ನೈಟ್‌ರೈಡ್ ಹೋಗಿ ಐಸ್‌ಕ್ರೀಮ್ ತಿನ್ನೋದು ನಿಮ್ಗೂ ಇಷ್ಟನಾ? ರಾತ್ರಿ ಐಸ್‌ಕ್ರೀಮ್ ತಿನ್ನೋದ್ರಿಂದ ಏನೆಲ್ಲಾ ತೊಂದರೆ ಆಗುತ್ತೆ ನೋಡಿ
ನೈಟ್ ರೈಡ್ ಹೋಗಿ ಐಸ್‌ಕ್ರೀಮ್ ತಿನ್ನೋದು ಯಾರಿಗಿಷ್ಟವಾಗೊಲ್ಲ ಹೇಳಿ. ನೀವು ಕೂಡ ಈ ಅನುಭವ ಪಡೆದಿರಬಹುದು. ಆದರೆ ಕೆಲವರು ಪದೇ ಪದೇ ರಾತ್ರಿ ಹೊತ್ತು ಐಸ್‌ಕ್ರೀಮ್ ತಿನ್ನುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಆದರೆ ಇದು ಆರೋಗ್ಯಕ್ಕೆ ಖಂಡಿತ ಒಳ್ಳೆಯದಲ್ಲ. ರಾತ್ರಿ ಐಸ್‌ಕ್ರೀಮ್ ತಿನ್ನುವುದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ನೋಡಿ.
ರಾತ್ರಿ ವೇಳೆ ರೊಮ್ಯಾಂಟಿಕ್ ರೈಡ್ ಹೋಗಿ, ಐಸ್‌ಕ್ರೀಮ್ ತಿನ್ನೋದು ಪ್ರೇಮಿಗಳಿಗೆ ಅಚ್ಚುಮೆಚ್ಚು. ಅದರಲ್ಲೂ ಮಳೆ ಸುರಿಯುತ್ತಿರುವಾಗ ಐಸ್‌ಕ್ರೀಮ್ ತಿನ್ನೋದು ಒಂಥರಾ ಒಂಥರಾ ಖುಷಿ ಕೊಡುತ್ತೆ. ಆದರೆ ನಿಮ್ಮ ಈ ರೊಮ್ಯಾಂಟಿಕ್ ಅನುಭವ ಆರೋಗ್ಯಕ್ಕೆ ತೊಂದರೆ ಕೊಡಬಹುದು ಎಚ್ಚರ. ಯಾಕೆಂದರೆ ರಾತ್ರಿ ವೇಳೆ ಐಸ್‌ಕ್ರೀಮ್ ತಿನ್ನುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.
ಐಸ್‌ಕ್ರೀಮ್‌ನಲ್ಲಿ ಸಕ್ಕರೆ ಮತ್ತು ಕೊಬ್ಬಿನಾಂಶ ಅಧಿಕವಾಗಿರುತ್ತದೆ. ರಾತ್ರಿ ಊಟದ ನಂತರ ಐಸ್‌ಕ್ರೀಮ್ ತಿನ್ನುವುದರಿಂದ ದೇಹದಲ್ಲಿ ಕ್ಯಾಲೋರಿ ಅಂಶ ಹೆಚ್ಚಾಗುತ್ತದೆ. ಇದರಿಂದ ಬೊಜ್ಜಿನಂತಹ ಸಮಸ್ಯೆಗಳು ಎದುರಾಗಬಹುದು. ರಾತ್ರಿ ಊಟದ ನಂತರ ಐಸ್‌ಕ್ರೀಮ್ ತಿನ್ನುವುದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ರಾತ್ರಿ ವೇಳೆ ಐಸ್‌ಕ್ರೀಮ್ ತಿನ್ನುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಯಿರಿ.
ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆಯಾಗುತ್ತದೆ
ಐಸ್‌ಕ್ರೀಮ್‌ನಲ್ಲಿ ಸಾಮಾನ್ಯವಾಗಿ ಸಕ್ಕರೆ ಮತ್ತು ಕೊಬ್ಬು ಅಧಿಕವಾಗಿರುತ್ತದೆ. ಮಲಗುವ ಸಮಯಕ್ಕೆ ಸ್ವಲ್ಪ ಮೊದಲು ಇದನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗಬಹುದು. ಇದು ಹಾರ್ಮೋನುಗಳನ್ನು ನಿಯಂತ್ರಿಸುವ ದೇಹದ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಇದು ನಿದ್ದೆ ಅಡ್ಡಿಪಡಿಸುವ ಕಾರಣ ನಿದ್ರಾಹೀನತೆಗೂ ಕಾರಣವಾಗಬಹುದು.
ಕ್ಯಾಲೋರಿ ಅಂಶ ಅಂಶ ಏರಿಕೆಯಾಗುತ್ತದೆ
ಐಸ್‌ಕ್ರೀಮ್‌ನಲ್ಲಿ ಕ್ಯಾಲೋರಿ ಅಂಶ ಹೆಚ್ಚಿರುತ್ತದೆ. ಅತಿಯಾದ ಸೇವನೆ ಐಸ್‌ಕ್ರೀಮ್ ಸೇವನೆ ಅದರಲ್ಲೂ ವಿಶೇಷವಾಗಿ ರಾತ್ರಿ ವೇಳೆ ಐಸ್‌ಕ್ರೀಮ್ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಚಯಾಪಚಯ ಕ್ರಿಯೆ ನಿಧಾನವಾಗುವುದರಿಂದ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಮಲಗುವ ಮುನ್ನ ಹೆಚ್ಚು ಐಸ್‌ಕ್ರೀಮ್ ತಿನ್ನುವುದು ದೇಹಕ್ಕೆ ಹಾನಿ ಮಾಡುತ್ತದೆ. ಇದರಿಂದ ಕಾಲಾನಂತರದಲ್ಲಿ ತೂಕ ಹೆಚ್ಚಾಗುತ್ತದೆ.
ಅಜೀರ್ಣ ಸಮಸ್ಯೆ ಎದುರಾಗುತ್ತದೆ
ಮಲಗುವ ಮುನ್ನ ಐಸ್‌ಕ್ರೀಮ್‌ನಂತಹ ಹೆಚ್ಚಿನ ಕ್ಯಾಲೋರಿ ಇರುವ ಆಹಾರಗಳನ್ನು ಸೇವಿಸುವುದರಿಂದ ಹೊಟ್ಟೆಯುಬ್ಬರ, ಗ್ಯಾಸ್ ಮತ್ತು ಅಜೀರ್ಣ ಸೇರಿದಂತೆ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಈ ರೋಗಲಕ್ಷಣಗಳು ನಿದ್ರೆಗೆ ತೊಂದರೆ ಉಂಟು ಮಾಡಬಹುದು.
ನಿದ್ದೆಗೆ ತೊಂದರೆ ಉಂಟು ಮಾಡುತ್ತದೆ
ರಾತ್ರಿ ಐಸ್‌ಕ್ರೀಮ್ ತಿನ್ನುವುದರಿಂದ ನಿದ್ರೆಗೆ ತೊಂದರೆಯಾಗುತ್ತದೆ. ಐಸ್‌ಕ್ರೀಮ್‌ನಲ್ಲಿರುವ ಸಕ್ಕರೆ ಅಂಶವು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರುಪೇರುಗಳನ್ನು ಉಂಟುಮಾಡುತ್ತದೆ. ರಾತ್ರಿಯಲ್ಲಿ ಪದೇ ಪದೇ ಎಚ್ಚರವಾಗುವುದು, ನಿದ್ದೆ ಬಾರದಿರುವುದು ಇಂತಹ ಸಮಸ್ಯೆಗಳು ಕಾಡಬಹುದು. ಐಸ್‌ಕ್ರೀಮ್ ಸೇರಿದಂತೆ ಮಧ್ಯರಾತ್ರಿ ವೇಳೆ ನಾವು ಸೇವಿಸುವ ಆಹಾರವು ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಇದರಿಂದಾಗುವ ತೊಂದರೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಕೆಲವು ಜನರು ತಮ್ಮ ನಿದ್ರೆಯ ಗುಣಮಟ್ಟದ ಮೇಲೆ ಸಕ್ಕರೆ ಮತ್ತು ಕೊಬ್ಬಿನ ಪರಿಣಾಮಗಳಿಗೆ ಹೆಚ್ಚು ಸೂಕ್ಷ್ಮವಾಗಿರಬಹುದು. ಇತರರು ಗಮನಾರ್ಹ ಪರಿಣಾಮವನ್ನು ಗಮನಿಸದೇ ಇರಬಹುದು. ರಾತ್ರಿ ಐಸ್‌ಕ್ರೀಮ್ ತಿನ್ನಲು ನಿಮ್ಮ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಗಮನಿಸುವುದು ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಅಭ್ಯಾಸಗಳನ್ನು ಹೊಂದಿಸುವುದು ಮುಖ್ಯವಾಗಿದೆ.
ನಿಯಂತ್ರಣ ಅಗತ್ಯ
ನೀವು ರಾತ್ರಿಯಲ್ಲಿ ಐಸ್‌ಕ್ರೀಮ್ ತಿನ್ನುವುದನ್ನು ಆನಂದಿಸಿದರೆ, ಮಿತವಾಗಿರುವುದು ಮುಖ್ಯ. ನಿದ್ರೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮವನ್ನು ಕಡಿಮೆ ಮಾಡಲು ಹೆಚ್ಚು ತಿನ್ನುವುದನ್ನು ತಪ್ಪಿಸಿ. ಬೀಜಗಳು, ಹಣ್ಣುಗಳಂತಹ ಪ್ರೊಟೀನ್ ಅಥವಾ ಫೈಬರ್ ಮೂಲ ಮೂಲವಿರುವ ಐಸ್‌ಕ್ರೀಮ್ ತಿನ್ನಿ. ಇದರ ಹೆಚ್ಚಿನ ಸಕ್ಕರೆ ಅಂಶವು ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇತರ ಸಲಹೆಗಳು
ಮಲಗುವ ಮುನ್ನ ನೀವು ಸಿಹಿ ಏನನ್ನಾದರೂ ಬಯಸಿದರೆ ಜೇನುತುಪ್ಪ, ಬೆರ್ರಿಗಳೊಂದಿಗೆ ಗ್ರೀಕ್ ಯೋಗರ್ಟ್, ಡಾರ್ಕ್ ಚಾಕೊಲೇಟ್ ಇತ್ಯಾದಿ ಅಂಶ ಇರುವ ಐಸ್‌ಕ್ರೀಮ್ ತಿನ್ನಿ. ಹಣ್ಣು ಮತ್ತು ಮೊಸರಿನೊಂದಿಗೆ ಮಾಡಿದ ಹಣ್ಣಿನ ಸ್ಮೂಥಿಗಳನ್ನು ತಿನ್ನಿ. ಐಸ್‌ಕ್ರೀಂನಲ್ಲಿ ಸಕ್ಕರೆ ಮತ್ತು ಕೊಬ್ಬಿನಾಂಶ ಅಧಿಕವಾಗಿರುತ್ತದೆ. ರಾತ್ರಿಯ ಊಟದ ನಂತರ ಐಸ್‌ಕ್ರೀಮ್ ತಿನ್ನುವುದು ದಿನದ ಒಟ್ಟು ಕ್ಯಾಲೊರಿಗಳನ್ನು ಹೆಚ್ಚಿಸುತ್ತದೆ. ಇದರಿಂದ ಸ್ಥೂಲಕಾಯತೆಯ ಅಪಾಯವೂ ಹೆಚ್ಚು. ಹಾಗಾಗಿ ರಾತ್ರಿ ಐಸ್‌ಕ್ರೀಮ್ ತಿನ್ನುವ ಮುನ್ನ ಸಾಕಷ್ಟು ಎಚ್ಚರ ವಹಿಸುವುದು ಅವಶ್ಯ.