ ಗುರುಗ್ರಾಮ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪೀಡಿಯಾಟ್ರಿಕ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿಯ ಕ್ಲಿನಿಕಲ್ ಲೀಡ್ ಮತ್ತು ಹಿರಿಯ ಸಲಹೆಗಾರರಾದ ಡಾ ಶಿವಾನಿ ದೇಸ್ವಾಲ್, ʼಮೊಸರು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ ಮತ್ತು ಇದರ ಸೇವನೆಯಿಂದ ಮನಸ್ಥಿತಿ ಸುಧಾರಿಸುವ ಜೊತೆಗೆ ಅರಿವಿನ ಕಾರ್ಯವನ್ನೂ ಹೆಚ್ಚಿಸುತ್ತದೆʼ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ.
ಮೊಸರಿನಲ್ಲಿ ಇಲ್ಲದ ವಿಟಮಿನ್ ಅಂಶವಿದು
ಮೊಸರಿನಲ್ಲಿ ಇಲ್ಲದ ಏಕೈಕ ವಿಟಮಿನ್ ಎಂದರೆ ಅದು ವಿಟಮಿನ್ ಡಿ. ಆ ಕಾರಣಕ್ಕೆ ವಿಟಮಿನ್ ಡಿ ಪಡೆಯಲು ಬೇರೆ ಪೂರಕ ಆಹಾರಗಳನ್ನು ಸೇವಿಸಬೇಕು. ಮೊಸರಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಗೊಳಿಸುತ್ತದೆ. ಇದು ಹಲ್ಲುಗಳ ಆರೋಗ್ಯವನ್ನು ಸುಧಾರಿಸುತ್ತದೆ. ಪ್ರೊಟೀನ್ ಸ್ನಾಯುಗಳ ನಿರ್ವಹಣೆ ಮತ್ತು ರಿಪೇರಿಗೆ ಸಹಾಯ ಮಾಡುತ್ತದೆ. ಮೊಸರಿನಲ್ಲಿರುವ ಬಿ ವಿಟಮಿನ್ ಚಯಾಪಚಯ ಮತ್ತು ಶಕ್ತಿ ಉತ್ಪಾದನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆʼ ಎಂದು ಡಾ. ಶಿವಾನಿ ಹೇಳುತ್ತಾರೆ.
ಡಾ. ಶಿವಾನಿ ಅವರ ಪ್ರಕಾರ ಮೊಸರಿನಲ್ಲಿನ ಹೆಚ್ಚಿನ ಪ್ರೊಟೀನ್ ಅಂಶದಿಂದಾಗಿ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಒಟ್ಟಾರೆ ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡುತ್ತದೆ. ಇದು ಉತ್ತಮ ಲಘು ಆಹಾರವೂ ಹೌದು.
ಅತಿಯಾದ ಮೊಸರು ಸೇವನೆ ಸಲ್ಲ
ಮೊಸರಿನ ಅತಿಯಾದ ಸೇವನೆಯು ಕ್ಯಾಲೋರಿ ಅಂಶ ಹೆಚ್ಚಲು ಹಾಗೂ ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಲು ಕಾರಣವಾಗಬಹುದು ಎಂಬುದನ್ನು ತಜ್ಞರು ಒತ್ತಿ ಹೇಳುತ್ತಾರೆ. ಹೀಗಾಗಿ, ಮೊಸರಿನ ಮಿತ ಸೇವನೆ ಅವಶ್ಯ.
ಮೊಸರು ಸೇವನೆಗೂ ಮುನ್ನ
* ಸಕ್ಕರೆಯ ಅಂಶ ಅಥವಾ ಕೃತಕ ಸುವಾಸನೆ ಇಲ್ಲದ ತಾಜಾ ಮೊಸರನ್ನು ಸೇವಿಸಿ.
* ತಾಜಾ ಮೊಸರನ್ನಷ್ಟೇ ಸೇವಿಸಿ, ಪ್ಯಾಕೆಟ್ ಮೊಸರಿನ ಮೇಲಿರುವ ಡೇಟ್ ಪರಿಶೀಲಿಸಲು ಮರೆಯದಿರಿ.
* ಕರುಳಿನ ಆರೋಗ್ಯಕ್ಕಾಗಿ ಮೊಸರು ಸೇವನೆ ಉತ್ತಮ.
* ಪೌಷ್ಟಿಕಾಂಶಕ್ಕಾಗಿ ಕೇವಲ ಮೊಸರನ್ನು ಮಾತ್ರ ಅವಲಂಬಿಸಿದಿರಿ, ಬೇರೆ ಬೇರೆ ಆಹಾರಗಳನ್ನೂ ಸೇವಿಸಿ.
* ನಿಮಗೆ ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿದ್ದರೆ ಅಥವಾ ಡೇರಿ ಉತ್ಪನ್ನಗಳ ಅಲರ್ಜಿಯನ್ನು ಹೊಂದಿದ್ದರೆ ಮೊಸರನ್ನು ಸೇವಿಸಬೇಡಿ.
* ಮೊಸರನ್ನು ಅತಿಯಾಗಿ ಸೇವಿಸಬೇಡಿ. ಮಿತವಾಗಿ ಸೇವಿಸುವುದು ಸಮತೋಲನಕ್ಕೆ ಅವಶ್ಯ.
ವಿಭಾಗ