ತುಪ್ಪ–ಬೆಣ್ಣೆ–ಅಡುಗೆಎಣ್ಣೆ ಈ ಮೂರರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ, ಪ್ರತಿಯೊಬ್ಬರು ತಿಳಿದಿರಬೇಕಾದ ಮಾಹಿತಿಯಿದು
ಕನ್ನಡ ಸುದ್ದಿ  /  ಜೀವನಶೈಲಿ  /  ತುಪ್ಪ–ಬೆಣ್ಣೆ–ಅಡುಗೆಎಣ್ಣೆ ಈ ಮೂರರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ, ಪ್ರತಿಯೊಬ್ಬರು ತಿಳಿದಿರಬೇಕಾದ ಮಾಹಿತಿಯಿದು

ತುಪ್ಪ–ಬೆಣ್ಣೆ–ಅಡುಗೆಎಣ್ಣೆ ಈ ಮೂರರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ, ಪ್ರತಿಯೊಬ್ಬರು ತಿಳಿದಿರಬೇಕಾದ ಮಾಹಿತಿಯಿದು

ಇತ್ತೀಚಿನ ದಿನಗಳಲ್ಲಿ ಜನರು ತಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದಾರೆ. ಭಾರತೀಯ ಅಡುಗೆ ಮನೆಯಲ್ಲಿ ಜಾಸ್ತಿ ಬಳಕೆಯಲ್ಲಿರುವ ತುಪ್ಪ, ಬೆಣ್ಣೆ ಹಾಗೂ ಎಣ್ಣೆ ಈ ಮೂರರಲ್ಲಿ ಆರೋಗ್ಯ ಹಾಗೂ ತೂಕ ಇಳಿಕೆಗೆ ಯಾವುದು ಬೆಸ್ಟ್ ಎನ್ನುವ ಗೊಂದಲ ಹಲವರಲ್ಲಿದೆ. ನಿಮ್ಮ ಪ್ರಶ್ನೆಗೆ ಇಲ್ಲಿದೆ ತಜ್ಞರ ಉತ್ತರ.

ತುಪ್ಪ–ಬೆಣ್ಣೆ–ಅಡುಗೆಎಣ್ಣೆ ಈ ಮೂರರಲ್ಲಿ ಆರೋಗ್ಯದ ದೃಷ್ಟಿಯಿಂದ ಯಾವುದು ಉತ್ತಮ?
ತುಪ್ಪ–ಬೆಣ್ಣೆ–ಅಡುಗೆಎಣ್ಣೆ ಈ ಮೂರರಲ್ಲಿ ಆರೋಗ್ಯದ ದೃಷ್ಟಿಯಿಂದ ಯಾವುದು ಉತ್ತಮ?

ಭಾರತೀಯ ಅಡುಗೆಯಲ್ಲಿ ಇರುವ ಪ್ರಮುಖ ವಸ್ತುಗಳಲ್ಲಿ ಎಣ್ಣೆ, ಬೆಣ್ಣೆ ಹಾಗೂ ತುಪ್ಪ ಪ್ರಮುಖವಾದದ್ದು. ಈ ಮೂರು ತನ್ನದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಈ ಮೂರು ಬೇರೆ ಬೇರೆ ಖಾದ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ತುಪ್ಪವನ್ನು ಹೆಚ್ಚಾಗಿ ಸಿಹಿ ತಿನಿಸುಗಳಿಗೆ ಬಳಸಲಾಗುತ್ತದೆ. ಬೆಣ್ಣೆ ಹಾಗೂ ಎಣ್ಣೆಯನ್ನು ಕೂಡ ಭಾರತೀಯ ಅಡುಗೆಮನೆಯಲ್ಲಿ ವಿವಿಧ ಖಾದ್ಯಗಳನ್ನು ತಯಾರಿಸುವಾಗ ಬಳಸಲಾಗುತ್ತದೆ. ಎಣ್ಣೆಯಲ್ಲಿ ಬೇರೆ ಬೇರೆ ವಿಧಗಳಿದ್ದು, ಹೃದಯದ ಆರೋಗ್ಯಕ್ಕೆ ಸೂಕ್ತವಾಗಿರುವ ಆಲಿವ್‌ ಎಣ್ಣೆ, ರೈಸ್ ಬ್ರಾನ್ ಎಣ್ಣೆ ಮುಂತಾದುವನ್ನು ಜನ ಹೆಚ್ಚು ಬಳಸುತ್ತಾರೆ. ಅದೇನೇ ಇರಲಿ ಈ ಮೂರರಲ್ಲಿ ಆರೋಗ್ಯ ಹಾಗೂ ತೂಕ ಇಳಿಕೆಯ ದೃಷ್ಟಿಯಿಂದ ಯಾವುದು ಉತ್ತಮ ಎನ್ನುವ ಗೊಂದಲ ಹಲವರಲ್ಲಿದೆ. ಹಾಗಾದರೆ ಇದರಲ್ಲಿ ಯಾವುದು ಉತ್ತಮ ನೋಡಿ.

ಬೆಣ್ಣೆ

ಬೆಣ್ಣೆಯು ಹಾಲಿನ ಪ್ರೊಟೀನ್ ಮತ್ತು ಬೆಣ್ಣೆ ಕೊಬ್ಬಿನ ರೂಪದಲ್ಲಿ ಸ್ಯಾಚುರೇಟೆಡ್ ಕೊಬ್ಬನ್ನು ಒಳಗೊಂಡಿದೆ. ಪಾಲಿ ಅನ್‌ಸ್ಯಾಚುರೇಟೆಡ್‌ ಕೊಬ್ಬಿಗೆ ಹೋಲಿಸಿದರೆ ಈ ಕೊಬ್ಬಿನಾಂಶ ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಬೆಣ್ಣೆಯು ಶೇ 20ರಷ್ಟು ನೀರನ್ನು ಹೊಂದಿದ್ದರೆ ಅದು ಅಡುಗೆ ಮಾಡುವಾಗ ಆವಿಯಾಗುತ್ತದೆ. ಎಣ್ಣೆಯು ಶುದ್ಧವಾದ ಕೊಬ್ಬಾಗಿರುತ್ತದೆ, ಅದು ನೀವು ಅಡುಗೆ ಮಾಡುತ್ತಿರುವ ತರಕಾರಿಗಳಿಂದ ಹೀರಲ್ಪಡುತ್ತದೆ. ಹಾಲನ್ನು ಕಾಯಿಸಿ ಕೆನೆ ಸಂಗ್ರಹಿಸಿ ಇಟ್ಟು ನಂತರ ಬೆಣ್ಣೆ ತಯಾರಿಸಬಹುದು. ಮನೆಯಲ್ಲಿ ತಯಾರಿಸಿದ ಬೆಣ್ಣೆಯು ಮಾರುಕಟ್ಟೆಯಲ್ಲಿ ಸಿಗುವ ಬೆಣ್ಣೆಗಿಂತ ಹೆಚ್ಚು ಆರೋಗ್ಯಕರ ಎಂಬುದನ್ನ ಇಲ್ಲಿ ಮರೆಯುವಂತಿಲ್ಲ.

ತುಪ್ಪ

ಬೆಣ್ಣೆಯನ್ನು ಹೆಚ್ಚಿನ ತಾಪಮಾನದಲ್ಲಿ ಕುದಿಸಿದಾಗ ಬೆಣ್ಣೆ ಕರಗಿ ತುಪ್ಪವಾಗುತ್ತದೆ. ಇದನ್ನು ಕಾಯಿಸುವುದರಿಂದ ಕೊಬ್ಬಿನಾಂಶ ಕಡಿಮೆಯಾಗುತ್ತದೆ. ಬೆಣ್ಣೆಯಲ್ಲಿ ಕೊಬ್ಬಿನಾಂಶ ಹೆಚ್ಚಿರುತ್ತದೆ. ಬೆಣ್ಣೆಗೆ ಹೋಲಿಸಿದರೆ ತುಪ್ಪದಲ್ಲಿ ಕೊಬ್ಬಿನಾಂಶ ಗಣನೀಯವಾಗಿ ಕಡಿಮೆ ಇರುತ್ತದೆ. ತುಪ್ಪದಲ್ಲಿರುವ ಬ್ಯುಟ್ರಿಕ್ ಆಮ್ಲವು ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಎಣ್ಣೆ

ಸಾಮಾನ್ಯವಾಗಿ ಎಣ್ಣೆಗಳು ಪಾಲಿ-ಸ್ಯಾಚುರೇಟೆಡ್ ಕೊಬ್ಬುಗಳಿಂದ ತುಂಬಿರುತ್ತವೆ, ಇದು ದೇಹದಲ್ಲಿ ಉರಿಯೂತವನ್ನು ಉಂಟುಮಾಡಬಹುದು. ಹಾಗಾಗಿ ಎಣ್ಣೆ ಸೇವನೆಯನ್ನು ಮಿತಿಗೊಳಿಸಬೇಕು ಎಂದು ಹೇಳಲಾಗುತ್ತದೆ. ಸನ್‌ಪ್ಲವರ್‌ನಂತಹ ಎಣ್ಣೆಯ ಬದಲು ನೀವು ಆಲಿವ್ ಎಣ್ಣೆಯನ್ನು ಬಳಸಬಹುದು.ಏಕೆಂದರೆ ಇದು ಅಪರ್ಯಾಪ್ತ ಕೊಬ್ಬನ್ನು ಹೊಂದಿರುತ್ತದೆ. ಹೆಚ್ಚಿನ ತಾಪಮಾನದ ಅಡುಗೆಗೆ ನೀವು ತುಪ್ಪ ಮತ್ತು ಬೆಣ್ಣೆಯನ್ನು ಬಳಸಬಹುದು ಆದರೆ ಆಲಿವ್ ಎಣ್ಣೆಯನ್ನು ಬಳಸಲಾಗುವುದಿಲ್ಲ, ಏಕೆಂದರೆ ಅದು ಹೆಚ್ಚಿನ ತಾಪಮಾನದಲ್ಲಿ ಆಕ್ಸಿಡೀಕರಣಗೊಳ್ಳುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಬೇಕು. ಸಂಸ್ಕರಿಸಿದ ಎಣ್ಣೆಯನ್ನು ಡೀಪ್ ಫ್ರೈಡ್ ಫುಡ್ ತಯಾರಿಸಲು ಬಳಸಬಹುದು, ಆದರೆ ಅಪರೂಪಕ್ಕೆ ಅದು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.

ಆರೋಗ್ಯಕರ ದೇಹಕ್ಕೆ, ಬೆಣ್ಣೆ, ತುಪ್ಪ ಮತ್ತು ಎಣ್ಣೆಗೆ 2: 2: 1 ರ ಅನುಪಾತವು ಸೂಕ್ತವಾಗಿದೆ. ನೀವು ಪ್ರತಿದಿನ ಎರಡು ಚಮಚ ಬೆಣ್ಣೆ ಮತ್ತು ತುಪ್ಪವನ್ನು ಸೇವಿಸುತ್ತಿದ್ದರೆ, ಒಂದು ಚಮಚ ಎಣ್ಣೆಯನ್ನು ಸೇವಿಸುವುದರಿಂದ ಹಾನಿಯಾಗುವುದಿಲ್ಲ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸುವುದು ಉತ್ತಮ)