ಕನ್ನಡ ಸುದ್ದಿ  /  ಜೀವನಶೈಲಿ  /  International Tea Day: ಚಹಾ ಪ್ರೇಮಿಗಳೇ ಇಲ್ಕೇಳಿ, ಟೀ ಜೊತೆ ಈ 5 ಆಹಾರ ಪದಾರ್ಥಗಳನ್ನು ತಪ್ಪಿಯೂ ಸೇವಿಸಬೇಡಿ

International Tea Day: ಚಹಾ ಪ್ರೇಮಿಗಳೇ ಇಲ್ಕೇಳಿ, ಟೀ ಜೊತೆ ಈ 5 ಆಹಾರ ಪದಾರ್ಥಗಳನ್ನು ತಪ್ಪಿಯೂ ಸೇವಿಸಬೇಡಿ

ಚಹಾದ ಪ್ರಾಮುಖ್ಯ ಹಾಗೂ ಸುದೀರ್ಘ ಇತಿಹಾಸವನ್ನು ಗುರುತಿಸುವ ಉದ್ದೇಶದಿಂದ ಪ್ರತಿವರ್ಷ ಮೇ 21 ರಂದು ಅಂತರರಾಷ್ಟ್ರೀಯ ಚಹಾ ದಿನ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಈ ವಿಶೇಷ ದಿನದ ಸಂದರ್ಭ ಚಹಾ ಜೊತೆ ಯಾವೆಲ್ಲಾ ಪದಾರ್ಥಗಳನ್ನು ಸೇವಿಸಬಾರದು, ಇದರಿಂದಾಗುವ ತೊಂದರೆಗಳೇನು ತಿಳಿಯಿರಿ.

ಟೀ ಜೊತೆ ಈ 5 ಆಹಾರ ಪದಾರ್ಥಗಳನ್ನು ತಪ್ಪಿಯೂ ಸೇವಿಸಬೇಡಿ
ಟೀ ಜೊತೆ ಈ 5 ಆಹಾರ ಪದಾರ್ಥಗಳನ್ನು ತಪ್ಪಿಯೂ ಸೇವಿಸಬೇಡಿ

ಚಹಾ... ವಿಶ್ವದಾದ್ಯಂತ ಹಲವರ ಸಂಗಾತಿ. ಪ್ರತಿದಿನ ಬೆಳಗೆದ್ದು ಚಹಾ ಸೇವಿಸಿಲ್ಲ ಅಂದ್ರೆ ದಿನ ಆರಂಭವಾಗುವುದೇ ಇಲ್ಲ ಎನ್ನುವವರೂ ಇದ್ದಾರೆ. ನಮಗೆ ಸೂರ್ಯ ಮೂಡಿಲ್ಲ ಅಂದ್ರು ತೊಂದರೆ ಇಲ್ಲ ಚಹಾ ಮಾತ್ರ ಬೇಕೇ ಬೇಕು ಎನ್ನುವ ಮನೋಭಾವ ಕೆಲವರದ್ದು. ಹೀಗೆ ಟೀಯ ಮಹತ್ವ ಹಾಗೂ ಇತಿಹಾಸ ಪರಂಪರೆಯನ್ನು ಗೌರವಿಸುವ ಉದ್ದೇಶದಿಂದ ಪ್ರತಿವರ್ಷ ಮೇ 21 ರಂದು ಅಂತರರಾಷ್ಟ್ರೀಯ ಚಹಾ ದಿನವನ್ನು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಈ ದಿನವನ್ನು ವಿಶೇಷವಾಗಿ ಆಚರಿಸುತ್ತಾರೆ. ಅಲ್ಲದೇ ಟೀಯ ಶ್ರೀಮಂತ ಪರಂಪರೆಯನ್ನು ಗೌರವಿಸುವ ಕೆಲಸ ಮಾಡಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಚಹಾ ಕುಡಿಯುವುದರಿಂದ ದೇಹ, ಮನಸ್ಸಿಗೆ ಚೈತನ್ಯ ಸಿಗುತ್ತದೆ. ಇದು ಕೆಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಿಶ್ವದಾದ್ಯಂತ ಜನರು ಸೇವಿಸುವ ಜನಪ್ರಿಯ ಪಾನೀಯಗಳಲ್ಲಿ ಚಹಾ ಕೂಡ ಒಂದಾಗಿದೆ. ಇದು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ ಚಹಾ ಸೇವನೆ ಆರೋಗ್ಯ ಮೇಲೆ ಅಡ್ಡಪರಿಣಾಮಗಳನ್ನೂ ಉಂಟು ಮಾಡುತ್ತಿದೆ ಎಂಬುದು ಸುಳ್ಳಲ್ಲ. ಇದು ಜೀರ್ಣಕ್ರಿಯೆ ಸಮಸ್ಯೆ ಸೇರಿದಂತೆ ಇತರ ಹಲವು ಸಮಸ್ಯೆಗಳನ್ನು ಉಂಟು ಮಾಡಬಹುದು. ಅಂತರರಾಷ್ಟ್ರೀಯ ಚಹಾ ದಿನದಂದು ಚಹಾ ಸೇವನೆಯ ಜೊತೆಗೆ ಯಾವೆಲ್ಲಾ ಆಹಾರ ಪದಾರ್ಥಗಳನ್ನು ಸೇವಿಸಬಾರದು ನೋಡಿ. ಚಹಾದ ಜೊತೆ ಈ ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ತೊಂದರೆಗಳು ಎದುರಾಗುತ್ತವೆ.

ಸಿಟ್ರಸ್‌ ಹಣ್ಣುಗಳು

ಸಿಟ್ರಸ್‌ ಅಂಶವಿರುವ ಹಣ್ಣುಗಳಾದ ಕಿತ್ತಳೆ, ನಿಂಬೆ, ದ್ರಾಕ್ಷಿಯಂತಹ ಹಣ್ಣುಗಳು ವಿಟಮಿನ್‌ ಸಿಯಿಂದ ಸಮೃದ್ಧವಾಗಿದೆ. ಇವು ದೇಹ, ಮನಸ್ಸನ್ನು ರಿಫ್ರೆಶ್‌ ಮಾಡುವ ಗುಣವನ್ನು ಹೊಂದಿವೆ. ಆದರೆ ಚಹಾ ಸೇವಿಸುವಾಗ ಅದರಲ್ಲೂ ಬ್ರ್ಯಾಕ್‌ ಅಥವಾ ಗ್ರೀನ್‌ ಟೀ ಸೇವಿಸುವಾಗ ಸಿಟ್ರಸ್‌ ಹಣ್ಣುಗಳನ್ನು ತಪ್ಪಿಯೂ ಸೇವಿಸಬಾರದು. ಇದರಿಂದ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಸಿಟ್ರಸ್ ಹಣ್ಣುಗಳಲ್ಲಿರುವ ಆಮ್ಲವು ಚಹಾದಲ್ಲಿರುವ ಕೆಲವು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಅಡ್ಡಿಪಡಿಸುತ್ತದೆ.

ಪುದಿನಾ

ಪುದಿನಾ ಎಲೆಗಳು ಬಲವಾದ ಪರಿಮಳ ಹೊಂದಿರುತ್ತವೆ. ಇವು ದೇಹವನ್ನು ರಿಫ್ರೆಶ್‌ ಮಾಡುತ್ತವೆ. ಆದರೆ ಪುದಿನಾ ಸೇರಿದ ಆಹಾರ ಪದಾರ್ಥಗಳನ್ನು ಸೇವಿಸಿದ ನಂತರ ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ತೊಂದರೆ ಉಂಟಾಗಬಹುದು. ಪುದಿನದಲ್ಲಿರುವ ಮೆಂಥಾಲ್‌ ರುಚಿಯು ಜೀರ್ಣಕ್ರಿಯೆಯಂತಹ ತೊಂದರೆಯನ್ನು ಉಂಟು ಮಾಡಬಹುದು.

ಚಾಕೊಲೇಟ್‌

ಚಾಕೊಲೇಟ್‌ ತಿನ್ನುವ ಟೀ ಕುಡಿಯುವ ಅಭ್ಯಾಸ ಕೆಲವರಿಗಿದೆ. ಇನ್ನೂ ಕೆಲವರು ಟೀ ಕುಡಿದ ನಂತರ ಚಾಕೊಲೇಟ್‌ ತಿನ್ನುತ್ತಾರೆ. ಆದರೆ ಇದು ಕೆಟ್ಟ ಅಭ್ಯಾಸ. ಅದರಲ್ಲೂ ಚಹಾದ ಜೊತೆ ತಪ್ಪಿಯೂ ಡಾರ್ಕ್‌ ಚಾಕೊಲೇಟ್‌ ಸೇವಿಸಬಾರದು. ಡಾರ್ಕ್ ಚಾಕೊಲೇಟ್ ಬಲವಾದ, ತೀವ್ರವಾದ ಪರಿಮಳವನ್ನು ಹೊಂದಿದ್ದು, ಅದು ಚಹಾದ ಸೂಕ್ಷ್ಮ ಅಂಶವನ್ನು ಮರೆಮಾಡುತ್ತದೆ. ಇದಲ್ಲದೆ, ಚಾಕೊಲೇಟ್‌ನಲ್ಲಿರುವ ಹೆಚ್ಚಿನ ಕೊಬ್ಬಿನಂಶವು ದೇಹವನ್ನು ಸೇರುತ್ತದೆ. ಇದರಿಂದ ಅಪಾಯ ಹೆಚ್ಚು.

ಮಸಾಲೆಯುಕ್ತ ಆಹಾರಗಳು

 ಮೆಣಸು ಅಥವಾ ಬಲವಾದ ಮಸಾಲೆಗಳನ್ನು ಒಳಗೊಂಡಿರುವ ಆಹಾರ ಪದಾರ್ಥಗಳನ್ನು ತಿಂದ ನಂತರ ಟೀ ಕುಡಿಯುವುದರಿಂದ ನಿಮ್ಮ ಬಾಯಲ್ಲಿ ಸುಡುವ ಸಂವೇದನೆ ಉಂಟಾಗಬಹುದು. ಮಸಾಲೆಯುಕ್ತ ಆಹಾರವನ್ನು ಸೇವಿಸಿದ ನಂತರ ತಪ್ಪಿಯೂ ಬಿಸಿ ಬಿಸಿ ಚಹಾ ಕುಡಿಯಬಾರದು. ಇದು ಚಹಾವನ್ನು ಅಹಿತಕರವಾಗಿ ಸಂಕೋಚಕವಾಗಿ ಮಾಡುತ್ತದೆ. ಮಸಾಲೆಗಳ ಶಾಖವು ಕೆಲವು ಚಹಾಗಳಲ್ಲಿ ಕಹಿಯನ್ನು ವರ್ಧಿಸುತ್ತದೆ.

ಡೇರಿ ಉತ್ಪನ್ನಗಳು 

ಚೀಸ್, ಹಾಲುನಿಂದ ತಯಾರಿಸಿದ ಸಿಹಿತಿಂಡಿಗಳಂತಹ ಡೈರಿ ಉತ್ಪನ್ನಗಳನ್ನು ಚಹಾದ ಜೊತೆಗೆ ಸೇವಿಸುವುದು ಸರಿಯಲ್ಲ. ಚಹಾಕ್ಕೆ ಹಾಲು ಸೇರಿಸಿ ಕುಡಿಯಬಹುದು. ಆದರೆ ಚಹಾ ಕುಡಿಯುವಾದ ಬರಿ ಹಾಲು ಸೇವನೆ ಕೂಡ ಉತ್ತಮವಲ್ಲ. ಹೀಗೆ ಇವನ್ನು ಒಟ್ಟಾಗಿ ಕುಡಿಯುವುದರಿಂದ ಡೇರಿ ಉತ್ಪನ್ನಗಳಲ್ಲಿ ಕೊಬ್ಬಿನಾಂಶವು ಹೆಚ್ಚಬಹುದು. 

ನೀವು ಚಹಾ ಪ್ರೇಮಿಯಾಗಿದ್ದು, ಪ್ರತಿದಿನ ಚಹಾ ಕುಡಿಯದೇ ಇರಲು ನಿಮ್ಮಿಂದ ಸಾಧ್ಯವಿಲ್ಲ ಎಂದಾದರೆ ಈ 5 ಪದಾರ್ಥಗಳನ್ನು ಚಹಾ ಜೊತೆ ತಪ್ಪಿಯೂ ಸೇವಿಸಬೇಡಿ. ಇದರಿಂದ ಆರೋಗ್ಯ ಸಮಸ್ಯೆಗಳು ಬಾಧಿಸಬಹುದು ಎಚ್ಚರ.