ಯಾವ ವಯಸ್ಸಿನವರು ವರ್ಷಕ್ಕೆ ಎಷ್ಟು ಬಾರಿ ಮಿಲನದಲ್ಲಿ ತೊಡಗುತ್ತಾರೆ; ಅಧ್ಯಯನ ಏನು ಹೇಳುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  ಯಾವ ವಯಸ್ಸಿನವರು ವರ್ಷಕ್ಕೆ ಎಷ್ಟು ಬಾರಿ ಮಿಲನದಲ್ಲಿ ತೊಡಗುತ್ತಾರೆ; ಅಧ್ಯಯನ ಏನು ಹೇಳುತ್ತೆ

ಯಾವ ವಯಸ್ಸಿನವರು ವರ್ಷಕ್ಕೆ ಎಷ್ಟು ಬಾರಿ ಮಿಲನದಲ್ಲಿ ತೊಡಗುತ್ತಾರೆ; ಅಧ್ಯಯನ ಏನು ಹೇಳುತ್ತೆ

ಒಬ್ಬ ವ್ಯಕ್ತಿ ತನ್ನ ವಯಸ್ಸಿನ ಆಧಾರದಲ್ಲಿ ವರ್ಷಕ್ಕೆ ಎಷ್ಟು ಬಾರಿ ಮಿಲನದಲ್ಲಿ ತೊಡಗುತ್ತಾನೆ. ವಯಸ್ಸಾಗುತ್ತಿದ್ದಂತೆ ಆಸಕ್ತಿ ಕಡಿಮೆಯಾಗುವುದು ಯಾಕೆ ಅನ್ನೋದನ್ನು ತಿಳಿಯಿರಿ.

ವಯಸ್ಸಿನ ಆಧಾರದಲ್ಲಿ ವ್ಯಕ್ತಿ ವರ್ಷಕ್ಕೆ ಎಷ್ಟು ಬಾರಿ ಸೆಕ್ಸ್‌ನಲ್ಲಿ ತೊಡಗುತ್ತಾನೆ ಅನ್ನೋದನ್ನ ತಿಳಿಯಿರಿ.
ವಯಸ್ಸಿನ ಆಧಾರದಲ್ಲಿ ವ್ಯಕ್ತಿ ವರ್ಷಕ್ಕೆ ಎಷ್ಟು ಬಾರಿ ಸೆಕ್ಸ್‌ನಲ್ಲಿ ತೊಡಗುತ್ತಾನೆ ಅನ್ನೋದನ್ನ ತಿಳಿಯಿರಿ.

ಬೆಂಗಳೂರು: ಆರೋಗ್ಯಕರ ಲೈಂಗಿಕ ಜೀವನವು ಮನುಷ್ಯನಿಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ನಿತ್ಯ ಮಿಲನ ಅತ್ಯುತ್ತಮ ವ್ಯಾಯಾಮವೂ ಆಗಿದ್ದು, ಒಳ್ಳೆ ನಿದ್ರೆ, ಒತ್ತಡ ನಿವಾರಣೆ, ರೋಗ ನಿರೋಧ ಶಕ್ತಿ ಹೆಚ್ಚಳ, ಕಾಂತಿಯುತ ಚರ್ಮ, ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.

ದಾಂಪತ್ಯದಲ್ಲಿ ಮಿಲನ ಸುಖಮಯವಾಗಿದ್ದರೆ ಅನ್ಯೋನ್ಯತೆಯ ಜೊತೆಗೆ ಸಮಸ್ಯೆಗಳು ಉಂಟಾಗುವುದಿಲ್ಲ. ಇಲ್ಲದಿದ್ದರೆ ಹತ್ತಾರು ಸಮಸ್ಯೆಗಳಿಗೆ ಮಿಲನ ಪ್ರಮುಖ ಕಾರಣವಾಗಿರುತ್ತದೆ. ಕ್ರಮಬದ್ಧವಾದ ಮಿಲನದ ಬಗ್ಗೆ ಎಂದಾದರೂ ಯೋಚನೆ ಮಾಡಿದ್ದೀರಾ? ಪ್ರತಿಯೊಬ್ಬ ವ್ಯಕ್ತಿಯ ವಯಸ್ಸಿನ ಆಧಾರದಲ್ಲಿ ವರ್ಷದಲ್ಲಿ ಎಷ್ಟು ಬಾರಿ ದೈಹಿಕ ಸಂಪರ್ಕವನ್ನು ಹೊಂದುತ್ತಾರೆ ಎಂಬುದನ್ನು ಕಿನ್ಸೆ ಇನ್‌ಸ್ಟಿಟ್ಯೂಟ್ ಸಂಶೋಧನಾ ಸಂಸ್ಥೆ ತನ್ನ ಅಧ್ಯಯನ ಬಹಿರಂಗ ಪಡಿಸಿದೆ.

ಯಾವ ವಯಸ್ಸಿನವರು ವರ್ಷಕ್ಕೆ ಸರಾಸರಿ ಎಷ್ಟು ಬಾರಿ ಮಿಲನದಲ್ಲಿ ತೊಡಗುತ್ತಾರೆ?

  • 18 ರಿಂದ 29 ವರ್ಷದೊಳಗಿನವರು ವರ್ಷಕ್ಕೆ ಸರಾಸರಿ 112 ಬಾರಿ ಮಿಲನದಲ್ಲಿ ತೊಡಗುತ್ತಾರೆ
  • 30 ರಿಂದ 39 ವರ್ಷದೊಳಗಿನವರು ವರ್ಷಕ್ಕೆ ಸರಾಸರಿ 86 ಬಾರಿ ಮಿಲನದಲ್ಲಿ ತೊಡಗುತ್ತಾರೆ
  • 40 ರಿಂದ 49 ವರ್ಷದೊಳಗಿನವರು ವರ್ಷಕ್ಕೆ ಸರಾಸರಿ 69 ಬಾರಿ ದೈಹಿಕ ಸಂಪರ್ಕದಲ್ಲಿ ತೊಡಗುತ್ತಾರೆ

ವಯಸ್ಸು ಹೆಚ್ಚಾಗುತ್ತಿದ್ದಂತೆ ದೈಹಿಕ ಸಂಪರ್ಕದ ಆಸಕ್ತಿ ಕುಸಿತಕ್ಕೆ ಕಾರಣಗಳು

ಲಿಂಗ ಹಾಗೂ ಸಂತಾನೋತ್ಪತ್ತಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಕಿನ್ಸೆ ಇನ್‌ಸ್ಟಿಟ್ಯೂಟ್ ಹೇಳುವ ಪ್ರಕಾರ, ಸಾಮಾನ್ಯವಾಗಿ ವಯಸ್ಸು ಹೆಚ್ಚಾಗುತ್ತಿದ್ದಂತೆ ದೈಹಿಕ ಸಂಪರ್ಕದ ಆಸಕ್ತಿ ಕಡಿಮೆಯಾಗುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ. ಒತ್ತಡ, ಕೌಟುಂಬಿಕ ಕರ್ತವ್ಯಗಳು, ದೈಹಿಕ ನಿರ್ಬಂಧಗಳು, ವಯಸ್ಸಾದ ಭಾವನೆಯೂ ಕೂಡ ಆಸಕ್ತಿಗಳು ಬದಲಾಗುವುದಕ್ಕೆ ಕಾರಣವಾಗುತ್ತವೆ. ಇದು ಆಕರ್ಷಣೆಯ ಮೇಲೆಯೂ ಪರಿಣಾಮ ಬೀರುತ್ತದೆ ಎಂದು ಹೇಳಿದೆ.

ವಯಸ್ಸು ಯಾವಾಗಲೂ ಸೀಮಿತಗೊಳ್ಳುವಂತದ್ದಲ್ಲ. ಆದರೂ ಕೂಡ ಅನೇಕ ವಯಸ್ಸಾದ ವ್ಯಕ್ತಿಗಳು ದೈಹಿರ ಸಂಪರ್ಕದಲ್ಲಿ ಸಕ್ರಿಯವಾಗಿರುತ್ತಾರೆ ಎಂಬುದನ್ನು ಈ ಸಂಶೋಧನೆ ಹೇಳಿದೆ. ಸಾಮಾನ್ಯವಾಗಿ ವಯಸ್ಸಾದ ಮಹಿಳೆಯರು ನಿರಂತರ ಬಯಕೆಯನ್ನು ವ್ಯಕ್ತಪಡಿಸುತ್ತಾರಂತೆ.

ಕಿನ್ಸೆ ಸಂಸ್ಥೆಯ ಡಾ ಜಸ್ಟಿನ್ ಲೆಹ್ಮಿಲ್ಲರ್ ಅವರು ಈ ಬಗ್ಗೆ ಮಾತನಾಡಿ, ವಯಸ್ಸಾಗುತ್ತಿದ್ದಂತೆ ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಇದು ದೈಹಿಕ ಸಂಪರ್ಕದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಜರ್ನಲ್ ಆಫ್ ಸೆಕ್ಸ್ ರಿಸರ್ಚ್ ಅಧ್ಯಯನದಲ್ಲಿ 40 ವರ್ಷಕ್ಕಿಂತ ಮೇಲ್ಪಟ್ಟ 1,170 ಮಂದಿಯನ್ನು ಸಂಶೋಧನೆಗೆ ಒಳಪಡಿಸಿದ್ದು, 10 ವರ್ಷಗಳಲ್ಲಿ ಮಿಲನ ಚಟುವಟಿಕೆಯಲ್ಲಿ ಕುಸಿತವಾಗಿರುವುದನ್ನು ಗಮನಿಸಲಾಗಿದೆ. ಆದರೂ ಆರೋಗ್ಯಕರ ಮಿಲನದಲ್ಲಿ ತೊಡಗುವವರು ಹೆಚ್ಚು ಸಂತೋಷದ ಅನುಭವವನ್ನು ಪಡೆಯುತ್ತಾರೆ ಎಂದು ವರದಿಯಲ್ಲಿ ತಿಳಿಸಿದೆ.

ಪ್ರಮುಖವಾಗಿ ವಯಸ್ಸಾಗುತ್ತಿರುವ ಭಾವನೆ ದೈಹಿಕ ಸಂಪರ್ಕದ ಆಸಕ್ತಿ ಕಡಿಮೆಯಾಗುವುದಕ್ಕೆ ಮತ್ತು ತೃಪ್ತಿಯ ವಿಚಾರಕ್ಕೆ ಸಂಬಂಧಿಸಿದೆ. ಸಂಗಾತಿಗಳ ಆಸೆಗಳನ್ನು ಈಡೇರಿಸಿದಾಗ ಸಕ್ರಿಯ ವಿವಾಹಿತ ದಂಪತಿ ಜೀವನ ಸಂತೋಷವಾಗಿರುತ್ತದೆ. ಆದರ್ಶ ಹಾಗೂ ಅನ್ಯೋನ್ಯತೆಯಿಂದ ಕೂಡಿರುತ್ತಾರೆ.

Whats_app_banner