ಲೈಂಗಿಕಾಸಕ್ತಿ ಹೆಚ್ಚಲು ಸಹಾಯ ಮಾಡುವ 10 ಆಹಾರ ಪದಾರ್ಥಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  ಲೈಂಗಿಕಾಸಕ್ತಿ ಹೆಚ್ಚಲು ಸಹಾಯ ಮಾಡುವ 10 ಆಹಾರ ಪದಾರ್ಥಗಳಿವು

ಲೈಂಗಿಕಾಸಕ್ತಿ ಹೆಚ್ಚಲು ಸಹಾಯ ಮಾಡುವ 10 ಆಹಾರ ಪದಾರ್ಥಗಳಿವು

ಆರೋಗ್ಯಕರ ಲೈಂಗಿಕ ಬಯಕೆಯನ್ನು ಹೊಂದುವುದು ದೈಹಿಕ ಹಾಗೂ ಭಾವನಾತ್ಮಕ ಆರೋಗ್ಯಕ್ಕೆ ಅವಶ್ಯ. ಇದರಿಂದ ಸಂಬಂಧವೂ ವೃದ್ಧಿಯಾಗುತ್ತದೆ. ಆದರೆ ಹಲವು ಕಾರಣಗಳಿಂದ ಲೈಂಗಿಕಾಸಕ್ತಿ ಕುಗ್ಗುತ್ತದೆ. ಅದಕ್ಕಾಗಿ ಈ ಕೆಲವು ಆಹಾರ ಪದಾರ್ಥಗಳ ಸೇವನೆಗೆ ಹೆಚ್ಚು ಒತ್ತು ನೀಡಬೇಕು.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಇತ್ತೀಚಿನ ದಿನಗಳಲ್ಲಿ ಬೇರೆಲ್ಲಾ ಸಮಸ್ಯೆಗಳಂತೆ ಲೈಂಗಿಕ ಸಮಸ್ಯೆ ಕೂಡ ಹಲವರನ್ನು ಕಾಡುತ್ತಿದೆ. ಒತ್ತಡ, ಅಸಮರ್ಪಕ ಆಹಾರ ಸೇವನೆ, ಕಲುಷಿತ ವಾತಾವರಣ ಹೀಗೆ ಲೈಂಗಿಕಾಸಕ್ತಿ ಕಡಿಮೆಯಾಗಲು ಹಲವು ಕಾರಣಗಳು. ಆರೋಗ್ಯಕರ ಲೈಂಗಿಕ ಬಯಕೆಯನ್ನು ಹೊಂದುವುದು ದೈಹಿಕ ಹಾಗೂ ಭಾವನಾತ್ಮಕ ಆರೋಗ್ಯಕ್ಕೆ ಅವಶ್ಯ. ಇದರಿಂದ ಸಂಬಂಧವೂ ವೃದ್ಧಿಯಾಗುತ್ತದೆ. ಹಾಗಾದರೆ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ? ಇದಕ್ಕೆ ಆಹಾರವೂ ಪರಿಹಾರ ನೀಡಬಲ್ಲದು ಎನ್ನುತ್ತಾರೆ ತಜ್ಞರು. ಲೈಂಗಿಕ ಬಯಕೆ ಹೆಚ್ಚಲು ಕೆಲವು ಆಹಾರ ಪದಾರ್ಥಗಳನ್ನು ಸೇವಿಸಬೇಕು. ಆಹಾರಗಳಿಂದ ಕಾಮಾಸಕ್ತಿ ಹೆಚ್ಚುತ್ತದೆ ಎಂಬುದನ್ನು ಹಲವು ಅಧ್ಯಯನಗಳು ಸಾಬೀತು ಪಡಿಸಿವೆ. ಹಾಗಂತ ಇದಕ್ಕೆಂದು ವಿಶೇಷವಾದ ಆಹಾರಗಳನ್ನು ತಿನ್ನಬೇಕು ಎಂದಿಲ್ಲ. ಸಾಮಾನ್ಯ ಆಹಾರಗಳಾದ ವಾಲ್‌ನಟ್‌, ಕುಂಬಳಕಾಯಿ ಬೀಜ ಇವು ಆರೋಗ್ಯಕರ ಲೈಂಗಿಕ ಬಯಕೆಯನ್ನು ಖಾತ್ರಿ ಪಡಿಸುವ ಜೊತೆಗೆ ಇವು ಪೋಷಕಾಂಶ ಸಮೃದ್ಧ ಆಹಾರ ಪದಾರ್ಥಗಳಾಗಿವೆ. ಆದರೆ ಇವು ಲೈಂಗಿಕಾಸಕ್ತಿಯನ್ನು ಹೆಚ್ಚಿಸಿದರೂ ಕೂಡ ಈ ಕೆಲವು ಆಹಾರಗಳು ಕಾಮಾಸಕ್ತಿಯನ್ನು ಕುಗ್ಗಿಸುತ್ತವೆ. ಆಲ್ಕೋಹಾಲ್‌, ರೆಡ್‌ ಮೀಟ್‌ ಹಾಗೂ ಕರಿದ ಆಹಾರಗಳ ಸೇವನೆಯು ಕಾಮಾಸಕ್ತಿಯ ಮೇಲೆ ಋಣಾತ್ಮಕ ಪರಿಣಾಮ ಬೀರುವ ಕಾರಣಕ್ಕೆ ಅವುಗಳನ್ನು ತ್ಯಜಿಸುವುದು ಉತ್ತಮ.

ಒಣಹಣ್ಣುಗಳು

ಬಾದಾಮಿ, ಪಿಸ್ತಾ, ವಾಲ್‌ನಟ್‌ನಂತಹ ಒಣಹಣ್ಣುಗಳಲ್ಲಿ ಅಮೈನೊ ಆಮ್ಲ ಎಲ್‌-ಅರ್ಜಿನೈನ್‌ ಅನ್ನು ಹೊಂದಿರುತ್ತದೆ. ಇದು ನೈಟ್ರಿಕ್‌ ಆಕ್ಸೈಡ್‌ ಆಗಿ ಪರಿವರ್ತನೆಗೊಳ್ಳುತ್ತದೆ. ಆರೋಗ್ಯಕರ ಲೈಂಗಿಕ ಅಂಗಗಳಿಗೆ ಮುಖ್ಯವಾದ ರಕ್ತದ ಹರಿವನ್ನು ಸುಧಾರಿಸುತ್ತದೆ.

ಕುಂಬಳಕಾಯಿ ಬೀಜ

ಕುಂಬಳಕಾಯಿ ಬೀಜದಲ್ಲಿ ಜಿಂಕ್‌ ಅಥವಾ ಸತುವಿನ ಅಂಶ ಹೇರಳವಾಗಿದೆ. ಇದು ಪುರುಷರಲ್ಲಿ ಟೆಸ್ಟೋಸ್ಟೆರಾನ್‌ ಪ್ರಮಾಣವನ್ನು ಹೆಚ್ಚಿಸುತ್ತದೆ. ವಾಸ್ತವವಾಗಿ ಕುಂಬಳಕಾಯಿ ಬೀಜಗಳು ಉತ್ಕರ್ಷಣ ನಿರೋಧಕಗಳಾಗಿವೆ. ಕಬ್ಬಿಣ ಮತ್ತು ಮೆಗ್ನೇಶಿಯಂ ಹಾಗೂ ಇನ್ನೂ ಹಲವು ಅಗತ್ಯ ಪೋಷಕಾಂಶಗಳಿಂದ ತುಂಬಿರುವುದರಿಂದ ಇದು ಮನಸ್ಥಿತಿ ಹಾಗೂ ಒಟ್ಟಾರೆ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ.

ಅವಕಾಡೊ

ಅವಕಾಡೊ ಅಥವಾ ಬೆಣ್ಣೆಹಣ್ಣಿನಲ್ಲಿ ವಿಟಮಿನ್‌ ಸಿ ಹಾಗೂ ಫೋಲಿಕ್‌ ಆಸಿಡ್‌ ಸಮೃದ್ಧವಾಗಿರುತ್ತದೆ. ಇದು ಒಟ್ಟಾರೆ ದೇಹದಲ್ಲಿ ಚೈತನ್ಯ ಹೆಚ್ಚಲು ಸಹಕಾರಿ. ವಿಟಮಿನ್‌ ಬಿ 6 ಕಾಮಾಸಕ್ತಿ ವರ್ಧಿಸುವ ಸಹಾಯ ಮಾಡುತ್ತದೆ.

ಚಾಕೊಲೇಟ್‌

ಇದು ಮೆದುಳಿನಲ್ಲಿ ಸಿರೊಟೋನಿನ್‌ ಮತ್ತು ಡೋಪಮೈನ್‌ ಮಟ್ಟವನ್ನು ಹೆಚ್ಚಿಸುತ್ತದೆ. ಒತ್ತಡದ ಮಟ್ಟವನ್ನು ಕಡಿಮೆ ಮಾಡುವ ಜೊತೆಗೆ ಮನಸ್ಥಿತಿ ಸುಧಾರಣೆಗೂ ಸಹಕಾರಿ.

ಕಲ್ಲಂಗಡಿ

ಕಲ್ಲಂಗಡಿ ದೇಹದಲ್ಲಿ ಅಮೈನೊ ಆಮ್ಲಗಳು ಹಾಗೂ ಅರ್ಜಿನೈನ್‌ ಅನ್ನು ಬಿಡುಗಡೆ ಮಾಡುವ ಸಿಟ್ರುಲಿನ್‌ ಅನ್ನು ಹೊಂದಿರುತ್ತದೆ. ಅರ್ಜಿನೈನ್‌ ನಾಳಗಳ ಆರೋಗ್ಯ ಸುಧಾರಣೆಗೆ ಹೆಸರುವಾಸಿಯಾಗಿದೆ. ಕಲ್ಲಂಗಡಿ ರಕ್ತನಾಳಗಳನ್ನು ಸಡಿಕಲಗೊಳಿಸುತ್ತದೆ. ಇದು ದೇಹದ ಲೈಂಗಿಕ ಅಂಗಗಳಲ್ಲಿ ರಕ್ತದ ಹರಿವು ಸುಧಾರಿಸುವಂತೆ ಮಾಡುತ್ತದೆ ಹಾಗೂ ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ.

ಬಾಳೆಹಣ್ಣು

ಬಾಳೆಹಣ್ಣು ಪೊಟ್ಯಾಶಿಯಂ ಅಂಶ ಹೇರಳವಾಗಿರುತ್ತದೆ. ಪೊಟ್ಯಾಶಿಯಂ ಅಂಶವು ಲೈಂಗಿಕತೆಗೆ ಬಹಳ ಮುಖ್ಯವಾದ ಸ್ನಾಯುವಿನ ಸಂಕೋಚನಕ್ಕೆ ಅಗತ್ಯ ಪೋಷಕಾಂಶವಾಗಿದೆ. ಅವು ಟೆಸ್ಟೋಸ್ಟೆರಾನ್‌ ಉತ್ಪಾದಿಸಲು ಸಹಾಯ ಮಾಡುವ ಬ್ರೋಮೆಲಿನ್‌ ಅನ್ನು ಸಹ ಹೊಂದಿರುತ್ತದೆ.

ದೊಣ್ಣೆ ಮೆಣಸು

ದೊಣ್ಣೆ ಮೆಣಸು ಮೆಟಾಬಾಲಿಸ್‌ ಅನ್ನು ಹೆಚ್ಚಿಸುತ್ತದೆ. ಇದು ಎಂಡಾರ್ಫಿನ್‌ಗಳನ್ನು ಉತ್ತೇಜಿಸುತ್ತದೆ. ಇದು ಬೆವರುವಂತೆ ಮಾಡಿ, ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ರಕ್ತ ಪರಿಚಲನೆಯ ಪ್ರಮಾಣ ಹೆಚ್ಚುವ ಮೂಲಕ ಅಂಗಾಂಗಗಳಿಗೆ ಚೈತನ್ಯ ನೀಡುತ್ತದೆ. ಇದು ವಿಟಮಿನ್‌ ಸಿ ಹೊಂದಿದ್ದು, ಮಹಿಳೆಯರಲ್ಲಿ ಕಾಮಾಸಕ್ತಿ ಹೆಚ್ಚಲು ಇದು ಅವಶ್ಯ.

ಸಿಂಪಿಗಳು

ಸಿಂಪಿ ಅಥವಾ ಚಿಪ್ಪಿನೊಳಗಿನ ಆಹಾರಗಳು ಎರಡು ರೀತಿಯ ಅಮೈನೋ ಆಮ್ಲಗಳನ್ನು ಹೊಂದಿರುತ್ತವೆ. ಇದರಲ್ಲಿ ಡಿ-ಆಸ್ಪರ್ಟಿಕ್ ಆಮ್ಲ ಮತ್ತು ಎನ್-ಮೀಥೈಲ್-ಡಿ-ಆಸ್ಪರ್ಟೇಟ್ ಅಂಶವಿದ್ದು, ಇದು ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ.

ಬೆಳ್ಳುಳ್ಳಿ

ಇದು ಅಲಿಸಿನ್‌ನಲ್ಲಿ ಸಮೃದ್ಧವಾಗಿದೆ, ಇದು ಬಲವಾದ ನಿಮಿರುವಿಕೆ ಮತ್ತು ಹೆಚ್ಚಿದ ಕಾಮಾಸಕ್ತಿಗಾಗಿ ರಕ್ತ ಪರಿಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುವ ಸಕ್ರಿಯ ಸಂಯುಕ್ತವಾಗಿದೆ.

ಪಾಲಕ್‌

ಪಾಲಕ್ ಮೆಗ್ನೀಸಿಯಮ್‌ನ ಸಮೃದ್ಧ ಮೂಲವಾಗಿದೆ ಮತ್ತು ಇದು ರಕ್ತನಾಳಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದ ಹರಿವನ್ನು ಸುಧಾರಿಸುತ್ತದೆ. ಇದು ನಿಮ್ಮ ಕಾಮ ಮತ್ತು ಸೆಕ್ಸ್ ಡ್ರೈವ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Whats_app_banner