ಕನ್ನಡ ಸುದ್ದಿ  /  Lifestyle  /  Health News Heart Attack In Children On Rise Child Heart Care Heart Problems In Children Tips For Child Heart Health Rst

Heart Attack in Children: ಹೃದಯಾಘಾತಕ್ಕೆ ಮತ್ತೊಂದು ಮಗು ಸಾವು; ಮಕ್ಕಳ ಹೃದಯ ಇಷ್ಟೇಕೆ ಬಲಹೀನ? ಮುನ್ನೆಚ್ಚರಿಕೆ ಹೇಗೆ? ಇಲ್ಲಿದೆ ವಿವರ

ಇತ್ತೀಚೆಗೆ ಮಕ್ಕಳಲ್ಲಿ ಹೃದಯಾಘಾತದ ಸಮಸ್ಯೆ ಹೆಚ್ಚುತ್ತಿದೆ. 10 ವರ್ಷದ ಒಳಗಿನ ಮಕ್ಕಳು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಕಳೆದ ರಾತ್ರಿ ದೊಡ್ಡಬಳ್ಳಾಪುರದಲ್ಲಿ 9 ವರ್ಷದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹಾಗಾದರೆ ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕಾರಣವೇನು, ಮುನ್ನೆಚ್ಚರಿಕೆ ವಹಿಸುವುದು ಹೇಗೆ ಈ ಕುರಿತ ಲೇಖನ ಇಲ್ಲಿದೆ.

ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತದ ಸಮಸ್ಯೆ
ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತದ ಸಮಸ್ಯೆ

ಕಳೆದ ಮೂರ್ನಾಲ್ಕು ವರ್ಷಗಳಿಂದ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಿದೆ. ಸೆಲೆಬ್ರಿಟಿಗಳು, ಸಿನಿಮಾ ನಟರು, ವೈದ್ಯರು ಕೂಡ ಹೃದಯಾಘಾತದಿಂದ ಮರಣ ಹೊಂದುತ್ತಿದ್ದಾರೆ. ಹೃದಯಾಘಾತ ಮಕ್ಕಳನ್ನೂ ಬಿಟ್ಟಿಲ್ಲ. ಕಳೆದೊಂದು ವರ್ಷದಿಂದ ರಾಜ್ಯದಲ್ಲಿ 10 ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳು ಹೃದಯಾಘಾತದಿಂದ ಮರಣ ಹೊಂದಿರುವ ಹಲವು ಘಟನೆಗಳು ವರದಿಯಾಗಿವೆ.

ಇದೀಗ 9 ವರ್ಷದ ಹುಡುಗನೊಬ್ಬ ಹೃದಯಘಾತದಿಂದ ಮೃತ ಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಮುತ್ಯಾಲಮ್ಮ ಜಾತ್ರೆಯಲ್ಲಿ ಕುಟುಂಬದವರೊಡನೆ ಖುಷಿದಿಂದ ನಲಿದಾಡಿದ್ದ, ಹುಡುಗ ಇದ್ದಕ್ಕಿದ್ದಂತೆ ಬಿದ್ದು ಸಾವನ್ನಪ್ಪಿದ್ದಾನೆ. ಹಿಂದೆ ಶಿವಮೊಗ್ಗ, ಕುಶಾಲನಗರದಲ್ಲೂ ಮಕ್ಕಳು ಹೃದಯಾಘಾತದಿಂದ ಮಕ್ಕಳು ಸಾವನ್ನಪ್ಪುತ್ತಿರುವ ಘಟನೆ ನಡೆದಿತ್ತು. ಇದು ನಿಜಕ್ಕೂ ಆತಂಕಕಾರಿ ವಿಷಯ. ಅಲ್ಲದೆ ಈ ಬಗ್ಗೆ ಸೂಕ್ತ ಗಮನ ಹರಿಸುವುದು ಅವಶ್ಯವಾಗಿದೆ. ಹಾಗಾದರೆ ಮಕ್ಕಳಲ್ಲಿ ಹೃದಯಾಘಾತ ಹೆಚ್ಚಲು ಕಾರಣವೇನು? ಹೃದಯಾಘಾತದ ಲಕ್ಷಣಗಳೇನು, ಮುನ್ನೆಚ್ಚರಿಕೆ ಕ್ರಮ ವಹಿಸುವುದು ಹೇಗೆ, ಹೃದಯಾಘಾತವಾದ ತಕ್ಷಣ ಏನು ಮಾಡಬೇಕು? ಈ ಕುರಿತ ವಿವರ ಇಲ್ಲಿದೆ.

ಮಕ್ಕಳಲ್ಲಿ ಹೃದಯಾಘಾತವಾಗಲು ಕಾರಣಗಳು

ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಸಮಸ್ಯೆಗೆ ಸಾಮಾನ್ಯ ಕಾರಣ ಎಂದರೆ ಹುಟ್ಟಿನಿಂದಲೇ ಇರುವ ಹೃದಯ ಸಂಬಂಧಿ ಸಮಸ್ಯೆ (ಜನ್ಮಜಾತ ಹೃದಯದ ಸಮಸ್ಯೆ). ಇದರೊಂದಿಗೆ ಹೃದಯಾಘಾತಕ್ಕೆ ಕಾರಣವಾಗುವ ಇತರ ಅಂಶಗಳು ಹೀಗಿವೆ. ̇

* ಹೃದಯದ ಸ್ನಾಯುವಿನ ಖಾಯಿಲೆ ಅಥವಾ ಹೃದಯದ ಸ್ನಾಯುವಿನ ಹಿಗ್ಗುವಿಕೆ (ಕಾರ್ಡಿಯೊಮಿಯೊಪತಿ). ಇದು ಅನುವಂಶಿಕ ಕಾರಣವಾಗಿದೆ.

* ಹೃದಯಕ್ಕೆ ರಕ್ತ ಪೂರೈಕೆಯಲ್ಲಿ ಇಳಿಕೆ (ಇಷ್ಕೆಮಿಯಾ). ಮಕ್ಕಳಲ್ಲಿ ಇದು ಅಪರೂಪ

* ಹೃದಯ ಕವಾಟಕ್ಕೆ ಸಂಬಂಧಿಸಿದ ತೊಂದರೆಗಳು

* ಅನಿಯಮಿತ ಹೃದಯ ಬಡಿತ

* ಕೆಂಪು ರಕ್ತ ಕಣಗಳ ಕೊರತೆ (ರಕ್ತಹೀನತೆ)

* ಸೋಂಕುಗಳು

* ಔಷಧದ ಅಡ್ಡಪರಿಣಾಮಗಳು, ವಿಶೇಷವಾಗಿ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಿಗಳಿಂದ

ಇದಲ್ಲದೆ ಬೊಜ್ಜು ಹಾಗೂ ಒಡ ಜೀವನಶೈಲಿ ಕೂಡ ಮಕ್ಕಳಲ್ಲಿ ಹೃದಯಾಘಾತ ಸಮಸ್ಯೆ ಹೆಚ್ಚಲು ಕಾರಣವಾಗಿದೆ.

ಮಕ್ಕಳಲ್ಲಿ ಹೃದಯಾಘಾತದ ಲಕ್ಷಣಗಳು

ಪ್ರತಿ ಮಗುವಿನಲ್ಲಿ ರೋಗಲಕ್ಷಣಗಳು ವಿಭಿನ್ನವಾಗಿ ಇರಬಹುದು. ಆದರೆ ಇವು ಸಾಮಾನ್ಯ ಲಕ್ಷಣಗಳಾಗಿವೆ.

* ಪಾದಗಳು, ಕಣಕಾಲುಗಳು, ಕೆಳ ಕಾಲುಗಳು, ಹೊಟ್ಟೆ, ಯಕೃತ್ತು ಮತ್ತು ಕುತ್ತಿಗೆಯ ನಾಳಗಳಲ್ಲಿ ಊತ (ಎಡಿಮಾ)

* ಉಸಿರಾಟದ ತೊಂದರೆ. ವಿಶೇಷವಾಗಿ ಉಸಿರಾಟದ ಏರಿಳಿತ, ಉಬ್ಬಸ ಅಥವಾ ಅತಿಯಾದ ಕೆಮ್ಮು ಸೇರಿದಂತೆ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆ.

* ಸುಸ್ತಾಗುವುದು ಅಥವಾ ನಿತ್ರಾಣಗೊಳ್ಳುವುದು

* ತಿನ್ನುವಾಗ, ಆಟವಾಡುವಾಗ ಅಥವಾ ವ್ಯಾಯಾಮ ಮಾಡುವಾಗ ಅತಿಯಾಗಿ ಬೆವರುವುದು

* ಸಿಡುಕುತನ

ರೋಗಲಕ್ಷಣಗಳು ಎಷ್ಟು ತೀವ್ರವಾಗಿರುತ್ತವೆ ಎಂಬುದು ಹೃದಯದ ಪಂಪ್ ಸಾಮರ್ಥ್ಯವು ಎಷ್ಟು ಪರಿಣಾಮ ಬೀರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಕೆಲವೊಮ್ಮೆ ಹೃದಯಾಘಾತದ ಲಕ್ಷಣಗಳು ಮೇಲ್ನೋಣಕ್ಕೆ ತಿಳಿಯದೇ ಇರಬಹುದು. ಹಾಗಾಗಿ ಸಮಯಕ್ಕೆ ಸರಿಯಾಗಿ ತಜ್ಞರ ವೈದ್ಯರ ಬಳಿ ಪರೀಕ್ಷೆ ಮಾಡಿಸುವುದು ಉತ್ತಮ.

ಮುನ್ನೆಚ್ಚರಿಕಾ ಕ್ರಮ

ಸರಿಯಾದ ಆಹಾರವನ್ನು ತಿನ್ನದೆ, ಜಂಕ್‌ ಫುಡ್‌ಗಳನ್ನೇ ಹೆಚ್ಚು ತಿನ್ನುತ್ತಾ ಮೊಬೈಲ್‌, ಲ್ಯಾಪ್‌ಟಾಪ್‌ ಮುಂದೆ ಗಂಟೆಗಟ್ಟಲೆ ಕುಳಿತುಕೊಳ್ಳುವ ಮಕ್ಕಳಲ್ಲಿ, ಚಯಾಪಚಯ ದರವು ಕ್ಷೀಣಿಸುತ್ತದೆ. ಈ ಹೈಪೊಗ್ಲಿಸಿಮಿಯಾವು ಹೃದಯದ ಸಮಸ್ಯೆಗಳನ್ನು ಹೆಚ್ಚಿಸಲು ಕಾರಣವಾಗಬಹುದು.

ರಾತ್ರಿ ತಡವಾಗಿ ಮಲಗುವುದು, ಮೊಬೈಲ್ ಬಳಸುವುದು, ಅದರಲ್ಲಿ ಗೇಮ್ ಆಡುವುದು, ಬೆಳಗ್ಗೆ ಬೇಗ ಏಳುವುದು ಇವೆಲ್ಲವೂ ಕಾಯಿಲೆಗಳಿಗೆ ಕಾರಣ. ಇದರೊಂದಿಗೆ ಸ್ಥೂಲಕಾಯದ ಸಮಸ್ಯೆಯೂ ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಆದ್ದರಿಂದ ಪೋಷಕರು ಮಕ್ಕಳ ಈ ಅಭ್ಯಾಸಗಳ ಬಗ್ಗೆ ಗಮನಹರಿಸಬೇಕು.

ಮೊಬೈಲ್‌, ಕಂಪ್ಯೂಟರ್‌ನಿಂದ ದೂರ ಇರುವಂತೆ ನೋಡಿಕೊಳ್ಳಿ. ಅದರ ಬದಲಿಗೆ ಗ್ರೌಂಡ್‌ನಲ್ಲಿ ಸ್ನೇಹಿತರೊಂದಿಗೆ ಆಟವಾಡಲು ಕಳಿಸಿ.

ಮಕ್ಕಳು ತಿನ್ನುವ ಆಹಾರದಿಂದ ಕೂಡಾ ಸಮಸ್ಯೆ ಹೆಚ್ಚು. ಇಂದಿನ ಮಕ್ಕಳು ಹೆಚ್ಚು ಜಂಕ್‌ ಫುಡ್‌ಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಇದು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಹೆತ್ತವರು ಮಕ್ಕಳ ದೈಹಿಕ ಸಾಮರ್ಥ್ಯದ ಬಗ್ಗೆ ಕೂಡಾ ಗಮನ ಹರಿಸಬೇಕು.

ಮಕ್ಕಳಿಗೆ ಸಾಧ್ಯವಾದಷ್ಟು ಮನೆಯಲ್ಲಿ ತಯಾರಿಸಿದ ಆಹಾರವನ್ನು ನೀಡಬೇಕು. ಹೊರಗೆ ಹೋಗಬೇಕಾಗಿ ಬಂದಾಗಿ ಅಪರೂಪಕ್ಕೆ ಹೊರಗಿನ ಆಹಾರ ಸೇವಿಸಿದರೆ ಏನೂ ಸಮಸ್ಯೆ ಇಲ್ಲ. ಆದರೆ ಪ್ರತಿದಿನ ತಿನ್ನುವುದರಿಂದ ಮಕ್ಕಳ ದೇಹದಲ್ಲಿ ಬೊಜ್ಜು ಹೆಚ್ಚಾಗಿ ಸ್ಥೂಲಕಾಯತೆ ಸಮಸ್ಯೆ ಹೆಚ್ಚಾಗುತ್ತದೆ. ಆದ್ದರಿಂದ ಪೋಷಕರಿಗೆ ಇದರ ಬಗ್ಗೆ ಹೆಚ್ಚಿನ ಗಮನ ಇರಬೇಕು.

ಹೃದಯಾಘಾತವನ್ನು ಕಂಡುಹಿಡಿಯುವುದು ಹೇಗೆ?

ರಕ್ತ ಮತ್ತು ಮೂತ್ರ ಪರೀಕ್ಷೆಗಳು. ಅಸಹಜ ಫಲಿತಾಂಶಗಳು ಹೃದಯ ವೈಫಲ್ಯವನ್ನು ಕಂಡುಹಿಡಿಯಲು ಸಹಾಯ ಮಾಡಬಹುದು.

ಎದೆಯ ಕ್ಷ - ಕಿರಣ. ಎಕ್ಸ್-ರೇ ಹೃದಯ ಮತ್ತು ಶ್ವಾಸಕೋಶದ ಬದಲಾವಣೆಗಳನ್ನು ತೋರಿಸಬಹುದು.

ಎಲೆಕ್ಟ್ರೋಕಾರ್ಡಿಯೋಗ್ರಫಿ (ECG). ಇಸಿಜಿ ಹೃದಯದ ಲಯದಲ್ಲಿ ಬದಲಾವಣೆಗಳನ್ನು ತೋರಿಸಬಹುದು.

ಎಕೋಕಾರ್ಡಿಯೋಗ್ರಫಿ (ಪ್ರತಿಧ್ವನಿ). ಹೃದಯದ ಕೋಣೆಗಳು ಮತ್ತು ಕವಾಟಗಳ ಚಲನೆಯನ್ನು ಅಧ್ಯಯನ ಮಾಡಲು ಅಲ್ಟ್ರಾಸೌಂಡ್ ತರಂಗಗಳನ್ನು ಬಳಸಲಾಗುತ್ತದೆ. ಪ್ರತಿಧ್ವನಿಯು ಹೃದಯ ವೈಫಲ್ಯದಿಂದ ಉಂಟಾದ ಬದಲಾವಣೆಗಳನ್ನು ತೋರಿಸಬಹುದು ಉದಾಹರಣೆಗೆ ವಿಸ್ತರಿಸಿದ ಕೋಣೆಗಳು.

ಹೃದಯ ಕ್ಯಾತಿಟೆರೈಸೇಶನ್. ವೈದ್ಯರು ಚಿಕ್ಕದಾದ, ಹೊಂದಿಕೊಳ್ಳುವ ಟ್ಯೂಬ್ (ಕ್ಯಾತಿಟರ್) ಅನ್ನು ರಕ್ತನಾಳಕ್ಕೆ ಹಾಕುತ್ತಾರೆ ಮತ್ತು ಅದನ್ನು ಹೃದಯಕ್ಕೆ ಚಲಿಸುತ್ತಾರೆ. ಇದು ಹೃದಯದೊಳಗಿನ ಒತ್ತಡ ಮತ್ತು ಆಮ್ಲಜನಕದ ಮಟ್ಟವನ್ನು ಅಳೆಯುತ್ತದೆ.

ಹೃದಯಾಘಾತವಾದ ತಕ್ಷಣ ಏನು ಮಾಡಬೇಕು?

ಮಗು ಪ್ರಜ್ಞಾಹೀನವಾಗಿದ್ದರೆ ಮತ್ತು ಪ್ರತಿಕ್ರಿಯಿಸದಿದ್ದರೆ, ಉಸಿರಾಟ ನಿಂತಿದೆ ಅನ್ನಿಸಿದರೆ, ನಾಡಿಮಿಡಿತ ಸ್ತಬ್ಧವಾಗಿದ್ದರೆ, 911 ಅಥವಾ ಸ್ಥಳೀಯ ತುರ್ತು ಸಂಖ್ಯೆಗೆ ಕರೆ ಮಾಡಿ. ತಕ್ಷಣಕ್ಕೆ ಸಿಪಿಆರ್‌ ಮಾಡುವುದು ಬಹಳ ಅವಶ್ಯ. ಜೊತೆಗೆ ಸ್ವಲ್ಪ ತಡ ಮಾಡದೇ ಹತ್ತಿರದಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು.