ಕನ್ನಡ ಸುದ್ದಿ  /  ಜೀವನಶೈಲಿ  /  Heart Health: ಹೃದ್ರೋಗ ಅಪಾಯ ತಗ್ಗಿಸುವ ಸೋಯಾ; ಪಾರ್ಶ್ವವಾಯು ಅಪಾಯ ತಗ್ಗಿಸಲೂ ನೆರವಾಗುವ ಆಹಾರವಿದು

Heart Health: ಹೃದ್ರೋಗ ಅಪಾಯ ತಗ್ಗಿಸುವ ಸೋಯಾ; ಪಾರ್ಶ್ವವಾಯು ಅಪಾಯ ತಗ್ಗಿಸಲೂ ನೆರವಾಗುವ ಆಹಾರವಿದು

Soya health health benefits: ಆರೋಗ್ಯವೇ ಭಾಗ್ಯ ಎನ್ನುತ್ತಾರೆ. ಆರೋಗ್ಯ ಸರಿಯಿಲ್ಲದವರಿಗೆ ಮಾತ್ರ ಆರೋಗ್ಯದ ಬೆಲೆ ತಿಳಿದಿರುತ್ತದೆ. ಇತ್ತೀಚಿನ ದಿನಗಳಲ್ಲಿ ಹೃದ್ರೋಗದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಆದರೆ ನೀವು ಸೋಯಾ ಆಹಾರ ಪದಾರ್ಥವನ್ನು ನಿತ್ಯ ಸೇವಿಸುವ ಮೂಲಕ ಹೃದ್ರೋಗದ ಅಪಾಯದಿಂದ ಪಾರಾಗಬಹುದಾಗಿದೆ.

Heart Health: ಹೃದ್ರೋಗ ಅಪಾಯ ತಗ್ಗಿಸುವ ಸೋಯಾ
Heart Health: ಹೃದ್ರೋಗ ಅಪಾಯ ತಗ್ಗಿಸುವ ಸೋಯಾ

ಈಗಿನ ಆಧುನಿಕ ಜಗತ್ತಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಂದರೆ ಕಷ್ಟದ ಕೆಲಸವೇ ಸರಿ. ಸಂಸ್ಕರಿಸಿದ ಆಹಾರಗಳ ಮೇಲಿನ ವ್ಯಾಮೋಹವನ್ನು ಬಿಟ್ಟು ಆರೋಗ್ಯಕರ ಜೀವನಶೈಲಿಯನ್ನು ನಮ್ಮದಾಗಿಸಿಕೊಳ್ಳಬೇಕು. ಅದರಲ್ಲೂ ಸೋಯಾದಿಂದ ಸಮೃದ್ಧವಾದ ಆಹಾರವನ್ನು ಸೇವಿಸುವುದು ಆರೋಗ್ಯಕರ ಆಯ್ಕೆಯಾಗಿದೆ. ಇದು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುವ ಕೆಲಸ ಮಾಡುತ್ತದೆ. ಇತ್ತೀಚಿಗೆ ನಡೆಸಲಾದ ಅಧ್ಯಯನವೊಂದರ ಪ್ರಕಾರ ವಾರದಲ್ಲಿ ಒಮ್ಮೆಯಾದರೂ ಸೋಯಾ ಸೇವನೆ ಮಾಡುವುದರಿಂದ ಹೃದಯಾಘಾತದ ಅಪಾಯವು 17 ಪ್ರತಿಶತ ಕಡಿಮೆಯಾಗುತ್ತದೆ ಹಾಗೂ ಪಾರ್ಶ್ವವಾಯು ಸಂಭವಿಸುವ ಅಪಾಯ 18 ಪ್ರತಿಶತಕ್ಕಿಂತ ಕಡಿಮೆಯಾಗುತ್ತದೆ ಎಂದು ತಿಳಿದುಬಂದಿದೆ.

ಟ್ರೆಂಡಿಂಗ್​ ಸುದ್ದಿ

ಸೋಯಾದಲ್ಲಿ ಐಸೊಫ್ಲಾವೊನ್‌ ಎಂಬಫೈಟೊಈಸ್ಟ್ರೊಜೆನ್‌ ಇದ್ದು ಇವುಗಳು ಹೃದಯ ರಕ್ತನಾಳದ ಆರೋಗ್ಯವನ್ನು ಕಾಪಾಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಐಸೊಫ್ಲಾವೊನ್‌ಗಳು ಅಪಧಮನಿಯ ಕಾರ್ಯವನ್ನು ಸುಧಾರಿಸುತ್ತವೆ ಹಾಗೂ ರಕ್ತದೊತ್ತಡವನ್ನು ಕಡಿಮೆ ಮಾಡುತ್ತವೆ ಎಂದು ತಿಳಿದುಬಂದಿದೆ.

ಸೋಯಾ ಪ್ರೊಟೀನ್ ಹಾಗೂ ಕೊಲೆಸ್ಟ್ರಾಲ್

ಕೇವಲ 25 ಗ್ರಾಂ ಪ್ರೊಟೀನ್ ನಮ್ಮ ದೈನಂದಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ದಿ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಇತ್ತೀಚಿನ ವಿಮರ್ಷೆಗಳ ಪ್ರಕಾರ ಸೋಯಾಬಿನ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಪ್ರಮಾಣ ತುಲನಾತ್ಮಕವಾಗಿ ಸಾಧಾರಣ ಪ್ರಮಾಣದಲ್ಲಿದೆ ಎನ್ನಲಾಗಿದೆ.

ಎಷ್ಟು ಬಾರಿ ಸೇವಿಸುತ್ತೀರಿ ಎನ್ನುವುದೂ ಮುಖ್ಯ

ಹೃದಯನಾಳದ ಆರೋಗ್ಯವನ್ನು ಕಾಪಾಡಲು ನೀವು ವಾರಕ್ಕೊಮ್ಮೆ ಸೋಯಾ ಸೇವನೆ ಮಾಡಿದರೆ ಸಾಲದು. ಅಧ್ಯಯನದಲ್ಲಿ ಕಂಡುಬಂದ ಮಾಹಿತಿಯ ಪ್ರಕಾರ ದೈನಂದಿನ ಸೋಯಾ ಸೇವನೆಯಿಂದ ಮಾತ್ರ ಪರಿಣಾಮಕಾರಿ ಲಾಭವನ್ನು ಪಡೆಯಲು ಸಾಧ್ಯವಿದೆ. ದಿನಕ್ಕೆ ಸುಮಾರು 25 ಗ್ರಾಂ ಸೋಯಾ ಸೇವನೆ ಮಾಡಬೇಕು.

ಫುಡ್ ಮತ್ತು ಡ್ರಗ್ ಅಡ್ಮಿನಿಸ್ಟ್ರೇಷನ್ ನೀಡಿರುವ ಮಾಹಿತಿಯ ಪ್ರಕಾರ ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಪ್ರಯೋಜನವನ್ನು ಸಾಧಿಸಲು ಒಬ್ಬ ವ್ಯಕ್ತಿಯು ದಿನಕ್ಕೆ ಸುಮಾರು 25 ಗ್ರಾಂ ಸೋಯಾ ಪ್ರೊಟೀನ್ ಸೇವನೆ ಮಾಡಬೇಕು. ಅಂದರೆ ಒಂದು ಅಂದಾಜಿನ ಪ್ರಕಾರ ದಿನಕ್ಕೆ ಎರಡು ಬಾರಿ ನೀವು ಸೋಯಾ ಸೇವನೆ ಮಾಡಿದಲ್ಲಿ ಈ ಅಳತೆಯನ್ನು ತಲುಪಲು ಸಾಧ್ಯವಿದೆ. ಎಲ್ಲಾ ಕೆಟ್ಟ ಚಟಗಳನ್ನು ಮಾಡಿ ಬಳಿಕ ಸೋಯಾ ಸೇವನೆ ಮಾಡಿದರೆ ಹೃದಯದ ಆರೋಗ್ಯ ಖಂಡಿತ ಸುಧಾರಿಸುವುದಿಲ್ಲ. ನಮ್ಮ ಜೀವನಶೈಲಿಯಲ್ಲಿಯೂ ಆರೋಗ್ಯಕರ ಬದಲಾವಣೆ ಮಾಡಿಕೊಂಡಾಗ ಮಾತ್ರ ಇದು ಸಾಧ್ಯವಾಗಲಿದೆ .

ಅಲರ್ಜಿಗಳು ಹಾಗೂ ಹಾರ್ಮೋನ್‌ ಪರಿಣಾಮಗಳು

ಕೆಲವರು ಸೋಯಾ ಬಗ್ಗೆ ಅಲರ್ಜಿ ಹೊಂದಿರುತ್ತಾರೆ. ಅದರಲ್ಲೂ ಥೈರಾಯ್ಡ್ ಹಾಗೂ ಹಾರ್ಮೋನ್ ಸೂಕ್ಷ್ಮವಾದ ಕ್ಯಾನ್ಸರ್ ಹೊಂದಿರುವ ವ್ಯಕ್ತಿಗಳಲ್ಲಿ ಸೋಯಾದಲ್ಲಿರುವ ಐಸೊಫ್ಲೇವೊನ್‌ ಅಂಶವು ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಆದರೆ ಮಧ್ಯಮ ಪ್ರಮಾಣದ ಸೋಯಾ ಬಳಕೆಯು ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೂಡ ಆರಾಮದಾಯಕ ಎಂದು ಹೇಳಬಹುದಾಗಿದೆ.

ಸಂಸ್ಕರಿತ ಸೋಯಾ

ಕೆಲವು ಪ್ರೊಟೀನ್ ಬಾರ್ಗಳು ಹಾಗೂ ವಿವಿಧ ಶೇಕ್ಗಳಲ್ಲಿ ಸೋಯಾ ಪ್ರೊಟೀನ್ ಅಂಶವಿರುತ್ತದೆ. ಆದರೆ ಇವುಗಳು ನೀವು ಆಹಾರದಲ್ಲಿ ಸೋಯಾ ಬಳಕೆ ಮಾಡುವುದರಿಂದ ಸಿಗುವ ಆರೋಗ್ಯ ಲಾಭವನ್ನು ನೀಡುವುದಿಲ್ಲ. ಹೀಗಾಗಿ ಈ ರೀತಿಯಾಗಿ ಸೋಯಾ ಸೇವನೆ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು.

ಲೇಖನ: ರಶ್ಮಿ