ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರತಿದಿನ ರಾತ್ರಿ ಮಲಗುವ ಮುನ್ನ 1 ಎಸಳು ಬೆಳ್ಳುಳ್ಳಿ ಜಗಿಯಿರಿ, ಇದ್ರಿಂದ ದೇಹದಲ್ಲಾಗುವ ಬದಲಾವಣೆ ನೋಡಿ ಅಚ್ಚರಿ ಪಡ್ತೀರಿ

ಪ್ರತಿದಿನ ರಾತ್ರಿ ಮಲಗುವ ಮುನ್ನ 1 ಎಸಳು ಬೆಳ್ಳುಳ್ಳಿ ಜಗಿಯಿರಿ, ಇದ್ರಿಂದ ದೇಹದಲ್ಲಾಗುವ ಬದಲಾವಣೆ ನೋಡಿ ಅಚ್ಚರಿ ಪಡ್ತೀರಿ

ಬೆಳ್ಳುಳ್ಳಿಯು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ದೇಹವನ್ನು ಆಕ್ಸಿಡೇಟಿವ್ ಒತ್ತಡ ಮತ್ತು ಫ್ರಿ ರಾಡಿಕಲ್‌ಗಳ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಪ್ರತಿ ದಿನ 21ದಿನಗಳ ಕಾಲ ರಾತ್ರಿ 1 ಎಸಳು ಬೆಳ್ಳುಳ್ಳಿ ಜಗಿಯುವುದರಿಂದ ದೇಹಲ್ಲಾಗುವ ಬದಲಾವಣೆ ನೋಡಿ.

ಪ್ರತಿದಿನ ರಾತ್ರಿ ಮಲಗುವ ಮುನ್ನ 1 ಎಸಳು ಬೆಳ್ಳುಳ್ಳಿ ಜಗಿಯಿರಿ, ಇದ್ರಿಂದ ದೇಹದಲ್ಲಾಗುವ ಬದಲಾವಣೆ ನೋಡಿ ಅಚ್ಚರಿ ಪಡ್ತೀರಿ
ಪ್ರತಿದಿನ ರಾತ್ರಿ ಮಲಗುವ ಮುನ್ನ 1 ಎಸಳು ಬೆಳ್ಳುಳ್ಳಿ ಜಗಿಯಿರಿ, ಇದ್ರಿಂದ ದೇಹದಲ್ಲಾಗುವ ಬದಲಾವಣೆ ನೋಡಿ ಅಚ್ಚರಿ ಪಡ್ತೀರಿ

ಇತ್ತೀಚಿನ ದಿನಗಳಲ್ಲಿ ಮನುಷ್ಯ ಸಾಕಷ್ಟು ಕಷ್ಟಪಡುವುದು ಬಹುಶಃ ನಿದ್ದೆ ಮಾಡಲು ಎಂದು ಹೇಳಬಹುದು. ಆದರೆ ನಿದ್ದೆಯ ನಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಬಹಳ ಅವಶ್ಯ. ನಿದ್ದೆ ಬಾರದೇ ಪರದಾಡುವ ಮಂದಿ ನಮ್ಮ ನಡುವೆ ಹಲವರಿದ್ದಾರೆ, ಅವರು ಉತ್ತಮ ನಿದ್ದೆಗೆ ಸದಾ ಪರಿಹಾರವನ್ನು ಹುಡುಕುತ್ತಾರೆ. ಆದರೆ ಬೆಳ್ಳುಳ್ಳಿಯ ಒಂದೇ ಎಂದು ಎಸಳು ನಿಮ್ಮ ನಿದ್ದೆಯ ವಿಚಾರದಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ ಎಂದು ನಂಬಲೇಬೇಕು. ಬೆಳ್ಳುಳ್ಳಿ ಪ್ರಯೋಜನದ ಬಗ್ಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಪೋಸ್ಟ್‌ವೊಂದನ್ನು ಹಾಕಲಾಗಿದೆ.

ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ಹಲವರಿಗೆ ತಿಳಿದಿಲ್ಲ. ಪೌಷ್ಟಿಕ ತಜ್ಞರ ಪ್ರತಿದಿನ ಹಸಿ ಬೆಳ್ಳುಳ್ಳಿ ಅಗಿಯುವುದರಿಂದ ಚಯಾಪಚಯ ವೃದ್ಧಿಯಾಗುತ್ತದೆ, ನಿದ್ದೆಯ ಗುಣಮಟ್ಟ ಸುಧಾರಿಸುತ್ತದೆ ಮತ್ತು ದೇಹದಲ್ಲಿನ ಕೊಬ್ಬು ನಿವಾರಣೆಯಾಗುತ್ತದೆ. ಅದರಲ್ಲೂ ಪ್ರತಿದಿನ ಮಲಗುವ ಮುನ್ನ 21 ದಿನಗಳ ಕಾಲ ಹಸಿ ಬೆಳ್ಳುಳ್ಳಿ ಜಗಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದರಿಂದ ದೇಹಕ್ಕೆ ನೂರಾರು ಪ್ರಯೋಜನಗಳಾಗುತ್ತವೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಪೌಷ್ಟಿಕ ತಜ್ಞೆ ಗರಿಮಾ ಗೋಯಲ್.

ಬೆಳ್ಳುಳ್ಳಿಯ ಪ್ರಯೋಜನಗಳು

ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು - ಬೆಳ್ಳುಳ್ಳಿಯು ಪ್ರಬಲವಾದ ಆಂಟಿಮೈಕ್ರೊಬಿಯಲ್ ಏಜೆಂಟ್‌ಗಳನ್ನು ಹೊಂದಿರುತ್ತದೆ, ವಿಶೇಷವಾಗಿ ಆಲಿಸಿನ್ ಅಂಶ ಹೊಂದಿರುತ್ತದೆ. ಬೆಳ್ಳುಳ್ಳಿಯನ್ನು ಪುಡಿಮಾಡಿದಾಗ ಅಥವಾ ಕತ್ತರಿಸಿದಾಗ ಇದು ಬಿಡುಗಡೆಯಾಗುತ್ತದೆ. ಆಲಿಸಿನ್ ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಬೆಳ್ಳುಳ್ಳಿಯನ್ನು ಸೋಂಕುಗಳಿಗೆ ಪರಿಣಾಮಕಾರಿ ನೈಸರ್ಗಿಕ ಪರಿಹಾರವಾಗಿದೆ. ನಿಯಮಿತ ಸೇವನೆಯು ದೇಹವು ಸಾಮಾನ್ಯ ರೋಗಕಾರಕಗಳಿಂದ ದೂರವಿರಲು ಸಹಾಯ ಮಾಡುತ್ತದೆ ಮತ್ತು ಒಟ್ಟಾರೆ ರೋಗನಿರೋಧಕ ಆರೋಗ್ಯವನ್ನು ಬೆಂಬಲಿಸುತ್ತದೆ ಎಂದು ಗರಿಮಾ ಹೇಳುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಹೃದಯರಕ್ತನಾಳದ ಆರೋಗ್ಯ - ಬೆಳ್ಳುಳ್ಳಿ ಸೇವನೆಯ ಪ್ರಯೋಜನಗಳಲ್ಲಿ ಅಗ್ರಸ್ಥಾನ ಇರುವುದು ಹೃದ್ರೋಗ ಸಮಸ್ಯೆಗಳಿಂದ ಮುಕ್ತಿ ನೀಡುವುದು. ಇದು ಹೃದಯದ ಆರೋಗ್ಯದ ಮೇಲೆ ಸಕರಾತ್ಮಕ ಪರಿಣಾಮ ಬೀರುತ್ತದೆ. ಲಿಪಿಡ್ ಪ್ರೊಫೈಲ್‌ಗಳನ್ನು ಸುಧಾರಿಸಲು ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಬೆಳ್ಳುಳ್ಳಿ ಉತ್ತಮ. ಅದರಲ್ಲಿ ಸಲ್ಫರ್-ಒಳಗೊಂಡಿರುವ ಸಂಯುಕ್ತಗಳು ಮತ್ತು ಉತ್ಕರ್ಷಣ ನಿರೋಧಕಗಳಿಗೆ ಕಾರಣವಾಗಿದೆ.

ಉತ್ಕರ್ಷಣ ನಿರೋಧಕ ಪರಿಣಾಮಗಳು - ಬೆಳ್ಳುಳ್ಳಿಯು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ, ಇದು ದೇಹವನ್ನು ಆಕ್ಸಿಡೇಟಿವ್ ಒತ್ತಡ ಮತ್ತು ಫ್ರಿ ರಾಡಿಕಲ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ನಿಧಾನವಾದ ವಯಸ್ಸಾದ ಮತ್ತು ಸುಧಾರಿತ ದೀರ್ಘಾಯುಷ್ಯಕ್ಕೆ ಕೊಡುಗೆ ನೀಡಬಹುದು ಎಂದು ಗೋಯಲ್ ಹಂಚಿಕೊಂಡಿದ್ದಾರೆ.

ಬೆಳ್ಳುಳ್ಳಿ ಸೇವನೆಯ ತೊಂದರೆಗಳು 

ಜೀರ್ಣಕಾರಿ ಸಮಸ್ಯೆಗಳು: ಬೆಳ್ಳುಳ್ಳಿ ಸಾಮಾನ್ಯವಾಗಿ ಸೇವನೆಗೆ ಸುರಕ್ಷಿತವಾಗಿದ್ದರೂ, ಅದನ್ನು ಹಸಿಯಾಗಿ ತಿನ್ನುವುದು ಕೆಲವು ವ್ಯಕ್ತಿಗಳಲ್ಲಿ ಜಠರಗರುಳಿನ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಎದೆಯುರಿ, ಗ್ಯಾಸ್ ಮತ್ತು ವಾಕರಿಕೆ ಮುಂತಾದ ಲಕ್ಷಣಗಳು ಸಾಮಾನ್ಯ. ಅದರಲ್ಲೂ ಹೆಚ್ಚು ತಿಂದರೆ ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಸ್ವಲ್ಪ ಮಾತ್ರ ತಿಂದು ಅದಕ್ಕೆ ನಿಮ್ಮ ದೇಹದ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ತಿಳಿದು ನಂತರ ತಿನ್ನುವ ಪ್ರಮಾಣವನ್ನು ಹೆಚ್ಚು ಮಾಡಬೇಕು ಎಂದು ಗರಿಮಾ ಸಲಹೆ ನೀಡುತ್ತಾರೆ.

ರಕ್ತವನ್ನು ತೆಳುವಾಗಿಸುತ್ತದೆ: ಬೆಳ್ಳುಳ್ಳಿಯು ರಕ್ತವನ್ನು ತೆಳುಗೊಳಿಸುವ ಗುಣಗಳನ್ನು ಹೊಂದಿದೆ, ಇದು ಹೆಪ್ಪುರೋಧಕ ಮತ್ತು ಆಂಟಿಪ್ಲೇಟ್ಲೆಟ್ ಔಷಧಿಗಳ ಪರಿಣಾಮಗಳನ್ನು ಹೆಚ್ಚಿಸುತ್ತದೆ. ಈ ಪರಸ್ಪರ ಕ್ರಿಯೆಯು ರಕ್ತಸ್ರಾವದ ಅಪಾಯವನ್ನು ಹೆಚ್ಚಿಸಬಹುದು. ಹಾಗಾಗಿ ರಕ್ತ ತೆಳುವಾಗಲು ಔಷಧಿ ಸೇವಿಸುವವರು ಹಸಿ ಬೆಳ್ಳುಳ್ಳಿ ತಿನ್ನದೇ ಇರುವುದು ಉತ್ತಮ. ನಿಮ್ಮ ಆಹಾರದಲ್ಲೂ ಬೆಳ್ಳುಳ್ಳಿ ಸೇರಿಸುವ ಮುನ್ನ ತಜ್ಞ ವೈದ್ಯರಿಂದ ಸಲಹೆ ಪಡೆಯುವುದು ಉತ್ತಮ.

ದೇಹದ ದುರ್ವಾಸನೆ: ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ದೇಹ ಹಾಗೂ ಬಾಯಿಯ ದುರ್ಗಂಧ ಹೆಚ್ಚುತ್ತದೆ. ಬೆಳ್ಳುಳ್ಳಿಯಲ್ಲಿರುವ ಸಲ್ಫರ್‌ ಗುಣವು ವಾಸನೆ ಹೆಚ್ಚುವಂತೆ ಮಾಡಬಹುದು. ಹಾಗಾಗಿ ಬೆಳ್ಳುಳ್ಳಿ ಮಿತ ಬಳಕೆ ಉತ್ತಮ.

ರಾತ್ರಿ ಮಲಗುವ ಮುನ್ನ ಬೆಳ್ಳುಳ್ಳಿ ಜಗಿಯುವುದರಿಂದ ಪ್ರಯೋಜನವಿದೆಯೇ?

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಪ್ರಕಾರ ಬೆಳ್ಳುಳ್ಳಿ ರಾತ್ರಿ ಹೊತ್ತು ಜಗಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎಂಬುದರ ಬಗ್ಗೆ ಸೂಕ್ತ ಪುರಾವೆಗಳಿಲ್ಲ. ಆದರೆ ಗರಿಮಾ ಅವರ ಪ್ರಕಾರ ರಾತ್ರಿ ಮಲಗುವ ಮುನ್ನ ಬೆಳ್ಳುಳ್ಳಿ ತಿನ್ನುವುದು ಇತರ ಸಮಯದಲ್ಲಿ ತಿನ್ನುವುದಕ್ಕಿಂತ ಹೆಚ್ಚು ಪ್ರಯೋಜನಕಾರಿ. 21 ದಿನಗಳು ಎಂದು ಸೀಮಿತಗೊಳಿಸಿಕೊಳ್ಳುವುದಕ್ಕಿಂತ ಪ್ರತಿನಿತ್ಯ ನಿಯಮಿತವಾಗಿ ಬೆಳ್ಳುಳ್ಳಿ ಸೇವಿಸುವುದು ಉತ್ತಮ.